ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಕುಂದಾಪುರ: ದಿನಾಂಕ 22/04/2023 ರಂದು ರಾತ್ರಿ ಸಮಯ ಸುಮಾರು 9:20  ಗಂಟೆಗೆ, ಕುಂದಾಪುರ ತಾಲೂಕಿನ, ವಡೇರಹೋಬಳಿ   ಗ್ರಾಮದ,  ಬಿ.ಸಿ ರಸ್ತೆಯ  ಪೂಜಾ ಹೋಟೇಲ್‌ ಬಳಿ SH 52  ರಸ್ತೆಯಲ್ಲಿ, ಆಪಾದಿತ ಸಂತೋಷ  ಎಂಬವರು ನೊಂದಣಿ ನಂಬ್ರವಿಲ್ಲದ ಹೊಸ ಅಟೋರಿಕ್ಷಾವನ್ನು ಬಸ್ರೂರು ಮೂರು ಕೈ ಜಂಕ್ಷನ್‌ಕಡೆಯಿಂದ ಕೋಣಿ ಕಡೆಗೆ ಅತೀವೇಗ ಮತ್ತು ಅಜಾಗರೂಕತೆಯಿಂದ  ಚಾಲನೆ  ಮಾಡಿಕೊಂಡು ರಸ್ತೆಯ ಬಲಬದಿಗೆ ಬಂದು, ಕೋಣಿ ಕಡೆಯಿಂದ ಮಿಥುನ್‌‌ಎಂಬವರು KA20EG-6065ನೇ ಪಲ್ಸರ್‌ಬೈಕಿನಲ್ಲಿ ಪಿರ್ಯಾದಿ ನವೀನ್‌ಶೆಟ್ಟಿ ಪ್ರಾಯ 33 ವರ್ಷ ತಂದೆ ಮಂಜುನಾಥ ಶೆಟ್ಟಿ ವಾಸ: ಹನುಮಾನ್‌‌ಗ್ಯಾರೇಜ್‌‌ಬಳಿ, ಬಿಸಿ ರಸ್ತೆ, ವಡೇರಹೋಬಳಿ ಗ್ರಾಮ, ಇವರನ್ನು  ಸಹ-ಸವಾರರಾಗಿ ಸವಾರಿ ಮಾಡಿಕೊಂಡು ಹೋಗುತ್ತಿದ್ದ ಸದ್ರಿ ಬೈಕಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ,  ಪಿರ್ಯಾದಿದಾರರ  ಬಲಕಾಲಿನ ಪಾದದ ಬೆರಳುಗಳಿಗೆ  ಸೀಳಿದ ರಕ್ತಗಾಯ ಹಾಗೂ  ಮಿಥುನ್‌ರವರಿಗೆ ಬಲಕೈಯ ಬೆರಳುಗಳಿಗೆ ಒಳಜಖಂ ಹಾಗೂ ರಕ್ತಗಾಯ, ಬಲಕೈಗೆ ಹಾಗೂ ಬಲಕಾಲಿಗೆ ತರಚಿದ ರಕ್ತಗಾಯವಾಗಿ ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ  ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಅಪರಾಧ ಕ್ರಮಾಂಕ 54/2023   ಕಲಂ 279,337   IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಕ್ರಮ ಮದ್ಯ ಮಾರಾಟ ಪ್ರಕರಣ

  • ಅಮಾಸೆಬೈಲು: ದಿನಾಂಕ 22-04-2023 ರಂದು ಫಿರ್ಯಾದಿ: ಸದಾಶಿವ ಆರ್ ಗವರೋಜಿ ಪಿ ಎಸ್ ಐ (ಕಾ ಸು) ಅಮಾಸೆಬೈಲು ಪೊಲೀಸ್ ಠಾಣೆ  ರವರು ಸಿಬ್ಬಂದಿಗಳೊಂದಿಗೆ ಠಾಣಾ ಸರಹದ್ದಿನಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಅಮಾಸೆಬೈಲು ಪೇಟೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಸುಧಾಕ್ರ ಕುಲಾಲ ಮತ್ತು ಗಣೇಶ ಎಂಬವರು ಪ್ಲಾಸ್ಟಿಕ್  ಚೀಲದಲ್ಲಿ ಅಕ್ರಮವಾಗಿ ಪರವಾನಿಗೆಯಿಲ್ಲದೆ ಮದ್ಯ ಮಾರಾಟ ಮಾಡುತ್ತಿರುವುದಾಗಿ ಬಾತ್ಮೀದಾರರಿಂದ ದೊರಕಿದ ಮಾಹಿತಿಯಂತೆ ಸದ್ರಿ ಸ್ಥಳಕ್ಕೆ 13:00 ಗಂಟೆಗೆ ಧಾಳಿ ನಡೆಸಿದ್ದು ಮದ್ಯ ಮಾರಾಟ ಮಾಡುತ್ತಿದ್ದ ಆರೋಪಿಗಳು ಸ್ಥಳದಿಂದ ಓಡಿ ಹೋಗಿದ್ದು  ಆಪಾದಿತರು   1} ಸುದಾಕರ  ಕುಲಾಲ ಪ್ರಾಯ 47 ವರ್ಷ ತಂದೆ: ರಾಜೀವ ಕುಲಾಲ ವಾಸ: ಹೊರ್ಲಿಜಡ್ಡು ರಟ್ಟಾಡಿ ಗ್ರಾಮ ಕುಂದಾಪುರ ತಾಲೂಕು 2} ಗಣೇಶ ಪ್ರಾಯ 27 ವರ್ಷ ತಂದೆ: ಶೀನ ವಾಸ: ಹೊರ್ಲಿಜಡ್ಡು ರಟ್ಟಾಡಿ ಗ್ರಾಮ  ಇವರು ಸ್ಥಳದಲ್ಲಿ ಬಿಟ್ಟು ಓಡಿದ ಯಾವುದೇ ಪರವಾನಿಗೆಯಿಲ್ಲದೆ ಮಾರಾಟ ಮಾಡುತ್ತಿದ್ದ  ಕಪ್ಪು ಬಣ್ಣದ ಪ್ಲಾಸ್ಟಿಕ್ ಚೀಲದಲ್ಲಿದ್ದ  90 Ml ನ Original Choice Deluxe Whisky Packet   ಎಂದು ಬರೆದ  50 ಸರಾಯಿ  ಪ್ಯಾಕೇಟುಗಳು  ( 4.500 ಲೀಟರ್  ಅಂದಾಜು ಮೌಲ್ಯ ರೂ 1756/)‌ ಮತ್ತು ಕಪ್ಪು ಬಣ್ಣದ ಪ್ಲಾಸ್ಟಿಕ್ ಬ್ಯಾಗನ್ನು ಮಹಜರು ಮುಖೇನ ಸ್ವಾಧಿನಪಡಿಸಿಕೊಂಡು ಆಪಾದಿತರ ವಿರುದ್ಧ  ಅಮಾಸೆಬೈಲು  ಪೊಲೀಸ್ ಠಾಣಾ ಅ.ಕ್ರ ನಂಬ್ರ 12-2023   ಕಲಂ 32,34  ಅಬಕಾರಿ ಕಾಯ್ದೆ   ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿ: ರೋಹಿತಾಕ್ಷ, ಪ್ರಾಯ: 44 ವರ್ಷ, ತಂದೆ: ನಾರಾಯಣ ಸಿ ಸಾಲ್ಯಾನ್, ವಾಸ: ಬೇಬಿ ಹೌಸ್, ನಡಿಪಟ್ಣ, ಸಾಗರ ವಿದ್ಯಾ ಮಂದಿರದ ಬಳಿ, ನಡ್ಸಾಲು ಗ್ರಾಮಇವರ ಚಿಕ್ಕಮ್ಮನ ಮಗ ರವಿಚಂದ್ರ (30) ಎಂಬುವರು ಮಂಗಳೂರು ಬೈಕಂಪಾಡಿಯ ಅರುಣ ಇಂಡಸ್ರ್ಟಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಪಿರ್ಯಾದಿದಾರರ ಜೊತೆ ವಾಸಿಸುತ್ತಾ, ತಿಂಗಳಿಗೆ 3-4 ಬಾರಿ ಅವರ ತಂದೆ-ತಾಯಿ ವಾಸವಿರುವ ನಡ್ಸಾಲು ಗ್ರಾಮ ಪಡುಬಿದ್ರಿ ನಡಿಪಟ್ಣದ ಹೊಸತೋಟ ಎಂಬಲ್ಲಿರುವ ಮನೆಗೆ ಹೋಗಿ ಅವರ ಆರೋಗ್ಯ ವಿಚಾರಿಸಿ, ಖರ್ಚಿಗೆ ಹಣ ನೀಡಿ ಬರುತ್ತಿದ್ದನು. ಸದ್ರಿ ರವಿಚಂದ್ರನು ಫಂಡ್‌‌ನಲ್ಲಿ ಸೇರಿದ್ದು, ತುಂಬಾ ಕೈಸಾಲ ಮಾಡಿಕೊಂಡಿದ್ದು, ಇದೇ ವಿಚಾರಕ್ಕೆ ನಿನ್ನೆ ದಿನ ದಿನಾಂಕ:21.04.2023 ರಂದು ರಾತ್ರಿ 20:30 ಗಂಟೆಗೆ ಪಡುಬಿದ್ರಿ ನಡಿಪಟ್ನ ನಿವಾಸಿ ಕಿರಣ ಹಾಗೂ ಅವಳ ಗಂಡ ಪ್ರತಾಪ್ ಎಂಬುವರು ಪಿರ್ಯಾದಿದಾರರ ಮನೆಗೆ ಬಂದು ಸಾಲದ ಹಣವನ್ನು ವಾಪಾಸ್ಸು ನೀಡುವಂತೆ ಒತ್ತಾಯಿರುತ್ತಾರೆ. ಸಾಲದ ವಿಚಾರದಲ್ಲಿ ರವಿಚಂದ್ರನು ಖಿನ್ನತೆಗೆ ಒಳಗಾಗಿ, ಯಾವುದೋ ವಿಚಾರದಲ್ಲಿ ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ನಿನ್ನೆ ದಿನ ದಿನಾಂಕ: 21.04.2023 ರಂದು ರಾತ್ರಿ 21:30 ಗಂಟೆಯ ವೇಳೆಗೆ ಪಿರ್ಯಾದಿದಾರರ ವಾಸದ ಮನೆಯ ಮೇಲ್ಛಾವಣಿಯ ಹಾಲ್‌‌ನ ಮೇಲಿನ ಮರದ ಜಂತಿಗೆ ಚೂಡಿದಾರದ ಶಾಲನ್ನು ಕಟ್ಟಿ, ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ.  ಯುಡಿಆರ್  ನಂಬ್ರ: 11/2023, ಕಲಂ: 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 23-04-2023 10:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080