ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಬೈಂದೂರು: ಫಿರ್ಯಾದಿ ಚಂದ್ರ ಶೇಖರ ಶೆಟ್ಟಿ  ಪ್ರಾಯ: 48 ವರ್ಷ ತಂದೆ: ರಾಮಣ್ಣ ಶೆಟ್ಟಿ ವಾಸ:ಮೂಕಾಂಬಿಕಾ ನಿಲಯ , ನಾಕಟ್ಟೆ , ಯಡ್ತರೆ ಗ್ರಾಮ, ಇವರು ದಿನಾಂಕ 22-06-2022 ರಂದು ರಾತ್ರಿ 9:45 ಗಂಟೆಗೆ ಯಡ್ತರೆ ಗ್ರಾಮದ ನಾಕಟ್ಟೆ ಎಂಬಲ್ಲಿನ  ದುರ್ಗಾಶ್ರೀ  ಹೋಟೆಲ್ ನ ಬಳಿ ರಾ ಹೆ 66 ರ ಸರ್ವಿಸ್ ರಸ್ತೆಯಲ್ಲಿ ತನ್ನ ಬಾಬ್ತು ಮೋಟಾರು ಸೈಕಲ್ ನಲ್ಲಿ ಹೋಗುತ್ತಿರುವಾಗ ಅವರ ಪರಿಚಯದ ರಾಜು ಗಾಣಿಗ ಎಂಬವರು ರಾಹೆ 66 ರ ಪಶ್ಚಿಮ ಬದಿಯ  ಸರ್ವಿಸ್ ರಸ್ತೆಯ ಡಿವೈಡರ್ ಬಳಿ ರಸ್ತೆ ದಾಟುವರೇ ನಿಂತಿದ್ದು  ಆ ಸಮಯ ಕುಂದಾಪುರ ಕಡೆಯಿಂದ ಭಟ್ಕಳ ಕಡೆಗೆ GJ 36 AC 4223 ನೇ  ಕಾರು ಚಾಲಕನು ಆತನ ಬಾಬ್ತು ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಎಡಬದಿಗೆ ಚಲಾಯಿಸಿ  ರಾಜು ಗಾಣಿಗ ರವರಿಗೆ ಡಿಕ್ಕಿ ಹೊಡೆದು ಕಾರನ್ನು ನಿಲ್ಲಿಸದೇ ಪರಾರಿಯಾಗಿದ್ದು  ನಂತರ ಪಿರ್ಯಾದಿದಾರರು ಹಾಗೂ ನವೀನ್ ದೇವಾಡಿಗ ಎಂಬವರು ರಾಜು ಗಾಣಿಗ ರವರನ್ನು ಎತ್ತಿ ಉಪಚರಿಸಿದ್ದು ಅವರ ತಲೆಗೆ , ಕೈಗೆ , ಕಾಲಿಗೆ ತೀವ್ರ ಸ್ವರೂಪದ ಗಾಯವಾಗಿದ್ದು ನಂತರ ಅವರನ್ನು ಬೈಂದೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು  ಹೋಗಿ ವ್ಯೆದ್ಯರಲ್ಲಿ   ತೋರಿಸಿದಲ್ಲಿ ವೈದ್ಯರು ಪರೀಕ್ಷೀಸಿ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಪಿರ್ಯಾದಿದಾರರು ಡಿಕ್ಕಿ ಹೊಡೆದ ಕಾರು ಹಾಗೂ ಕಾರಿನ ನಂಬ್ರವನ್ನು ದಾರಿ ದೀಪದ ಸಹಾಯದಿಂದ  ನೋಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 127/2022 ಕಲಂ. 279,304 A  ಭಾ. ದಂ. ಸಂ.  ಮತ್ತು 134 (A) & (B) IMV ACT. ರಂತೆ ಪ್ರಕರಣ ದಾಖಲಿಸಿರುವುದಾಗಿದೆ.

ಇತರ ಪ್ರಕರಣಗಳು

  • ಬೈಂದೂರು: ಫಿರ್ಯಾದಿ ವಿನಯ ಕುಮಾರ್ ಪ್ರಾಯ 45 ವರ್ಷ. ತಂದೆ : ದಿ. ನಾಗೇಶ್ ಶೆಟ್ಟಿ ಆಹಾರ ನಿರೀಕ್ಷಕರು, ಬೈಂದೂರು ಇವರು  ದಿನಾಂಕ 22/06/2022 ರಂದು ಸಂಜೆ 4.30 ಗಂಟೆಗೆ  ಬೈಂದೂರು ತಾಲೂಕು ಕಚೇರಿಯಲ್ಲಿ ಕರ್ತವ್ಯದಲ್ಲಿರುವಾಗ  ಮಾನ್ಯ  ಬೈಂದೂರು ತಹಶೀಲ್ದಾರ್ ರವರಿಗೆ ಕಿರಿಮಂಜೇಶ್ವರದಲ್ಲಿ  ಟಾಟಾ ಏಸ್ ವಾಹನದಲ್ಲಿ ಸರಕಾರದ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಅಕ್ಕಿಯನ್ನು ಕಾನೂನು ಬಾಹಿರವಾಗಿ ಸಂಗ್ರಹಿಸಿ ಅಕ್ರಮವಾಗಿ ಯಾವುದೇ ಪರವಾನಿಗೆ ಇಲ್ಲದೇ ಸಾಗಾಟ ಮಾಡುತ್ತಿರುವುದಾಗಿ ಖಚಿತ ಮಾಹಿತಿ ದೊರೆತ ಮೇರೆಗೆ ಮಾನ್ಯ ಬೈಂದೂರು ತಹಶೀಲ್ದಾರ್ ರವರ ನಿರ್ದೆಶನದಂತೆ ಫಿರ್ಯಾದಿದಾರರು ಕಿರಿಮಂಜೇಶ್ವರ ಗ್ರಾಮದ  ಗ್ರಾಮಲೆಕ್ಕಿಗ  ಗಣೇಶ ಮೇಸ್ತರವರೊಂದಿಗೆ ಸಂಜೆ 5.00  ಗಂಟೆಗೆ ಕಿರಿಮಂಜೇಶ್ವರದ ಕಾರಂತರ ಹೊಟೇಲ್ ಸಮೀಪ ಬಂದು ದಾಳಿ ನಡೆಸಿದಾಗ ಆಪಾದಿತನು ವಾಹನ ಬಿಟ್ಟು ಓಡಿ ಹೋಗಿದ್ದು  ವಾಹನದ ನೊಂದಣಿ  ಸಂಖೈ ನೋಡಲಾಗಿ KA 25 ಸಿ 3154 ನಂಬ್ರದ ಟಾಟಾ ಏಸ್ ಗೂಡ್ಸ್ ವಾಹನ ಆಗಿದ್ದು ಅದನ್ನು ಪರಿಶೀಲಿಸಲಾಗಿ ವಾಹನದ ಹಿಂಬದಿ  14 ಪಾಲಿಥಿನ್ ಚೀಲಗಳಿದ್ದು ಒಟ್ಟು 4.20 ಕ್ವಿಂಟಾಲ್ ಅಕ್ಕಿ ಇದ್ದು ಅಕ್ಕಿಯ ಮೌಲ್ಯ  ರೂ 9,240 /- ಆಗಿರುತ್ತದೆ. ಆಪಾದಿತ ಸರಕಾರದಿಂದ ಉಚಿತವಾಗಿ ಪಡಿತರ ಚೀಟಿದಾರರಿಗೆ ವಿತರಿಸಿದ ಅಕ್ಕಿಯನ್ನು ಯಾರಿಂದಲೋ ಖರೀಧಿಸಿ ಹೆಚ್ಚಿನ ಬೆಲೆಗೆ ಅಂಗಡಿಗಳಿಗೆ ಮಾರಾಟ ಮಾಡುವ  ಉದ್ದೇಶದಿಂದ 420 ಕೆ ಜಿ ಅಕ್ಕಿಯನ್ನು ಅಕ್ರಮವಾಗಿ ಕಾನೂನುಬಾಹಿರವಾಗಿ ಸಂಗ್ರಹಿಸಿ ಯಾವುದೇ ದಾಖಲೆಗಳಿಲ್ಲದೇ  ಸಾಗಾಟ ಮಾಡಿದ್ದು  ಆಪಾದಿತರು ಅಕ್ರಮವಾಗಿ ಸಾಗಾಟಕ್ಕೆ ಉಪಯೋಗಿಸಿದ ಟಾಟಾ ಏಸ್ ವಾಹನ ಸಂಖ್ಯೆ KA 25 ಸಿ 3154  ಹಾಗೂ ಅಕ್ಕಿ ಇರುವ  14 ಪಾಲಿಥೀನ್ ಚೀಲ ಗಳನ್ನು ಮುಂದಿನ ಕ್ರಮದ ಬಗ್ಗೆ ಮಹಜರು ಮೂಲಕ ಸ್ವಾಧೀನ ಪಡಿಸಿಕೊಂಡು ಆರೋಪಿ ಮೇಲೆ ಕಾನೂನುಕ್ರಮ ಕೈಗೊಳ್ಳುವ ಬಗ್ಗೆ  ವರದಿಯನ್ನು ನಿವೇದಿಸಿಕೊಂಡಿರುತ್ತಾರೆ . ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ  128/2022 ಕಲಂ: 3,6,7 ಅವಶ್ಯಕ ವಸ್ತುಗಳ ಅಧಿನಿಯಮ ಕಾಯ್ದೆ 1955 ರಂತೆ ಪ್ರಕರಣ ದಾಖಲಿಸಿರುವುದಾಗಿದೆ.

ಇತ್ತೀಚಿನ ನವೀಕರಣ​ : 23-06-2022 06:14 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080