ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿ ಸಂತೋಷ ಶೆಟ್ಟಿ ಪ್ರಾಯ  35 ವರ್ಷ ತಂದೆ: ಜಯರಾಮ ಶೆಟ್ಟಿ ವಾಸ: ಫಿಶ್ ಮಾರ್ಕೆಟ್ ರಸ್ತೆ  ತೆಕ್ಕಟ್ಟೆ  ಕುಂದಾಪುರ ಇವರು ನಿನ್ನೆ ದಿನಾಂಕ 22/05/2022 ರಂದು  ರಾತ್ರಿ ಊಟ ಮಾಡುವರೆ  ತೆಕ್ಕಟ್ಟೆಯ ರೈಸ್ ಮಿಲ್ ಬಳಿಯ ಮಹಾಲಕ್ಷ್ಮಿ ಮೀನು ಊಟದ ಹೋಟೆಲಿಗೆ  ಹೋಗಿದ್ದು ಆಗ ಅಲ್ಲಿಗೆ  ಪಿರ್ಯಾದಿದಾರರ ಪರಿಚಯದ  ಸಂತೋಷ ಶೆಟ್ಟಿ ಎಂಬವರು ಅಲ್ಲಿಗೆ ಬಂದಿದ್ದರು. ರಾತ್ರಿ ಊಟ ಮಾಡಿ ವಾಪಸ್ಸು ಹೋಗುತ್ತಿದ್ದು  ಆ ಸಮಯ ಸಂತೋಷ ಶೆಟ್ಟಿ  ರವರು ಮನೆಗೆ ಹೋಗುವ ಸಲುವಾಗಿ ರಾ ಹೆ 66 ರ  ಉಡುಪಿ ಕುಂದಾಪುರ ರಸ್ತೆಯ ಪೂರ್ವ ಬದಿಯ ಅಂಚಿನಲ್ಲಿ ನಿಲ್ಲಿಸಿ ಬಂದ  ಮೋಟಾರ್ ಸೈಕಲ್  ಬಳಿ ಹೋಗುವರೆ  ರಾ ಹೆ 66 ರ ಪಶ್ಚಿಮ ಪಾಶ್ವವನ್ನು  ದಾಟಿ ಪೂರ್ವ ಪಾಶ್ವದ ರಸ್ತೆಯನ್ನು ದಾಟುತ್ತಿರುವಾಗ ರಾತ್ರಿ 10.00 ಗಂಟೆಯ ಸುಮಾರಿಗೆ ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ  ಬರುತ್ತಿದ್ದ  KA 51D6799 ನೇ ಬಸ್ ಚಾಲಕ ಲಿಯಕತ್ ಆಲಿ ಸಯ್ಯದ್  ಎಂಬಾತನು ಅದರ  ಚಾಲಕನು ಅತಿವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಾದಾಚಾರಿ  ಸಂತೋಷ ಶೆಟ್ಟಿರವರಿಗೆ ಢಿಕ್ಕಿ ಹೊಡೆದನು. ಅಪಘಾತದಿಂದ ಸಂತೋಷ ಶೆಟ್ಟಿಯವರು ರಸ್ತೆಗೆ ಬಿದ್ದು ಅವರ ತಲೆಯ  ಎಡ ಬದಿಗೆ ತೀವೃ ಸ್ವರೂಪದ  ರಕ್ತಗಾಯವಾಗಿರುತ್ತದೆ.  ಕೂಡಲೇ ಕೊಟೇಶ್ವರ ಎನ್ ಆರ್ ಆಚಾರ್ಯ ಆಸ್ಪತ್ರೆಗೆ  ಚಿಕತ್ಸೆಯ ಬಗ್ಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆಯಲ್ಲಿರುತ್ತಾ ದಿನಾಂಕ 23/05/2022 ರಂದು ರಾತ್ರಿ 00.51 ಗಂಟೆಗೆ ಮೃತ ಪಟ್ಟಿರುತ್ತಾರೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 70/2022 ಕಲಂ:279,304(A)  IPC ಯಂತೆ ಪ್ರಕರಣ ದಾಖಲಿಸಿಲಾಗಿದೆ.
  • ಕಾರ್ಕಳ :ಪಿರ್ಯಾದಿ ಶಿವ ಪ್ರಸಾದ್ ಪ್ರಾಯ: 25 ವರ್ಷ, ತಂದೆ: ವಾಸುದೇವ ಆಚಾರ್ಯ, ವಾಸ:  8-16 ಬಾಳೇಬೈಲು ಪೆರ್ಡೂರು ಗ್ರಾಮ ಇವರು ದಿನಾಂಕ 22/05/2022 ರಂದು ಮದ್ನಾಹ್ನ ಕಾರ್ಕಳದ ನಲ್ಲೂರಿನಿಂದ ಪೆರ್ಡೂರು ಕಡೆಗೆ ಸಂಬಂಧಿ ನವೀನ, ಪ್ರಾಯ: 33 ವರ್ಷ ರವರು ಸವಾರಿ ಮಾಡುತ್ತಿದ್ದ ಮೋಟಾರ್‌ ಸೈಕಲ್‌ ನಂಬ್ರ KA20Y3768 ನೇದರಲ್ಲಿ ಸಹ ಸವಾರನಾಗಿ ಕುಳಿತುಕೊಂಡು ಕಾರ್ಕಳದ ಪುಲ್ಕೇರಿ ಕಡೆಯಿಂದ ಕಾರ್ಕಳದ ಬಂಗ್ಲೆಗುಡ್ಡೆ ಕಡೆಗೆ ಸಾಗಿರುವ ಸಾರ್ವಜನಿಕ ರಸ್ತೆಯಲ್ಲಿ ಹೋಗುತ್ತಾ ಸಮಯ ಸುಮಾರು ಮದ್ಯಾಹ್ನ 3:00 ಗಂಟೆಗೆ ಆನೆಕೆರೆ ಶ್ರೀಕೃಷ್ಣ ದೇವಸ್ಥಾನದ ಜಂಕ್ಷನ್‌ ಬಳಿ ತಲುಪುವಾಗ ಕುಂಟಲ್ಪಾಡಿ ಕಡೆಯಿಂದ KA19MJ9378 ನೇ ನಂಬ್ರದ ಕಾರು ಚಾಲಕನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಒಮ್ಮೇಲೆ ಮುಖ್ಯ ರಸ್ತೆ ಕಡೆಗೆ ಚಲಾಯಿಸಿಕೊಂಡು ಬಂದು ನವೀನನು ಸವಾರಿ ಮಾಡುತ್ತಿದ್ದ ಮೋಟಾರ್‌ ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ನವೀನನಿಗೆ ಎಡಕೈ ಮೂಳೆ ಮುರಿತಗೊಂಡು ಹಣೆಗೆ ಗುದ್ದಿದ ಗಾಯ ಉಂಟಾಗಿದ್ದು ಗಾಯಗೊಂಡ ನವೀನನ್ನು ಸಿಟಿ ನರ್ಸಿಂಗ್‌ ಹೋಮ್‌ ಕಾರ್ಕಳದಲ್ಲಿ ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ  ಅಪರಾಧ ಕ್ರಮಾಂಕ 76/2022  ಕಲಂ  279,  337, 338 IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಉಡುಪಿ: ಫಿರ್ಯಾದಿ ಶ್ರೀಮತಿ  ಲಕ್ಷ್ಮೀ,  ಪ್ರಾಯ:  34  ವರ್ಷ  ಗಂಡ:  ರಾಘು  ವಾಸ: ಟಿ.ಬಿ.  ಕಾಲೋನಿ,  ತೀರ್ಥಹಳ್ಳಿ ಇವರ ತಂದೆಯಾದ ಸಂಜೀವ  ಪ್ರಾಯ: 65 ವರ್ಷ ರವರು ನಿವೃತ್ತ ಪೌರಕಾರ್ಮಿಕರಾಗಿದ್ದು, ಉಡುಪಿ ತಾಲೂಕು 76-ಬಡಗುಬೆಟ್ಟು ಗ್ರಾಮದ  ಬೀಡಿನಗುಡ್ಡೆಯ  ಪೌರಕಾರ್ಮಿಕರ ಕಾಲೋನಿಯ ಮನೆ ನಂಬ್ರ 7-1-7ಬಿರಲ್ಲಿ ಒಬ್ಬರೇ ವಾಸವಾಗಿದ್ದವರು ವಿಪರೀತ ಮದ್ಯ ವ್ಯಸನಿಯಾಗಿದ್ದು, ಮರೆವು  ಖಾಯಿಲೆಯಿಂದ  ಬಳಲುತ್ತಿದ್ದು, ಸುಮಾರು ಎರಡು-ಮೂರು ದಿನಗಳ ಹಿಂದೆ  ರಾತ್ರಿಯ ಸಮಯ ಕತ್ತಲೆಯಲ್ಲಿ  ಕಾಣಿಸದೇ ಮನೆಯ ಹತ್ತಿರದ , ರಸ್ತೆಯ  ಸಮೀಪವಿರುವ ಶ್ರೀಮತಿ  ಜಯಂತಿ  ಪೈ ಎಂಬುವರ ಬಾಬ್ತು ಆವರಣವಿಲ್ಲದಿರುವ ಬಾವಿಯ  ನೀರಿಗೆ ಬಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿ ಆರ್  ನಂ 30/2022 ಕಲಂ 174 CrPC ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಕಾರ್ಕಳ:ಫಿರ್ಯಾದಿ ಲಕ್ಷ್ಮೀ, ಪ್ರಾಯ: 60 ವರ್ಷ, ವಾಸ: ನೆಲ್ಲಿಗುಡ್ಡೆ, ಮಿಯಾರು ಗ್ರಾಮ,ಇವರು  ಇವರ ಗಂಡ ರಾಮಸ್ವಾಮಿ ಪ್ರಾಯ 75 ವರ್ಷ ಎಂಬವರೊಂದಿಗೆ ವಾಸವಾಗಿದ್ದು, ಫಿರ್ಯಾದುದಾರರು ದಿನಾಂಕ 17-05-2022 ರಂದು ಅಡುಗೆ ಕೆಲಸದ ಬಗ್ಗೆ ಚೆನ್ನಗಿರಿಗೆ ಹೋಗಿದ್ದು ರಾಮಸ್ವಾಮಿರವರು ಒಬ್ಬರೇ ಇದ್ದರು. ದಿನಾಂಕ 22-05-2022 ರಂದು ಹತ್ತಿರದ ಮನೆಯವರು ಫೋನ್ ಮಾಡಿ ಮಧ್ಯಾಹ್ನ 1-30 ಗಂಟೆಗೆ ರಾಮಸ್ವಾಮಿಗೆ ಅನಾರೋಗ್ಯವಾಗಿದ್ದು ಉಪಚರಿಸಿ ನೀರು ಕುಡಿಸಿರುತ್ತೇವೆ. ಮಧ್ಯಾಹ್ನ 2 ಗಂಟೆಗೆ ಮೃತಪಟ್ಟಿರುತ್ತಾರೆಂದು ತಿಳಿಸಿದ್ದು ಫಿರ್ಯಾದುದಾರರು ಕೂಡಲೇ ಹೊರಟು ಬಂದಿರುತ್ತಾರೆ. ರಾಮಸ್ವಾಮಿರವರು ಅನಾರೋಗ್ಯದಿಂದ ಮೃತಪಟ್ಟಿದ್ದು ಅವರ ಮರಣದಲ್ಲಿ ಯಾವುದೇ ಸಂಶಯ ಇರುವುದಿಲ್ಲ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್  ಠಾಣೆ ಯುಡಿಆರ್‌ 22/2022 ಕಲಂ 174 CRPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 23-05-2022 06:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080