ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹೆಬ್ರಿ: ಪಿರ್ಯಾದಿದಾರರಾದ ಡಾ.ರಮಾಮಣಿ ರಾವ್ (44), ಗಂಡ: ಎಂ.ಆರ್ .ರಾವ್, ವಾಸ: ಮ.ನಂ 103 ಅನಂತಕೃಷ್ಣ ರೆಸಿಡೆನ್ಸಿ ಹೆಬ್ರಿ, ಹೆಬ್ರಿ ಗ್ರಾಮ ಹೆಬ್ರಿ ತಾಲೂಕು ಇವರು ಹೆಬ್ರಿ ಸಮುದಾಯ ಅರೋಗ್ಯ ಕೇಂದ್ರದಲ್ಲಿ ವೈದ್ಯರಾಗಿದ್ದು.  ದಿನಾಂಕ 22/05/2021 ರಂದು ಪಿರ್ಯಾದಿದಾರರು ರಾತ್ರಿ ಕರ್ತವ್ಯದ ಬಗ್ಗೆ ಅಸ್ಪತ್ರೆಗೆ ಹೋಗುವ ಸಲುವಾಗಿ ತನ್ನ KA-20-MD-3494 ನೇ ಕಾರನ್ನು ಚಲಾಯಿಸಿಕೊಂಡು ಮನೆಯಿಂದ ಹೊರಟು ಸಮಯ ರಾತ್ರಿ 8:00 ಗಂಟೆಗೆ ಹೆಬ್ರಿ ಗ್ರಾಮದ ಹೆಬ್ರಿ ಜಂಕ್ಷನ್ ನ ಬಳಿ ತಲುಪಿದಾಗ ಕುಚ್ಚೂರು ಕಡೆಯಿಂದ KA-25-P-0262 ನೇ ಬೊಲೇರೋ ವಾಹನವನ್ನು ಅದರ ಚಾಲಕ ಲೋಹಿತ್ ಕುಮಾರ್ ಜೈನ್ ಇವರು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಪಿರ್ಯಾದಿದಾರರು ಚಲಾಯಿಸಿಕೊಂಡು ಬರುತ್ತಿದ್ದ ಕಾರಿನ ಮುಂದಿನ ಭಾಗಕ್ಕೆ ಡಿಕ್ಕಿ ಹೊಡೆದು ಬೊಲೇರೋ ವಾಹನವು ಸ್ವಲ್ಪ ಮುಂದೆ ಹೋಗಿ ಮಗುಚಿ ಬಿದ್ದು ಕೊಂಡಿದ್ದು. ಈ ಅಪಘಾತದಿಂದ ಪಿರ್ಯಾದಿದಾರರು ಚಲಾಯಿಸಿದ ಕಾರಿನ ಮುಂದಿನ ಭಾಗವು ಜಖಂ ಅಗಿರುವುದಲ್ಲದೇ  ಪಿರ್ಯಾದಿದಾರರ ತಲೆಗೆ ಗುದ್ದಿದ ನೋವಾಗಿರುತ್ತದೆ. ಈ ಅಪಘಾತವು KA-25-P-0262 ನೇ ಬೊಲೇರೋ ವಾಹನದ ಚಾಲಕ ಲೋಹಿತ್ ಕುಮಾರ್ ಜೈನ್ ಇವರ ಅತೀವೇಗ ಹಾಗೂ ಅಜಾಗರೂಕತೆಯಿಂದ ಅಗಿದ್ದು.  ಅರೋಪಿತನು ಮಾನ್ಯ ಜಿಲ್ಲಾಡಳಿತ ಹೊರಡಿಸಿರುವ ಲಾಕ್ ಡೌನ್ ಅದೇಶವನ್ನು ಉಲ್ಲಂಘನೆ ಮಾಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 31/2021 ಕಲಂ: 279, 337, 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣಗಳು

  • ಅಜೆಕಾರು: ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 10/05/2021 ರಿಂದ ದಿನಾಂಕ: 24/05/2021 ರವೆರೆಗೆ ಕೋವಿಡ್ ಗೆ ಸಂಬಂದಿಸಿದಂತೆ ಲಾಕ್ ಡೌನ್ ವಿಧಿಸಿ ಆದೇಶ ಹೊರಡಿಸಿದ್ದು ಈ ಲಾಕ್ ಡೌನ್ ಜಾರಿಗೊಳಿಸುವ ಬಗ್ಗೆ ಪೋಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು ಈ ಸಮಯದಲ್ಲಿ ಅನಗತ್ಯವಾಗಿ ಸಾರ್ವಜನಿಕರ ಓಡಾಟಕ್ಕೆ ನಿಷೇಧ ಇದ್ದು ಈ ಬಗ್ಗೆ ಅಜೆಕಾರು ಪೊಲೀಸ್ ಠಾಣಾ  ಉಪನಿರೀಕ್ಷಕರಾದ  ಶುಭಕರ್ ರವರು ದಿನಾಂಕ 22/05/2021 ರಂದು ರೌಂಡ್ಸ್ ಕರ್ತವ್ಯದಲ್ಲಿರುತ್ತಾ ನಂತರ ಕಾಡುಹೊಳೆ ಜಂಕ್ಷನ್ ಗೆ ಬಂದು ಅಲ್ಲಿ ಚೆಕ್‌ಪೋಸ್ಟ್ ನಲ್ಲಿ ವಾಹನ ತಪಾಸಣೆ ನಡಿಸುತ್ತಿರುವಾಗ ಅಂಡಾರು ಕಡೆಯಿಂದ ಕಾಡುಹೊಳೆ ಜಂಕ್ಷನ್ ಕಡೆಗೆ KA-20-ER-4614 ನೇ ನಂಬ್ರದ ದ್ವಿಚಕ್ರ ವಾಹನದಲ್ಲಿ ಇಬ್ಬರು ವ್ಯಕ್ತಿಗಳು ಬರುತ್ತಿದ್ದು, ಅವರಿಗೆ ವಾಹನವನ್ನು ನಿಲ್ಲಿಸುವಂತೆ ಸೂಚನೆ ನೀಡಿದಂತೆ ಅವರು ದ್ವಿಚಕ್ರ ವಾಹನವನ್ನು ನಿಲ್ಲಿಸಿರುತ್ತಾರೆ. ಅವರುಗಳಲ್ಲಿ ಸಂಚರಿಸಿದ ಬಗ್ಗೆ ವಿಚಾರಿಸಿದಲ್ಲಿ ಸಮರ್ಪಕ ಉತ್ತರವನ್ನು ನೀಡಿರುವುದಿಲ್ಲ. ಘನ ಕರ್ನಾಟಕ ಸರಕಾರವು ಕೋವಿಡ್ ಮಹಾಮಾರಿ ಕರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಅನಗತ್ಯವಾಗಿ ಕೋವಿಡ್ ನಿಯಮ ಉಲ್ಲಂಘಿಸಿ ಸಾರ್ವಜನಿಕ ರಸ್ತೆಯಲ್ಲಿ ತಿರುಗಾಡುತ್ತಿರುವುದು ಕಂಡುಬಂದಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 16/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಪಿರ್ಯಾದಿದಾರರಾದ ಜಗದೀಶ್ ಭಟ್, ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್, ಫ್ಲೈಯಿಂಗ್ ಸ್ಕ್ವಾಡ್,ಬ್ರಹ್ಮಾವರ ಇವರು ಮಾನ್ಯ ಉಡುಪಿ ಜಿಲ್ಲಾಧಿಕಾರಿಯವರ ಆದೇಶದಂತೆ ಕೋವಿಡ್ 19 ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಬ್ರಹ್ಮಾವರ ವಲಯದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಅದರಂತೆ ಅವರು ದಿನಾಂಕ 22/05/2021 ರಂದು ಇಲಾಖಾ ವಾಹನದಲ್ಲಿ ಬ್ರಹ್ಮಾವರ ತಾಲೂಕು, ವಾರಂಬಳ್ಳಿ  ಗ್ರಾಮದ, ಬ್ರಹ್ಮಾವರ ಬಸ್ಸ್ ನಿಲ್ದಾಣದ ಸಮೀಪ ಗಸ್ತು ತಿರುಗುತ್ತಿರುವಾಗ ಬೆಳಿಗ್ಗೆ 09:24 ಗಂಟೆಯ ಸಮಯದಲ್ಲಿ ಆರೋಪಿ ಮುರುಗೇಶ್, ಶ್ರೀ ಸಾಯಿ ಡಿಜಿಟಲ್ ಸೇವಾ ಕೇಂದ್ರ, ಪಂಚಾಯತ್ ಕಟ್ಟಡ, ಬಸ್ಸ್ ನಿಲ್ದಾಣದ ಬಳಿ, ವಾರಂಬಳ್ಳಿ ಗ್ರಾಮ, ಬ್ರಹ್ಮಾವರ ತಾಲೂಕು ಇವರು ಘನ ಕರ್ನಾಟಕ ಸರಕಾರವು ಕೋವಿಡ್ 19 ಸೋಂಕು ತಡೆಗಟ್ಟುವ ಸಂಬಂಧ ಹೊರಡಿಸಿದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಬಸ್ಸ್ ನಿಲ್ದಾಣದ ಬಳಿ ಪಂಚಾಯತ್ ಕಟ್ಟಡದಲ್ಲಿರುವ  ಶ್ರೀ ಸಾಯಿ ಡಿಜಿಟಲ್ ಸೇವಾ ಕೇಂದ್ರ ಇಂಟರ್‌ನೆಟ್ ಅಂಗಡಿಯನ್ನ ವ್ಯವಹಾರದ  ಬಗ್ಗೆ ತೆರೆದುಕೊಂಡಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 92/2021 ಕಲಂ: 269,188 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 24/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ನೀಡಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳ ತಪಾಸಣೆಯ ಬಗ್ಗೆ ಬ್ರಹ್ಮಾವರ ಠಾಣಾ ಪೊಲೀಸ್ ನೀರಿಕ್ಷಕರು ನೀಡಿದ ಆದೇಶದಂತೆ  ವೆಂಕಟರಮಣ ದೇವಾಡಿಗ, ಹೆಡ್‌ ಕಾನ್ಸಟೇಬಲ್, ಬ್ರಹ್ಮಾವರ ಪೊಲೀಸ್ ಠಾಣೆ  ಇವರು ದಿನಾಂಕ 22/05/2021 ರಂದು ಚಾಂತಾರು ಗ್ರಾಮದಲ್ಲಿ  ವಸ್ತುಗಳ ಖರೀದಿಯ ಅಂಗಡಿಗಳನ್ನು ತಪಾಸಣೆ ಮಾಡುತ್ತಿರುವಾಗ ಸಮಯ ಬೆಳಿಗ್ಗೆ 10:05 ಗಂಟೆಗೆ 2ನೇ ಆರೋಪಿ ನಂದ ಕುಮಾರ್ ಕುಡ್ವ ರವರ ಮಾಲಕತ್ವದ ಚಾಂತಾರು ಗ್ರಾಮದ ಮಧುವನ ಕಾಂಪ್ಲೆಕ್ಸ್ ನಲ್ಲಿರುವ ನವಮಿ ಸೂಪರ್ ಮಾರ್ಕೇಟ್ ಅಂಗಡಿಯನ್ನು, ಅವರ ಅನುಮತಿಯಂತೆ ಅಂಗಡಿಯ ಮೆನೇಜರ್ ಆದ 1ನೇ ಆರೋಪಿ ದಿಲೀಪ್  ರವರು ವ್ಯಾಪಾರದ ಬಗ್ಗೆ ತೆರೆದು ಘನ ಕರ್ನಾಟಕ ಸರಕಾರವು ಕೋವಿಡ್‌ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ನಿಯಮ ಉಲ್ಲಂಘಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 93/2021 ಕಲಂ : 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 24/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು, ಈ ಕರ್ಫ್ಯೂ ಜ್ಯಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ನೀಡಿದ್ದು, ಈ ಬಗ್ಗೆ ಗುರುನಾಥ ಬಿ. ಹಾದಿಮನಿ, ಪೊಲೀಸ್ ಉಪನಿರೀಕ್ಷಕರು, ಬ್ರಹ್ಮಾವರ ಪೊಲೀಸ್ ಠಾಣೆ ಇವರು ದಿನಾಂಕ 22/05/2021 ರಂದು ಕಚ್ಚೂರು ಗ್ರಾಮದ ಬಾರ್ಕೂರು ಸೇತುವೆಯ ಬಳಿ ಸಾಯಿಬರಕಟ್ಟೆ- ಬ್ರಹ್ಮಾವರ ಮುಖ್ಯರಸ್ತೆಯ ಬದಿಯಲ್ಲಿ ವಾಹನ ತಪಾಸಣೆ ಮಾಡುತ್ತಿರುವಾಗ ಬೆಳಿಗ್ಗೆ 11:20 ಗಂಟೆಗೆ ಸಾಯಿಬರಕಟ್ಟೆ ಕಡೆಯಿಂದ ಮಂಗಳೂರಿಗೆ AP-39-JA-6095 ನೇ ಸ್ವಿಫ್ಟ್‌ ಡಿಸೈರ್‌ ಕಾರಿನಲ್ಲಿ ಆರೋಪಿಗಳಾದ 1) ಅಬ್ದುಲ್‌ ರಹೀಂ (36), 2) ಅಬ್ದುಲ್‌ಹಕೀಂ(45), 3) ಪಂಕಜ್‌ ಕುಮಾರ್‌ (30) ಇವರು ಮಾನ್ಯ ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಅಪಾಯಕಾರಿ ಕೋವಿಡ್‌-19 ಖಾಯಿಲೆಯ ಬಗ್ಗೆ ತಿಳಿದೂ ಸಹ, ಸಾಂಕ್ರಾಮಿಕ ರೋಗವು ಹರಡುವ ಬಗ್ಗೆ ಅರಿವು ಇದ್ದರೂ ಕೂಡಾ ಸದ್ರಿಯವರು ನಿರ್ಲಕ್ಷತನದಿಂದ ತಮ್ಮ ತಮ್ಮ ಮುಖಕ್ಕೆ ಮಾಸ್ಕ್‌‌ಧರಿಸದೇ ಕಾರಿನಲ್ಲಿ ಪ್ರಯಾಣಿಸುತ್ತಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 94/2021 ಕಲಂ: 269 ಐಪಿಸಿ ಮತ್ತು 119 ಜೊತೆಗೆ 177 ಐಎಮ್ವಿ ಆ್ಯಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ಕೋವೀಡ್ -19 ವೈರಸ್ ಹರಡುವುದನ್ನು ತಡಗಟ್ಟುವ ಸಲುವಾಗಿ ಮಾನ್ಯ ಕರ್ನಾಟಕ ಸರಕಾರ ಹಾಗೂ ಜಿಲ್ಲಾಡಳಿತ ದಿನಾಂಕ 27/04/2021 ರಿಂದ ದಿನಾಂಕ 24/05/2021 ರ ತನಕ ರಾಜ್ಯಾದಂತ್ಯ ಲಾಕ್ ಡೌನ್ ಆದೇಶವನ್ನು ಹೊರಡಿಸಿದಲ್ಲದೇ ಕಲಂ: 144 ಸಿ.ಆರ್.ಪಿ.ಸಿ ಅಡಿಯಲ್ಲಿ ನಿಷೇದಾಜ್ಞೆ ಆದೇಶವನ್ನು ಹೊರಡಿಸಿರುತ್ತದೆ.  ದಿನಾಂಕ 22/05/2021 ರಂದು 18:30 ಗಂಟೆಗೆ ಹೆಬ್ರಿ ತಾಲೂಕು ಹೆಬ್ರಿ ಗ್ರಾಮದ ಹೆಬ್ರಿ ಮೇಲ್ಪೇಟೆ ಎಂಬಲ್ಲಿ ಮಹೇಶ.ಟಿ.ಎಂ, ಪೊಲೀಸ್ ಉಪನಿರೀಕ್ಷಕರು, ಹೆಬ್ರಿ ಪೊಲೀಸ್ ಠಾಣೆ ಇವರು ರೌಂಡ್ಸ್ ನಲ್ಲಿರುವಾಗ ಸರಕಾರವು ಹೊರಡಿಸಿರುವ ನಿಯಮಗಳ ಬಗ್ಗೆ ತಿಳುವಳಿಕೆ ಇದ್ದರೂ ಕೋವೀಡ್ ನಿಯಮವನ್ನು ಉಲ್ಲಂಘನೆ ಮಾಡಿ ನಿಗದಿತ ಸಮಯವನ್ನು ಹೊರತುಪಡಿಸಿ ರಾಮಚಂದ್ರ ಉಡುಪ (56) ಇವರು ಬೇಕರಿಯನ್ನು ತೆರೆದು ವ್ಯಾಪಾರ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 30/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಕೋವಿಡ್-19 ಕೋರೋನಾ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನಲೆಯಲ್ಲಿ ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ  ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ 26/04/2021 ರಿಂದ ದಿನಾಂಕ 12/05/2021 ರವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಹೊರಡಿಸಿರುವ ಆದೇಶವನ್ನು ಪರಿಷ್ಕರಿಸಿ ದಿನಾಂಕ 10/05/2021 ,  ಬೆಳಿಗ್ಗೆ 6:00 ಗಂಟೆಯಿಂದ ದಿನಾಂಕ 24/05/2021ರ ಬೆಳಿಗ್ಗೆ 6:00 ಗಂಟೆಯ ವರೆಗೆ ಲಾಕ್ ಡೌನ್ ಘೋಷಿಸಿದ್ದು ಈ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು, ಈ ಬಗ್ಗೆ ವಾಹನ  ತಪಾಸಣೆ ನಡೆಸುವಂತೆ ಮೇಲಾಧಿಕಾರಿಯವರ ಆದೇಶದಂತೆ ರಾಘವೇಂದ್ರ ಸಿ, ಪೊಲೀಸ್ ಉಪನಿರೀಕ್ಷಕರು, ಕಾಪು ಪೊಲೀಸ್ ಠಾಣೆ ಇವರು ದಿನಾಂಕ 22/05/2021 ರಂದು 16:00 ಗಂಟೆಯಿಂದ 16:30 ಗಂಟೆಯವರೆಗೆ ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮೂಳೂರು ಗ್ರಾಮದ ಮೂಳೂರು ಪೇಟೆಯಲ್ಲಿ ಸಿಬ್ಬಂದಿಯವರ ಸಹಾಯದಿಂದ ಸಾರ್ವಜನಿಕ ರಸ್ತೆಯಲ್ಲಿ ವಾಹನ ತಪಾಸಣೆಯಲ್ಲಿರುತ್ತಾ ಅಗತ್ಯ ವಸ್ತುಗಳ ಖರೀದಿ ಬಗ್ಗೆ ಸರಕಾರ ನಿಗದಿಪಡಿಸಿದ ಸಮಯ ಅವಕಾಶದ ಬಳಿಕವೂ  ಅನಗತ್ಯವಾಗಿ ಗುಂಪು ಸೇರಿ ಸಂಚರಿಸುತ್ತಿರುವವರ ವಾಹನಗಳನ್ನು ತಪಾಸಣೆಗಾಗಿ ನಿಲ್ಲಿಸಿ ಪರಿಶೀಲಿಸಿದಲ್ಲಿ  1) ಸ್ಕೂಟರ್  ನಂಬ್ರ ಕೆ.ಎ. 20 ಇ.ಟಿ. 4398  ನೇದರ ಸವಾರನ ಹೆಸರು ಮಯ್ಯದಿ,  2) ಸ್ಕೂಟರ್ ನಂಬ್ರ ಕೆ.ಎ. 20 ಇ.ಪಿ. 5454 ನೇದರ  ಸವಾರನ ಹೆಸರು ಮೊಹಮ್ಮದ್ ಫಾರಿಸ್, 3) ರಾಯಲ್ ಏನ್‌ಫೀಲ್ಡ್ ಮೋಟಾರು ಸೈಕಲ್‌ ನಂಬ್ರ ಕೆ.ಎ. 20 ಇ.ಕೆ. 6000 ನೇದರ ಸವಾರನ ಹೆಸರು ಮೊಹಮ್ಮದ್ ಇಫಾಜ್ ಇವರ ಓಡಾಟದ ಕಾರಣವನ್ನು ವಿಚಾರಿಸಲಾಗಿ, ಯಾವುದೇ ತುರ್ತು ಕಾರಣವಿಲ್ಲದೇ, ಅನಗತ್ಯವಾಗಿ ಸಂಚರಿಸುವುದು ಕಂಡು ಬಂದಿರುತ್ತದೆ. ಆರೋಪಿಗಳು  ಘನ ಕರ್ನಾಟಕ ಸರಕಾರವು ಕೋವಿಡ್‌ಮಹಾಮಾರಿ ಕೊರೋನಾ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರೂ ಕೂಡಾ ಅನಗತ್ಯವಾಗಿ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೋಂಕನ್ನು ಹರಡುವ ಸಂಭವ ಇದೆ ಎಂದು ತಿಳಿದೂ ಕೂಡಾ ನಿರ್ಲಕ್ಷತನದಿಂದ ಕೋವಿಡ್‌ನಿಯಮ ಉಲ್ಲಂಘಿಸಿ ಅನಗತ್ಯವಾಗಿ ವಾಹನದಲ್ಲಿ ಸಂಚರಿಸುತ್ತಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 85/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    
  • ಕಾರ್ಕಳ: ದಿನಾಂಕ 22/05/2021 ರಂದು 14:00 ಗಂಟೆಗೆ ಮಧು ಬಿ ಇ, ಪೊಲೀಸ್‌ ಉಪನಿರೀಕ್ಷಕರು, ಕಾರ್ಕಳ ನಗರ ಪೊಲೀಸ್‌ ಠಾಣೆ  ಇವರು ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ಮಂಗಳಪಾದೆ ಎಂಬಲ್ಲಿ ಯಾವುದೇ ಪರವಾನಿಗೆ ಹೊಂದದೇ ಅಕ್ರಮವಾಗಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದಾರೆ ಎಂಬುವುದಾಗಿ ಬಂದ ಖಚಿತ ಮಾಹಿತಯಂತೆ  ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಗೆ ಮದ್ಯ ಮಾರಾಟ ಮಾಡುತ್ತಿದ್ದ ರೋಶನ್‌ಮೊಂತೋ ದಾಂತಿ (32), ತಂದೆ: ಅಂತೋನಿ ದಾಂತಿ, ವಾಸ: ಜೆ ಆರ್‌ದಾಂತಿ ಕಂಪೌಂಡ್‌, ಜೋಡುಕಟ್ಟೆ ಮಂಗಳಪಾದೆ, ಮಿಯ್ಯಾರು ಗ್ರಾಮ ಮತ್ತು ಅಂಚೆ, ಕಾರ್ಕಳ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ಆತನ ವಶದಲ್ಲಿದ್ದ 90 ಎಮ್‌ ಎಲ್‌ ನ  ಮದ್ಯ ತುಂಬಿದ  ಒಟ್ಟು 82 ಸ್ಯಾಚೆಟ್‌ಗಳನ್ನು ಹಾಗೂ ಮದ್ಯ  ಮಾರಾಟ  ಮಾಡಿ ಸಂಗ್ರಹವಾದ ನಗದು 200/- ರೂಪಾಯಿ ಮತ್ತು 1-ಖಾಕಿ ಬಣ್ಣದ ರಟ್ಟಿನ ಬಾಕ್ಸ್‌‌‌‌‌ ವಶಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 66/2021 ಕಲಂ: 32, 34 ಕರ್ನಾಟಕ ಅಬಕಾರಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.   

     

ಇತ್ತೀಚಿನ ನವೀಕರಣ​ : 23-05-2021 11:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080