ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಕುಂದಾಪುರ: ದಿನಾಂಕ 21/04/2021 ರಂದು ಮಧ್ಯಾಹ್ನ 3:30  ಗಂಟೆಗೆ  ಕುಂದಾಪುರ  ತಾಲೂಕಿನ, ಕೂರ್ಗಿ  ಗ್ರಾಮದ  ಹೊಸಮಠ ಎಂಬಲ್ಲಿ ಕೆದೂರು ಚಾರುಕೊಟ್ಟಿಗೆ ಡಾಮರು ರಸ್ತೆಯಲ್ಲಿ ಆಪಾದಿತ ಶಿವರಾಮ ತನ್ನ KA-20-AA-6556 ನೇ ಆಟೋರಿಕ್ಷಾದಲ್ಲಿ ಮಗಳು ಜ್ಯೋತಿ ಯವರನ್ನು ಕುಳ್ಳಿರಿಸಿಕೊಂಡು ಉಳ್ತೂರಿಂದ ದಬ್ಬೆಕಟ್ಟೆ ಕಡೆಗೆ ವೇಗ ಮತ್ತು ಅಜಾಗ್ರತೆಯಿಂದ ಚಲಾಯಿಸಿಕೊಂಡು ಬರುವಾಗ ಜಿಂಕೆಯೊಂದು ಪಕ್ಕದ ಶೆಳ್ಳೆಮುಂಡು ಹಾಡಿಯಿಂದ ರಭಸವಾಗಿ ಓಡಿ ಬಂದು ರಿಕ್ಷಾದ ಮುಂದಿನ ಚಕ್ರಕ್ಕೆ ಡಿಕ್ಕಿ ಹೊಡೆದಿದ್ದು ಆಪಾದಿತ ಜಿಂಕೆಯನ್ನು ತಪ್ಪಿಸಲು ರಿಕ್ಷಾವನ್ನು ಬಲಭಾಗಕ್ಕೆ ತಿರುಗಿಸಿದ ಪರಿಣಾಮ ರಿಕ್ಷಾ ಡಾಮರು ರಸ್ತೆಯ ಮೇಲೆ ಎಡಮಗ್ಗುಲಾಗಿ ಬಿದ್ದು ಜ್ಯೋತಿ ಯವರ ಎಡಕಾಲಿನ ಕೋಲು ಕಾಲು ಮತ್ತು ಮಣಿಗಂಟಿಗೆ ಮೂಳೆಮುರಿತದ ರಕ್ತ ಗಾಯ ಉಂಟಾಗಿದ್ದು ಆಪಾದಿತ ಆಟೋ ಚಾಲಕ ಶಿವರಾಮರವರಿಗೆ ಎಡಕೈಯ ಭುಜಕ್ಕೆ ತರಚಿದ ರಕ್ತ ಗಾಯ ಮತ್ತು ಎಡಕೈ ಮುಂಗೈಗೆ ರಕ್ತ ಗಾಯ ಉಂಟಾಗಿದ್ದು ಚಿಕಿತ್ಸೆಗೆ ಕುಂದಾಪುರ ಚಿನ್ಮಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 49/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 11/04/2021  ರಂದು ರಾತ್ರಿ 8:30 ಗಂಟೆಗೆ ಪಿರ್ಯಾದಿದಾರರಾದ ಭವಾನಿ ನಾಯ್ಕ್,  (32),  ಗಂಡ: ಸುರೇಶ್ ನಾಯ್ಕ, ವಿಳಾಸ: ವಾತ್ಸಲ್ಯ ಮನೆ, ಮೂಡುಪೆರಂಪಳ್ಳಿ, ಉಡುಪಿ ಇವರು ಉಡುಪಿ – ಪೆರಂಪಳ್ಳಿ  ಸಾರ್ವಜನಿಕ ರಸ್ತೆ ಬದಿಯಲ್ಲಿನ ಕಚ್ಚಾ ಮಣ್ಣು ರಸ್ತೆಯಲ್ಲಿ ಮೂಡುಪೆರಂಪಳ್ಳಿಯಲ್ಲಿನ ತನ್ನ ಮನೆಗೆ ನಡೆದುಕೊಂಡು ಹೋಗುತ್ತಿದ್ದಾಗ, ದೊಡ್ಡಣಗುಡ್ಡೆ  ಆದಿಶಕ್ತಿ ದೇವಸ್ಥಾನ ಸಮೀಪದ ರೈಲ್ವೇ ಬ್ರಿಡ್ಜ್ ಬಳಿ ತಲುಪುತ್ತಿದ್ದಂತೆ ರಸ್ತೆಯಲ್ಲಿ KA-20-B-5815 ನೇ ನೋಂದಣಿ ನಂಬರ್‌‌ನ ಬಸ್ಸನ್ನು ಅದರ ಚಾಲಕ ಅವಿನಾಶ್ ಪೆರಂಪಳ್ಳಿ ಕಡೆಯಿಂದ ಉಡುಪಿ ಕಡೆಗೆ  ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಕುತ್ತಿಗೆಗೆ, ಕೈ, ಎಡಕಾಲು, ಬಲಕಾಲಿನ ಬೆರಳಿಗೆ ಹಾಗೂ ಬೆನ್ನಿಗೆ ಗುದ್ದಿದ ಗಾಯ ಉಂಟಾಗಿರುತ್ತದೆ. ಪಿರ್ಯಾದಿದಾರರಿಗೆ ಅಪಘಾತದಿಂದ ಆದ ಒಳನೋವು ಕಡಿಮೆಯಾಗದೇ ಇರುವುದರಿಂದ  ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಾಗಿ ಚಿಕಿತ್ಸೆಯನ್ನು ಪಡೆಯುತ್ತಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 54/2021 ಕಲಂ :279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 20/04/2021 ರಂದು 8:30 ಗಂಟೆಗೆ ಪಿರ್ಯಾದಿದಾರರಾದ ದೇವೇಂದ್ರ ನಾಯ್ಕ (49),ತಂದೆ: ರಾಮಯ್ಯ ನಾಯ್ಕ, ವಿಳಾಸ: ಸರಳೆಬೆಟ್ಟು, ಹೆರ್ಗಾ ಗ್ರಾಮ, ಉಡುಪಿ ಇವರು ಮಣಿಪಾಲದ ಟೈಗರ್‌ ಸರ್ಕಲ್ ಬಳಿ  ತಾನು ಸವಾರಿ ಮಾಡಿಕೊಂಡು ಹೋಗುತ್ತಿದ್ದ  KA-20-EG-7902 ನೇ ನೋಂದಣಿ ನಂಬರ್‌‌ನ ಬೈಕನ್ನು ಟರ್ನ್ ಮಾಡುತ್ತಿದ್ದಾಗ, ರಾಷ್ಟ್ರೀಯ ಹೆದ್ದಾರಿ 169(ಎ)ರ ಪರ್ಕಳ- ಮಣಿಪಾಲ ಏಕ ಮುಖ ರಸ್ತೆಯಲ್ಲಿ ಪರ್ಕಳ ಕಡೆಯಿಂದ ಮಣಿಪಾಲ ಕಡೆಗೆ KL-71-H-6393 ನೇ ನೋಂದಣಿ ನಂಬರ್‌‌ನ ಬೈಕನ್ನು ಅದರ ಸವಾರ ಅಲನ್ ಥಾಮಸ್ ಅತೀವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ ಬೈಕ್‌‌‌ಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ಬೈಕ್‌‌‌‌ಗಳ ಸವಾರರೂ ಬೈಕ್‌ ‌ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ  ಎಡಕಾಲಿನ ಪಾದದ ಗಂಟಿನ ಮೂಳೆ ಮುರಿತ ಹಾಗೂ ಬಲಕೈಗೆ ಸಮಾನ್ಯ ಸ್ವರೂಪದ ಗಾಯ ಹಾಗೂ ಆರೋಪಿತನಿಗೆ ಸಾಮಾನ್ಯ ಸ್ವರೂಪದ ಗಾಯ ಉಂಟಾಗಿರುತ್ತದೆ. ಅಪಘಾತದಿಂದ ಎರಡೂ ಬೈಕ್‌‌‌ಗಳು ಜಖಂಗೊಂಡಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 55/2021 ಕಲಂ:279, 337,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ದಿನಾಂಕ 22/04/2021 ರಂದು ಬೆಳಿಗ್ಗೆ 7:15 ಗಂಟೆಗೆ ಪಿರ್ಯಾದಿದಾರರಾದ ರಮೇಶ ನಾಯ್ಕ(43), ತಂದೆ; ಬಸವ ನಾಯ್ಕ, ವಾಸ; ಬೆಳ್ವೆ ಕೆರೆಮನೆ ಬೆಳ್ವೆ ಗ್ರಾಮ ಹೆಬ್ರಿ ತಾಲೂಕು ಇವರ ಮಗಳು ಕು. ರಶ್ಮಿತಾ(18) ಇವರು ವಿಪರೀತ  ತಲೆ ನೋವು ಎಂದು ಹೇಳಿ ಮನೆಯಲ್ಲಿ ಕೂಗಾಡಿದ್ದು,  ಈ  ಸಮಯ ಪಿರ್ಯಾದಿದಾರರು  ಉಪಚರಿಸಿ ಕೂಡಲೇ ಒಂದು ವಾಹನದಲ್ಲಿ ಹಾಲಾಡಿಯ ಡಾ. ಅರುಣ್  ರವರ ಬಳಿ ಕರೆದುಕೊಂಡು ಬಂದು ಪ್ರಥಮ ಚಿಕಿತ್ಸೆ ಕೊಡಿಸಿ ಬೆಳಿಗ್ಗೆ 8:55 ಗಂಟೆಗೆ ಕೊಟೇಶ್ವರ ಎನ್. ಆರ್  ಆಚಾರ್ಯ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಕು.ರಶ್ಮಿತಾ ರವರನ್ನು ಪರೀಕ್ಷಿಸಿದ ವೈದ್ಯರು ಆಸ್ಪತ್ರೆಗೆ ಬರುವ ಮೊದಲೇ ದಾರಿ ಮಧ್ಯೆ ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 17/2021 ಕಲಂ: 174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.      

ಇತರ ಪ್ರಕರಣ

  • ಕುಂದಾಪುರ: ದಿನಾಂಕ  21/04/2021 ರಂದು ರಾತ್ರಿ 09:00 ಗಂಟೆಗೆ ಪಿರ್ಯಾದಿದಾರರಾದ ರಾಜು ಮೊಗವೀರ (52), ತಂದೆ: ದಿ.ತಿಮ್ಮ ಮೊಗವೀರ, ವಾಸ:ಶ್ರೀ ವಿಘ್ನೇಶ್ವರ ನಿಲಯ ಕುಂಬ್ರಿ ಹಳ ಅಳಿವೆ ಕೋಟೇಶ್ವರ ಗ್ರಾಮ, ಕುಂದಾಪುರ ತಾಲೂಕು ಇವರ ಮಗ ಸಂದೀಪ ಮನೆಯಲ್ಲಿರುವಾಗ ಆರೋಪಿತರಾದ ಪ್ರಿಯಾರಂಜನ್, ಮಂಜುನಾಥ, ಶ್ರೀಕಾಂತ್, ಶಶಿರಾಜ್ ಇವರು ಪಿರ್ಯಾದಿದಾರರ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರನ್ನುದ್ದೇಶಿಸಿ ಸಂದೀಪ ಎಲ್ಲಿದ್ದಾನೆ ಅವನನ್ನು ಹೊರಗೆ ಕರೆಯಿರಿ ಎಂದು ಹೇಳಿದ್ದಕ್ಕೆ ಪಿರ್ಯಾದಿದಾರರು ಆರೋಪಿತರಲ್ಲಿ ಯಾಕೆ ಹೀಗೆ ಮಾಡುತ್ತೀರಿ ಎಂದು ಕೇಳಿದ್ದಕ್ಕೆ ಆರೋಪಿತರ ಪೈಕಿ ಮಂಜುನಾಥನು ಪಿರ್ಯಾದಿದಾರರನ್ನು ಕೈಯಿಂದ ದೂಡಿ ಹಾಕಿದ್ದು, ಆ ಸಮಯ ಮನೆಯಿಂದ ಹೊರಗೆ ಬಂದ ಪಿರ್ಯಾದಿದಾರರ ಹೆಂಡತಿಗೆ ಅವಾಚ್ಯ ಶಬ್ಧಗಳಿಂದ ಬೈದು ಕೈಯಿಂದ ದೂಡಿ ಹಾಕಿ ಸಂದೀಪ ಎಲ್ಲಿದ್ದಾನೆ ಎಂದು ಕೇಳಿದ್ದು ಆಗ ಹೊರಗೆ ಬಂದ ಪಿರ್ಯಾದಿದಾರರ ಮಗ  ಸಂದೀಪನಿಗೆ ಪ್ರಿಯಾ ರಂಜನನು ಆತನ ಕೈಯಲ್ಲಿದ್ದ ಮರದ ದೊಣ್ಣೆಯಿಂದ ಬೆನ್ನಿಗೆ ಮತ್ತು ಕೈಗೆ ಹೊಡೆದು ಹಲ್ಲೆ ಮಾಡಿ  ಜೀವ ಬೆದರಿಕೆ ಹಾಕಿ ಓಡಿ ಹೋಗಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  48/2021 ಕಲಂ: 447, 323, 504, 354, 324, 506 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    
  • ಉಡುಪಿ: ಪಿರ್ಯಾದಿದಾರರಾದ ಸುರೇಶ (32), ತಂದೆ :ವಿಠಲ ಕೊರಗ,ವಾಸ: ಸಮತಿ ಫಾರ್ಮ ಬಳಿ ಚಾಂತಾರು ಗ್ರಾಮ ಬ್ರಹ್ಮಾವರ ತಾಲುಕು ಉಡುಪಿ ಜಿಲ್ಲೆ ಇವರು  ಉಡುಪಿ  ನಗರ ಸಭೆಯಲ್ಲಿ  ಪೌರ ಕಾರ್ಮಿಕನಾಗಿ  ಕೆಲಸ  ಮಾಡಿಕೊಂಡಿದ್ದು, ದಿನಾಂಕ 22/04/2021 ರಂದು  ಸಂಜೆ 5:00 ಗಂಟೆಗೆ ಸಹಾಯಕ  ಮಂಜು ಎಂಬುವವರೊಂದಿಗೆ   ಅಂಬಲಪಾಡಿ  ಗ್ರಾಮದ  ಜನಾರ್ಧನ ಹೈಟ್ಸ್‌ ಅಪಾರ್ಟ್‌ಮೆಂಟಿನ  ಬಳಿ ಕಸ  ವಿಲೇವಾರಿ ವಾಹನವನ್ನು  ಚಲಾಯಿಸಿಕೊಂಡು  ಹೋಗುವಾಗ  ಹಿಂದಿನಿಂದ KA-21-S-5718ನೇ  ಮೋಟಾರು ಸೈಕಲಿನಲ್ಲಿ  ಬಂದ  ಒಬ್ಬ  ಯುವಕ  ಹಾಗೂ  ಇಬ್ಬರು ಯುವತಿಯರು ಪಿರ್ಯಾದಿದಾರರನ್ನು ತಡೆದು  ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ನಿಂದಿಸಿ,  ಕೈಯಿಂದ  ಹಲ್ಲೆ  ಮಾಡಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 74/2021 ಕಲಂ: 341,504,323 ಜೊತೆಗೆ 34 ಐಪಿಸಿ & ಕಲಂ: 3(1)(r),3(1)(s),3(2)(v-a) SC/ST ACT ರಂತೆ ಪ್ರಕರಣ ದಾಖಲಾಗಿರುತ್ತದೆ.
       

ಇತ್ತೀಚಿನ ನವೀಕರಣ​ : 23-04-2021 10:19 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080