ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕಾಪು: ದಿನಾಂಕ 23/05/2021 ರಂದು ಪಿರ್ಯಾದಿದಾರರಾದ ರವಿ ಪ್ರಾಯ 40, ತಂದೆ: ಕೃಷ್ಣ ವಾಸ:ಶಿವಗಿರಿ ಕಾಲೋನಿ, ಪಡುಬೆಳ್ಳೆ ಪಾಂಬೂರು, ಮೂಡುಬೆಳ್ಳೆ ಗ್ರಾಮ ಕಾಪು ತಾಲೂಕು ಇವರು ತನ್ನ ಮೋಟಾರು ಸೈಕಲ್ ನಂಬ್ರ KA-20-Y-8121 ನೇದರಲ್ಲಿ ತನ್ನ ಚಿಕ್ಕಮ್ಮನ ಮಗ ಮಣಿಕಂಠನನ್ನು ಸಹಸವಾರನನ್ನಾಗಿ ಕುಳ್ಳಿರಿಸಿಕೊಂಡು ಮೇಸ್ತ್ರಿ ಕೆಲಸದ ಬಗ್ಗೆ ಕಿನ್ನಿಮೂಲ್ಕಿಗೆ ಮಂಗಳೂರು ಉಡುಪಿ ರಾಹೆ 66ರಲ್ಲಿ ಹೊರಟ್ಟಿದ್ದು ಬೆಳಿಗ್ಗೆ 08:45 ಗಂಟೆ ಸುಮಾರಿಗೆ ಉದ್ಯಾವರ ಗ್ಯಾಸ್ ಪಂಪ್ ಎದುರು ತಲುಪುತ್ತಿದ್ದಂತೆ ಹಿಂದಿನಿಂದ ಅಂದರೆ ಮಂಗಳೂರು ಕಡೆಯಿಂದ KA-20-EM -4602 ನೇ ಸ್ಕೂಟಿ ಸವಾರ ತನ್ನ ಸ್ಕೂಟರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿಮಾಡಿಕೊಂಡು ಬಂದು ಪಿರ್ಯಾದಿದಾರರ ಮೋಟಾರು ಸೈಕಲಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಮತ್ತು ಸಹಸವಾರ ಮಣಿಕಂಠನು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಇದರಿಂದ ಪಿರ್ಯಾದಿದಾರರ ಬಲಕಾಲಿನ ಪಾದದ ಬಳಿ ತರಚಿದ ಗಾಯ ಮತ್ತು ಸಹಸವಾರ ಮಣಿಕಂಠನ ಸೊಂಟಕ್ಕೆ ಗುದ್ದಿದ ನೋವಾಗಿರುತ್ತದೆ. ಸಹಸವಾರ ಮಣಿಕಂಠನು ಉಡುಪಿ ಹೈಟೆಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 86/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಕುಂದಾಪುರ : ದಿನಾಂಕ 23/05/2021 ರಂದು ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ಎ.ಎಸ್.ಐ ರವೀಶ ಹೊಳ್ಳ ಇವರು ಕೋವಿಡ್‌-19 ವೈರಾಣು ಸಾಂಕ್ರಾಮಿಕ ರೋಗದ ಹರಡುವಿಕೆ ನಿಯಂತ್ರಣದ ಸಂಬಂಧ ಮುಂಜಾಗ್ರತಾ ಕ್ರಮದ ಬಗ್ಗೆ ಕರ್ತವ್ಯದಲ್ಲಿರುವ ವೇಳೆ 11:00 ಗಂಟೆಗೆ ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ಕಂಡ್ಲೂರು ಪೇಟೆ ಬಳಿ KA 19 EF 6846 ನೇ ವಾಹನದ ಚಾಲಕನು ತನ್ನ ವಾಹನವನ್ನು ಚಲಾಯಿಸಿಕೊಂಡು ಬಂದಿದ್ದು ಪೊಲೀಸ್‌ರನ್ನು ನೋಡಿ ವಾಹನವನ್ನು ಬಿಟ್ಟು ಓಡಿ ಹೋಗಿರುತ್ತಾನೆ. ವಾಹನ ಚಾಲಕನು ಕೋವಿಡ್‌-19 ಸಂಬಂಧ ಜಿಲ್ಲಾಡಳಿತದ ಸೂಚನೆಗಳನ್ನು ಪಾಲಿಸದೆ, ನಿರ್ಲಕ್ಷತನ ತೋರಿಸಿರುತ್ತಾರೆ . ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 41/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಮಾನ್ಯ ಕರ್ನಾಟಕ ಸರ್ಕಾರ ಹಾಗೂ ಉಡುಪಿ ಜಿಲ್ಲಾಡಳಿತ ದಿನಾಂಕ: 10-05-2021 ರಿಂದ ದಿನಾಂಕ: 24-05-2021 ರ ವರೆಗೆ ಕೋವಿಡ್ ಕರ್ಫ್ಯೂ ವಿಧಿಸಿ ಆದೇಶ ಹೊರಡಿಸಿದ್ದು ಈ ಕರ್ಫ್ಯೂ ಜಾರಿಗೊಳಿಸುವ ಬಗ್ಗೆ ಪೊಲೀಸ್ ಇಲಾಖೆಗೆ ಆದೇಶ ಹೊರಡಿಸಿದ್ದು ಈ ಬಗ್ಗೆ ದಿನಾಂಕ 22-05-2021 ರಂದು ಸಂಗೀತಾ ,ಪೊಲೀಸ್ ಉಪನಿರೀಕ್ಷಕರು, ಬೈಂದೂರು ಪೊಲೀಸ್ ಠಾಣೆ ಇವರು ಸಿಬ್ಬಂದಿಯವರೊಂದಿಗೆ ಬೈಂದೂರು ಠಾಣಾ ಸರಹದ್ದಿನ ಯಳಜಿತ್ ಗ್ರಾಮದ ಯಳಜಿತ್ ಪೇಟೆ ಬಳಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಅವಶ್ಯ ವಸ್ತುಗಳ ಖರೀದಿ ಬಗ್ಗೆ ಇರುವ ಜಿಲ್ಲಾಧಿಕಾರಿಗಳ ಆದೇಶದಂತೆ ಅಂಗಡಿಗಳ ತಪಾಸಣೆ ನಡೆಸಿದ್ದು ಸಮಯ ಸುಮಾರು 19 :00 ಗಂಟೆಗೆ ದಿನಸಿ ಅಂಗಡಿಯೊಂದು ತೆರೆದಿರುವುದು ಕಂಡು ಬಂದಿದ್ದು ಅಂಗಡಿಯ ಒಳಗಿದ್ದ ವ್ಯಕ್ತಿಯಲ್ಲಿ ವಿಚಾರಿಸಲಾಗಿ ತಾನು ಅಂಗಡಿಯ ಮಾಲೀಕನಾಗಿರುವುದಾಗಿ ತಿಳಿಸಿದ್ದು ಆತನ ಹೆಸರು ವಿಳಾಸ ಕೇಳಲಾಗಿ ಕುಪ್ಪಯ್ಯ ಪೂಜಾರಿ ಪ್ರಾಯ:42 ವರ್ಷ, ತಂದೆ: ದೊಟ್ಟಯ್ಯ ಪೂಜಾರಿ ,ವಾಸ:ಹೊನ್ನು ಮನೆ,ಯಳಜಿತ್ ಗ್ರಾಮ,ಎಂಬುವವರಾಗಿದ್ದು ಸದ್ರಿಯವರಿಗೆ ಕೋ ವಿಡ್-19 ಕೊರೋನ ವೈರಸ್ ಸೋಂಕು ಹರಡುವದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರವು ಕೊರೋನ ಸೋಂಕನ್ನು ತಡೆಯುವ ಬಗ್ಗೆ ಹೊರಡಿಸಿರುವ ಮಾರ್ಗಸೂಚಿಗಳ ಬಗ್ಗೆ ತಿಳುವಳಿಕೆ ಇದ್ದರು ಕೂಡ ಸಾರ್ವಜನಿಕರ ಪ್ರಾಣಕ್ಕೆ ಅಪಾಯಕಾರಿಯಾದ ರೋಗದ ಸೊಂಕನ್ನು ಹರಡುವ ಸಂಭವ ಇದೆ ಎಂದು ತಿಳಿದು ಕೂಡ ಸಕಾರಣವಿಲ್ಲದೆ ಸಾರ್ವಜನಿಕ ಸ್ಥಳದಲ್ಲಿ ಸಂಚರಿಸಿಕೊಂಡು ನಿರ್ಲಕ್ಷ್ಯತನದಿಂದ ಸರ್ಕಾರ ಹಾಗೂ ಜಿಲ್ಲಾಡಳಿತ ಮಾರ್ಗಸೂಚಿಗಳಲ್ಲಿನ ನಿಯಮಗಳನ್ನು ಉಲ್ಲಂಘಿಸಿ ಜೀವಕ್ಕೆ ಅಪಾಯಕಾರಿಯಾದಂತಹ ರೋಗವು ಹರಡುವಂತೆ ಮಾಡಿ ನಿರ್ಲಕ್ಷ್ಯತನ ತೋರಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 94/2021 ಕಲಂ: 269 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 23-05-2021 06:18 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080