ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ದಿನಾಂಕ 23-04-2020  ರಂದು ಮುಂಜಾವಿನಲ್ಲಿ  ಪಿರ್ಯಾದಿ ರಾಮಚಂದ್ರ ಆಚಾರ್‌ ಇವರು  ರಾ.ಹೆ.66  ರ  ಪೂರ್ವ  ಬದಿ  ಮಣ್ಣು  ರಸ್ತೆಯಲ್ಲಿ  ಅವರ  ಮನೆಯಿಂದ  ಸಾಲಿಗ್ರಾಮ ಕಡೆಗೆ  ನಡೆದುಕೊಂಡು  ಹೋಗುತ್ತಿರುವಾಗ ಸಮಯ  ಸುಮಾರು  ಮುಂಜಾವಿನ 6-50 ಘಂಟೆಗೆ ಚಿತ್ರಪಾಡಿ ಲೋಬೋ  ಚಿಕನ್‌ ಹತ್ತಿರ ತಲುಪುಷ್ಟರಲ್ಲಿ  ರಾ.ಹೆ. 66  ರ  ಕುಂದಾಪುರ- ಉಡುಪಿ  ಏಕಮುಖ ಡಾಮಾರು  ರಸ್ತೆಯಲ್ಲಿ  ಕೋಟ  ಕಡೆಯಿಂದ  ಉಡುಪಿ ಕಡೆಗೆ  ಕಾರ್‌ ನಂಬ್ರ KA 28  Z 1459 ನೇದನ್ನು ಅದರ  ಚಾಲಕ  ಅತೀ  ವೇಗ  ಹಾಗೂ  ಅಜಾಗರೂಕತೆಯಿಂದ ಚಲಾಯಿಸಿಕೊಂಡು  ಬಂದು ಸಾಲಿಗ್ರಾಮದ ಮಹೇಶ ಎಂಟರ್‌ ಪ್ರೈಸಸ್‌ ಹತ್ತಿರ ತಲುಪುಷ್ಟರಲ್ಲಿ  ಒಮ್ಮೇಲೆ  ಎಡಕ್ಕೆ ಚಲಾಯಿಸಿ  ಸಹಸವಾರ  ಬಾಲಕ  ಸುಬ್ರಹ್ಮಣ್ಯ ( 13 ವರ್ಷ)  ರವರೊಂದಿಗೆ  ಸ್ಕೂಟಿ ನಂಬ್ರ  KA 20 EL 6878 ನೇದನ್ನು  ಡಾಮಾರು  ರಸ್ತೆಯ ಪೂರ್ವ ಬದಿಯಲ್ಲಿ   ಕ್ರಮದಂತೆ ಕೋಟ  ಕಡೆಯಿಂದ ಸಾಲಿಗ್ರಾಮದ  ಕಡೆಗೆ ಸವಾರಿ  ಮಾಡಿಕೊಂಡು  ಹೋಗುತ್ತಿದ್ದ ಸತೀಶ ಆಚಾರ್‌  ಎಂಬುವವರ  ಸ್ಕೂಟಿಗೆ  ಹಿಂಬದಿಯಿಂದ ಡಿಕ್ಕಿ  ಹೊಡೆದ ಪರಿಣಾಮ ಸ್ಕೂಟಿ ಸವಾರ ಸತೀಶ ಆಚಾರ್‌ ಸ್ಕೂಟಿ  ಸಮೇತ  ರಸ್ತೆಯ ಪೂರ್ವ ಬದಿ  ತೋಡಿಗೆ ಬಿದ್ದಿದ್ದು, ಸಹಸವಾರ  ಬಾಲಕ ಸುಬ್ರಹ್ಮಣ್ಯ ರಸ್ತೆಯಲ್ಲಿ ಬಿದ್ದಿದ್ದು ಡಿಕ್ಕಿ ಹೊಡೆದ ಕಾರ್‌ ಚಾಲಕನು ಸ್ಥಳದಲ್ಲಿ ಕಾರನ್ನು ನಿಲ್ಲಿಸಿದಂತೆ ಮಾಡಿ  ಕಾರಿನೊಂದಿಗೆ ಸ್ಥಳದಿಂದ ಒಮ್ಮೇಲೆ ಪರಾರಿಯಾಗಿರುತ್ತಾನೆ. ಅಪಘಾತದಲ್ಲಿ ಬಾಲಕ ಸುಬ್ರಹ್ಮಣ್ಯ ಎಂಬುವವನಿಗೆ ತಲೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿದ್ದು,  ಬಲಕಾಲ ಮೂಳೆ ಮೂರಿತದ ಗಾಯವಾಗಿರುತ್ತದೆ. ಸತೀಶ  ಆಚಾರ್‌ ರವರ  ತಲೆಗೆ ತೀವ್ರ ಸ್ವರೂಪದ ರಕ್ತ ಗಾಯವಾಗಿರುತ್ತದೆ.  ಗಾಯಗೊಂಡಿದ್ದವರನ್ನು  ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ  ಸಾಸ್ತಾನ ಟೋಲ್‌ ಅಂಬ್ಯುಲೆನ್ಸ್‌  ನಲ್ಲಿ ಬ್ರಹ್ಮಾವರ ಮಹೇಶ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 68/2021  ಕಲಂ: 279,338  IPC   ಮತ್ತು  ಕಲಂ 134(ಎ)&(ಬಿ), 187 ಐ.ಎಮ್‌.ವಿ.ಆಕ್ಟ್‌  ನಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ದಿನಾಂಕ 22-04-2021 ರಂದು ಫಿರ್ಯಾದಿ ವಿಧ್ಯಾಧರ ಬಿ.ಎಸ್  ಇವರು ತನ್ನ ಬಾಬ್ತು ಮೋಟಾರ್ ಸೈಕಲ್ ನಂಬ್ರ KA-20 ED-6453  ನೇದರಲ್ಲಿ ತನ್ನ ಭಾವ ಶ್ರೀಕಾಂತ್ ಪೂಜಾರಿಯವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ಆಲೂರಿನಿಂದ ವಾಪಾಸು ಮನೆಗೆ ಬರುತ್ತಿರುವಾಗ ಸಂಜೆ ಸಮಯ ಸುಮಾರು 5:45 ಗಂಟೆಗೆ ಕುಂದಾಪುರ ತಾಲೂಕು ಹರ್ಕೂರು ಗ್ರಾಮದ ಕಟ್ಟಿನಮಕ್ಕಿ ಕ್ರಾಸ್ ಬಳಿ ತಲುಪುವಾಗ ಒಳರಸ್ತೆಯಲ್ಲಿ ನೂಜಾಡಿ ಕಡೆಯಿಂದ ಬಂಟ್ವಾಡಿ ಮುಖ್ಯರಸ್ತೆಗೆ ರವಿ ಕೆ ಮೊಗವೀರ  ಎಂಬವರು KA-25 M-4553 ನೇ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿದಾರರು ಸವಾರಿ ಮಾಡಿಕೊಂಡಿದ್ದ ಮೋಟಾರ್ ಸೈಕಲ್ ಗೆ ಡಿಕ್ಕಿ ಹೊಡೆದು ನಂತರ ಪಾದಾಚಾರಿ ಪ್ರದೀಪ್ ಎಂಬವರಿಗೆ ಡಿಕ್ಕಿ ಹೊಡೆದಿದ್ದು ಪರಿಣಾಮ ಸಹ ಸವಾರ ಶ್ರೀಕಾಂತ್ ರವರ ಬಲಕಾಲಿಗೆ ಮೂಳೆ ಮುರಿತ ಹಾಗೂ ಮಾಂಸಖಂಡ ಕಿತ್ತು ಹೋಗಿ ಗಾಯ ಹಾಗೂ ಪಾದಾಚಾರಿ ಪ್ರದೀಪ್ ರವರಿಗೆ ಬಲಕಾಲಿನ ಹೆಬ್ಬೆರಳ ಪಕ್ಕದ ಎರಡು ಬೆರಳಿಗೆ ರಕ್ತ ಗಾಯ ಉಂಟಾಗಿದ್ದು ಫಿರ್ಯಾದಿದಾರರ ಬಲ ಮಗ್ಗುಲಿಗೆ ಗುದ್ದಿದ ಒಳನೋವು ಉಂಟಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 38/2021 ಕಲಂ 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ : ಬ್ರಹ್ಮಾವರ ತಾಲೂಕು, ಹಾವಂಜೆ ಗ್ರಾಮದ, ದೊಂಪದ ಕುಮೇರಿ, ಕೊಳಲಗಿರಿ ಎಂಬಲ್ಲಿ ವಾಸವಾಗಿರುವ ಪಿರ್ಯಾದಿದಾರರಾದ ಸಂತೋಷ್ ಆಚಾರ್ಯ ರವರು ದಿನಾಂಕ: 23.04.2021 ರಂದು ತನ್ನ ಮನೆಯಿಂದ ಉಡುಪಿಗೆ ಕೆಲಸಕ್ಕೆ ಹೋಗಲು ಅವರ ಬಾಬ್ತು ಮೋಟಾರ್ ಸೈಕಲ್‌ನ್ನು ಸ್ಟಾರ್ಟ್‌ ಮಾಡಿ ಮನೆಯ ಎದುರಿನ ಮುಖ್ಯ ರಸ್ತೆಗೆ ಬಂದಾಗ ಬೆಳಿಗ್ಗೆ 09:30ಗಂಟೆ ಸುಮಾರಿಗೆ ಮನೆಯ ಸ್ವಲ್ಪ ದೂರದಲ್ಲಿ ಕೆ.ಜಿ ರೋಡ್‌ ಕ್ರಾಸ್‌ ಕಡೆಯಿಂದ ಕೊಳಲಗಿರಿ ಕಡೆಗೆ ಆರೋಪಿ ಉಮರ್ ಸಾಹೇಬ್ ಎಂಬವರು ಅವರ ಬಾಬ್ತು KA20AA8859 ನೇ ಮಹೇಂದ್ರ ಜಿತೋ ಗೂಡ್ಸ್ ರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆಯನ್ನು ನೀಡದೇ ಒಮ್ಮೆಲೇ ಆವರ ತೀರಾ ಬಲಭಾಗಕ್ಕೆ ಚಲಾಯಿಸಿದ್ದು, ಆಗ ಅದೇ ವೇಳೆಗೆ ಕೊಳಲಗಿರಿ ಕಡೆಗೆ ರಿಕ್ಷಾದ ಬಲ ಬದಿಯಲ್ಲಿ ಸುಧೀರ್ ಕುಮಾರ್ ರವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA20EB6841 ನೇ ನಂಬ್ರದ ಟಿವಿಎಸ್ ಸ್ಟಾರ್ ಸಿಟಿ ಮೋಟಾರ್ ಸೈಕಲ್‌ಗೆ ಡಿಕ್ಕಿ ಹೊಡೆದಿದ್ದು, ಈ ಅಪಘಾತದ ಪರಿಣಾಮ ಸುಧೀರ್ ಕುಮಾರ್ ರವರು ಮೋಟಾರ್ ಸೈಕಲ್ ಸಮೇತ ಸ್ವಲ್ಪ ದೂರ ಹೋಗಿ ಬಿದ್ದು. ಅವರ ಎಡಕಾಲಿನ ಮೊಣಗಂಟಿನ ಬಳಿ , ಎಡ ಕೈ ಮಣಿಗಂಟಿನ ಬಳಿ ಮೂಳೆ ಮುರಿತದ ತೀವ್ರ ಒಳ ಜಖಂ, ಮೂಗಿಗೆ ರಕ್ತಗಾಯ, ಮೈ ಕೈ ಗೆ ಅಲ್ಲಲ್ಲಿ ತರಚಿದ ಗಾಯವಾಗಿರುತ್ತದೆ. ಗಾಯಗೊಂಡ ಸುಧೀರ್ ಕುಮಾರ್ ರವರನ್ನು ಚಿಕಿತ್ಸೆ ಬಗ್ಗೆ ಮಣಿಪಾಲ ಕೆಎಮ್‌ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 61/2021 ಕಲಂ 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕಾರ್ಕಳ: ದಿನಾಂಕ 22.04.2021ರಂದು ಮದ್ಯಾಹ್ನ 01.00 ಘಂಟೆಯಿಂದ ದಿನಾಂಕ 23.04.2021 ರಂದು ಬೆಳಿಗ್ಗೆ  07.45 ಘಂಟೆಯ ಮದ್ಯಾವಧಿಯಲ್ಲಿ ಕಾರ್ಕಳ ತಾಲೂಕು ಕೌಡೂರು ಗ್ರಾಮದ ಶ್ರೀರಾಮ  ಮಂದಿರದ ಪೂರ್ವ ಬದಿ ಇರುವ ಕಬ್ಬಿಣದ ಶಟರ್ ನ್ನು ಯಾರೋ ಕಳ್ಳರು ಮುರಿದು ಒಳಪ್ರವೇಶಿಸಿ ಗರ್ಭಗುಡಿಯ ಬಾಗಿಲನ್ನು ಮುರಿದು  ದೇವರ ಫೋಟೋಗೆ ಹಾಕಿದ್ದ 75,000/- ಮೌಲ್ಯದ ಬೆಳ್ಳಿಯ ಹೂವಿನ ಆಭರಣ ಮತ್ತು ಕಾಣಿಕೆ ಡಬ್ಬಿಯನ್ನು(ಹಣದ ಸಮೇತ) ಅಲ್ಲದೇ ಕಛೇರಿಯ ಡ್ರಾವರನ್ನು ಮುರಿದು ಅದರಲ್ಲಿದ್ದ ನಗದು 3000/-  ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 48/2021 ಕಲಂ 454,457,380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ 

  • ಕಾರ್ಕಳ :  ಸಂತೋಷ್ ಆಚಾರಿ ಪ್ರಾಯ: 35 ವರ್ಷ ಹೊಸಮಾರು ಹೌಸ್, ಇರ್ವತ್ತೂರು ಅಂಚೆ ಮತ್ತು ಗ್ರಾಮ ಕಾರ್ಕಳ ತಾಲೂಕು ಇವರು ಸುಮಾರು 03 ವರ್ಷಗಳಿಂದ ಮಾನಸಿಕ ಖಾಯಿಲೆ ಹಾಗೂ ಅಸ್ತಮಾ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಉಡುಪಿ ಎ,ವಿ ಬಾಳಿಗಾ ಆಸ್ಪತ್ರೆಯಿಂದ ಚಿಕಿತ್ಸೆ ಪಡೆಯುತ್ತಿದ್ದು ಇದೇ ಕಾರಣದಿಂದ ಮನನೊಂದು ತನ್ನ ಜೀವನದಲ್ಲಿ ಜಿಗುಪ್ಸೆಗೊಂಡು ನಿನ್ನೆ ದಿನ ದಿನಾಂಕ: 22/04/2021 ರಂದು ಬೆಳಿಗ್ಗೆ 10:00 ಗಂಟೆಯಿಂದ ಈ ದಿನ ಬೆಳಿಗ್ಗೆ 09:00 ಗಂಟೆಯ ನಡುವಿನ ಅವಧಿಯಲ್ಲಿ ಮನೆಯ ಬಳಿ ಇರುವ ಹಾಡಿಯಲ್ಲಿನ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.  ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 12/2021 ಕಲಂ: 174 ಸಿ.ಅರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ : ಪಿರ್ಯಾದಿ ಸುರೇಶ ಸಫಲಿಗ ಇವರ ತಮ್ಮ ಸುಧಾಕರ ಸಫಲಿಗ(41) ಎಂಬುವರು ಕೂಲಿ ಕೆಲಸ ಮಾಡಿಕೊಂಡಿದ್ದು, ವಿಪರೀತ ಕುಡಿತದ ಚಟ ಹೊಂದಿದವರಾಗಿದ್ದು, ಕೆಲಸಕ್ಕೆಂದು ಮನೆಯಿಂದ ಹೋದವರು  ದಿನಾಂಕ: 20.04.2021 ರಂದು ಬೆಳಿಗ್ಗೆ 09:00 ಗಂಟೆಯಿಂದ, ದಿನಾಂಕ: 23.04.2021 ರ ಬೆಳಿಗ್ಗೆ 07:00 ಗಂಟೆಯ ಮದ್ಯಾವಧಿಯಲ್ಲಿ ಕಾರ್ಕಳ ತಾಲೂಕು ಇನ್ನಾ ಗ್ರಾಮದ ಕಾಫಿನಾಡಿನ ರತಿ  ಸಫಲಿಗ ಎಂಬುವರಿಗೆ   ಸೇರಿದ ಜಾಗದಲ್ಲಿರುವ   ಆವರಣ  ಗೋಡೆ ಇಲ್ಲದ ಬಾವಿಯ ನೀರಿನಲ್ಲಿ ಕವುಚಿ ಬಿದ್ದು ಮೃತ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 08/2021 ಕಲಂ: 174 ಸಿ.ಅರ್‌.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 23-04-2021 06:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080