ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 20/03/2023 ರಂದು ಪಿರ್ಯಾದಿದಾರರಾದ ರೇಮಂಡ್‌ ಗೋಮ್ಸ್‌ (64), ತಂದೆ: ದಿ. ಜೆರೋಮ್‌ ಗೋಮ್ಸ್‌, ವಾಸ: ಮೂನ್‌ ಲೈಟ್‌ ಹೌಸ್‌, ಮಲ್ಲಿಬೆಟ್ಟು, ನಿಂಜೂರು ಗ್ರಾಮ, ಕಾರ್ಕಳ ತಾಲೂಕು ಇವರು ತನ್ನ KA-20-EY-1689 ನೇ ಸ್ಕೂಟರ್‌ ನಲ್ಲಿ ಸವಾರಿ ಮಾಡಿಕೊಂಡು ಶಿರ್ವ ಮಂಚಕಲ್‌ ನಿಂದ ಪೇತ್ರಿ ಕಡೆಗೆ ಬ್ರಹ್ಮಾವರ– ಹೆಬ್ರಿ ರಸ್ತೆಯಲ್ಲಿ ಹೊರಟು ಚೇರ್ಕಾಡಿ ಗ್ರಾಮದ ಪೇತ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕ್ರಾಸ್‌ ರಸ್ತೆಯ ಬಳಿ  ಮುಖ್ಯ ರಸ್ತೆಯಲ್ಲಿ ಹೋಗುತ್ತಿರುವಾಗ ಮಧ್ಯಾಹ್ನ 12:15 ಗಂಟೆಯ ಸಮಯಕ್ಕೆ ಪೇತ್ರಿ ಪ್ರಾಥಮಿಕ ಆರೋಗ್ಯ ಕೇಂದ್ರದ ರಸ್ತೆಯಿಂದ  ಆರೋಪಿ  ಮಲ್ಲಿಕಾರ್ಜುನ  ಫೋರ್ಚುನ್‌ ಪಾರಾ ಮೆಡಿಕಲ್‌ ನ KA-20-AA-9764 ನೇ ಬಸ್ಸನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಒಮ್ಮೆಲೇ ಮುಖ್ಯ ರಸ್ತೆಗೆ ಚಲಾಯಿಸಿ ಪಿರ್ಯಾದಿದಾರರ ಮೋಟಾರ್‌ ಸೈಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟರ್‌ ಸಮೇತ ರಸ್ತೆಗೆ ಬಿದ್ದು ಅವರ ಎಡಭುಜಕ್ಕೆ ಒಳ ಜಖಂ ಉಂಟಾಗಿ, ಎರಡೂ ಕಾಲಿನ ಕೋಲು ಕಾಲಿಗೆ ರಕ್ತಗಾಯ ಉಂಟಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 61/2023  ಕಲಂ: 279, 337 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ದಿನಾಂಕ 21/03/2023 ರಂದು ಪಿಯಾ೯ದಿದಾರರಾದ ಕೆ ಸುರೇಶ್‌ ಆಚಾಯ೯ (55), ತಂದೆ: ಗಣಪತಿ ಆಚಾಯ೯,   ವಾಸ:ಮಳವೂರು  ಗ್ರಾಮ ಕರಂಬರ್‌  ಬಜ್ಪೆ,   ಮಂಗಳೂರು ಇವರ ತಮ್ಮ ಕೆ.ದಿನೇಶ್‌ ಆಚಾಯ೯ (53) ಮತ್ತು ಅವರ ಮಗಳಾದ ಯುಕ್ತಾ(8) ರವರು ಕೆಲಸದ ನಿಮಿತ್ತ  ಮಧ್ಯಾಹ್ನ 2:00 ಗಂಟೆಗೆ ಎಮಾ೯ಳಿನ  ತಮ್ಮ ಮನೆಯಿಂದ ಉಡುಪಿಗೆ ಹಿರೋಹಾಂಡ ಕಂಪೆನಿಯ ಹೆಚ್.ಎಪ್‌  ಡಿಲೆಕ್ಸ್‌ ಮೋಟಾರ್‌ ಸೈಕಲ್‌ ನಂಬ್ರ KA-19-EG-6873 ನೆಯದರಲ್ಲಿ ಹೊರಟು, ಕಾಪು ತಾಲೂಕು ಏಣಗುಡ್ಡೆ ಗ್ರಾಮದ  ಪಾರೆಸ್ಟ್ ಗೇಟ್‌ ಬಳಿ ರಾಷ್ಟ್ರೀಯ ಹೆದ್ದಾರಿ 66 ರ ಮಂಗಳೂರು- ಉಡುಪಿ ರಸ್ತೆಯ  ಪಶ್ಚಿಮ ಬದಿಯ ಅಂಚಿನಲ್ಲಿ ಹೋಗುತ್ತಿರುವಾಗ ಹಿಂದಿನಿಂದ  ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಓವ೯ ಟ್ಯಾಂಕರ್‌ ಚಾಲಕನು ತನ್ನ ಟ್ಯಾಂಕರ್‌ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಬದಿಗೆ ಬಂದು ಪಿಯಾ೯ದಿದಾರರು ಸವಾರಿ ಮಾಡಿಕೊಂಡು ಹೋಗುತ್ತಿದ್ದ ಮೋಟಾರ್‌ ಸೈಕಲ್ಲಿಗೆ ಟ್ಯಾಂಕರ್‌ನ ಎಡಭಾಗದ ಮುಂಭಾಗವನ್ನು ಡಿಕ್ಕಿಪಡಿಸಿ ಅಪಘಾತಪಡಿಸಿರುತ್ತಾನೆ. ಅಪಘಾತಪಡಿಸಿದ ಟ್ಯಾಂಕರನ್ನು ಅಲ್ಲಿಯೇ ಮುಂದೆ ನಿಲ್ಲಿಸಿದ್ದು ಅದರ ನಂಬ್ರ ನೋಡಲಾಗಿ KA-70-5595 ಆಗಿದ್ದು ಅದರ ಚಾಲಕನ ಹೆಸರು ರಾಜೇಶ್‌ ಎಂಬುದಾಗಿರುತ್ತದೆ. ಈ ಅಪಘಾತದಿಂದ ಮೋಟಾರ್‌ ಸೈಕಲ್‌ನಲ್ಲಿ  ಸವಾರಿ ಮಾಡುತ್ತಿದ್ದ ದಿನೇಶ್‌ ಹಾಗೂ ಸಹ  ಸವಾರಳಾದ  ಅವರ ಮಗಳು ಯುಕ್ತಾಳು  ಮೋಟಾರ್‌ ಸೈಕಲ್‌ ಸಹಿತ ರಸ್ತೆಗೆ ಬಿದ್ದಿದ್ದು, ಟ್ಯಾಂಕರ್‌ ಡಿಕ್ಕಿ ಹೊಡೆದ ಪರಿಣಾಮ ದಿನೇಶ ರವರ ಬಲಗಾಲು ಗಂಟಿನಿಂದ ಕೆಳಗೆ ಸಂಪೂಣ೯ ಜಖಂಗೊಂಡಿದ್ದು, ದೇಹದ ಎಡಭಾಗಕ್ಕೆ ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ. ಯುಕ್ತಾಳಿಗೆ ದೇಹದ ಅಲ್ಲಲ್ಲಿ ತರಚಿದ ಗಾಯಗಳಾಗಿರುತ್ತವೆ. ಪಿಯಾ೯ದಿದಾರರು ಚಿಕಿತ್ಸೆಯಲ್ಲಿದ್ದ ತಮ್ಮನ ಆರೈಕೆಯಲ್ಲಿದ್ದ ಕಾರಣ ಠಾಣೆಗೆ ಬಂದು ದೂರು ನೀಡುವರೇ ವಿಳಂಭವಾಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 51/2023 ಕಲಂ:  279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಕಾಪು: ದಿನಾಂಕ 21/03/2023 ರಂದು ಪಿಯಾ೯ದಿದಾರರಾದ ಪ್ರವೀಣ್‌ ಪೂಜಾರಿ (35), ತಂದೆ: ದಿ| ಭೋಜ ಪೂಜಾರಿ, ವಾಸ: ಅಮ್ಮಣ್ಣಿ ನಿವಾಸ, ಸ್ವಾಮಿಲ್‌ ತೋಟ ಪಡು ಗ್ರಾಮ, ಕಾಪು ತಾಲೂಕು ಉಡುಪಿ ಜಿಲ್ಲೆ ಇವರ ತಮ್ಮ ಪ್ರಶಾಂತ್‌ ಭೋಜ ಕೋಟ್ಯಾನ್‌ (34) ರವರು ತನ್ನ KA-20-EX-3059 ನೇ ಮೋಟಾರ್‌ ಸೈಕಲ್‌ ನಲ್ಲಿ ತನ್ನ ಅಕ್ಕನ ಮನೆಯಾದ ಮಂಚೆಕಲ್‌ ಗೆ ಹೋಗಿದ್ದು, ವಾಪಾಸ್ಸು ಕಾಪು-ಶಿರ್ವಾ ರಸ್ತೆಯಾಗಿ ಕಾಪುವಿಗೆ ಬರುತ್ತಾ 22:30 ಗಂಟೆಯ ಸುಮಾರಿಗೆ ಕಾಪು ತಾಲೂಕು ಮಲ್ಲಾರು ಗ್ರಾಮದ ಕೊಂಬಗುಡ್ಡೆ ಬಳಿಯ ಪೆಟ್ರೋಲ್‌ ಪಂಪ್‌ ನ್ನು ತಲುಪುತ್ತಿದ್ದಂತೆ ಕಾಪು ಕಡೆಯಿಂದ ಶಿರ್ವಾ ಕಡೆಗೆ ಹೋಗುತ್ತಿದ್ದ KA-21-A-5283 ನೇ ಪಿಕ್‌ ಆಫ್‌ ವಾಹನದ ಚಾಲಕ ರಾಮ್‌  ರವರು ತನ್ನ ವಾಹನವನ್ನು ಅತೀ ವೇಗ & ತೀವ್ರ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಹೋಗಿ ಪ್ರಶಾಂತ್‌ ಭೋಜ ಕೋಟ್ಯಾನ್‌ ರವರ ಬೈಕ್‌ ನ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪ್ರಶಾಂತ್‌ ಭೋಜ ಕೋಟ್ಯಾನ್‌ ರವರು ಬೈಕ್‌ ಸಮೇತ ರಸ್ತೆಗೆ ಬಿದ್ದು, ಬಲಕಾಲಿನ ಮೂಳೆ ಜಖಂಗೊಂಡಿರುತ್ತದೆ. ಪಿರ್ಯಾದಿದಾರರು ಪ್ರಶಾಂತ್‌ ಭೋಜ ಕೋಟ್ಯಾನ್‌ ರವರನ್ನು ಚಿಕಿತ್ಸೆಯ ಬಗ್ಗೆ ಒಂದು ರಿಕ್ಷಾದಲ್ಲಿ ಕರೆದುಕೊಂಡು ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 52/2023 ಕಲಂ: 279 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಕಳವು ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಅಕ್ಷಯ್ (22), ತಂದೆ: ಜಯಾ, ವಾಸ: ಹೆಪ್ಪಳ ಎರ್ಲಪಾಡಿ, 5 ಸೆಂಟ್ಸ್ ಎರ್ಲಪಾಡಿ ಗ್ರಾಮ ಮತ್ತು ಅಂಚೆ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರು ಎರ್ಲಪಾಡಿ ಗ್ರಾಮದ ಹೆಪ್ಪಳ   ಎಂಬಲ್ಲಿ  ವಾಸವಾಗಿದ್ದು ಕಾರ್ಕಳ ಬಂಡಿಮಠದ ಬಳಿ ಇರುವ ಬಾಲಾಜಿ ಇನ್  ಎಂಬ ಹೊಟೆಲಿನಲ್ಲಿ ವೈಟರ್   ಆಗಿ ಕೆಲಸ ಮಾಡಿಕೊಂಡಿದ್ದು, ಪಿರ್ಯಾದಿದಾರರು ಪ್ರತಿದಿನ ಕೆಲಸಕ್ಕೆ ಹೋಗಲು ತಾಯಿಯ  ಹೆಸರಿನಲ್ಲಿರುವ ಕಪ್ಪು ಬಣ್ಣದ ಬೈಕ್ ಆಗಿದ್ದು  ಯಮಹಾ ಎಫ್ ಜಡ್ ಬೈಕ್   ನಂಬ್ರ  KA-20-EX-0223  ನ್ನು   ಉಪಯೋಗಿಸುತ್ತಾರೆ. ಪಿರ್ಯಾದಿದಾರರು ಹೊಟೇಲ್‌ನಿಂದ  ವಿಶ್ರಾಂತಿ ಪಡೆಯಲು ಕುಕ್ಕುಂದೂರು  ಗ್ರಾಮದ ಲಿಜ್  ಪ್ಲಾಜಾ ಎಂಬ ಕಟ್ಟಡದಲ್ಲಿ  ರೂಮ್  ನೀಡಿದ್ದು ಅದರಂತೆ ದಿನಾಂಕ 18/03/2023 ರಂದು  ಹೊಟೆಲ್‌ನಲ್ಲಿ  ರಾತ್ರಿ ಕೆಲಸ ಮುಗಿಸಿ 12:00 ಗಂಟೆಗೆ ಲಿಜಾ ಪ್ಲಾಜಾದ ಕಟ್ಟಡದ ಎದುರು ಬೈಕನ್ನು ಪಾರ್ಕ್  ಮಾಡಿ  ವಿಶ್ರಾಂತಿಗೆ   ರೂಮಿಗೆ ಹೋಗಿದ್ದು 19/03/2023 ರಂದು ಬೆಳಿಗ್ಗೆ  06:40 ಗಂಟೆಗೆ  ಬಂದು ನೋಡಿದಾಗ ಬೈಕ್ ನಿಲ್ಲಿಸಿದ ಸ್ಥಳದಲ್ಲಿ  ಇಲ್ಲದೇ  ಅದನ್ನು ಯಾರೋ  ಕಳವು  ಮಾಡಿಕೊಂಡು  ಹೋಗಿದ್ದರು. ಕಳವಾದ ಬೈಕನ್ನು  ಹುಡುಕಾಡಿದ್ದು ಪತ್ತೆಯಾಗದ ಕಾರಣ ಈ ದಿನ ಬಂದು ದೂರು  ನೀಡಿದ್ದಾಗಿರುತ್ತದೆ. ಕಳವಾದ ಮೋಟಾರ್   ಸೈಕಲ್‌ನ  ಅಂದಾಜು ಮೌಲ್ಯ ರೂಪಾಯಿ  50,000/ ಆಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 38/2023  ಕಲಂ: 379 ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಸತೀಶ ಪೂಜಾರಿ (41), ತಂದೆ: ಪಂಜುಪೂಜಾರಿ, ವಾಸ: ಗಿರಿಜಾ ನಿವಾಸ, ಕುಂಬ್ರಿ ಕೋಟೇಶ್ವರ ಗ್ರಾಮ, ಕುಂದಾಪುರ ತಾಲೂಕು ಇವರ ಪಂಜು ಪೂಜಾರಿ (70) ರವರು ವಿಪರೀತ ಮದ್ಯ ಸೇವನೆ ಚಟ ಹೊಂದಿರುವುದಾಗಿದೆ. ಹೀಗಿರುತ್ತಾ ದಿನಾಂಕ 22/03/2023 ರಂದು ಪಿರ್ಯಾದಿದಾರರು ವ್ಯವಹಾರ ನಿಮಿತ್ತ ಮನೆಯಿಂದ ಹೊರಗೆ ಹೋಗಿದ್ದು ಪಂಜು ಪೂಜಾರಿಯವರು ಮನೆಯಲ್ಲಿ ಮಲಗಿದ್ದು ಮದ್ಯಾಹ್ನ 01:00 ಗಂಟೆಗೆ ಪಂಜು ಪೂಜಾರಿಯವರನ್ನು ಪಿರ್ಯಾದಿದಾರರ ಪತ್ನಿ ಊಟಕ್ಕೆ ಕರೆದಾಗ ಅವರು  ಏಳದೇ ಇದ್ದು ಅವರ ಬಾಯಿಂದ ಯಾವುದೋ ಘಾಟು ವಾಸನೆ ಬಂದಿದ್ದು  ವಿಷಯ ತಿಳಿದು ಪಿರ್ಯಾದಿದಾರರು ಪಂಜು ಪೂಜಾರಿಯವರನ್ನು ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುವುದಾಗಿದೆ. ಪಂಜು ಪೂಜಾರಿಯವರು ವಿಪರೀತ ಮದ್ಯ ಸೇವನೆ ಚಟದಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಯಾವುದೋ ವಿಷ ಪದಾರ್ಥ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಯುಡಿಆರ್‌ ಕ್ರಮಾಂಕ 15/2023 ಕಲಂ: 174 CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಕಾರ್ಕಳ: ಪಿರ್ಯಾದಿದಾರರಾದ ಗೋಕುಲ್ ಪ್ರವೀಣ್ (30), ಕಿರಿಯ ಸಂರಕ್ಷಣಾ ಅಧಿಕಾರಿ ಪುರಾತತ್ವ ಇಲಾಖೆ ಕಾರ್ಕಳ ಕಸಬಾ ಗ್ರಾಮ ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು ಪುರಾತತ್ವ ಇಲಾಖೆ  ಕಾರ್ಕಳದಲ್ಲಿ ಕಿರಿಯ ಸಂರಕ್ಷಣಾ ಅಧಿಕಾರಿಯಾಗಿ  ಕರ್ತವ್ಯ ನಿರ್ವಹಿಸಿಕೊಂಡಿದ್ದು ಅಪಾದಿತರಾದ ಶ್ರೀಮತಿ ಶೈಲ ಎನ್ ಪೈ ಹಾಗೂ ಎಸ್ ನಿತ್ಯಾನಂದ ಪೈ, ನಂಬ್ರ 488/2, ಮಾರುತಿ, ಪೆರ್ವಾಜೆ ರಸ್ತೆ, ಕಾರ್ಕಳ ಇವರಿಗೆ  ಕಾರ್ಕಳ ಕಸಬಾ ಗ್ರಾಮದ ಅನಂತಶಯನ ಅನಂತಪದ್ಮನಾಭ ದೇವಸ್ಥಾನದ ಬಳಿ  ಸ.ನಂ 86/24 ರಲ್ಲಿ 0.1 ಎಕ್ರೆ ಹಾಗೂ  ಸ.ನಂ 86/6A1 ರಲ್ಲಿ 0.86 ಎಕ್ರೆ ನಿಷೇಧಿತ ಪುರಾತತ್ವ ಇಲಾಖೆ ಭಾರತ, ಬೆಂಗಳೂರು ವಲಯ ರವರಿಂದ ನಿಷೇಧಿತ ಪ್ರದೇಶದಲ್ಲಿರುವ ಸಂಗೀತ ಶಾಲಾ ಕಟ್ಟಡದ ದುರಸ್ತಿಗೆ ಮಾತ್ರ ಅನುಮತಿಯನ್ನು ಪಡೆದು ನಿರಾಕ್ಷೇಪಣಾ ಪತ್ರದ ಷರತ್ತುಗಳನ್ನು ಉಲ್ಲಂಘಿಸಿ  ನಿಷೇಧಿತ ಪ್ರದೇಶದಲ್ಲಿ ಹೊಸದಾಗಿ ಕಟ್ಟಡ ಕಾಮಗಾರಿಯನ್ನು ಮಾಡಿರುತ್ತಾರೆ. ಈ ಬಗ್ಗೆ ಸ್ಥಳ ಪರಿಶೀಲಿಸಿ  ಹೊಸದಾಗಿ ಕಟ್ಟಡ ನಿರ್ಮಾಣ ಮಾಡದಂತೆ  ನೋಟೀಸನ್ನು  ನೀಡಿದರೂ ನಿಯಮ ಉಲ್ಲಂಘಿಸಿ ನಿಷೇಧಿತ ಪುರಾತತ್ವ ಇಲಾಖೆಯ ಜಮೀನಿನಲ್ಲಿ ಅನಧಿಕೃತ ಕಟ್ಟಡ ನಿರ್ಮಿಸುತ್ತಿರುವುದು ದಿನಾಂಕ 22/03/2023  ರಂದು ಬೆಳಿಗ್ಗೆ 9:00  ಗಂಟೆಗೆ ಗಮನಕ್ಕೆ ಬಂದಿರುತ್ತದೆ.  ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 37/2023  ಕಲಂ: 447 ಜೊತೆಗೆ 34   ಐಪಿಸಿ ಮತ್ತು 20(A)(4), 30A, 30(B) AMASR ACT 2010 ರಂತೆ ಪ್ರಕರಣ ದಾಖಲಾಗಿರುತ್ತದೆ .
  • ಮಣಿಪಾಲ: ದಿನಾಂಕ 17/03/2023 ರಂದು ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನವೀನ್ ನಾಯ್ಕ ಇವರು  ರೌಂಡ್ಸ್‌ ಕರ್ತವ್ಯದಲ್ಲಿರುವಾಗ ನಿಖಿಲ್‌ .ಎಮ್‌ (22) ಎಂಬಾತ ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಾಂಡವಿ ಎಮರಾಲ್ಡ್‌ಅಪಾರ್ಟ್‌ಮೆಂಟ್‌ಬಳಿ ಸಾರ್ವಜನಿಕ ಸ್ಥಳದಲ್ಲಿ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು,  ಆರೋಪಿ ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು  ದಿನಾಂಕ  22̤/03/2023 ರಂದು ದೃಢಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 58/2023, ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 17/03/2023 ರಂದು ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನವೀನ್ ನಾಯ್ಕ ಇವರು  ರೌಂಡ್ಸ್‌ ಕರ್ತವ್ಯದಲ್ಲಿರುವಾಗ ತನ್ವೀರ್‌ ರೆಡ್ಡಿ (20) ಎಂಬಾತ ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಾಂಡವಿ ಎಮರಾಲ್ಡ್‌ಅಪಾರ್ಟ್‌ಮೆಂಟ್‌ಬಳಿ ಸಾರ್ವಜನಿಕ ಸ್ಥಳದಲ್ಲಿ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು,  ಆರೋಪಿ ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು  ದಿನಾಂಕ  22̤/03/2023 ರಂದು ದೃಢಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 59/2023, ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 17/03/2023 ರಂದು ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನವೀನ್ ನಾಯ್ಕ ಇವರು  ರೌಂಡ್ಸ್‌ ಕರ್ತವ್ಯದಲ್ಲಿರುವಾಗ  ಶರಣ್‌ ಶೆಟ್ಟಿ (22)  ಎಂಬಾತ ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಾಂಡವಿ ಎಮರಾಲ್ಡ್‌ಅಪಾರ್ಟ್‌ಮೆಂಟ್‌ಬಳಿ ಸಾರ್ವಜನಿಕ ಸ್ಥಳದಲ್ಲಿ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು,  ಆರೋಪಿ ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು  ದಿನಾಂಕ  22̤/03/2023 ರಂದು ದೃಢಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 60/2023, ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 17/03/2023 ರಂದು ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನವೀನ್ ನಾಯ್ಕ ಇವರು  ರೌಂಡ್ಸ್‌ ಕರ್ತವ್ಯದಲ್ಲಿರುವಾಗ ರಾಹುಲ್‌ ಸೀಮಾ (21) ) ಎಂಬಾತ ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಾಂಡವಿ ಎಮರಾಲ್ಡ್‌ಅಪಾರ್ಟ್‌ಮೆಂಟ್‌ಬಳಿ ಸಾರ್ವಜನಿಕ ಸ್ಥಳದಲ್ಲಿ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು,  ಆರೋಪಿ ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು  ದಿನಾಂಕ  22̤/03/2023 ರಂದು ದೃಢಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 6‌1/2023, ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ದಿನಾಂಕ 17/03/2023 ರಂದು ಮಣಿಪಾಲ ಪೊಲೀಸ್ ಠಾಣಾ ಪೊಲೀಸ್ ಉಪನಿರೀಕ್ಷಕರಾದ ನವೀನ್ ನಾಯ್ಕ ಇವರು  ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಜಿ. ತುಷಾರ್ (21) ಎಂಬಾತ ಗಾಂಜಾವನ್ನು ಸೇವಿಸಿರುವ ಸಂದೇಹದ ಮೇಲೆ ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಮಾಂಡವಿ ಎಮರಾಲ್ಡ್‌ಅಪಾರ್ಟ್‌ಮೆಂಟ್‌ಬಳಿ ಸಾರ್ವಜನಿಕ ಸ್ಥಳದಲ್ಲಿ ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆ ನಡೆಸುವ ಬಗ್ಗೆ  ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯರ ಮುಂದೆ ಹಾಜರುಪಡಿಸಿದ್ದು,  ಆರೋಪಿ ಗಾಂಜಾ ಸೇವಿಸಿರುವ ಬಗ್ಗೆ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ಪೊರೆನ್ಸಿಕ್ ವಿಭಾಗದ ವೈದ್ಯಾಧಿಕಾರಿಗಳು  ದಿನಾಂಕ  22̤/03/2023 ರಂದು ದೃಢಪತ್ರವನ್ನು ನೀಡಿರುವುದಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 6‌2/2023, ಕಲಂ: 27(b) NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಪಿರ್ಯಾದಿದಾರರಾದ ಪ್ರಜ್ವಲ್‌ ಪೂಜಾರಿ (27), ತಂದೆ: ದಿ, ರಾಜು ಪೂಜಾರಿ, ವಾಸ: ನಾಗಮಮ್‌ ನಿಲಯ, ಆನ್‌ಗೋಡು, ತ್ರಾಸಿ ಗ್ರಾಮ, ಕುಂದಾಪುರ ತಾಲೂಕು ಇವರು ತನ್ನ ಅಣ್ಣನಾದ ರಾಹುಲ್‌ ಪೂಜಾರಿಯ ಮಾಲಿಕತ್ವದ ಬೈಂದೂರು ತಾಲೂಕು ಮರವಂತೆ ಗ್ರಾಮದಲ್ಲಿರುವ  ಸಿ ಲ್ಯಾಂಡ್‌ ಬಾರ್‌ & ರೆಸ್ಟೋರೆಂಟ್‌ ನಲ್ಲಿ ಮೇನೆಜರ್‌ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 21/03/2023 ರಂದು ರಾತ್ರಿ 9:30 ಗಂಟೆಗೆ ಬಾರ್‌ ಗೆ ಆಪಾದಿತರಾದ 1) ರಾಘವೇಂದ್ರ ಶೆಟ್ಟಿ, 2) ಪ್ರದೀಪ್  ಹೆಮ್ಮಾಡಿ, 3) ಗಿರೀಶ್ ಶೇಟ್, 4) ರಮೇಶ ಶೆಟ್ಟಿ , 5) ಇತರರು  ಬಂದು ಬಾರಿನ ಹಿಂದೆ ಬೀಜ್‌ ಬಳಿ ಟೇಬಲ್‌ ಹಾಕಿಸಿ ಊಟಕ್ಕೆ ಕುಳಿತಿದ್ದು ನಂತರ ಅವರು ಊಟ ಮುಗಿಸಿದ ಬಳಿಕ ಪಿರ್ಯಾದಿದಾರರು ಬಿಲ್ಲಿನ ಬಗ್ಗೆ ಹಾಗೂ ರಾತ್ರಿ ತಡವಾದ ಬಗ್ಗೆ ಮಾತನಾಡಿದಾಗ ಆಪಾದಿತರು ಹಣ ಕೋಡುವುದಿಲ್ಲ, ನೀನು ಏನು ಬೇಕಾದರು ಮಾಡು ಎಂದು ಅವಾಚ್ಯವಾಗಿ ಬೈದಿರುತ್ತಾರೆ.   ನಂತರ    ರಾತ್ರಿ ಸಮಯ 12:00 ಗಂಟೆ ಸುಮಾರಿಗೆ ಊಟವನ್ನು ಸಪ್ಲೇಯ್‌ ಮಾಡುವುದು ನಿಲ್ಲಿಸಿದಾಗ ಆಪಾದಿತರು  ಬಾರಿನ ಎದುರುಗಡೆ ಬಂದು ಪಿರ್ಯಾದಿದಾರರನ್ನು ಹೊರಗೆ ಕರೆದು ಊಟ ಸಪ್ಲೇಯ್‌ ಮಾಡಲು ಆಗುದಿಲ್ಲವಾ  ಎಂದು ಅವಾಚ್ಯವಾಗಿ ಆಪಾದಿತ ರಾಘವೇಂದ್ರ ಮತ್ತು ಪ್ರಧೀಪ ಹೆಮ್ಮಾಡಿ ಕೈಯಲ್ಲಿದ್ದ ಬಿಯರ್‌ ಬಾಟಲಿಯಿಂದ ಪಿರ್ಯಾದಿದಾರರಿಗೆ ಹೊಡಿದ್ದು ಆ ಸಮಯ ತಪ್ಪಿಸಿಕೊಂಡಾಗ ಬಿಯರ್‌ ಬಾಟಲಿ ಕಿವಿಯ ಹಿಂಬಾಗ ಹಾಗೂ ಹಣೆಗೆ ತಾಗಿ ಗಾಯವಾಗಿರುತ್ತದೆ. ಆಪಾದಿತ ಗಿರೀಶ್‌ ಶೇಟ್‌ ಹಾಗೂ ರಮೇಶ ಶೆಟ್ಟಿಯು ಪಿರ್ಯಾದಿದಾರರಿಗೆ ಕೈಯಿಂದ ಹೊಡೆದಿದ್ದು ಗಲಾಟೆ ತಪ್ಪಿಸಲು ಬಂದ ರಾಹುಲ್‌ ಪೂಜಾರಿಗೂ ಆಪಾದಿತರು ಹಲ್ಲೆ ಮಾಡಲು ಪ್ರಯತ್ನಿಸಿರುತ್ತಾರೆ. ನಂತರ ಪಿರ್ಯಾದಿದಾರರ ಪರಿಚಯದವರು ಸ್ಥಳಕ್ಕೆ ಬಂದಾಗ ಬೆದರಿಕೆ ಹಾಕಿ ಆಪಾದಿತರೆಲ್ಲರು ಅವರು ಬಂದ ಕಾರಿನಲ್ಲಿ ಹೋಗಿರುತ್ತಾರೆ. ನಂತರ ಪಿರ್ಯಾದಿದಾರರು ತನಗಾದ ಗಾಯದ ಬಗ್ಗೆ ಚಿಕಿತ್ಸೆ ಕೋಡಿಸಲು  ತನ್ನ ಅಣ್ಣನು ಕಾರಿನಲ್ಲಿ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ಆಸ್ಪತ್ರೆಯ ಗೇಟಿನಲ್ಲಿ ಬಳಿ ಇದ್ದ ಆಪಾದಿತ ಪ್ರದೀಪ್‌ ಹೆಮ್ಮಾಡಿ, ಗಿರೀಶ್‌ ಶೇಟ್‌ ರವರು ಪಿರ್ಯಾದಿದಾರರ ಕಾರಿನ ಹಿಂದಿನ ಗಾಜಿಗೆ ಗುದ್ದಿ ಹುಡಿ ಮಾಡಿರುತ್ತಾರೆ.   ಈ ಬಗ್ಗೆ  ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 34/2023 ಕಲಂ: 323,324, 504, 506, 427 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ಪಿರ್ಯಾದಿದಾರರಾದ ರಾಘವೇಂದ್ರ ಶೆಟ್ಟಿ (33), ತಂದೆ: ಗೋಪಾಲ ಶೆಟ್ಟಿ, ವಾಸ: ತೆಂಕಮನೆ, ಉಪ್ರಳ್ಳಿ, 11 ನೇ ಉಳ್ಳೂರು ಗ್ರಾಮ, ಬೈಂದೂರು ತಾಲೂಕು ಇವರು   ಸ್ನೇಹಿತನ ಹುಟ್ಟುಹಬ್ಬದ ಪಾರ್ಟಿ ಬಗ್ಗೆ ದಿನಾಂಕ 21/03/2023 ರಂದು ರಾತ್ರಿ 9:30 ಗಂಟೆಗೆ ಬೈಂದೂರು ತಾಲೂಕು ಮರವಂತೆ ಗ್ರಾಮದಲ್ಲಿರುವ  ಸಿ ಲ್ಯಾಂಡ್‌ ಬಾರ್‌ & ರೆಸ್ಟೋರೆಂಟ್‌ ನಲ್ಲಿ ಊಟಕ್ಕೆ  ಬಂದು ಸ್ನೇಹಿತರೊಂದಿಗೆ ಬಾರನ ಹಿಂದೆ ಇರುವ ಬೀಚ್‌ ಬಳಿ ಊಟ ಮಾಡಿ ವಾಪಾಸ್ಸು ಹೋಗಲು ಹೊರಟು ಬಾರಿನ ಮುಂಬಾಗ ಬಂದಾಗ ರಾತ್ರಿ  12:00 ಗಂಟೆ ಸುಮಾರಿಗೆ  ಬಾರಿನ ಮಾಲಕರಾದ ರಾಹುಲ್‌ ಪೂಜಾರಿ , ಅವರ ಜೊತೆಯಲ್ಲಿದ್ದ ಅಂಕಿತ ಶೆಟ್ಟಿ, ಪ್ರಜ್ವಲ್‌ ಪೂಜಾರಿ, ಹರೀಶ್‌ ತೊಳಾರ್‌ ಹಾಗೂ ಇತರರು ಸೇರಿ ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಆಪಾದಿತ ರಾಹುಲ್‌ ಪೂಜಾರಿಯು ಅವಾಚ್ಯ ಶಬ್ದಗಳಿಂದ ಬೈದು ಆತನ ಕೈಯಲ್ಲಿದ್ದ ಮರದ ದೊಣ್ಣೆಯಿಂದ ಹಲ್ಲೆ ಮಾಡಿರುತ್ತಾನೆ. ಆಪಾದಿತರಾದ ಅಂಕಿತ ಶೆಟ್ಟಿ, ಪ್ರಜ್ವಲ್‌ ಪೂಜಾರಿ, ಹರೀಶ್‌ ತೊಳಾರ್‌ ರವರು ಕೈಯಿಂದ ಹಾಗೂ ದೊಣ್ಣೆಯಿಂದ  ಹಲ್ಲೆ ಮಾಡಿರುತ್ತಾರೆ. ಆ ಸಮಯ ಗಲಾಟೆ ಬಿಡಿಸಲು ಬಂದ ಪಿರ್ಯಾದಿದಾರರ ಸ್ನೇಹಿತರಾದ ಶಿವರಾಜ ಶೆಟ್ಟಿ, ರಾಜ @ ವಿಶ್ವನಾಥ, ರಮೇಶ ಶೆಟ್ಟಿ, ದಿನೇಶ ಪೂಜಾರಿ ರವರಿಗೂ ಹಲ್ಲೆ ಮಾಡಿರುತ್ತಾರೆ. ನಂತರ ಪಿಯಾದಿದಾರರಿಗೆ ಆಪಾದಿತರು ಮುಂದಕ್ಕೆ ಬೆದರಿಕೆ ಹಾಕಿ ಕಾರಿನಲ್ಲಿ ಹೋಗಿರುತ್ತಾರೆ.  ಪಿರ್ಯಾದಿದಾರರಿಗೆ ಆಗಿರುವ ಗಾಯದ ಬಗ್ಗೆ ಚಿಕಿತ್ಸೆಗೆ  ಸ್ನೇಹಿತ ಗಿರೀಶ ಹಾಗೂ ಇತರರು ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 35/2023 ಕಲಂ: 341, 323, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .


ಇತ್ತೀಚಿನ ನವೀಕರಣ​ : 23-03-2023 09:50 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080