ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾಧ ಕೃಷ್ಣ ಕೆ (71) ತಂದೆ: ದಿ. ಸೀನ ಮರಕಾಲ ವಾಸ: ಕೊಲ್ಲಮ್ಮ ನಿಲಯ , ಕೋಡಿ ಕನ್ಯಾನ  ಗ್ರಾಮ, ಬ್ರಹ್ಮಾವರ ತಾಲೂಕು ಇವರು ದಿನಾಂಕ 22/06/2021 ಇವರ KA-20-EV-0362 ನೇ ನಂಬ್ರದ ಹೊಂಡಾ ಆಕ್ಟೀವಾದಲ್ಲಿ ಕೆಲಸದ ನಿಮಿತ್ತ ಸಾಸ್ತಾನಕ್ಕೆ ಬಂದು ಕೆಲಸ ಮುಗಿಸಿ ವಾಪಾಸ್ಸು ಕುಂದಾಪುರದಿಂದ ಉಡುಪಿ ಕಡೆಗೆ ಹಾದು ಹೋಗುವ ಮುಖ್ಯ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯಲ್ಲಿ  ಬರುವಾಗ ಬ್ರಹ್ಮಾವರ ತಾಲ್ಲೂಕು ಐರೋಡಿ ಗ್ರಾಮದ ನಂದಿಕೇಶ್ವರ ದೇವಸ್ಥಾನದ ಎದುರು ಬರುವಾಗ  ಸಮಯ ಸುಮಾರು ಸಂಜೆ 6:15 ಗಂಟೆಗೆ ಮಾಬುಕಳ ಯೂ ಟರ್ನ ನಲ್ಲಿ ಉಡುಪಿಯಿಂದ ಕುಂದಾಪುರ ಕಡೆಗೆ ಹಾದು ಹೋಗುವ ರಸ್ತೆಗೆ ಹೋಗಲು ಕೃಷ್ಣ ಕೆ ರವರು ಇಂಡಿಕೇಟರ್ ಹಾಕಿ  ಆಕ್ಟೀವಾವನ್ನು ಬಲಭಾಗಕ್ಕೆ ತಿರುಗಿಸುವಾಗ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ KA-20-EU-9755 ನೇ ನಂಬ್ರದ ಮೋಟಾರು ಸೈಕಲ್ ಸವಾರ ವಿನಯ ಕುಮಾರ ಎಂಬವನು ಹಿಂಬದಿ ಸಹ ಸವಾರ ಸುರೇಶ ಶೆಟ್ಟಿ ಎಂಬವನನ್ನು ಕುಳ್ಳಿರಿಸಿಕೊಂಡು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕೃಷ್ಣ ಕೆ ರವರ ಹೊಂಡಾ ಆಕ್ಟೀವಾಕ್ಕೆ ಡಿಕ್ಕಿ ಹೊಡೆದ ಪರಿಣಾಮ ಇವರು ರಸ್ತೆಗೆ ಬಿದ್ದು ಎರಡು ಕೈಗಳಿಗೆ ಮೂಳೆ ಮುರಿತ ಹಾಗೂ ಹಣೆಯ ಬಳಿ ತರುಚಿದ ರಕ್ತ ಗಾಯ ಆಗಿದ್ದು ಚಿಕಿತ್ಸೆಗೆ ಬ್ರಹ್ಮಾವರ ಮಹೇಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಆಗಿರುವುದಾಗಿದೆ, ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 122/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಸುರೇಶ್ ಪೂಜಾರಿ (36), ತಂದೆ; ಮಂಜುನಾಥ ಪೂಜಾರಿ, ವಾಸ; ಫಿಣಕಿಮನೆ, ಮಯ್ಯಾಡಿ ಅಂಚೆ ಬೈಂದೂರು ಇವರ ಅಕ್ಕನ ಗಂಡನಾದ ಚಂದ್ರ ನಾಯ್ಕ್ (35) ಇವರು ದಿನಾಂಕ 22/06/2021 ರಂದು ಬೆಳಿಗ್ಗೆ ಸಮಯ ಸುಮಾರು 11:00 ಗಂಟೆಗೆ ಮನೆಯ ಹತ್ತಿರ ಇರುವ ಸುಮನಾವತಿ ಹೊಳೆಯ ದಾರಿಯ ಬಳಿ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಸುಮನಾವತಿ ಹೊಳೆಗೆ ಬಿದ್ದಿದ್ದು ಕೂಡಲೇ ಸುರೇಶ ಇವರು ರಕ್ಷಿಸಲು ಹೋಗುವಷ್ಟರಲ್ಲಿ ಚಂದ್ರ ನಾಯ್ಕ್ ರವರು ನೀರಿನಲ್ಲಿ ಮುಳುಗಿ ಕಾಣೆಯಾಗಿರುತ್ತಾರೆ. ಇವರು ಸ್ಥಳೀಯರೊಂದಿಗೆ ಕಾಣೆಯಾದ ಚಂದ್ರ ನಾಯ್ಕ್ ರವರನ್ನು ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲವಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 105/2021 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕಾರ್ಕಳ: ದಿನಾಂಕ 22/06/2021 ರಂದು 16:00 ಗಂಟೆಗೆ ಕಾರ್ಕಳ ತಾಲೂಕು ಮುಂಡ್ಕೂರು ಗ್ರಾಮದ ಒಗ್ಗೇರಬೆಟ್ಟು ಎಂಬಲ್ಲಿ ಸಾರ್ವಜನಿಕ ಹಾಡಿಯಲ್ಲಿ ಕೆಲವರು ಹಣವನ್ನು ಪಣವಾಗಿ ಇಟ್ಟು ಕೋಳಿ ಅಂಕ ಆಡುತ್ತಿದ್ದ ಬಗ್ಗೆ ಮಾಹಿತಿ ಬಂದ ಮೇರೆಗೆ ತೇಜಸ್ವಿ ಟಿ,ಐ ಪಿ.ಎಸ್.ಐ ಕಾರ್ಕಳ ಗ್ರಾಮಾಂತರ ಠಾಣೆ ಇವರು  ಸಿಬ್ಬಂದಿಯವ ಜೊತೆಯಲ್ಲಿ ಮೇಲ್ಕಾಣಿಸಿದ ಸ್ಥಳಕ್ಕೆ ಹೋಗಿ ನೋಡಲಾಗಿ ಸದ್ರಿಯವರುಗಳು ಕೋವಿಡ್ ಮಹಾಮಾರಿ ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಕೋವಿಡ್ ನಿಯಮ ಉಲ್ಲಂಘಿಸಿ ಕೋಳಿ ಅಂಕ ಅಡುತ್ತಿದ್ದು 16:45 ಗಂಟೆಗೆ ದಾಳಿ ಮಾಡಿದಾಗ ಆರೋಪಿಗಳು ಓಡಿ ಹೋಗಿದ್ದು, ಅವರ ಪೈಕಿ ಅಪಾದಿತ ಪ್ರಜ್ವಾಲ್ ನನ್ನು ವಶಕ್ಕೆ ಪಡೆದು 5 ಹುಂಜಾ ಕೋಳಿ, 2 ಬಾಳುಕತ್ತಿ , 3  ಮೋಟಾರ್ ಸೈಕಲ್ ಹಾಗೂ  ನಗದು ರೂಪಾಯಿ 510/- ನ್ನು  ಸ್ವಾಧಿನಪಡಿಸಿಗೊಂಡಿದ್ದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 75/2021  ಕಲಂ:  269 IPC & 87 ,93 K P ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಹರೀಶ ಆಚಾರ್ಯ, (36) ತಂದೆ: ಕೃಷ್ಣಮೂರ್ತಿ ಆಚಾರ್ಯ, ವಾಸ: ಮಾರ್ವಿ, ವಂಡಾರು ಗ್ರಾಮ, ಬ್ರಹ್ಮಾವರ ತಾಲೂಕು, ಇವರ ತಮ್ಮ ಮಂಜುನಾಥ, (32) ರವರು ಬಿದ್ಕಲ್‌ಕಟ್ಟೆ  PHC ಯಲ್ಲಿ Junior Health Inspector  ಆಗಿ ಕಳೆದ  6 ವರ್ಷಗಳಿಂದ  ಕರ್ತವ್ಯ ನಿರ್ವಹಿಸಿಕೊಂಡಿದ್ದು  ಕಳೆದ  15 ವರ್ಷಗಳ ಹಿಂದಿನಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಉಡುಪಿ ಬಾಳಿಗಾ ಆಸ್ಪತ್ರೆಯಿಂದ  ಚಿಕಿತ್ಸೆಯನ್ನು ಪಡೆಯುತ್ತಿದ್ದು ಮದ್ಯಪಾನ ಮಾಡುವ ಚಟವನ್ನು ಹೊಂದಿದ್ದು ದಿನಾಂಕ 22/೦6/2021 ರಂದು ಬೆಳಿಗ್ಗೆ 8:20 ಘಂಟೆಗೆ ತಲೆ ತುಂಬಾ ನೋವಾಗುತ್ತಿದ್ದು ಕಛೇರಿಗೆ ಹೋಗಿ ಮಧ್ಯಾಹ್ನ ವಾಪಸ ಬಂದು ಉಡುಪಿ  ಆಸ್ಪತ್ರೆಗೆ ಚಿಕಿತ್ಸೆಗೆ ಹೋಗುವ ಬಗ್ಗೆ ತಿಳಿಸಿ ಮನೆಯಿಂದ ಕಛೇರಿ ಕೆಲಸಕ್ಕೆ ಹೋಗಿದ್ದು, ಮಧ್ಯಾಹ್ನ ಹೊತ್ತಾದರು  ವಾಪಸ ಮನೆಗೆ ಬಾರದೆ ಇದ್ದು ಹರೀಶ ಆಚಾರ್ಯ ರವರು ವಿಚಾರಿಸಿದಲ್ಲಿ ಬೆಳಿಗ್ಗೆ ಕಛೇರಿಯಿಂದ  ಹೋಗಿರುವುದಾಗಿ ತಿಳಿಸಿದ್ದು ಮೊಬೈಲ್‌ ಕರೆಯನ್ನು ಸ್ವೀಕರಿಸದೆ ಇದ್ದರಿಂದ ಹರೀಶ ಆಚಾರ್ಯ ರವರು  ಹಾಗೂ ಕುಟುಂಬದವರು ಹುಡುಕಾಡಿದಲ್ಲಿ ಸಮಯ ಸುಮಾರು ಸಂಜೆ 4:30 ಘಂಟೆಗೆ ಮನೆಯಂದ  ಕಛೇರಿಗೆ  ಹೋಗುವ ಕಕ್ಕುಂಜೆ ಯಿಂದ ಬಿದ್ಕಲ್‌ ಕಟ್ಟೆ  ಕಡೆಗೆ ಹೋಗುವ ದಾರಿಯಲ್ಲಿ ಕಂಬ್ಲಿಕಲ್ಲು ದೇವಸ್ಥಾನದ ಹತ್ತಿರ  ಡಾಮಾರು ರಸ್ತೆಯ ಎಡಬದಿ ತೋಡಿನ ನೀರಿನಲ್ಲಿ ಮಂಜುನಾಥ ಕವುಚಿ ಬಿದ್ದುಕೊಂಡಿದ್ದು  ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 18/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-06-2021 10:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080