ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಕಾಪು: ದಿನಾಂಕ 22/06/2021 ರಂದು ರಾತ್ರಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಕೋಟೆ ಗ್ರಾಮದ ಕಜಕೋಡ ನದಿಯ ತೀರದಲ್ಲಿ, ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವಾಗ ಗಲಾಟೆ ನಡೆದು ಒಬ್ಬಾತನು ಆದರ್ಶ ಆಸ್ಪತ್ರೆ ಉಡುಪಿಯಲ್ಲಿ ಚಿಕಿತ್ಸೆಯ ಬಗ್ಗೆ ದಾಖಲಾದ ಬಂದ ಮಾಹಿತಿಯಂತೆ ರಾಘವೇಂದ್ರ ಸಿ. ಪೊಲೀಸ್ ಉಪನಿರೀಕ್ಷಕರು,ಕಾಪು ಪೊಲೀಸ್ ಠಾಣೆ  ಇವರು ಆದರ್ಶ ಆಸ್ಪತ್ರೆಗೆ ತೆರಳಿ ಒಳರೋಗಿಯಾಗಿ ದಾಖಲಾಗಿದ್ದ ಶರತ್ ದೇವಾಡಿಗ ರವರನ್ನು ವಿಚಾರಿಸಲಾಗಿ, ಇತನ ಸ್ನೇಹಿತನಾದ ಸುಕೇಶ ಎಂಬಾತನ ಹುಟ್ಟು ಹಬ್ಬದ ಪ್ರಯುಕ್ತ  ಆತನ ಇತರೆ ಗೆಳೆಯರಾದ 1) ಪ್ರೀತಮ್ ಶ್ರೀಯಾನ್  2)  ವಿವೇಕ ಅಮೀನ್ 3) ಅಭಿರಾಜ ಕರ್ಕೇರಾ 4) ರಂಜನ ಶ್ರೀಯಾನ್ 5) ಕವಿರಾಜ 6) ಪ್ರಜ್ವಲ್ 7) ಸಚಿನ್ 8) ಹರೀಶ ರೊಂದಿಗೆ ದಿನಾಂಕ 22/06/2021 ರ ಸಂಜೆ 7:30 ಗಂಟೆಗೆ ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಅಲ್ಲೆ ಕುಳಿತುಕೊಂಡಿರುವಾಗ ಸುಮಾರು ಸಮಯ 11.00 ಗಂಟೆಗೆ ಅಭಿಷೇಕ್ ಎಂಬವನು ನಾವು ಕುಳಿತುಕೊಂಡಿರುವ ಕಜಕೋಡ ನದಿಯ ತೀರದಲ್ಲಿ ಬಂದು ನನ್ನ ಬಳಿ ಕಿರಣ ಎಂಬಾತನ ಬಗ್ಗೆ ವಿಚಾರಿಸಿ ಒಮ್ಮೇಲೆ ಶರತ ದೇವಾಡಿಗ ರವರ ಮೇಲೆ ಹಲ್ಲೆ ನಡೆಸಿರುವುದಾಗಿದೆ. ಶರತ್ ದೇವಾಡಿಗ ಹೇಳಿದದಂತೆ ಅಭಿಷೇಕ್‌ನ ವಿರುದ್ಧ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ದೇಶಾದ್ಯಂತ ಹರಡುತ್ತಿರುವ ಸಾಂಕ್ರಾಮಿಕ ರೋಗ ಕೋವಿಡ್-19 ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ, ದಿನಾಂಕ 22/06/2021 ರಿಂದ ದಿನಾಂಕ 05/07/2021 ರವರೆಗೆ ಸಂಜೆ 7:00 ಗಂಟೆಯಿಂದ ಬೆಳಗ್ಗೆ 05:00 ಗಂಟೆಯವರೆಗೆ ರಾತ್ರಿ ಕೋವಿಡ್-19 ಕರ್ಫ್ಯೂ ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶ ಹೊರಡಿಸಿದ್ದು ಈ ಆದೇಶದ ಬಗ್ಗೆ ತಿಳಿದು ಅದನ್ನು ಉಲ್ಲಂಘಿಸಿ ನಿರ್ಲಕ್ಷತನದಿಂದ ಗುಂಪು ಸೇರಿ ಹುಟ್ಟು ವನ್ನು ಆಚರಿಸಿಕೊಂಡಿರುವುದಾಗಿದೆ. ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಸುಕೇಶ ಮತ್ತು ಆತನ ಸ್ನೇಹಿತರಿಗೆ ಘನ ಕರ್ನಾಟಕ ಸರಕಾರವು ಕೋವಿಡ್‌ ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಗುಂಪು ಸೇರಿ ಕೋವಿಡ್‌ ನಿಯಮ ಉಲ್ಲಂಘಿಸಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 108/2021  ಕಲಂ:  269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾಧ ಸುರೇಶ್ ಪೂಜಾರಿ (36) ತಂದೆ; ಮಂಜುನಾಥ ಪೂಜಾರಿ, ವಾಸ; ಫಿಣಕಿಮನೆ, ಮಯ್ಯಾಡಿ ಅಂಚೆ ಬೈಂದೂರು ಗ್ರಾಮ, ಮತ್ತು ತಾಲೂಕು ಇವರ ಅಕ್ಕನ ಗಂಡನಾದ ಚಂದ್ರ ನಾಯ್ಕ್ (35) ಇವರು ದಿನಾಂಕ 22/06/2021 ರಂದು ಬೆಳಿಗ್ಗೆ ಸಮಯ ಸುಮಾರು 11:00 ಗಂಟೆಗೆ ಮನೆಯ ಹತ್ತಿರ ಇರುವ ಸುಮನಾವತಿ ಹೊಳೆಯ ದಡದ ಬಳಿ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಸುಮನಾವತಿ ಹೊಳೆಯ ನೀರಿಗೆ ಬಿದ್ದು ಕೊಚ್ಚಿಕೊಂಡು ಹೋಗಿ ಕಾಣೆಯಾಗಿದ್ದು ಈ ಬಗ್ಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ನಂತರ ದಿನಾಂಕ 23/06/2021 ರಂದು ಸುರೇಶ್ ಪೂಜಾರಿ ರವರು ಹಾಗೂ ಮನೆಯ ಹತ್ತಿರದವರು ಚಂದ್ರ ನಾಯ್ಕ್ ರವರನ್ನು ಹುಡುಕಾಡಿದಾಗ ಬೆಳಿಗ್ಗೆ 08:30 ಗಂಟೆಗೆ ಕುದ್ರಿಹಿತ್ಲು ರಾಮ ಪೂಜಾರಿ ರವರ ಜಾಗದ ಹತ್ತಿರ ಹೊಳೆಯ ದಡದ ಹತ್ತಿರ ಚಂದ್ರ ನಾಯ್ಕ್ ರವರ ಮೃತ ದೇಹ ದೊರೆತ್ತಿರುತ್ತದೆ. ಚಂದ್ರ ನಾಯ್ಕ್ ರವರು ಸುಮನಾವತಿ ಹೊಳೆಯ ದಡದ ಮೇಲೆ ನಡೆದುಕೊಂಡು ಹೋಗುವಾಗ ಆಕಸ್ಮಿಕವಾಗಿ ಕಾಲು ಜಾರಿ ಹೊಳೆಗೆ ಬಿದ್ದು ನೀರಿನಲ್ಲಿ ಕೊಚ್ಚಿ ಹೋಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಯು.ಡಿ.ಆರ್‌ ಕ್ರಮಾಂಕ 24/2021 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-06-2021 06:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080