ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ದಾಮೋದರ ಸುವರ್ಣ (64), ತಂದೆ : ತುಕ್ರು ಸಾಲಿಯಾನ, ವಾಸ : ಮನೆ ನಂಬ್ರ 4/83, ಮಠದಕುದ್ರು, ಉದ್ಯಾವರ, ಉಡುಪಿ ತಾಲ್ಲೂಕು ಮತ್ತು ಜಿಲ್ಲೆ ಇವರು ದಿನಾಂಕ 21/05/2023 ರಂದು 19:45 ಗಂಟೆಗೆ ಉದ್ಯಾವರದ ಜೈಹಿಂದ್ ಜಂಕ್ಷನ್ ಬಳಿ ಇರುವ ದಿನಸಿ ಅಂಗಡಿಲ್ಲಿ ದಿನಸಿ ಸಾಮಾನು ಖರೀದಿಸಿ ವಾಪಸ್ಸು ಮನೆಗೆ ತೆರಳಲು ಉಡುಪಿಯಿಂದ-ಮಂಗಳೂರು ಕಡೆಗೆ ಹೋಗುವ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆ ದಾಟಲು ರಸ್ತೆ ಬದಿಯಲ್ಲಿ ನಿಂತುಕೊಂಡಿರುವಾಗ ಉಡುಪಿ ಕಡೆಯಿಂದ KA-19-AB-2825 ನೇದರ ಕಾರು ಚಾಲಕ ಲೊಕೇಶ ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆಸಿ ಅಪಘಾತವುಂಟು ಮಾಡಿದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಅವರ ತಲೆಯ ಹಿಂಬದಿ, ಬೆನ್ನಿಗೆ ಮತ್ತು ಎಡಕಾಲಿಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 86/2023 ಕಲಂ: 279, 338   ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಶಕುಂತಲಾ ಆರ್ ಶೆಟ್ಟಿ(60), ಗಂಡ: ರಾಮಕೃಷ್ಣ ಮುದ್ದು ಶೆಟ್ಟಿ,  ವಾಸ:  ನಂಬ್ರ 211, ಕಸ್ತೂರಿ ವಿಹಾರ, ಅಂಬಿಕಾ ನಗರ, ಎಂ.ಜಿ ರಸ್ತೆ, ದೊಂಬಿವಿಲಿ ವೆಸ್ಟ್, ಕಲ್ಯಾಣ, ಮುಂಬೈ, ಮಹಾರಾಷ್ಟ್ರ ರಾಜ್ಯ ಇವರ 2ನೇ ಮಗಳಿಗೆ ದಿನಾಂಕ 22/05/2023 ರಂದು ಉಡುಪಿ ಶ್ಯಾಮಿಲಿ ಸಭಾಭವನದಲ್ಲಿ ಮದುವೆ ನಿಶ್ಚಯವಾಗಿರುತ್ತದೆ. ಪಿರ್ಯಾದಿದಾರರ ಗಂಡ ರಾಮಕೃಷ್ಣ ಮುದ್ದು ಶೆಟ್ಟಿ (68) ರವರ ಎಡಕಾಲು ತುಂಡಾಗಿದ್ದು, ಪ್ಲಾಸ್ಟಿಕ್‌ ಕಾಲನ್ನು ಅಳವಡಿಸಿದ್ದು, ಉಡುಪಿ ಕಿದಿಯೂರು ಹೋಟೇಲ್‌ನ ರೂಮ್‌ನಂಬ್ರ 209 ರಲ್ಲಿ ದಿನಾಂಕ 19/05/2023 ರಿಂದ ಉಳಿದುಕೊಂಡಿದ್ದು, ಅವರ ತಮ್ಮ ಸತೀಶ್‌ಶೆಟ್ಟಿ ಯವರು ಅವರ ಜೊತೆ ಆರೈಕೆಯಲ್ಲಿದ್ದರು. ದಿನಾಂಕ 21/05/2023 ರಂದು 23:30 ಗಂಟೆಗೆ ರಾಮಕೃಷ್ಣ ಮುದ್ದು ಶೆಟ್ಟಿ ರವರು ಹೋಟೇಲ್‌ರೂಮ್‌ ಒಳಗಡೆ ನಡೆಯುವಾಗ ಆಕಸ್ಮಿಕವಾಗಿ ತುಂಡಾದ ಕಾಲಿಗೆ ಅಳವಡಿಸಿದ ಬೆಲ್ಟ್‌ ಜಾರಿ ಹೋಗಿದ್ದರಿಂದ ನೆಲಕ್ಕೆ ಬಿದ್ದು ತಲೆಗೆ ಗಾಯವಾಗಿದ್ದು, ಅವರನ್ನು ಕೂಡಲೇ ಜಿಲ್ಲಾಸ್ಪತ್ರೆಗೆ ಕರೆತಂದು 00:30 ಗಂಟೆಗೆ ವೈದ್ಯರಲ್ಲಿ ಪರೀಕ್ಷಿಸಿದಲ್ಲಿ, ರಾಮಕೃಷ್ಣ ಮುದ್ದು ಶೆಟ್ಟಿ ರವರು ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 27/2023 ಕಲಂ: 174  CrPC‌ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ಪಿರ್ಯಾದಿದಾರರಾದ ಸುಧಾಕರ (32), ತಂದೆ: ಮುತ್ತ, ವಾಸ: ಹೊಸಹೊಕ್ಲು  ಬಾಳೆ  ಇಡೂರು ಕುಂಜ್ಞಾಡಿ  ಕುಂದಾಫುರ ತಾಲೂಕು ಇವರ ತಮ್ಮ ಸುರೇಶ್ (30) ಇವರು ಕಳೆದ 10 ವರ್ಷಗಳಿಂದ ಪಾರ್ಶ್ವವಾಯು  ಖಾಯಿಲೆಯಿಂದ ಬಳಲುತ್ತಿದ್ದು  ದಿನಾಂಕ  22/05/2023 ರಂದು ಬೆಳಿಗಿನ ಜಾವ 03:00 ಗಂಟೆಗೆ  ಮನೆಯಲ್ಲಿ ಮಲಗಿಕೊಂಡಿದ್ದ ವೇಳೆ ಎದೆನೂವು ಕಾಣಿಸಿಕೊಂಡವರನ್ನು  ಚಿಕಿತ್ಸೆಗೆ ಕುಂದಾಪುರ ಆದರ್ಶ ಆಸ್ಪತ್ರೆಗೆ  ಕರೆದುಕೊಂಡು ಹೋದಾಗ ಬೆಳಗಿನ 04:00 ಗಂಟೆಗೆ ಅಲ್ಲಿನ ವೈದ್ಯರು ಪರೀಕ್ಷಿಸಿ ಚಿಕಿತ್ಸೆಗೆ ತರುವ ದಾರಿಯಲ್ಲಿ ಮೃತಪಟ್ಟಿರುವುದಾಗಿ ದೃಡೀಕರಿಸಿರುತ್ತಾರೆ. ಈ ಬಗ್ಗೆ ಕೊಲ್ಲೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 06/2023 ಕಲಂ: 174  CrPC‌ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ದಿನೇಶ್ ಮೇಸ್ತ (28) , ತಂದೆ: ವೆಂಕಟೇಶ್ ಮೇಸ್ತ, ವಾಸ: ಚಾಟಿನಗದ್ದೆ ಹಡವಿನಕೋಣೆ ಶಿರೂರು ಗ್ರಾಮ, ಬೈಂದೂರು ತಾಲೂಕು ಇವರ ಅಣ್ಣ ದೀಪಕ್ ರವರ ಮದುವೆ ಕಾರ್ಯಕ್ರಮ ಇದ್ದುದರಿಂದ  ಅವರ ಹಳೇಯ ಮನೆಯನ್ನು ನವೀಕರಣ ಮಾಡುತ್ತಿದ್ದು ಈ ಬಗ್ಗೆ ಪಿರ್ಯಾದಿದಾರರ ದೂರದ ಸಂಬಂಧಿಯಾದ ಶಶಿಧರ ಆಚಾರಿ(32) ರವರು 1 ವರ್ಷದಿಂದ ಪಿರ್ಯಾದಿದಾರರ ಮನೆಯಲ್ಲಿ ವಾಸಮಾಡಿಕೊಂಡಿದ್ದು  ಮರ ಕೆಲಸ ಮಾಡಿಕೊಂಡಿದ್ದರು.   ಶಶೀಧರ್ ಆಚಾರಿ ರವರು ಮಧ್ಯಪಾನ ಮಾಡುವ ಅಭ್ಯಾಸ ಹೊಂದಿದ್ದು  ದಿನಾಂಕ 21/05/2023 ರಂದು ರಾತ್ರಿ 9:00 ಗಂಟೆಗೆ ಊಟ ಮಾಡಿ  ಕೋಣೆಯಲ್ಲಿ ಮಲಗಿದ್ದವರು  ದಿನಾಂಕ 22/05/2023 ರಂದು ಬೆಳಿಗ್ಗೆ 6:30 ಗಂಟೆಯ ಮಧ್ಯಾವದಿಯಲ್ಲಿ  ಯಾವುದೋ ಕಾರಣದಿಂದ ಮನಸ್ಸಿನಲ್ಲಿ ನೊಂದುಕೊಂಡು  ಜೀವನದಲ್ಲಿ ಜಿಗುಪ್ಸೆಗೊಂಡು ಮಲಗಿದ ಕೋಣೆಯ ಸೀಲಿಂಗ್ ಫ್ಯಾನ್ ನ ಹುಕ್ಕಿಗೆ  ಕೇಬಲ್ ವಯರ್ ನಿಂದ ಕಟ್ಟಿ ಕುತ್ತಿಗೆಗೆ  ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ . ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 31/2023 ಕಲಂ: 174  CrPC‌ ಯಂತೆ ಪ್ರಕರಣ ದಾಖಲಾಗಿರುತ್ತದೆ.

 ಇತರ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ಸುಬ್ರಹ್ಮಣ್ಯ (54), ತಂದೆ: ದಿ.ಮೋನಪ್ಪ ಶೆಟ್ಟಿ,  ವಿಳಾಸ: ಶುಚಿಸೌಧ, ಬಜೆ ರಸ್ತೆ, ಬೊಮ್ಮರಬೆಟ್ಟುಗ್ರಾಮ,ಉಡುಪಿ ಇವರು ದಿನಾಂಕ 21/05/2023 ರಂದು ರಾತ್ರಿ ಬೊಮ್ಮರಬೆಟ್ಟು ಪಾಪುಜೆಯಲ್ಲಿನ  ಮಾವ ರಾಮಣ್ಣ ಶೆಟ್ಟಿ ಯವರ ಮನೆಗೆ ತಂಬಿಲದ ನಿಮಿತ್ತ ಹೋಗಿದ್ದು ಅಲ್ಲಿ ರಾತ್ರಿ  9:30 ಗಂಟೆಗೆ ಪಿರ್ಯಾದಿದಾರರ ಬಾವ ಶಿವಣ್ಣ ಶೆಟ್ಟಿ ಮತ್ತು ಮಾವ ರಾಮಣ್ಣ ಶೆಟ್ಟಿಯವರ ನಡುವೆ ಗಲಾಟೆ ನಡೆಯುತ್ತಿದ್ದಾಗ  ಪಿರ್ಯಾದಿದಾರರು  ಜಗಳ ಬಿಡಿಸಲು ಹೋದಾಗ  ರಾಮಣ್ಣ ಶೆಟ್ಟಿಯವರು  ಪಿರ್ಯಾದಿದಾರರನ್ನು ಉದ್ದೇಶಿಸಿ ಅವ್ಯಾಚ್ಯ ಶಬ್ದದಿಂದ ಬೈದಿರುತ್ತಾರೆ. ಹಾಗೂ  ಬಂದೂಕಿನಿಂದ  ನಿನ್ನನ್ನು ಶೂಟ್ ಮಾಡುತ್ತೇನೆ ಎಂದು  ಮರದ ದೊಣ್ಣೆಯಲ್ಲಿ ಪಿರ್ಯಾದಿದಾರರಿಗೆ ಹೊಡೆದ ಪರಿಣಾಮ ಪಿರ್ಯಾದಿದಾರರ  ಕುತ್ತಿಗೆಗೆ ಪೆಟ್ಟು ಬಿದ್ದಿರುವುದಾಗಿ ನೀಡಿದ ದೂರಿನಂತೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 37/2023 ಕಲಂ: 504, 506, 324  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: : ದಿನಾಂಕ 22/05/2023 ರಂದು ಬ್ರಹ್ಮಾವರ ತಾಲೂಕು ಹಲುವಳ್ಳಿ ಗ್ರಾಮದ ಮೂಡೂರು ಎಂಬಲ್ಲಿರುವ ಪಿರ್ಯಾದಿದಾರರಾದ ಜ್ಯೋತಿ ಶೆಡ್ತಿ (59) , ಗಂಡ:ದಿ.ಸುರೇಂದ್ರ ಶೆಟ್ಟಿ, ವಾಸ: 2-121 (4) ಅನುಗ್ರಹ ಚಾರಾ ಅಂಚೆ ಹೆಬ್ರಿ ತಾಲೂಕು ತಾಲೂಕು  ಇವರ ಸ.ನಂ: 90/45 ರಲ್ಲಿ  ಜಾಗದ ಅಳತೆ ಬಗ್ಗೆ  ಭೂಮಾಪನ ಅಧಿಕಾರಿಯವರಿಂದ ರತಿ ಶೆಡ್ತಿಯವರ ಜಾಗದ ಬಳಿ ಇರುವ ಗಡಿ ಕಲ್ಲಿನಿಂದ ಪಿರ್ಯಾದಿದಾರರ ಸರ್ವೆ ಚೈನ್ ನ್ನು ಪಿರ್ಯಾದಿದಾರರ ಮಗ ಪ್ರವೀಣ ಹಾಗೂ ಭೂಮಾಪನಾಧಿಕಾರಿಯವರು ಹಿಡಿದು ಅಳತೆ ಮಾಡುವಾಗ ಮಧ್ಯಾಹ್ನ 12:00 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಅಕ್ಕನ ಮಗ  ಆರೋಪಿ ನಾಗರಾಜ ಶೆಟ್ಟಿ ಸ್ಥಳಕ್ಕೆ ಬಂದು, ಇದು ನನ್ನ ಜಾಗದಲ್ಲಿರುವ ಗಡಿ ಕಲ್ಲು ನೀವು ಅಳತೆ ಮಾಡಬಾರದು ಅಳತೆ ಮಾಡಿದರೆ ಸರಿಯಾಗುವುದಿಲ್ಲ ಎಂದು ಬೈದು ಸರ್ವೇಯವರಿಗೂ ಅವಾಚ್ಯ ಶಬ್ದಗಳಿಂದ ಬೈದು ಚೈನ್ ಹಿಡಿದಿದ್ದ ಪ್ರವೀಣನಿಗೆ ಹೊಡೆಯಲು ಹೋಗಿ  ದೂಡಿ ಹಾಕಿದ್ದು, ಆಗ ಪಿರ್ಯಾದಿದಾರರು ಇನ್ನಿತರರು ಆರೋಪಿಯಿಂದ ಪ್ರವೀಣನನ್ನು ತಪ್ಪಿಸಲು ಎಳೆದಾಡುತ್ತಿರುವಾಗ ಆರೋಪಿ ಮತ್ತು ಆರೋಪಿ ಹೆಂಡತಿ ಮಲ್ಲಿಕಾ ಪಿರ್ಯಾದಿದಾರರನ್ನು ಸಾರ್ವಜನಿಕ ಸ್ಥಳದಲ್ಲಿ ದೂಡಿ, ಬಲಕಣ್ಣಿನ ಬಳಿ ಹೊಡೆದು ಅಲ್ಲದೇ ಆರೋಪಿಯು  ಪಿರ್ಯಾದಿದಾರರ ಎಡಕೈಯನ್ನು ಕಚ್ಚಿ ಗಾಯ ಮಾಡಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 105/2023 : ಕಲಂ 504, 506, 354, 323, 325 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಅಣ್ಣಪ್ಪ  (23),  ತಂದೆ: ಮಂಜುನಾಥ ಪೂಜಾರಿ, ವಾಸ: ನಾಗಶ್ರೀ ನಿಲಯ , ನಾಕ್ಕಟ್ಟೆಹಕ್ಲು , ವಿಟಿ ರೋಡ್ ಶಿರೂರು ಗ್ರಾಮ ಬೈಂದೂರು ತಾಲೂಕು ಇವರು ದಿನಾಂಕ 22/05/2023 ರಂದು ಬೆಳಿಗ್ಗೆ 09:30 ಗಂಟೆಗೆ ಮನೆಯ ಹೊರಗಿನ ಜಗಲಿಯಲ್ಲಿ  ಕುಳಿತುಕೊಂಡಿರುವಾಗ ಪಿರ್ಯಾದಿದಾರರ ಚಿಕ್ಕಪ್ಪ ಆರೋಪಿ  ಮಹೇಶ್ ಮನೆಗೆ ಅಕ್ರಮ ಪ್ರವೇಶ ಮಾಡಿ  ಮನೆಯ ಜಗಲಿಯಲ್ಲಿ ಪಿರ್ಯಾದಿದಾರರ ಪಕ್ಕದಲ್ಲಿ ಕುಳಿತುಕೊಂಡಿದ್ದು  ಮನೆಯಲ್ಲಿ ಪಿರ್ಯಾದಿದಾರರ ತಾಯಿ ಕೆಲಸಕ್ಕೆ ಉಪಯೋಗಿಸಿದ ಕತ್ತಿ ಹಾಗೂ ಕಂಬಳಿಯನ್ನು ಜಗಲಿಯಲ್ಲಿ  ಇಟ್ಟಿದ್ದು  ಆರೋಪಿ ಮಹೇಶನು  ಜಗಲಿಯಲ್ಲಿ ಇಟ್ಟಿದ್ದ  ಕತ್ತಿಯನ್ನು  ತೆಗೆದುಕೊಂಡು ಏಕಾಏಕಿ  ಪಿರ್ಯಾದಿದಾರರನ್ನುಕಡಿಯಲು ಕತ್ತಿ ಬೀಸಿದಾಗ ಪಿರ್ಯಾದಿದಾರರು ತಪ್ಪಿಸಿಕೊಂಡು ಆರೋಪಿತನ ಕೈಯಲ್ಲಿದ್ದ  ಕತ್ತಿಯನ್ನು ಕಸಿದುಕೊಂಡಾಗ ಆರೋಪಿಯು  ಆತನ ಕಿಸೆಯಲ್ಲಿದ್ದ  ಸೋಡಾ ಬಾಟಲಿಯನ್ನು ತೆಗೆದು ಪಿರ್ಯಾದಿದಾರರ ತಲೆಗೆ ಹೊಡೆದು ಗಾಯಗೊಳಿಸಿ ಇನ್ನುಮುಂದೆ ನನ್ನ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿರುತ್ತಾನೆ. ಗಾಯಗೊಂಡ ಪಿರ್ಯಾದಿದಾರರು ಬೈಂದೂರು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 83/2023 ಕಲಂ: 448, 324, 504, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 22/05/2023 ರಂದು  ಪಿರ್ಯಾದಿದಾರರಾದ ನಾಗರಾಜ, (48), ತಂದೆ: ದಿ. ನರಸಿಂಹ ಶೆಟ್ಟಿ, ವಾಸ: ಮುಡೂರು, ಕರ್ಜೆ ಅಂಚೆ , ಹಲುವಳ್ಳಿ ಗ್ರಾ, ಬ್ರಹ್ಮಾವರ ತಾಲೂಕು ಇವರ ಜಾಗಕ್ಕೆ ಹೊಂದಿಕೊಂಡಿರುವ ರತಿ ಶೆಡ್ತಿಯವರ ಜಾಗದ ಸರ್ವೆ ಮಾಡುವ ಸಮಯ ಸರ್ವೇ ಅಧಿಕಾರಿಯವರು ಪಿರ್ಯಾದಿದಾರರ ಜಾಗದಲ್ಲಿರುವ ಗಡಿ ಕಲ್ಲಿನ ಗುರುತನ್ನು ಹಿಡಿದು ಅಳತೆ ಮಾಡುವಾಗ ಸಮಯ ಮಧ್ಯಾಹ್ನ 11:30 ಗಂಟೆಗೆ ಪಿರ್ಯಾದಿದಾರರು ಸರ್ವೆ ಅಧಿಕಾರಿಯವರಲ್ಲಿ ಸರಿಯಾದ ಜಾಗದ ಅಳತೆ ಮಾಡಿ, ವ್ಯತ್ಯಾಸ ಮಾಡಬೇಡಿ, ನನಗೆ ಸರ್ವೆಯಲ್ಲಿ ವ್ಯತ್ಯಾಸವಾದ ಬಗ್ಗೆ ಅನುಮಾನವಿದೆ, ಸರ್ವೆಯಲ್ಲಿ ಯಾರಿಗೂ ಅನ್ಯಾಯ ಆಗಬಾರದು, ಸರಿಯಾಗಿ ಸರ್ವೆ ಮಾಡಿ ಎಂದು ಹೇಳಿದಕ್ಕೆ, ಸರ್ವೆ ಅಳತೆ ಟೇಪ್‌  ಹಿಡಿದಿದ್ದ ಪಿರ್ಯಾದಿದಾರರ ಚಿಕ್ಕಮ್ಮನ ಮಗ ಆರೋಪಿ ಪ್ರವೀಣನು  ಏಕಾ ಏಕಿ ಅಲ್ಲಿಯೇ ಇದ್ದ ಕತ್ತಿಯಿಂದ ಪಿರ್ಯಾದಿದಾರರನ್ನು ಹೊಡೆಯಲು ಬಂದಿದ್ದು, ಆಗ ಪಿರ್ಯಾದಿದಾರರು ತಪ್ಪಿಸಲು ಪ್ರಯತ್ನಿಸುವಾಗ ಆರೋಪಿಯು ಬೀಸಿದ ಕತ್ತಿಯು ಪಿರ್ಯಾದಿದಾರರ ತಲೆಗೆ ತಾಗಿ ರಕ್ತ ಗಾಯವಾಗಿರುತ್ತದೆ. ಆಗ ಪಿರ್ಯಾದಿದಾರರು ಆರೋಪಿಯು ಮತ್ತೆ ಕತ್ತಿಯಿಂದ ಕಡಿಯುತ್ತಾನೆ ಎಂದು ಹೆದರಿ ಆರೋಪಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುವಾಗ ಇಬ್ಬರೂ ಆಯ ತಪ್ಪಿ ನೆಲಕ್ಕೆ ಬಿದ್ದಿರುತ್ತಾರೆ. ಆ ಸಮಯ ಪಿರ್ಯಾದಿದಾರರ ಚಿಕ್ಕಮ್ಮ ಆರೋಪಿತೆ ಜ್ಯೋತಿ ಶೆಡ್ತಿಯವರು ಪಿರ್ಯಾದಿದಾರರ ಹಿಂಬದಿ ತಲೆಯನ್ನು ಹಿಡಿದು, ಕೂದಲನ್ನು ಎಳೆದು ಅಲುಗಾಡಿಸಿರುತ್ತಾರೆ. ಈ ಹಲ್ಲೆಯಿಂದ ಪಿರ್ಯಾದಿದಾರರ ತಲೆಗೆ ರಕ್ತಗಾಯ, ಎಡಕೈ ಮತ್ತು ಎಡಕೆನ್ನೆಯ ಕಣ್ಣಿನ ಕೆಳಭಾಗದಲ್ಲಿ ತರಚಿದ ಗಾಯವಾಗಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 105/2023 : ಕಲಂ 324, 504, 506, ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-05-2023 09:38 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080