ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕಾಪು: ಪಿರ್ಯಾದಿದಾರರಾಧ ರಕ್ಷಿತ್ (21) ತಂದೆ: ರಮೇಶ್ ಮೆಂಡನ್ ವಾಸ: ನಾಗರತ್ನ ಬೀಡುಬದಿ ಅನ್ನಪೂರ್ಣೇಶ್ವರಿ ದೇವಸ್ಥಾನದ ಬಳಿ ಕಾಪು ಇವರ ತಂದೆ ರಮೇಶ್ ಮೆಂಡನ್ (49) ರವರು ಸುರತ್ಕಲ್‌‌ನಲ್ಲಿ ಡಬ್ಲ್ಯೂ ಎಚ್‌ಓ ದಲ್ಲಿ ಡ್ರೈವರ್ ಕೆಲಸ ಮಾಡಿಕೊಂಡಿರುತ್ತಾರೆ. ಅವರಿಗೆ ಕೆಲವು ವರ್ಷಗಳಿಂದ ಅಸ್ತಮಾ ಖಾಯಿಲೆ ಇದ್ದು ಅಲ್ಲದೇ ಸುಮಾರು ಏಳು ವರ್ಷಗಳಿಂದ ಹೃದಯಕ್ಕೆ ಸಂಬಂಧಪಟ್ಟಂತೆ ಶಸ್ತ್ರಚಿಕಿತ್ಸೆ ಆಗಿರುತ್ತದೆ. ಈ ಬಗ್ಗೆ ಔಷಧಿ ಪಡೆಯುತ್ತಿದ್ದರು. ರಮೇಶ್ ಮೆಂಡನ್‌ರವರು ದಿನಾಂಕ 22/04/2022 ರಂದು ರಾತ್ರಿ 10:30 ಗಂಟೆಗೆ ಊಟಮಾಡಿ ಮನೆಯಲ್ಲಿ ಮಲಗಿದ್ದು ದಿನಾಂಕ 23/04/2022 ರಂದು 02:40 ಗಂಟೆಗೆ ರಮೇಶ್ ಮೆಂಡನ್ ರವರಿಗೆ ಅಸ್ತಮಾ ಖಾಯಿಲೆ ಜಾಸ್ತಿಯಾಗಿ ಉಸಿರಾಟದ ತೊಂದರೆ ಉಂಟಾಗಿದ್ದು  ಇವರನ್ನು ಉಡುಪಿ ಟಿಎಂಎ ಪೈ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಅಲ್ಲಿಯ ವೈದ್ಯರು 04:00 ಗಂಟೆಗೆ ಪರೀಕ್ಷಿಸಿ ರಮೇಶ್ ಮೆಂಡನ್‌ರವರು ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ರಮೇಶ್ ಮೆಂಡನ್‌ರವರು ತನಗಿದ್ದ ಖಾಯಿಲೆ ಉಲ್ಬಣಗೊಂಡು ಮೃತಪಟ್ಟಿರುವ ಸಾಧ್ಯತೆ ಇದ್ದು ಅವರ ಮರಣದಲ್ಲಿ ಬೇರೆ ಯಾವುದೇ ಸಂಶಯವಿರುವುದಿಲ್ಲವಾಗಿದೆ. ಈ ಬಗ್ಗೆ ಕಾಫು ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 10/2022 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಶಮನ್‌ ವಿ ಕೋಟ್ಯಾನ್‌ (37) ತಂದೆ:ವಾಸು ಕೋಟ್ಯಾನ್‌ ವಿಳಾಸ ಆರ್ ಎನ್.‌  ನಿಲಯ ಕನ್ನಂಗಾರು ಪಡುಬಿದ್ರೆ ಕಾಪು ಇವರು ಮೂಡಬೆಟ್ಟು ಗ್ರಾಮದ ರಾಷ್ಟ್ರೀಯ ಹೆದ್ದಾರಿ 66 ಉಡುಪಿ-ಮಂಗಳೂರು ರಸ್ತೆಯ ಪಕ್ಕದಲ್ಲಿ ತನ್ನ ಭಾವ ಪದ್ಮನಾಭ ಪೂಜಾರಿಯವರೊಂದಿಗೆ “ಶ್ರೀ ಬಾಲಾಜಿ ಮೋಟಾರ್ಸ್” ಹೆಸರಿನ ಗ್ಯಾರೇಜ್ ನೆಡೆಸಿಕೊಂಡಿದ್ದು ದಿನಾಂಕ 16/04/2022 ರಂದು ಗ್ಯಾರೇಜಿನಲ್ಲಿ ಕೆಲಸ ಮಾಡುತ್ತಿರುವಾಗ ಹೆವಿ ಜಾಕ್ ಹುಡುಕಿದ್ದು ಸಿಗದೇ ಇದ್ದ ಕಾರಣ ಹುಡುಕಾಡಿದಾಗ ಗ್ಯಾರೇಜ್ನಲ್ಲಿ ಇರಿಸಿದ್ದ ವಾಹನದ ಬಿಡಿಭಾಗಗಳು ಇಲ್ಲದೇ ಇದ್ದು ಸಿಸಿ ಕ್ಯಾಮರವನ್ನು ಪರಿಶೀಲಿಸಿದಾಗ ದಿನಾಂಕ 12/04/2022 ರಂದು ರಾತ್ರಿ 10:18 ಗಂಟೆಯಿಂದ 11:10 ಗಂಟೆಯ ನಡುವೆ ಇಬ್ಬರು ಅಪರಿಚಿತ ಯುವಕರು ರಸ್ತೆ ಬದಿಯ ಕಂಪೌಂಡ್ ಮೇಲೆ ಅಳವಡಿಸಿದ್ದ ತಗಡು ಶೀಟನ್ನು ಕಳಚಿ ಗ್ಯಾರೇಜ್ ಒಳಗೆ ಪ್ರವೇಶೀಸಿ ಗ್ಯಾರೇಜ್ ನಲ್ಲಿದ್ದ  ವಾಹನಗಳ ವಿವಿಧ ಭಾಗಗಳ ಸ್ವತ್ತುಗಳನ್ನು ಹಾಗು ವಾಟರ್ ಪಂಪ್ ಒಂದನ್ನು ಕಳವು ಮಾಡಿಕೊಂಡು ಹೋಗಿರುವುದು ಕಂಡು ಬಂದಿದ್ದು ಸದ್ರಿ ಕಳುವಾದ ಸ್ವತ್ತುಗಳ ಒಟ್ಟು ಅಂದಾಜು ಮೌಲ್ಯ 1,47,900/- ಆಗಿರುತ್ತದೆ. ಕಳವಾದ ಸೊತ್ತುಗಳನ್ನು ಪರಿಶೀಲಿಸಿ ದೂರು ನೀಡಲು ವಿಳಂಭವಾಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 41/2021 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 23-04-2022 06:17 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080