ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

 • ಕೋಟ: ಫಿರ್ಯಾದಿ ದಿನೇಶ್‌ ಆಚಾರ್‌  ಇವರು ದಿನಾಂಕ: 21.04.2022 ರಂದು ಮಧ್ಯಾಹ್ನ ಸಮಯ ಕಾರ್ಯಕ್ರಮ ಮುಗಿಸಿಕೊಂಡು ತಮ್ಮ ಕಾರಿನಲ್ಲಿ ರಾ.ಹೆ. 66 ರ ಉಡುಪಿ-ಕುಂದಾಪುರ ಮುಖ್ಯರಸ್ತೆಯಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ಹೋಗುತ್ತಿದ್ದು, ಆಗ ಅವರ ಮುಂದಿನಿಂದ ರಸ್ತೆಯಲ್ಲಿ ಫಿರ್ಯಾದುದಾರರ ಮಾವ ಚಂದ್ರ ಆಚಾರ್ ಎಂಬವರು ಕೂಡಾ ಕಾರ್ಯಕ್ರಮ ಮುಗಿಸಿ ಅವರ ಬಾಬ್ತು ನಂ: KA 20 EU 8620 ನೇ ಸ್ಕೂಟಿಯಲ್ಲಿ ಹೋಗುತ್ತಿದ್ದು, ಅವರು ಮಧ್ಯಾಹ್ನ 2:45 ಗಂಟೆಗೆ ಸಾಸ್ತಾನ ಶಿವಕೃಪಾ ಕಲ್ಯಾಣ ಮಂಟಪದ ಎದುರು ಹೋಗುವಾಗ ಅವರ ಹಿಂದಿನಿಂದ ಅಂದರೆ ರಾ.ಹೆ. 66 ರಲ್ಲಿ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ ನಂ: KA 04 MG 1831 ನೇ ಕಾರನ್ನು ಅದರ ಚಾಲಕ ಅಚ್ಯುತ್‌ ಎಂಬಾತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಫಿರ್ಯಾದುದಾರರ ಕಾರನ್ನು ಓವರ್‌ಟೇಕ್ ಮಾಡಿಕೊಂಡು ಬಂದು ಚಂದ್ರ ಆಚಾರ್ ರವರು ಸವಾರಿ ಮಾಡಿಕೊಂಡಿದ್ದ ಸ್ಕೂಟಿಗೆ ಹಿಂದಿನಿಂದ ಢಿಕ್ಕಿ ಹೊಡೆದನು. ಅಪಘಾತದಲ್ಲಿ ಚಂದ್ರ ಆಚಾರ್ ರವರು ಸ್ಕೂಟಿ ಸಮೇತ ರಸ್ತೆಗೆ ಬಿದ್ದಿದ್ದು ಪರಿಣಾಮ ಅವರ ಮೈಕೈಗೆ ತರಚಿದ ಗಾಯಗಳು ಹಾಗೂ ಬೆನ್ನಿಗೆ ಒಳಜಖಂ ಆಗಿರುತ್ತದೆ. ಕೂಡಲೇ ಅವರನ್ನು ಚಿಕಿತ್ಸೆಯ ಬ್ರಹ್ಮಾವರದ ಮಹೇಶ್ ಆಸ್ಪತ್ರೆಗೂ ಹಾಗೂ ಆ ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲು ಮಾಡಿರುತ್ತಾರೆ. ಈ ಅಪಘಾತಕ್ಕೆ ಚಾಲಕ ಅಚ್ಯುತ್‌ ಎಂಬಾತನ ಅತೀವೇಗ ಹಾಗೂ ಅಜಾಗರೂಕತೆಯ ಕಾರು ಚಾಲನೆಯೇ ಕಾರಣವಾಗಿರುತ್ತದೆ.. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 55/2022  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ದಿನಾಂಕ: 20.04.2022 ರಂದು ಪಿರ್ಯಾದಿ ವಿಖ್ಯಾತ್‌ ಶೆಟ್ಟಿ ಇವರು ಅವರ ಬಾಬ್ತು ಮೋಟಾರ್ ಸೈಕಲ್ನಲ್ಲಿ ಹಿರಿಯಡ್ಕ ಕಣಜಾರಿನಿಂದ ನಡೂರಿಗೆ ಹೊರಟು ಉಡುಪಿ -ಕುಂದಾಪುರ  ರಾಹೆ 66 ರಲ್ಲಿ ಬರುತ್ತಾ ದಿನಾಂಕ: 21.04.2022 ರಂದು ಮಧ್ಯಾರಾತ್ರಿ  00:30 ಗಂಟೆಗೆ  ಉಪ್ಪೂರು ಗ್ರಾಮದ ಸಂತೆಕಟ್ಟೆ ಸೇತುವೆಯ ಮೇಲೆ ತಲುಪುವಾಗ ಸಂತೋಷ್ ಶೆಟ್ಟಿ ರವರು ರಸ್ತೆಯ ಮೇಲೆ ಹೊರಳಾಡುತ್ತಿದ್ದು ಅವರ ತಲೆಗೆ ಪೆಟ್ಟಾಗಿ ತೀವ್ರ ರಕ್ತ ಸ್ರಾವವಾಗುತ್ತಿರುವುದನ್ನು ನೋಡಿ ಉಪಚರಿಸಿದ್ದು ಆಗ ಅವರು ಮಾತನಾಡುತ್ತಿರಲಿಲ್ಲ. ಅವರ ಪಕ್ಕದ್ದಲ್ಲಿ KA.20.ER.1765 ನೇ ಸ್ಕೂಟರ್  ಬಿದ್ದುಕೊಂಡಿರುವುದನ್ನು ಪಿರ್ಯಾದಿದಾರರು ನೋಡಿ ಸಂತೋಷ್ ಶೆಟ್ಟಿ ರವರನ್ನು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದು, ವೈಧ್ಯರು ಚಿಕಿತ್ಸೆ ನೀಡಿ ಅವರ ಸಲಹೆ ಮೇರೆಗೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಗೆ ದಾಖಲಿಸಿ ಪ್ರಸ್ತುತ ಐಸಿಯುನಲ್ಲಿ ಚಿಕಿತ್ಸೆಯಲ್ಲಿರುವುದಾಗಿದೆ. ಸಂತೋಷ್ ಶೆಟ್ಟಿ ರವರು  KA.20.ER.1765 ನೇ ಸ್ಕೂಟರ್ನ್ನು ಸವಾರಿ ಮಾಡಿಕೊಂಡು ಬರುತ್ತಾ  ಸಂತೆಕಟ್ಟೆ ಸೇತುವೆಯ ಮೇಲೆ ನಿಯಂತ್ರಣ ತಪ್ಪಿ ಸ್ಕೀಡ್ ಆಗಿ ಬಿದ್ದು ಸೇತುವೆಯ ಅಂಚು ತಲೆಗೆ ತಾಗಿ  ತೀವ್ರ ಪೆಟ್ಟಾಗಿರಬಹುದಾಗಿದೆ ಎಂಬಿತ್ಯಾದಿ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 70/2022 ಕಲಂ 279, 338    ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಅಜೆಕಾರು: ದಿನಾಂಕ: 22/04/2022 ರಂದು 11:45 ಗಂಟೆಗೆ ಆಪಾದಿತ ರಿಟ್ಜ್ ಕಾರು ನಂ. KA19MD3035 ನೇಯದರ ಚಾಲಕ ರಾಘವೇಂದ್ರ ನಾಯ್ಕ್ ಎಂಬಾತನು ಅಂಡಾರು ಕಡೆಯಿಂದ ಅಜೆಕಾರು ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಕಾರ್ಕಳ ತಾಲೂಕು ಮರ್ಣೆ ಗ್ರಾಮದ ಹೆರ್ಮುಂಡೆ ಕ್ರಾಸ್ ಬಳಿ ಶರಣ್ಯ ಅಲ್ಯುಮೀನಿಯಂ ವರ್ಕ್ಸ್ ಎದುರುಗಡೆ ರಸ್ತೆ ಬಳಿ ಮೋಟಾರು ಸೈಕಲ್ ನಂ: KA-20-EK-8405 ನೇಯದಕ್ಕೆ ಕಾರು ತೀರಾ ಬಲಬದಿಗೆ ಹೋಗಿ ಢಿಕ್ಕಿ ಹೊಡೆದ ಪರಿಣಾಮ ಮೋಟಾರು ಸೈಕಲ್ ಸವಾರ ಎಡ್ವಿನ್ ಗ್ಲಾಡಿಸನ್ ಪಿಂಟೋ ಎಂಬವರು ರಸ್ತೆಗೆ ಬಿದ್ದು ಗಾಯಗೊಂಡವರನ್ನು 108 ಆಂಬುಲೆನ್ಸ್‌ ನಲ್ಲಿ ಕಾರ್ಕಳ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಅಜ್ಜರಕಾಡು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಎಡ್ವಿನ್ ಗ್ಲಾಡಿಸನ್ ಪಿಂಟೋ  ರವರು ಸಂಜೆ ಸುಮಾರು 4:15 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 14/2021  ಕಲಂ 279, 304 (A) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಪಡುಬಿದ್ರಿ: ಪಿರ್ಯಾದಿ ಮಹಮ್ಮದ್ ಜಾಸೀಮ್ ಇವರ ಮಾವನಾದ  ಕಲಂದರ್ ರಫೀಕ್ ರವರು ದಿನಾಂಕ 22.04.2022 ರಂದು ಮದ್ಯಾಹ್ನ 1.15 ಗಂಟೆಗೆ  ನಮಾಜ್ ಮುಗಿಸಿ ಎರ್ಮಾಳಿನಿಂದ ಪಡುಬಿದ್ರಿಗೆ ತನ್ನ ಬಾಬ್ತು KA-20-ET-6705  ಮೋಟಾರ್ ಸೈಕಲಿನಲ್ಲಿ  ಉಡುಪಿ-ಮಂಗಳೂರು ಎನ್.ಎಚ್-66 ರಲ್ಲಿ ಸವಾರಿ ಮಾಡಿಕೊಂಡು ಹೋಗುತ್ತಾ ಸಮಯ ಸುಮಾರು ಮದ್ಯಾಹ್ನ 1.30 ಗಂಟೆಗೆ  ಕಾಪು ತಾಲೂಕು ತೆಂಕ ಎರ್ಮಾಳ್ ಗ್ರಾಮದ ನಾರಾಳ್ತಾಯ ಗುಡಿ ಬಳಿ ತಲುಪುವಾಗ ಅದೇ ರಸ್ತೆಯಲ್ಲಿ ಉಡುಪಿಯಿಂದ ಮಂಗಳೂರು ಕಡೆಗೆ KA-20-D-3205  ಟೇಂಪೋ ಚಾಲಕ ಸುಶಾಯಿ ಎಂಬುವವನು ಟೇಂಪೋವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು  ಕಲಂದರ್ ರಫೀಕ್ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20-ET-6705  ನೇ ಮೋಟಾರ್ ಸೈಕಲಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಕಲಂದರ್ ರಫೀಕ್ ರವರು ಬೈಕ್ ಸಮೇತ ರಸ್ತೆಯ ಎಡ ಬದಿಯ ಮಣ್ಣು ರಸ್ತೆಗೆ ಎಸೆಯಲ್ಪಟ್ಟು ಎರಡು ಕೈ ಕಾಲುಗಳಿಗೆ,ತಲೆಗೆ ಗಂಭೀರ ಗಾಯಗೊಂಡು ಮಂಗಳೂರಿನ ಯೂನಿಟಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ಚಿಕಿತ್ಸೆಯಲ್ಲಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 47/2021  ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತರ ಪ್ರಕರಣ

 • ಕುಂದಾಪುರ: ಪ್ರಕರಣದ ಸಾರಾಂಶವೇನೆಂದರೆ, ಪಿರ್ಯಾದಿ ಡಾ ರವೀಂದ್ರ ಇವರು ವೈದ್ಯರಾಗಿದ್ದು, ತಲ್ಲೂರಿನಲ್ಲಿ ಅಶ್ವಿನಿ ಹೆಸರಿನ ಕ್ಲಿನಿಕ್ ನಲ್ಲಿ ವೈದ್ಯರಾಗಿರುವುದಾಗಿದೆ. ಹೀಗಿರುತ್ತಾ ದಿನಾಂಕ 17-02-2022  ರಂದು 11:30 ರಂದು ಆಪಾದಿತ 1) ಕಿರಣ ಪೂಜಾರಿ2) ಪುರುಷೋತ್ತಮ 3) ದಾಮೋದರ ಗುಜ್ಜಾಡಿ ಇವರುಗಳು ಸಮಾನ ಉದ್ದೇಶದಿಂದ ಪಿರ್ಯಾದುದಾರರ ಅಶ್ವಿನಿ ಕ್ಲಿನಿಕ್ ಗೆ ಅಕ್ರಮಪ್ರವೇಶ ಮಾಡಿ, ಪಿರ್ಯಾದುದಾರರನ್ನು ಉದ್ದೇಶಿಸಿ ನೀನು ನಕಲಿ ವೈದ್ಯ, ಎಂಬಿತ್ಯಾದಿಯಾಗಿ ಅವಾಚ್ಯವಾಗಿ ಬೈದು ನಿನ್ನನ್ನು ನೋಡಿಕೊಳ್ಳುವುದಾಗಿ ಜೀವ ಬೆದರಿಕೆ ಹಾಕಿ ಪಿರ್ಯಾದುದಾರರ ವೈದ್ಯಕೀಯ ವೃತ್ತಿಗೆ  ಅಡ್ಡಿಪಡಿಸಿರುವುದಾಗಿದೆ.  ಅಲ್ಲದೇ ದಿನಾಂಕ 19-04-2022 ರಂದು  ಆಪಾದಿತ ಕಿರಣ್ ಪೂಜಾರಿಯು ಪಿರ್ಯಾದುದಾರರ ಹಾಗೂ ಅವರ ಪತ್ನಿಯ ವೃತ್ತಿ ಜೀವನಕ್ಕೆ ಧಕ್ಕೆ ಬರುವ ರೀತಿಯಲ್ಲಿ ಸಾರ್ವಜನಿಕವಾಗಿ ಅಪ ಪ್ರಚಾರ ನಡೆಸಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 47-2022 U/S 447, 504, 506, RW 34  IPC, And U/S 3,4 KARNATAKA PROHIBITION OF VIOLENCE AGAINST MEDICARE SERVICE PERSONNEL AND DAMAGE TO PROPERTY IN MEDICARE SERVICE INSTITUTIONS ACT , 2009 ನಂತೆ  ಪ್ರಕರಣ ದಾಖಲಾಗಿರುತ್ತದೆ.
 • ಉಡುಪಿ: ಪಿರ್ಯಾದಿ ಶ್ರೀಮತಿ ಐ ಮೋಹಿನಿ ಇವರು ಪರಿಶಿಷ್ಟ ಜಾತಿಯವರಾಗಿದ್ದು, ಮಣಿಪಾಲದ ಮಂಚಿಕುಮೆರಿ ವಾಸಿಯಾಗಿರುವ ಆಪಾದಿತ ಗಣೇಶ್ ಶೆಟ್ಟಿಗಾರ್  ರವರನ್ನು ದಿನಾಂಕ:12/09/2017 ರಂದು ವಿವಾಹವಾಗಿರುತ್ತಾರೆ. ನಂತರ ಆಪಾದಿತನು  ಪಿರ್ಯಾದಿದಾರರಿಗೆ ಮಾನಸಿಕ ಹಾಗೂ ದೈಹಿಕ ಕಿರುಕುಳವನ್ನು ನೀಡುತ್ತಿದ್ದು ದಿನಾಂಕ:15/04/2022 ರಂದು ಆತನ ಮನೆಗೆ ಹೋದವನು  ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡು ವಾಪಾಸು ಬಂದಿರುವುದಿಲ್ಲ. ಎಂಬಿತ್ಯಾದಿ. ಈ ಬಗ್ಗೆ ಮಹಿಳಾ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 32/2022 ಕಲಂ: 498(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಇತ್ತೀಚಿನ ನವೀಕರಣ​ : 23-04-2022 10:26 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080