ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಿರ್ವ: ಪಿರ್ಯಾದಿ: ರೀನಲ್‌ಮಿಷಲ್‌ಮಾರ್ಟಿಸ್‌(19)ತಂದೆ:ದಿ: ಬೊನಿಫಸ್‌ಮಾರ್ಟಿಸ್‌ ವಾಸ:ಮಾರ್ಟಿಸ್‌ವಿಲ್ಲಾ, ಬಂಟಕಲ್‌ಅಂಚೆಶಿರ್ವ  ಗ್ರಾಮ ಇವರು ದಿನಾಂಕ 22.04.2023  ರಂದು ತನ್ನ ತಾಯಿಯ ದ್ವಿಚಕ್ರ ವಾಹನ ನಂಬ್ರ KA70E 1080 ನೇದನ್ನು ಸವಾರಿ ಮಾಡಿಕೊಂಡು ಅಜ್ಜಿ  ಮನೆಯಿಂದ ಮನೆಗೆ ಹೊರಟು  ಶಂಕರಪುರದಿಂದ ಬಂಟಕಲ್‌ಕಡೆಗೆ ಸಾಗಿರುವ  ಸಾರ್ವಜನಿಕ  ಡಾಮಾರು  ರಸ್ತೆಯಲ್ಲಿ ಕುರ್ಕಾಲು  ಗ್ರಾಮದ  ಶಂಕರಪುರ ಶರೋನ್‌ಹೊಟೇಲ್‌ಬಳಿ ತಲುಪುವಾಗ  ರಾತ್ರಿ 8:20  ಗಂಟೆ ಸುಮಾರಿಗೆ  ತನ್ನ ಎದುರುಕಡೆಯಿಂದ  ಅಂದರೆ ಬಂಟಕಲ್‌ನಿಂದ ಶಂಕರಪುರ ಕಡೆಗೆ ಒಂದು ಬಿಳಿ ಬಣ್ಣದ   ಕಾರನ್ನು ಅದರ ಚಾಲಕ ಶಂಕರಪುರ ನಿವಾಸಿಯಾದ   ಚಾರ್ಲ್ಸ್ ಮೆಂಡೋನ್ಸಾ ರವರು  ಅತೀ ವೇಗ  ಹಾಗೂ ನಿರ್ಲಕ್ಷ್ಯತನದಿಂದ ತೀರಾ ಬಲಬದಿಗೆ ಚಲಾಯಿಸಿಕೊಂಡು ಬರುತ್ತಿರುವುದನ್ನು  ನೋಡಿ  ತಾನು  ಚಲಾಯಿಸುತ್ತಿದ್ದ ದ್ಚಿಚಕ್ರ  ವಾಹನವನ್ನು  ರಸ್ತೆ ಬದಿ  ನಿಲ್ಲಿಸಿರುತ್ತಾರೆ.  ಆದರೂ ಆತನು ಕಾರನ್ನು  ಅತೀ ವೇಗ ಮತ್ತು ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ತನ್ನ ನಿಲ್ಲಿಸಿದ ದ್ವಿಚಕ್ರ  ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ  ಎಡಕಾಲಿನ ಕೋಲು ಕಾಲಿಗೆ  ತರಚಿದ  ರಕ್ತಗಾಯವಾಗಿರುತ್ತದೆ. ಅಪಘಾತಪಡಿಸಿ ಕಾರನ್ನು  ಸ್ವಲ್ಪ ಮುಂದಕ್ಕೆ ಹೋಗಿ  ನಿಲ್ಲಿಸಿ  ಅಲ್ಲಿಂದ ಆತನು ಪಿರ್ಯಾದಿಯನ್ನು  ಉಪಚರಿಸದೆ ಕಾರಿನೊಂದಿಗೆ ಪರಾರಿಯಾಗಿರುತ್ತಾನೆ. ನಂತರ  ಪಿರ್ಯಾದಿದಾರರು ಚಿಕಿತ್ಸೆ  ಬಗ್ಗೆ  ಉಡುಪಿ ಆದರ್ಶ ಆಸ್ಪತ್ರೆಗೆ  ಹೋಗಿ ಹೊರ ರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ.ಪಿರ್ಯಾದಿದಾರರು  ನಿನ್ನೆ  ದಿನಾಂಕ:22.04.2023 ರಂದು  ಆಸ್ಪತ್ರೆಗೆ  ಹೋಗಿ  ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆದು ಈ  ದಿನ ಠಾಣೆಗೆ  ಬಂದು ಈ ದೂರನ್ನು  ನೀಡಿರುವುದಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ  ಅಪರಾಧ ಕ್ರಮಾಂಕ 36/23, ಕಲಂ 279,337 IPC 134(A)(B) IMV ACT ರಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಫ್ರಕರಣ

  • ಬ್ರಹ್ಮಾವರ: ದಿನಾಂಕ: 12.04.2023 ರಂದು ಪಿರ್ಯಾದಿ: ಮಧುಶ್ರೀ (39) ಗಂಡ: ದಿ: ಜಗದೀಶ್‌ ರಾವ್‌ ವಾಸ: 1/79, ಇಂದಿರಾ ನಿಲಯ ಮಸ್ಕಿಬೈಲು,  ಬಾರ್ಕೂರು ಅಂಚೆ, ಹೇರಾಡಿ ಗ್ರಾಮ ಇವರು ಮಕ್ಕಳಿಗೆ ಶಾಲೆಗೆ ರಜೆ ಇದ್ದ ಕಾರಣ ಬ್ರಹ್ಮಾವರ ತಾಲೂಕು ಹೇರಾಡಿ ಗ್ರಾಮದ ಬಾರ್ಕೂರು ಮಸ್ಕಿಬೈಲುನಲ್ಲಿರುವ  ಮನೆಗೆ  ಬೀಗ ಹಾಕಿ ಗೋವಾಕ್ಕೆ ತೆರಳಿದ್ದು, ಫಿರ್ಯಾದಿದಾರರ ಮನೆಯನ್ನು ಗುರುಪ್ರಸಾದ ಎಂಬವರಿಗೆ ನೋಡಿಕೊಳ್ಳುವಂತೆ ತಿಳಿಸಿರುತ್ತಾರೆ. ಅದರಂತೆ ಗುರುಪ್ರಸಾದ ರವರು ಪ್ರತಿ ದಿನ 6.00 ಗಂಟೆಗೆ ಬಂದು ಮನೆಯ ಹಾಲ್‌ ನ ಮೋಟಾರ್‌ ಆನ್‌ ಮಾಡಿ ತೋಟಕ್ಕೆ ನೀರು ಬಿಟ್ಟು ಹೋಗುತ್ತಿದ್ದು, ದಿನಾಂಕ: 22.04.2023 ರಂದು ಸಂಜೆ 6.46 ಗಂಟೆ ಸಮಯಕ್ಕೆ ಗುರುಪ್ರಸಾದ ಫಿರ್ಯಾದಿದಾರರಿಗೆ ಕರೆ ಮಾಡಿ ಮನೆಯ ಬಾಗಿಲು ತೆರೆದಿದ್ದು ಕಳ್ಳತನ ಆದಂತೆ ತೋರುತ್ತಿರುವ ಬಗ್ಗೆ ತಿಳಿಸಿದಂತೆ ಫಿರ್ಯಾದಿದಾರರು ದಿನಾಂಕ: 23.04.2023 ರಂದು ಬೆಳಿಗ್ಗೆ ಬಂದು ನೋಡಿದಾಗ ಯಾರೋ ಕಳ್ಳರು ಪ್ರವೇಶ ದ್ವಾರದ ಲಾಕರ್‌ ಸ್ಕ್ರೂ ಕಳಚಿ ಒಳಗೆ ಪ್ರವೇಶಿಸಿ,  ಹಾಲ್‌ ನ ಪಕ್ಕದ ಬೆಡ್‌ ರೂಂನಲ್ಲಿದ್ದ ಬೀರುವಿನ ಬಾಗಿಲನ್ನು ಯಾವುದೋ ಆಯುಧದಿಂದ ಮೀಟಿ ತೆಗೆದು ಅದರೊಳಗೆ ಇಟ್ಟಿದ್ದ ತಲಾ 4 ಗ್ರಾಂ ತೂಕದ 1 ಜೊತೆ ಕಿವಿಯೋಲೆ, ತಲಾ 3 ಗ್ರಾಂ ತೂಕದ 1 ಜೊತೆ ಕಿವಿಯೋಲೆ, ಡೈಮಂಡ್‌ ಕಿವಿಯೋಲೆ 1 ಜೊತೆ – 1.68 ಗ್ರಾಂ, 9 ಗ್ರಾಂ ತೂಕದ ಚಿನ್ನದ ಗಟ್ಟಿ, 12 ಗ್ರಾಂ ತೂಕದ ಚಿನ್ನದ ಗಟ್ಟಿ, 2 ಗ್ರಾಂ ತೂಕದ 1 ಚಿನ್ನದ ಪೆಂಡೆಂಟ್‌, 3 ಗ್ರಾಂ ತೂಕದ ಒಂದು ಜೊತೆ ಚಿನ್ನದ ಮಾಟಿ, 5 ಗ್ರಾಂ ಹಳೆಯ ತುಂಡಾದ ಚಿನ್ನಾಭರಣಗಳು  ಮತ್ತು ಬೆಳ್ಳಿಯ ಆಭರಣಗಳಾದ ಬೆಳ್ಳಿಯ ಕರಿಮಣಿ 20 ಗ್ರಾಂ, ಬೆಳ್ಳಿಯ ಚೈನ್‌ 30 ಗ್ರಾಮ ನಗದು ರೂ. 8,000/- ಕಳವು ಮಾಡಿದ್ದಲ್ಲದೇ ಮನೆಯ ದೇವರ ಕೋಣೆಯ ಪಕ್ಕದ ರೂಂನಲ್ಲಿದ್ದ ಬೀರುವಿನ ಬಾಗಿಲನ್ನು ಕೆಳಗಿನಿಂದ ಯಾವುದೋ ಆಯುಧದಿಂದ ಮೀಟಿ ತೆಗೆದು ಅದರಲ್ಲಿ ಇದ್ದ ಬೆಳ್ಳಿಯ ಕೌಳಿಕೆಗಳು, ಸೌಟುಗಳು, ಹರಿವಾಣಗಳು, ತಂಬಿಗೆ, ಬೆಳ್ಳಿಯ ಉಡಿದಾರ, ಗೆಜ್ಜೆಗಳು, ಮಕ್ಕಳ ದೃಷ್ಟಿ ಮಣಿಸರ, ಸ್ಪಟಿಕದ ಸರ, ಬ್ರಾಸ್‌ಲೈಟ್‌ ಹಾಗೂ ಬೆಳ್ಳಿಯ 20 ಕಾಯಿನ್‌ ಹೀಗೆ 1 ಕೆ.ಜಿ ಯಷ್ಟು ಬೆಳ್ಳಿ ಸಾಮಾಗ್ರಿಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ ಕಳುವಾದ ಒಟ್ಟು ಚಿನ್ನಾಭರಣ 46.68 ಗ್ರಾಂ ಆಗಿದ್ದು ಅಂದಾಜು ಮೌಲ್ಯ 1,80,000/- ರೂ ಆಗಿರುತ್ತದೆ. 1 ಕೆ.ಜಿ ಬೆಳ್ಳಿಯ ಅಂದಾಜು ಮೌಲ್ಯ 35,000 ಆಗಿರುತ್ತದೆ. ಒಟ್ಟು ಕಳುವಾದ ಸ್ವತ್ತಿನ ಅಂದಾಜು ಮೌಲ್ಯ 2,23,000/- ಅಗಿರುತ್ತದೆ. ಈ ಬಗ್ಗೆ  ಬ್ರಹ್ಮಾವರ ಠಾಣೆ  ಅಪರಾಧ ಕ್ರಮಾಂಕ  83/2023 ಕಲಂ : 454, 457, 380 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಹಿರಿಯಡ್ಕ: ಪಿರ್ಯಾದಿ: ರಿತೇಶ್ ಪ್ರವೀಣ್ ಕುಮಾರ್ ಸೋನ್ಸ್,  ಪ್ರಾಯ: 36 ವರ್ಷ, ತಂದೆ: ಹರೀಶ್  ಸೋನ್ಸ್,  ವಿಳಾಸ: ಮನೋಜ್ ಹೆಗ್ಡೆರವರ ಬಾಡಿಗೆ ಮನೆ, ಭೂಮಿಕಾ ಹೌಸ್, ಓಂತಿಬೆಟ್ಟು, ಅಂಜಾರು ಗ್ರಾಮ ಇವರು  ಮನೆಯ ಎದುರು ರಸ್ತೆ ಬದಿ ನಿಲ್ಲಿಸಿದ್ದ  KA20 AA 2128  ನೇ ನೋಂದಣಿ ನಂಬರ್‌ನ   Force ಕಂಪೆನಿಯ  ಗೂಡ್ಸ್  ಟ್ರಾವೆಲರ್‌ ವಾಹನವನ್ನು  ಯಾರೋ ಕಳ್ಳರು  ನಿನ್ನೆ  ದಿನಾಂಕ 22/04/2023  ರಂದು 22:00 ಗಂಟೆಯಿಂದ ದಿನಾಂಕ 23/04/2023 ರಂದು  ಮುಂಜಾನೆ 1:10 ಗಂಟೆಯ  ಮಧ್ಯಾವಧಿಯಲ್ಲಿ  ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.  ಕಳ್ಳತನಾದ ವಾಹನದ ಅಂದಾಜು ಮೌಲ್ಯ  2,40,000/-ರೂಪಾಯಿ ಆಗಬಹುದು. ಈ ಬಗ್ಗೆ   ಹಿರಿಯಡ್ಕ ಪೊಲೀಸ್‌ಠಾಣೆ. ಅಪರಾಧ ಕ್ರಮಾಂಕ  29/2023    ಕಲಂ:  379 IPCಯಂತೆ ಪ್ರಕರಣ ದಾಖಲಿಸಲಾಗಿದೆ. 

ಹಲ್ಲೆ ಪ್ರಕರಣ

  • ಉಡುಪಿ: ಪಿರ್ಯಾದಿ: ‌ಸಹೇಜ್ ಎ.ಎಸ್  ಪ್ರಾಯ:25 ವರ್ಷ ತಂದೆ:ಸಂತೋಶ್ ಕುಮಾರ್  ವಾಸ: ಅಂಬಿಕಾ ನಿವಾಸ ಹೆರ್ಮುಂಡೆ ರಸ್ತೆ, ಮರ್ಣೆ ಇವರು KA20AA8755 ನೇ ಎಸ್‌ಎಂಎಂಎಸ್‌ ಖಾಸಗಿ ಬಸ್ಸಿನಲ್ಲಿ ಕಂಡೆಕ್ಟರ್‌ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 22/04/2023 ರಂದು ಎಂದಿನಂತೆ ಕೊನೆಯ ಟ್ರಿಪ್‌ ಉಡುಪಿಯಿಂದ ಅಜೆಕಾರಿಗೆ 17:00 ಗಂಟೆಗೆ ಉಡುಪಿ ಬಸ್‌ ನಿಲ್ದಾಣದಿಂದ ಹೊರಟು, ಸಂತೆಕಟ್ಟೆ ತಲುಪುವಾಗ, 5 ಜನ ಆಪಾದಿತರು ಸಮಾನ ಉದ್ದೇಶದಿಂದ ಒಂದು ಬಿಳಿ ಬಣ್ಣದ ಬೊಲೆರೊ ವಾಹನ ನಂಬ್ರ: KA19MA6372 ನೇದರಲ್ಲಿ 17:35 ಗಂಟೆಗೆ ಬಂದು, ಸಂತೆಕಟ್ಟೆ ಪೋರ್ಸ್‌ ಶೋ ರೂಮ್‌ ಬಳಿ ಪಿರ್ಯಾದುದಾರರು ಕೆಲಸ ಮಾಡುವ ಬಸ್ಸಿಗೆ ತಮ್ಮ ವಾಹನವನ್ನು ಅಡ್ಡ ಇಟ್ಟು, ಎಲ್ಲರೂ ಇಳಿದು ಬಂದು, ʼನಿಮ್ಮ ಚಾಲಕನಿಗೆ ಏನು ಸೈಡ್‌ ಕೊಡಲು ಆಗುವುದಿಲ್ಲವಾʼ ಎಂದು ಹೇಳಿ 5 ಜನರು ಸೇರಿ ಪಿರ್ಯಾದುದಾರರಿಗೆ ಕೈಯಿಂದ ಕೆನ್ನೆಗೆ, ತಲೆಗೆ, ಬಿನ್ನಿಗೆ ಹೊಡೆದು, ಕಾಲಿನಿಂದ ತುಳಿದಿದ್ದು, ಮಕ್ಕಳೇ, ನಿಮ್ಮನ್ನು ಕೊಲ್ಲದೆ ಬಿಡುವುದಿಲ್ಲʼ ಎಂದು ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ . ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  57/2023  ಕಲಂ: 143, 147, 341, 323, 504, 506 ಜೊತೆಗೆ 149 IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣಗಳು

  • ಮಲ್ಪೆ: ಪಿರ್ಯಾದಿ: ಮಹೇಶ(29) ತಂದೆ: ವಿಠ್ಠಲ್‌ ಪೂಜಾರಿ ವಾಸ: ಶ್ರೀ ವಾಸುಕೀ  ,ಪಾವಂಜಿಗುಟ್ಟೆ,ಬಡನಿಡಿಯೂರು ಈವರ ಭಾವ  ಸತೀಶ ಬಿ (46 ವರ್ಷ) ಮಲ್ಪೆಯಲ್ಲಿ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದು ಪ್ರತಿದಿನ ಬೆಳಿಗ್ಗೆ 6:00 ಗಂಟೆಗೆ  ಅಂಗಡಿಗೆ ಹೋಗಿ  ರಾತ್ರಿ 9:00 ಗಂಟೆಗೆ ಮನೆಗೆ ಬರುತ್ತಿದ್ದರು , ಎಂದಿನಂತೆ ದಿನಾಂಕ: 22-04-2023 ರಂದು ಅಂಗಡಿಗೆ ಹೋಗಿ ರಾತ್ರಿ  9:00 ಗಂಟೆಗೆ  ಬಂದು ಸ್ನಾನ ಮಾಡಲು ಹೋದವರು  ಕುಸಿದು ಬಿದ್ದು ತ್ರೀವ್ರ ಅಸ್ವಸ್ಥಗೊಂಡವರನ್ನು  ಉಪಚರಿಸಿ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಂಸಿ  ಆಸ್ಪತ್ರೆಗೆ ಕರೆದುಕೊಂಡು  ಹೋಗಿದ್ದು ಅಲ್ಲಿ ಪರೀಕ್ಷಿಸಿದ ವೈದ್ಯರು  ಸಮಯ ಸುಮಾರು 11:32 ಗಂಟೆಗೆ  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣಾ ಯು.ಡಿ.ಆರ್ ನಂಬ್ರ 22-2023 ,ಕಲಂ 174 crpc ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 23-04-2023 06:29 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080