ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

 • ಕುಂದಾಪುರ: ದಿನಾಂಕ 22/05/2022 ರಂದು  ಬೆಳಿಗ್ಗೆ ಜಾವ ಸುಮಾರು 2:45  ಗಂಟೆಗೆ  ಕುಂದಾಪುರ  ತಾಲೂಕಿನ, ತಲ್ಲೂರು ಗ್ರಾಮದ ಮಾತಾ ಹಾರ್ಡವೇರ್ ಕಟ್ಟಡದ ಹತ್ತೀರ ಎನ್ ಹೆಚ್ 66 ರಸ್ತೆಯಲ್ಲಿ.  ಆಪಾದಿತ  ಶಶಿಕಾಂತ ಎಂಬವರು KA20-EQ-8955 ನೇ ಸ್ಕೂಟರನಲ್ಲಿ  ಪಿರ್ಯಾದಿ ಲೋಕೇಶ ಪ್ರಾಯ 28 ವರ್ಷ  ತಂದೆ: ಅಣ್ಣಪ್ಪ ಪೂಜಾರಿ ವಾಸ: ಚಂದು ಶ್ರಿನಿಲಯ ಕರ್ಕಿಗುಡ್ಡಿ ಗುಲ್ವಾಡಿ ಗ್ರಾಮ ಇವರನ್ನು ಹಿಂಬದಿಯಲ್ಲಿ ಸಹ ಸವಾರನಾಗಿ ಕುಳ್ಳಿರಿಸಿಕೊಂಡು ಹೆಮ್ಮಾಡಿಯ ಕಡೆಯಿಂದ ಕುಂದಾಪುರ ಕಡೆಗೆ ರಾ.ಹೆ 66 ರಸ್ತೆಯಲ್ಲಿ ಬರುತ್ತಿರುವಾಗ ಶಶಿಕಾಂತರವರು ಸ್ಕೂಟರನ್ನು  ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ ಸವಾರಿ  ಮಾಡಿಕೊಂಡು ಬಂದು , ರಸ್ತೆಗೆ ಅಡ್ಡ ಬಂದ ನಾಯಿಯನ್ನು ನೋಡಿ ಆಪಾದಿತನು ಒಮ್ಮೇಲೆ  ಬ್ರೇಕ್‌ಹಾಕಿದ ಪರಿಣಾಮ ಸ್ಕೂಟರ್‌ಸ್ಕೀಡ ಆಗಿ ಬಿದ್ದು  ಪಿರ್ಯಾದಿದಾರರಿಗೆ  ಬಲ ಕಾಲಿಗೆ ಮೂಳೆ ಮುರಿತದ  ಒಳನೋವು ಆಗಿದ್ದು ಕುಂದಾಪುರ ಚಿನ್ಮಯ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ ಹಾಗೂ ಆಪಾದಿತರಿಗೆ  ಬೆನ್ನಿಗೆ ಒಳನೋವಾಗಿ  ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 66/2022  ಕಲಂ: 279, 338  IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ ಗ್ರಾಮಾಂತರ: ದಿನಾಂಕ: 22/05/2022 ರಂದು 16:10 ಗಂಟೆ ಸಮಯಕ್ಕೆ ಕಾರ್ಕಳ ತಾಲೂಕು ಮುಡಾರು ಗ್ರಾಮದ ಬಜಗೊಳಿ ಕೂಷ್ಮಾಂಡಿನಿ ಪೆಟ್ರೋಲ್ ಬಂಕ್ ಬಳಿ ಹಾದು ಹೋಗಿರುವ ಕಾರ್ಕಳ-ಧರ್ಮಸ್ಥಳ ರಾಜ್ಯ ಹೆದ್ದಾರಿ ರಸ್ತೆಯಲ್ಲಿ ಬಜಗೊಳಿ ಕಡೆಯಿಂದ ಕಾರ್ಕಳ ಕಡೆಗೆ ಕೆ,ಎ21-ಬಿ-8420 ನೇ ನಂಬ್ರದ ಕಾರು ಚಾಲಕ ಥೊಮಸ್ ರವರು ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿಕೊಂಡು ಬಂದು ಕಾರ್ಕಳ ಕಡೆಯಿಂದ ಬಜಗೊಳಿ ಕಡೆಗೆ ಪಿರ್ಯಾದಿ ಶ್ರೀ ಜಯ ಪ್ರಾಯ: 26 ವರ್ಷ ತಂದೆ: ಸಾಧು ನಲ್ಕೆ ವಾಸ: ಬೀರಾಲ್ ಪೇಟೆ, ದರ್ಖಾಸು ಹೌಸ್, ನಲ್ಲೂರು ಅಂಚೆ ಮತ್ತು ಗ್ರಾಮ ಕಾರ್ಕಳ ಇವರು ಸಹಸವಾರನಾಗಿ ಪ್ರಯಾಣಿಸುತ್ತಿದ್ದ ಕೆ,ಎ20-ಇ,ಸಿ-0404 ನೇ ನಂಬ್ರದ ಬೈಕಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದುದಾರರಿಗೆ ಸಣ್ಣಪುಟ್ಟ ಗಾಯವಾಗಿದ್ದು ಬೈಕ್ ಸವಾರ ಜಗದೀಶ್ ಪೂಜಾರಿ ಇವರ ಬಲಕಾಲಿನ ಮೊಣಗಂಟಿನಿಂದ ಮಣಿಗಂಟಿನ ತನಕ ತೀವ್ರ ಸ್ವರೂಪದ ಮೂಳೆ ಮುರಿತದ ರಕ್ತಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿರುವುದಾಗಿದೆ,ಈ ಬಗ್ಗೆ  ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 63/2022 ಕಲಂ: 279,337,338 ಭಾದಸಂ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ಪಿರ್ಯಾದಿ ಮಂಗುಲು ನಾಯ್ಕ್, ಪ್ರಾಯ: 25 ವರ್ಷ, ತಂದೆ: ದಾನೇಶ್ವರ ನಾಯ್ಕ್ , ವಾಸ: ಗುಡ್‌‌ಗುಡಿಯಾ, ಸಂಕಸಿರಾ ಗ್ರಾಮ, ಜೇನಿಪುರ ತಾಲೂಕು, ಮಯೂರ್‌‌ಬಂಜ್ ಜಿಲ್ಲೆ.  ಒಡಿಶಾ ರಾಜ್ಯ ಇವರು  ಹಾಗೂ ಅವರ ಪರಿಚಯದ ಕ್ಷಿತೀಶ್ ನಾಯ್ಕ್ (36), ರಮಾಕಾಂತ್, ಸಿದ್ದೇಶ್ ನಾಯ್ಕ, ಪಂಚೂ ಎಂಬುವರು ಒಡಿಶಾ ರಾಜ್ಯ ಮೂಲದವರಾಗಿದ್ದು, ಪ್ರಸ್ತುತ ತೆಂಕ ಎರ್ಮಾಳು ಲಕ್ಷ್ಮೀ ಜನಾರ್ಧನ ದೇವಸ್ಥಾನದ ಎದುರು ಪ್ರೀಮಿಯರ್ ಅಪಾರ್ಟ್‌ಮೆಂಟ್‌ನಲ್ಲಿ ಕಟ್ಟಡ ಕಾಮಗಾರಿ ಕೆಲಸಮಾಡಿದ್ದು, ಅಲ್ಲಿಯೇ ಪಕ್ಕದಲ್ಲಿರುವ ಶೆಡ್‌‌‌ಗಳಲ್ಲಿ ವಾಸವಾಗಿರುತ್ತಾರೆ. ಅವರುಗಳಲ್ಲಿ ಕ್ಷಿತೀಶ್ ನಾಯ್ಕ್  ಎಂಬಾತನು ನಿನ್ನೆ ದಿನ ದಿನಾಂಕ: 22.05.2022 ರಂದು ರಾತ್ರಿ ಹೋಟೆಲ್‌‌ಗೆ ಹೋಗಿ ಊಟ ಮಾಡಿ ಬರುವುದಾಗಿ ಹೇಳಿ ಕಾಪು ತಾಲೂಕು ಬಡಾ ಎರ್ಮಾಳು ಗ್ರಾಮದ ಅಪೂರ್ವ ಹೋಟೆಲ್‌‌ಬಳಿ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಉಡುಪಿ -ಮಂಗಳೂರು ಏಕಮುಖ ಸಂಚಾರ ರಸ್ತೆಯ ಪೂರ್ವ ಅಂಚಿನಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಸಮಯ ಸುಮಾರು 21:45 ಗಂಟೆಯ ವೇಳೆಗೆ KA-19-MA-5238 ನೇ ನಂಬ್ರದ ಕಾರು ಚಾಲಕ ರಘು ಎಂಬಾತನು ತನ್ನ ಕಾರನ್ನು ಉಡುಪಿ ಕಡೆಯಿಂದ ಮಂಗಳೂರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಕ್ಷಿತೀಶ್ ನಾಯ್ಕ್  ರವರಿಗೆ ಡಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದು ತೀವ್ರ ರಕ್ತಗಾಯ ಗೊಂಡವರನ್ನು ಚಿಕಿತ್ಸೆಯ ಬಗ್ಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ  ಕರೆದುಕೊಂಡು ಹೋದಲ್ಲಿ ಅಲ್ಲಿನ ವೈದ್ಯಾಧಿಕಾರಿಯವರು ಪರೀಕ್ಷಿಸಿ  ಸದ್ರಿ ಗಾಯಾಳು ಕ್ಷಿತೀಶ್ ನಾಯ್ಕ್  ರವರು ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ  60/2022 ಕಲಂ: 279, 304(A) ಐಪಿಸಿ ಯಂತೆ ಪ್ರಕರನ ದಾಖಲಿಸಲಾಗಿದೆ.

ಇತರ ಪ್ರಕರಣಗಳು

 • ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಹೇರೂರು ಗ್ರಾಮದ ಹೇರಂಜೆ ಎಂಬಲ್ಲಿ ಸರ್ವೆ ನಂ 12/44 ರಲ್ಲಿನ ಪಿರ್ಯಾದಿ ಶ್ರೀಮತಿ ಸುಲೋಚನಾ ಎನ್‌ ಶೆಟ್ಟಿ (59), ಗಂಡ: ನಾರಾಯಣ ಶೆಟ್ಟಿ, ವಾಸ: ಚೆನ್ನ ಕೇಶವ ನಿಲಯ, ಹೇರಂಜೆ, ಹೊಸಮನೆ, ಹೇರೂರು ಗ್ರಾಮ ಇವರ ಬಾಬ್ತು ಸ್ಥಿರಾಸ್ತಿಯ ಸುತ್ತ ಶಿಲೆ ಕಲ್ಲಿನ ಕಂಬ ಹಾಗೂ ತಂತಿಯ ಬೇಲಿ ಹಾಕಿದ್ದು, ಅದನ್ನು ಈ ಹಿಂದೆ ಆರೋಪಿಗಳು ಬಲತ್ಕಾರವಾಗಿ ರಸ್ತೆ ಮಾಡಲು ಹವಣಿಸಿದ್ದು ಸದ್ರಿ ಜಾಗದ ವಿಚಾರದಲ್ಲಿ ಈಗಾಗಲೇ ಮಾನ್ಯ ಉಡುಪಿ ನ್ಯಾಯಲಯದಲ್ಲಿ ಅಸಲು ದಾವೆ 83/2022 ರಂತೆ ದೂರು ದಾಖಲಾಗಿ ವಿಚಾರಣೆಯಲ್ಲಿರುತ್ತದೆ. ದಿನಾಂಕ 21.05.2022 ರಂದು ಮಧ್ಯಾಹ್ನ 4:00 ಗಂಟೆಗೆ ಆರೋಪಿಗಳಾದ ದಿನಕರ ಶೆಟ್ಟಿ. ಸುಧಾಕರ  ಶೆಟ್ಟಿ, ಸುಧಾಕರ ಹೆಗ್ಡೆ, ಮಂಜುನಾಥ ಹೆಗ್ಡೆ, ಪ್ರೇಮಾ ಶೆಟ್ಟಿ, ಚಂದ್ರ ಶೇಖರ ಶೆಟ್ಟಿ, ಯುವರಾಜ, ಸುಭಾಷ್‌ ಹೆಗ್ಡೆ ಹಾಗೂ ಸುಮಾರು 15 ಜನ ಗಂಡಸರು ಸಮಾನ ಉದ್ದೇಶದಿಂದ ಒಂದು ಗೂಡಿ ಹಿಟಾಚೆಯನ್ನು ತಂದು ಪಿರ್ಯಾದಿದಾರರು ಹಾಕಿರುವ ಬೇಲಿ ತೆಗೆದು ಹಾಕುವ ಪ್ರಯತ್ನ ಮಾಡಿದ್ದು. ಆಗ ಪಿರ್ಯಾದಿದಾರರು ಅವರ ಮೊಬೈಲ್‌ನಲ್ಲಿ ಫೋಟೋ ಹಾಗೂ ವಿಡಿಯೋ ಮಾಡಲು ಹೋದಾಗ ಎಲ್ಲಾ ಆರೋಪಿಗಳು  ಒಟ್ಟು ಸೇರಿ ಪಿರ್ಯಾದಿದಾರರನ್ನು ಒತ್ತಿ ಹಿಡಿದು , ಕೈಯಿಂದ ಹೊಡೆದು ಪಿರ್ಯಾದಿದಾರರ ಮಾನ ಕಳೆಯುವ ಪ್ರಯತ್ನ ಮಾಡಿರುತ್ತಾರೆ. ಆರೋಪಿಗಳಾದ ದಿನಕರ ಶೆಟ್ಟಿ. ಸುಧಾಕರ  ಶೆಟ್ಟಿ, ಸುಧಾಕರ ಹೆಗ್ಡೆ ರವರು ಪಿರ್ಯಾದಿದಾರರ ಮೇಲೆ ಕೈಯನ್ನು ಹಾಕಿ ಹಾನಿ ಮಾಡಿ, ಕೊಲ್ಲದೇ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುತ್ತಾರೆ. ಅಲ್ಲದೇ ಅವರ  ಬೇಲಿ ತಂತಿ, ಕಲ್ಲುಕಂಬ ಹಾನಿ ಮಾಡಿರುತ್ತಾರೆ. ಈ ಹಲ್ಲೆಯಿಂದ ಪಿರ್ಯಾದಿದಾರರು ಗಾಯಗೊಂಡು ಬ್ರಹ್ಮಾವರ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  88/2022 ಕಲಂ : 143, 147, 323, 354, 504, 506, 149 IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಮಾನ್ಯ ಉಡುಪಿ 2 ನೇ ಹೆಚ್ಚುವರಿ ಸಿವಿಲ್ ಜಡ್ಜ್  ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯ ದಿಂದ ಸ್ವೀಕರಿಸಿದ ಖಾಸಗಿ ದೂರು ನಂಬ್ರ 323/2022 ರಂತೆ ಫಿರ್ಯಾದಿ ಮುರಳಿಕೃಷ್ಣ, ( ಮ್ಯಾನೇಜರ್ ಶ್ರೀ  ಸೋದೆ ವಾದಿರಾಜ ಮಠ), ಪ್ರಾಯ: 46 ವರ್ಷ, ತಂದೆ: ಕೆ ವೇದವ್ಯಾಸ ಭಟ್, ವಾಸ: ಉಡುಪಿ ನಗರ, ಉಡುಪಿ ಇವರು ಸೋದೆ ವಾದಿರಾಜ ಮಠದ ಪ್ರತಿನಿದಿಯಾಗಿದ್ದು,ಕಾಪು ತಾಲೂಕು ಬಡಾ ಗ್ರಾಮದಲ್ಲಿರುವ ಸ್ಥಿರಾಸ್ತಿ ಸರ್ವೆ ನಂಬ್ರ 104/3ಬಿ ರಲ್ಲಿ 70 ಸೆಂಟ್ಸ, 104/4ಬಿ ರಲ್ಲಿ 55 ಸೆಂಟ್ಸ, 104/7ಎ ರಲ್ಲಿ 89 ಸೆಂಟ್ಸ, 104/8ಎ ರಲ್ಲಿ 03, 104/10 ರಲ್ಲಿ 09 ಸೆಂಟ್ಸ 104/19 ರಲ್ಲಿ 1 ಎಕರೆ 11 ಸೆಂಟ್ಸ, 114/4ಬಿ ರಲ್ಲಿ 09.27 ಸೆಂಟ್ಸ ಜಾಗವು  ಸೋದೆ ವಾದಿರಾಜ ಮಠಕ್ಕೆ  ಸಂಬಂದಿಸಿದ ಜಾಗವಾಗಿರುತ್ತದೆ. ಆರೊಪಿಗಳು ಪ್ರ ಪತ್ರ 7ಎ ಪ್ರಕಾರ ಈ ಮೇಲಿನ ಸ್ಥಿರಾಸ್ತಿಗಳಿಗೆ ವಾರಿಸುದಾರರಾಗಿರುವುದಾಗಿ ಉಡುಪಿ ಜಿಲ್ಲಾ ಎಡಿಷನಲ್ ಡೆಪ್ಯುಟಿ ಕಮಿಷನರ್ ರವರಿಗೆ ಅರ್ಜಿಯನ್ನು ಸಲ್ಲಿಸಿದ್ದು, ಉಡುಪಿ ಜಿಲ್ಲಾ ಎಡಿಷನಲ್ ಡೆಪ್ಯುಟಿ ಕಮಿಷನರ್ ರವರು ಅರ್ಜಿ ಸಂಖ್ಯೆ 7A-107-70-73TRI-1073-199-2000 ರಂತೆ ವಿಚಾರಣೆ ನಡೆದು ದಿನಾಂಕ: 12/02/2014 ರಂದು ವಜಾಗೊಂಡಿರುತ್ತದೆ. ವಜಾಗೊಂಡ ಆದೇಶವನ್ನು ಪ್ರಶ್ನಿಸಿ ಆರೋಪಿಗಳು ಬೆಂಗಳೂರು ಕರ್ನಾಟಕ್ ಅಪಲೇಟ್  ಟ್ರಿಬ್ಯನಲ್(ಕೆ ಎ.ಟಿ) ಗೆ ಅಪಿಲ್ ನಂಬ್ರ 454/2021 ರಂತೆ ಮೇಲ್ಮನವಿ ಸಲ್ಲಿಸಿರುತ್ತಾರೆ. ಉಡುಪಿ ಜಿಲ್ಲಾ ಎಡಿಷನಲ್ ಡೆಪ್ಯುಟಿ ಕಮಿಷನರ್ ರವರು ಮಾಡಿದ ಆದೇಶಕ್ಕೆ ಈವರೆಗೂ  ತಡೆಯಾಜ್ಜೆ ಬಂದಿರುವುದಿಲ್ಲ. ಸದರಿ ಈ ಮೇಲಿನ ಸ್ಥಿರಾಸ್ಥಿಯು ಸೋದೆವಾದಿರಾಜ ಮಠಕ್ಕೆ ಸಂಬಂದಿಸಿರುವುದಾಗಿ, ಈ ಸ್ಥಿರಾಸ್ಥಿಗೆ ಯಾರೂ ಅಕ್ರಮ ಪ್ರವೇಶ ಮಾಡದಂತೆ 12/2021 ರಲ್ಲಿ ಫಲಕವನ್ನು ಸದರಿ ಸ್ಥಿರಾಸ್ಥಿಯಲ್ಲಿ ಫಿರ್ಯಾದುದಾರರು ಅಳವಡಿಸಿದ್ದರೂ ಆರೋಪಿಗಳು ಫಿರ್ಯಾದುದಾರರ ಜಾಗಕ್ಕೆ ಸಮಾನ ಉದ್ದೇಶದಿಂದ ಅಕ್ರಮ ಪ್ರವೇಶ ಮಾಡಿ, ಜಾಗದಲ್ಲಿದ್ದ ಫಲಕವನ್ನು ತೆರವುಗೊಳಿಸಿರುತ್ತಾರೆ. ಈ ಬಗ್ಗೆ ಫಿರ್ಯಾದುದಾರರು ದಿನಾಂಕ: 14/12/2021 ರಂದು ಪಡುಬಿದ್ರಿ ಠಾಣೆಗೆ ನೀಡಿದ ದೂರಿಗೆ ಸಂಬಂದಿಸಿದಂತೆ ವಿಚಾರಣೆ ನಡೆಸಿ ಸದರಿ ವ್ಯಾಜ್ಯ ಸಿವಿಲ್ ವ್ಯಾಜ್ಯಕ್ಕೆ ಸಂಬಂದಿಸಿರುವುದಾಗಿ ಎರಡೂ ಕಡೆಯವರಿಗೆ ಸೂಚಿಸಿ ಹಿಂಬರಹ ನೀಡಿರುತ್ತಾರೆ. ಫಿರ್ಯಾದುದಾರರ ವಶ ಕಾನೂನು ಬದ್ದವಾಗಿದ್ದ ಈ ಮೇಲಿನ ಜಾಗಕ್ಕೆ ಆರೋಪಿಗಳು ಅಕ್ರಮ ಪ್ರವೇಶ ಮಾಡಿ ತೊಂದರೆ ನೀಡಿರುವುದಾಗಿದೆ ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ: 59/2022, ಕಲಂ: 441 ಜೊತೆಗೆ 34 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ. 
 • ಬ್ರಹ್ಮಾವರ: ಬ್ರಹ್ಮಾವರ ತಾಲೂಕು ಹೇರೂರು ಗ್ರಾಮದ ಹೇರಂಜೆ ಎಂಬಲ್ಲಿ ಪಿರ್ಯಾದಿ ಶ್ರೀಮತಿ ಪ್ರೇಮ ಆರ್‌ ಶೆಟ್ಟಿ (59), ಗಂಡ: ರಾಜೀವ ಶೆಟ್ಟಿ, ವಾಸ: ಹೇರಂಜೆ, ದೊಡ್ಡಮನೆ,ಇವರ ಮನೆಗೆ ಹೇರಂಜೆ ರೈಲ್ವೇ ಗೇಟಿನಿಂದ ಅನಾದಿಕಾಲದಿಂದಲೂ ಮಣ್ಣು ರಸ್ತೆ ಇದ್ದು, ಆ ರಸ್ತೆಯನ್ನು ಮೂರು ತಿಂಗಳ ಹಿಂದೆ ಆರೋಪಿ ಸುಲೋಚನಾ ಶೆಟ್ಟಿ ಯವರು ಅವರ ಸ್ವಂತ ಜಾಗ ಎಂದು ಅನಧೀಕೃತವಾಗಿ ತಂತಿ ಬೇಲಿ ನಿರ್ಮಿಸಿ ಸಂಚಾರಕ್ಕೆ ಅಡ್ಡಿ ಪಡಿಸಿ ಸಾರ್ವಜನಿಕರಿಗೆ ತೊಂದರೆ ನೀಡಿರುತ್ತಾರೆ. ದಿನಾಂಕ 21.05.2022 ರಂದು ಸಂಜೆ 4:00 ಗಂಟೆಗೆ ಪಿರ್ಯಾದಿದಾರರು ಹಾಗೂ 8-10 ಜನ ಮಹಿಳಾ ಗ್ರಾಮಸ್ಥರು ಸೇರಿ ರಸ್ತೆ ತೆರವುಗೊಳಿಸುತ್ತಿರುವಾಗ ಆರೋಪಿ ಸುಲೋಚನಾ ಶೆಟ್ಟಿ ಹಾಗೂ ಅವರ ಗಂಡ ನಾರಾಯಣ ಶೆಟ್ಟಿ ಅಲ್ಲಿಗೆ ಬಂದು ಆಕ್ಷೇಪಣೆ ಮಾಡಿ ಪಿರ್ಯಾದಿದಾರರ ಎದೆಗೆ ಹಾಗೂ ಇತರರಿಗೂ ಕೈಯಿಂದ ಹೊಡೆದು, ಕಾಲಿನಿಂದ ತುಳಿದು ದೂಡಿರುತ್ತಾರೆ. ಈ ಹಲ್ಲೆಯಿಂದ ಪಿರ್ಯಾದಿದಾರರ ಎದೆಗೆ ಹಾಗೂ ಇತರರಿಗೆ ದೈಹಿಕ ನೋವುಗಳಾಗಿದ್ದು. ಪಿರ್ಯಾದಿದಾರರು ಅವರಿಗಾದ ನೋವಿನ ಬಗ್ಗೆ ಬ್ರಹ್ಮಾವರ ಸರಕಾರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಆಗಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ  89/2022 ಕಲಂ : 323, 354, 34 IPCಯಂತೆ ಪ್ರಕರಣ ದಾಖಲಿಸಲಾಗಿದೆ.
 • ಮಣಿಪಾಲ: ಪಿರ್ಯಾದಿ ಚೇತನರಾಜ್ ಶೆಟ್ಟಿ ಪ್ರಾಯ: 38 ವರ್ಷ ತಂದೆ: ಸಂಜೀವ ಶೆಟ್ಟಿ ವಾಸ: ಕಟ್ಟಪಾಡಿ ಪೋಸ್ಟ್  ಉಡುಪಿ  ಇವರು ದಿನಾಂಕ: 22.05.2022 ರಂದು ಸುಮಾರು ಬೆಳಿಗ್ಗೆ 01:00 ಗಂಟೆಯ ಸಮಯಕ್ಕೆ  ತನ್ನ  KA 20 MB 9900 ನೇ ಕಾರಿನಲ್ಲಿ ಸರಳಬೆಟ್ಟು ಯಿಂದ ಮಣಿಪಾಲದ ಟೈಗರ್ ಸರ್ಕಲ್ ಮಾರ್ಗವಾಗಿ ಉಡುಪಿ ಕಡೆಗೆ ಹೋಗುತ್ತಿರುವಾಗ ಸಿಂಡಿಕೇಟ್ ಸರ್ಕಲ್ ಬಳಿ ಪಿರ್ಯಾದಿದಾರರು ಆರೋಪಿಗಳಾದ ಅಕ್ರಮ್ ಮತ್ತು ಸೈಫ್ ಚಲಾಯಿಸಿಕೊಂಡು ಹೋಗುತ್ತಿದ್ದ KA 20 6070 ನೇ ಫಾರ್ಚೂನ್ ಕಾರನ್ನು ಓವರ್ ಟೇಕ್ ಮಾಡಿದ ವಿಚಾರದಲ್ಲಿ ಆರೋಪಿಗಳು ಪಿರ್ಯಾದಿದಾರರ ಕಾರನ್ನು ಹಿಂಬಾಲಿಸಿ ಇಂದ್ರಾಳಿಯಲ್ಲಿ ತಡೆದು ನಿಲ್ಲಿಸಿ ಪಿರ್ಯಾದಿದಾರರ ಮೇಲೆ ಕೈಯಿಂದ ಹಲ್ಲೆ ಮಾಡಿ ಅವರನ್ನು ತಮ್ಮ ಕಾರಿನಲ್ಲಿ ಕುರಿಸಿಕೊಂಡು ಮಣಿಪಾಲದ ಪೆರಂಪಳ್ಳಿ ರಸ್ತೆಯಲ್ಲಿರುವ A.K.M.S ಆಫೀಸ್ ಗೆ ಕರೆದುಕೊಂಡು ಹೋಗಿ ಪಿರ್ಯಾದಿದಾರರು ಹಾಗೂ ಪಿರ್ಯಾದಿದಾರರ ಕಾರಿನ ಮೇಲೆ ತಲವಾರು, ಸ್ಟಂಪ್ ನಿಂದ ಆರೋಪಿಗಳಾದ ಸೈಫ್, ಅಕ್ರಮ್ ಹಾಗೂ ಶರೀಫ್ ರವರು ಸೇರಿ ಹಲ್ಲೆ ಮಾಡಿರುತ್ತಾರೆ ಪರಿಣಾಮ ಪಿರ್ಯಾದಿದಾರರ ಎಡಗೈ ಗೆ  ಮೂಳೆ ಮುರಿತದ ಗಾಯವಾಗಿರುತ್ತದೆ, ಅಲ್ಲದೇ ಸೈಫ್ ಪಿರ್ಯಾದಿದಾರರನ್ನು ಉದ್ದೇಶಿಸಿ ಕಂಪ್ಲೇಟ್ ಮಾಡಿದಲ್ಲಿ ಹಾಗೂ ಇದು ನಿನಗೆ ಕೊನೆಯ ಎಚ್ಚರಿಕೆ ಎಂದು ಜೀವ ಬೆದರಿಕೆ ಹಾಕಿರುತ್ತಾರೆ , ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣಾ  ಅಪರಾಧ ಕ್ರಮಾಂಕ 71/2022 ಕಲಂ 341,323,324, 506, 427 R/W 34 IPCಯಂತೆ ಪ್ರಕರಣ ದಾಖಲಿಸಲಾಗಿದೆ.
   
   

ಇತ್ತೀಚಿನ ನವೀಕರಣ​ : 23-05-2022 10:33 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080