ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಉಡುಪಿ: ದಿನಾಂಕ 23/07/2021 ರಂದು ಪಿರ್ಯಾದಿದಾರರಾದ ಮುಮ್ತಾಜ್ (29), ತಂದೆ: ಅಬೂಬಕ್ಕರ್, ವಾಸ: ಮನೆ ನಂ: 3-166 ನೇತಾಜಿ ನಗರ ಮೂಡುಗಿಳಿಯಾರು, ಗಿಳಿಯಾರು ಕೋಟ ಗಿಳಿಯಾರು ಅಂಚೆ ಮತ್ತು ಗ್ರಾಮ ಬ್ರಹ್ಮಾವರ ತಾಲೂಕು ಉಡುಪಿ ಜಿಲ್ಲೆ ಇವರು KA-20-C-3774 ನೇ ಆಟೋ ರಿಕ್ಷಾದಲ್ಲಿ ಕೆಲಸದ ಬಗ್ಗೆ ಕರಾವಳಿ ಜಂಕ್ಷನ್ ನಿಂದ ಸಿ.ಟಿ ಬಸ್ ಸ್ಟಾಂಡ್ ಕಡೆಗೆ ಅಟೋರಿಕ್ಷಾದಲ್ಲಿ ಹಿಂದಿನಿಂದ ಕುಳಿತುಕೊಂಡು ರಾಷ್ಟ್ರೀಯ ಹೆದ್ದಾರಿ 169(ಎ)ನೇದರಲ್ಲಿ ಹೋಗುತ್ತಿರುವಾಗ ಬೆಳಿಗ್ಗೆ  07:15 ಗಂಟೆಗೆ ಮೂಡ ನಿಡಂಬೂರು ಗ್ರಾಮದ ಬನ್ನಂಜೆ ಮಹಾಲಿಂಗೇಶ್ವರ ದೇವಸ್ಥಾನದ ಎದುರು ತಲುಪುವಾಗ KA-20-C-3774ನೇ ರಿಕ್ಷಾ ಚಾಲಕ ಶಿವಾನಂದ ದುಡುಕುತನ ಮತ್ತು ನಿರ್ಲಕ್ಷತನದಿಂದ ಒಮ್ಮೆಲೇ ತೀರ ಎಡಬದಿಗೆ ಚಲಾಯಿಸಿದರ ಪರಿಣಾಮ ರಿಕ್ಷಾ ನಿಯಂತ್ರಣ ತಪ್ಪಿ ರಿಕ್ಷಾ ಪಲ್ಟಿಯಾಗಿ ಮಗುಚಿ ಬಿದ್ದು, ಪಿರ್ಯಾದಿದಾರರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಎಡಕಾಲಿನ ಮೇಲೆ ರಿಕ್ಷಾ ಬಿದ್ದ ಪರಿಣಾಮ  ಎಡ ಕಾಲಿನ ಮೂಳೆ ಮುರಿತ ಉಂಟಾಗಿ ಚಿಕಿತ್ಸೆಯ ಬಗ್ಗೆ ಗಾಂಧಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 42/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ನಟರಾಜ್ (27), ತಂದೆ: ಹಾಲೇಶಪ್ಪ, ವಾಸ: ಕರಿಯಮ್ಮ ದೇವಸ್ಥಾನದ ಹಿಂಬದಿ ಶಾಗಲ್  ದಾವಣಗೆರೆ ತಾಲೂಕು ಮತ್ತು ಜಿಲ್ಲೆ ಇವರು ಲಾರಿ ಡ್ರೈವರ್ ಕೆಲಸ ಮಾಡಿಕೊಂಡಿದ್ದು ದಿನಾಂಕ 22/07/2021 ರಂದು KA-17-C-7125  ಮತ್ತು KA-17-C-7109 ನೇ ಅಶೋಕ ಲಾ ಲ್ಯಾಂಡ್ ಲಾರಿಯಲ್ಲಿ ಮಂಗಳೂರು ಬೈಕಂಪಾಡಿಯ ರುಚಿ ಗೋಲ್ಡ ಪಾಮ್ ಆಯಿಲ್ 2 ಲಾರಿಯಲ್ಲಿ ತುಂಬಿಸಿ ಉಡುಪಿ ಮಾರ್ಗವಾಗಿ  ದಾವಣಗೆರೆಗೆ ಹೊರಟಿದ್ದು , KA-17-C-7125 ನೇ ಲಾರಿಯಲ್ಲಿ ಚಾಲಕರಾಗಿ ಗುರುರಾಜ್ ಇದ್ದು KA-17-C-7109 ನೇದರಲ್ಲಿ  ಪಿರ್ಯಾದಿದಾರರು ಚಾಲಕರಾಗಿ ಹಾಗೂ ನಿರ್ವಾಹಕರಾಗಿ ರಾಜು ಇದ್ದರು. ಹಾಗೆಯೆ  ಬ್ರಹ್ಮಾವರದ ಬಾರ್ಕೂರು  ಮೂಲಕ ಹಾಲಾಡಿ ರಸ್ತೆಯಲ್ಲಿ ಬರುತ್ತಿರುವಾಗ ರಾತ್ರಿ 10:00 ಗಂಟೆಯ ಸಮಯಕ್ಕೆ ಹಳ್ಳಾಡಿ ಹರ್ಕಾಡಿ ಗ್ರಾಮದ ಗಾವಳಿ ಕ್ರಾಸ್ ಬಳಿ ಬರುತ್ತಿರುವಾಗ ಪಿರ್ಯಾದಿದಾರರ ಎದುರುಗಡೆಯಿಂದ ಹೋಗುತ್ತಿದ್ದ KA-17-C-7125 ನೇ ಲಾರಿಯ ಚಾಲಕ ಗುರುರಾಜ ನು ಗಾವಳಿ ತಿರುವಿನ ಬಳಿಯಲ್ಲಿ  ಲಾರಿಯನ್ನು ಅತೀವೇಗದಿಂದ ಒಮ್ಮೆಲೆ ತಿರುಗಿಸಿದ ಪರಿಣಾಮ ಲಾರಿಯು ರಸ್ತೆಯ ಉತ್ತರ ಬದಿಯ ತೋಡಿಗೆ ಅಡ್ಡ ಬಿದ್ದಿರುತ್ತದೆ. ಕೂಡಲೇ ಹಿಂಬದಿ ಲಾರಿಯಲ್ಲಿದ್ದ ಪಿರಯಾದಿದಾರರು ಮತ್ತು ರಾಜು ಹೋಗಿ ನೋಡಲಾಗಿ ಗುರುರಾಜ ರವರಿಗೆ ಯಾವುದೇ ಗಾಯ ಆಗಿರುವುದಿಲ್ಲ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 143/2021 ಕಲಂ: 279 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ  ವೇದಾವತಿ (52), ಗಂಡ:  ಸುರೇಂದ್ರ  ಸುವರ್ಣ, ವಾಸ:   ಬಾಡಿಗೆ  ಮನೆ, ಕೇರಾಫ್‌ ಶೀಲಾ  ನಾಯಕ್‌ ಮಾಯಗುಂಡಿ, ಭಗವತಿ ರ್ಗಾಪರಮೇಶ್ವರಿ ದೇವಸ್ಥಾನದ  ಹತ್ತಿರ ಪುತ್ತೂರು ಗ್ರಾಮ,  ಉಡುಪಿ  ತಾಲೂಕು ಮತ್ತು  ಜಿಲ್ಲೆ ಇವರ ಕಿರಿಯ ತಮ್ಮ  ದುರ್ಗಾಪ್ರಸಾದ್‌ (38) ರವರು ಬಜ್ಪೆಯಲ್ಲಿ ಸೆಲೂನ್‌ ನಡೆಸಿಕೊಂಡಿದ್ದು,  ಕಳೆದ ಎರಡು-ಮೂರು ವರ್ಷಗಳಿಂದ ವಿಪರೀತ  ಮದ್ಯವ್ಯಸನಿಯಾಗಿದ್ದವನು ಇದೇ ಕಾರಣದಿಂದ  ಜೀವನದಲ್ಲಿ ಜಿಗುಪ್ಸೆ ಹೊಂದಿ ದಿನಾಂಕ  23/07/2021 ರಂದು ಬೆಳಿಗ್ಗೆ 9:30 ಗಂಟೆಯಿಂದ   10:00 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿದುದಾರರು ವಾಸವಿದ್ದ ಬಾಡಿಗೆ ಮನೆಯ  ಬಾತ್‌ರೂಮಿನ ಹಿಂಬದಿಯ  ಖಾಲಿ ಜಾಗದ ಮಾಡಿನ  ಕಬ್ಬಿಣದ ಪಟ್ಟಿಗೆ ನೈಲಾನ್‌ಹಗ್ಗವನ್ನು ಕಟ್ಟಿ ಕುತ್ತಿಗೆಗೆ  ನೇಣು  ಬಿಗಿದುಕೊಂಡು ಆತ್ಮಹತ್ಯೆಯನ್ನು ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 29/2021 ಕಲಂ: 174 CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 23-07-2021 05:56 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ