ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಜಯಂತ (42),  ತಂದೆ :  ವೆಂಕಪ್ಪ ಶೆಟ್ಟಿ, ವಾಸ :  ಭವಾನಿ ನಿವಾಸ ಬಾಲ್ಯೋಟ್ಟು ರೆಂಜಾಳ ಅಂಚೆ ಕಾರ್ಕಳ  ತಾಲ್ಲೂಕು  ಉಡುಪಿ ಜಿಲ್ಲೆ ಇವರು ದಿನಾಂಕ 22/06/2022 ರಂದು ತನ್ನ  KA-19-MC-0564 ನೇ ಮಾರುತಿ ಒಮಿನಿ ಕಾರಿನಲ್ಲಿ ಗೆಳೆಯ ವಿನಯ ಕುಮಾರ ರವರನ್ನು ಕುಳ್ಳರಿಸಿಕೊಂಡು ಏಕಮುಖ ಸಂಚಾರ ರಾಷ್ಟ್ರೀಯ ಹೆದ್ದಾರಿ 66 ರಸ್ತೆಯ  ಮಂಗಳೂರು ಕಡೆಯಿಂದ ಮಣಿಪಾಲ ಕಡೆಗೆ ಹೋಗುತ್ತಿರುವಾಗ ಕೊಪ್ಪಲಂಗಡಿ ಪ್ರಶಾಂತ ಆಸ್ಪತ್ರೆಗಿಂತ ಸ್ವಲ್ಪ ಮುಂದಕ್ಕೆ ತಲುಪುತ್ತಿದ್ದಂತೆ ಸಂಜೆ 5:45 ಗಂಟೆಗೆ ಪಿರ್ಯಾದಿದಾರರ ಹಿಂದಿನಿಂದ ಅಸ್ಗರ್ ಅಲಿ ರವರು ತನ್ನ KA-22-D-3689 ನೇ ಲಾರಿಯನ್ನು ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಕಾರಿನ ಹಿಂಭಾಗಕ್ಕೆ ಢಿಕ್ಕಿ ಹೊಡೆದ ಪರಿಣಾಮ  ಕಾರು ರಸ್ತೆಯ ಬಲಬದಿಯ ಡಿವೈಡರ್ ಮೇಲೆ ಮಗುಚಿ ಬಿದ್ದು ಜಖಂ ಗೊಂಡಿರುತ್ತದೆ. ಕಾರಿನಲ್ಲಿದ್ದ ಪಿರ್ಯಾದಿದಾರರಿಗೆ ಮತ್ತು ವಿನಯಕುಮಾರ ರವರಿಗೆ ಯಾವುದೇ ಗಾಯಗಳಾಗಿರುವುದಿಲ್ಲ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 62/2022 ಕಲಂ: 279  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಆನಂದ ಭಟ್‌ (43),  ತಂದೆ: ದಿ. ಗಣಪತಿ ಭಟ್‌, ವಿಳಾಸ: ಶ್ರೀ ಗಣೇಶ, ಸೇವಾಭಾಮ ರಸ್ತೆ, ಕಾಳಿಕಾಂಬ ನಗರ, ಅಂಬಲ್ಪಾಡಿ ಗ್ರಾಮ, ಉಡುಪಿ  ತಾಲೂಕು ಇವರು ಪ್ರಶಾಂತ್‌ ಶೆಟ್ಟಿ ಎಂಬುವವರೊಂದಿಗೆ ಉಡುಪಿ ತಾಲೂಕು ಕುತ್ಪಾಡಿ ಗ್ರಾಮದ ಬಲಾಯಿಪಾದೆ ಸಂಗಮ್‌ ಹೋಟೇಲ್‌ ಪಕ್ಕದಲ್ಲಿರುವ ಕಟ್ಟಡ ನಂಬ್ರ: 11-100 ರಲ್ಲಿ ಸಮೃದ್ಧಿ ಎಂಟರ್‌ಪ್ರೈಸಸ್‌ ಎಂಬ ಡಿಸ್ಟ್ರಿಬ್ಯೂಶನ್‌ ಅಂಗಡಿಯನ್ನು ನಡೆಸಿಕೊಂಡಿದ್ದು, ಅದರಲ್ಲಿ ಐ.ಟಿ.ಸಿ ಕಂಪೆನಿಯ ಸಿಗರೇಟ್‌ ಮತ್ತು ಇತರ ಪದಾರ್ಥಗಳನ್ನು ಸಂಗ್ರಹಿಸಿಟ್ಟಿರುವುದಾಗಿದೆ. ದಿನಾಂಕ 21/06/2022 ರಂದು 19:15 ಗಂಟೆಯಿಂದ ದಿನಾಂಕ 22/06/2022 ರಂದು ಬೆಳಿಗ್ಗೆ 08:15 ಗಂಟೆ ನಡುವಿನ ಸಮಯದಲ್ಲಿ ಯಾರೋ ಕಳ್ಳರು ಸಮೃದ್ಧಿ ಎಂಟರ್‌ಪ್ರೈಸಸ್‌ ಅಂಗಡಿಯ ಶೆಟರ್‌ಗೆ ಹಾಕಿದ ಬೀಗವನ್ನು ಮುರಿದು, ಅಂಗಡಿ ಒಳಪ್ರವೇಶಿಸಿ, ಅಂಗಡಿಯ ಕ್ಯಾಶ್‌ ಡ್ರಾವರ್‌ನಲ್ಲಿದ್ದ ರೂಪಾಯಿ 17,000/- ನಗದು ಹಾಗೂ ರೂಪಾಯಿ 5,47,744/- ಮೌಲ್ಯದ ಐಟಿಸಿ ಕಂಪೆನಿಯ ಸಿಗರೇಟ್‌ ಪ್ಯಾಕ್‌ಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತುಗಳ ಒಟ್ಟು ಮೌಲ್ಯ ರೂಪಾಯಿ 5,64,744/- ಆಗಿರುತ್ತದೆ.  ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 100/2022 ಕಲಂ: 454, 457, 380  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಇತರ ಪ್ರಕರಣ

  • ಬೈಂದೂರು: ದಿನಾಂಕ 22/06/2022 ರಂದು ಶ್ರೀಕಾಂತ. ಕೆ,  ಪೊಲೀಸ್ ಉಪಾಧೀಕ್ಷಕರು, ಕುಂದಾಪುರ ಉಪವಿಭಾಗ ಇವರು ರೌಂಡ್ಸ್ ನಲ್ಲಿರುವಾಗ ಶಿರೂರು ಕಡೆಯಿಂದ ಒಂದು ಟಾಟಾ ಕಂಪೆನಿಯ ಲಾರಿಯಲ್ಲಿ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಸಂಗ್ರಹಿಸಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಸಾಗಾಟ ಮಾಡುತ್ತಿರುವುದಾಗಿ ಬಂದ ಮಾಹಿತಿಯಂತೆ ಯಡ್ತರೆ ಗ್ರಾಮದ ಹೊಸ ಬಸ್ ನಿಲ್ದಾಣದ ಬಳಿ ತೆರಳಿ ಸಿಬ್ಬಂದಿಗಳೊಂದಿಗೆ ಹಾಗೂ ಬೈಂದೂರು ಆಹಾರ ನಿರೀಕ್ಷಕರು,  ಗ್ರಾಮ ಲೆಕ್ಕಿಗರೊಂದಿಗೆ ಕಾದುಕೊಂಡಿರುವಾಗ ಶಿರೂರು ಕಡೆಯಿಂದ ಒಂದು ಟಾಟಾ ಕಂಪೆನಿಯ ಲಾರಿ ಬರುವುದನ್ನು ನೋಡಿ ಸಿಬ್ಬಂದಿಗಳ ಸಹಾಯದಿಂದ ಲಾರಿಯನ್ನು ನಿಲ್ಲಿಸಿದ್ದು, ಲಾರಿಯಲ್ಲಿ ಚಾಲಕ ಹಾಗೂ ಇನ್ನೊರ್ವ ವ್ಯಕ್ತಿ ಇದ್ದು ಚಾಲಕನ ಹೆಸರು ವಿಚಾರಿಸಿದಲ್ಲಿ ಸುನೀಲ್ ಹೆಚ್.ಆರ್ (22), ತಂದೆ: ರಾಜು, ವಾಸ: ಕೆಂಪೆಗೌಡ ನಗರ ಕರೆಕಲ್ಲಮ್ಮ ದೇವಸ್ಥಾನ ರಸ್ತೆ ಹೊನ್ನಗಟ್ಟಿ ಬೆಂಗಳೂರು ದಕ್ಷಿಣ ಎಂಬುದಾಗಿ ತಿಳಿಸಿದ್ದು, ಇನ್ನೊರ್ವ ವ್ಯಕ್ತಿಯನ್ನು ವಿಚಾರಿಸಲಾಗಿ ತನ್ನ ಹೆಸರನ್ನು ಮಹಮ್ಮದ್ ಸಮೀರ (25), ತಂದೆ: ಮಹಮ್ಮದ್ ಬಾಷಾ, ವಾಸ: ಗಣೇಶ ನಗರ ಪುರವರ್ಗ ಭಟ್ಕಳ ತಾಲೂಕು ಉತ್ತರ ಕನ್ನಡ ಜಿಲ್ಲೆ ಎಂಬುದಾಗಿ ತಿಳಿಸಿದ್ದು,  ಲಾರಿಯಲ್ಲಿರುವ ಲೋಡಿನ ಬಗ್ಗೆ ವಿಚಾರಿಸಿದಲ್ಲಿ ಅಕ್ಕಿಯ ಚೀಲಗಳು ಎಂಬುದಾಗಿ ತಿಳಿಸಿದ್ದು,  ಅಕ್ಕಿಯ ಚೀಲಗಳ ಬಗ್ಗೆ ಕೂಲಂಕುಷವಾಗಿ ವಿಚಾರಿಸಿದಲ್ಲಿ ಸರಕಾರದಿಂದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿ ಎಂಬುದಾಗಿ ತಿಳಿಸಿದ್ದು, ಪರಿಶೀಲಿಸಲಾಗಿ ಲಾರಿಯಲ್ಲಿ 320 ಬಿಳಿ ಪಾಲಿಥೀನ್  ಚೀಲಗಳು ಇದ್ದು ಪರಿಶೀಲಿಸಲಾಗಿ ಪ್ರತಿ ಚೀಲವು 50 ಕೆಜಿ ಇದ್ದು ಒಟ್ಟು 16 ಟನ್ ನಷ್ಟು ಅಕ್ಕಿ ಇದ್ದಿರುತ್ತದೆ.  ಅಕ್ಕಿ ಮೌಲ್ಯ 4 ಲಕ್ಷ ರೂಪಾಯಿ ಆಗಿರುತ್ತದೆ. ಲಾರಿಯು ಟಾಟಾ ಕಂಪೆನಿಯ 1212 ಲಾರಿಯಾಗಿದ್ದು ಅದರ ನಂಬ್ರ KA-02-AH-6793 ಆಗಿರುತ್ತದೆ. ಲಾರಿಯನ್ನು ಪರಿಶೀಲಿಸಿದಾಗ ಚಾಲಕನ ಸಿಟಿನ ಬದಿಯಲ್ಲಿ 3 ಗೋಣಿ ಚೀಲಗಳು ಹಾಗೂ ಚೀಲವನ್ನು ಹೊಲಿಯುವ ಯಂತ್ರ ಇದ್ದು,  320 ಅಕ್ಕಿ ತುಂಬಿದ ಚೀಲಗಳು, 3 ಗೋಣಿ ಚೀಲಗಳು ಹಾಗೂ ಚೀಲ ಹೊಲಿಯುವ ಯಂತ್ರವನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 126/2022 ಕಲಂ: 3,6,7 ಅವಶ್ಯಕ ವಸ್ತುಗಳ ಅಧಿನಿಯಮ ಕಾಯ್ದೆ 1955 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-06-2022 05:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080