ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಶಿರ್ವ: ಪಿರ್ಯಾದಿ: ಗಂಗಾಧರ ಆಚಾರ್ಯ (57)ತಂದೆ: ದಿ.ಜಾನು ಆಚಾರ್ಯ ವಾಸ: 2-143 ಮೇಲ್ಮನೆ ಹೌಸ್‌, ಕುತ್ಯಾರು ಅಂಚೆ ಮತ್ತು  ಗ್ರಾಮ ಇವರ ಮಗಳು ಸ್ವಾತಿ (26)ರವರು  ದಿನಾಂಕ: 22-03-2023  ರಂದು   ಪಿರ್ಯಾದಿದಾರರ ಮನೆಗೆ ಬಂದಿದ್ದು ಸಂಜೆ ಸಮಯಕ್ಕೆ  ಗಂಡನ ಮನೆಯಾದ ಹಳೆಯಂಗಡಿಗೆ KA19HB 4515 ನೇ  ನೊಂದಣಿ  ಸಂಖ್ಯೆಯ  ದ್ವಿ-ಚಕ್ರ ವಾಹನದಲ್ಲಿ ಹೊರಟಿದ್ದು ಸ್ವಲ್ಪಸಮಯದ ಬಳಿಕ ಪಿರ್ಯಾದಿದಾರರ ಮಗಳು ಸ್ವಾತಿಯು ಮುದರಂಗಡಿ ಅಟೋ ರಿಕ್ಷಾ ನಿಲ್ದಾಣದ ಬಳಿ ಅಪಘಾತವಾಗಿ ಗಾಯಗೊಂಡಿರುವ ವಿಚಾರ ತಿಳಿಸಿದಂತೆ ಪಿರ್ಯಾದಿದಾರರು ಕೂಡಲೇ ಅಪಘಾತಕ್ಕೆ ಸ್ಥಳಕ್ಕೆ ಹೋಗಿ ವಿಚಾರಿಸಲಾಗಿ ಆಕೆಯು  ಕುತ್ಯಾರಿನಿಂದ  ಮುದರಂಗಡಿ  ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ದ್ವಿ ಚಕ್ರವಾಹನವನ್ನು ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯದಲ್ಲಿ ಸಂಜೆ ಸುಮಾರು 5-30 ಗಂಟೆಗೆ  ತನ್ನ ಹಿಂದಿನಿಂದ ಅಂದರೆ ಕುತ್ಯಾರಿನಿಂದ ಮುದರಂಗಡಿ ಕಡೆಗೆ KA20AB 2940 ನೇ ನೊಂದಣಿ  ಸಂಖ್ಯೆಯ ಅಟೋರಿಕ್ಷಾವನ್ನು ಅದರ ಚಾಲಕನು ಅತೀ ವೇಗ ಮತ್ತು ಅಜಾಗರೂ ಕತೆಯಿಂದ ಚಲಾಯಿಸಿಕೊಂಡು ಬಂದು ಸ್ವಾತಿರವರು   ಸವಾರಿ  ಮಾಡುತ್ತಿದ್ದ ದ್ವಿಚಕ್ರವಾಹನವನ್ನು  ಓವರ್ ಟೇಕ್  ಮಾಡಿ ಮುಂದಕ್ಕೆ  ಹೋಗಿ ಓಮ್ಮಲೇ  ಮುದರಂಗಡಿ  ಅಟೋರಿಕ್ಷಾ ನಿಲ್ದಾಣದ ಕಡೆಗೆ ಯಾವುದೇ ಸೂಚನೆಯನ್ನು  ನೀಡದೆ ಅಟೋ ರಿಕ್ಷಾವನ್ನು ತಿರುಗಿಸಿದ ಪರಿಣಾಮ ಪಿರ್ಯಾದುದಾರರ ಮಗಳು ಸ್ವಾತಿರವರು ಸವಾರಿ ಮಾಡಿಕೊಂಡು ಬರುತ್ತಿದ್ದ KA19HB 4515 ನೇ  ದ್ವಿ-ಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ದ್ವಿ-ಚಕ್ರ  ಸಮೇತ ರಸ್ತೆಗೆ ಬಿದ್ದ  ಪರಿಣಾಮ  ಆಕೆಯ ಎರಡೂ ಕೈಗಳ  ಮುಂಗೈ ಬಳಿ ಒಳಜಖಂ ಹಾಗೂ ಎಡ ಕೈ ಕೋಲು ಕೈ, ಬಲ ಕೈ ಮೊಣಗಂಟಿನ ಬಳಿ ಮತ್ತು ಎರಡೂ ಕಾಲುಗಳಿಗೆ ತರಚಿದ ಗಾಯ ಮತ್ತು ಹೊಟ್ಟೆಯ ಬಲಗಡೆ ಗುದ್ದಿದ ಗಾಯವಾಗಿರುತ್ತದೆ. ಕೂಡಲೇ ಅವರನ್ನು ಒಂದು ವಾಹನದಲ್ಲಿ ಚಿಕಿತ್ಸೆಯ ಬಗ್ಗೆ ಉಡುಪಿ ಸಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ವೈದ್ಯರು ಚಿಕಿತ್ಸೆ  ನೀಡಿರುತ್ತಾರೆ. ಈ ಅಪಘಾತಕ್ಕೆ KA20AB 2940 ನೇ ಅಟೋ ರಿಕ್ಷಾ  ಚಾಲಕ ಹರೀಶ್  ಕುಮಾರ್ ಅಮೀನ್  ರವರ ಅತಿವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ23/2023  ಕಲಂ 279, 337, 338 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣ

  • ಕಾರ್ಕಳ ನಗರ: ಪಿರ್ಯಾದಿ: ಅಕ್ಷಯ್ , ಪ್ರಾಯ: 22 ವರ್ಷ, ತಂದೆ: ಜಯಾ, ವಾಸ: ಹೆಪ್ಪಳ ಎರ್ಲಪಾಡಿ, 5 ಸೆಂಟ್ಸ್ ಎರ್ಲಪಾಡಿ ಗ್ರಾಮ ಇವರು  ಎರ್ಲಪಾಡಿ ಗ್ರಾಮದ ಹೆಪ್ಪಳ   ಎಂಬಲ್ಲಿ  ವಾಸವಾಗಿದ್ದು ಕಾರ್ಕಳ ಬಂಡಿಮಠದ ಬಳಿ ಇರುವ ಬಾಲಾಜಿ ಇನ್  ಎಂಬ ಹೊಟೆಲಿನಲ್ಲಿ ವೈಟರ್   ಆಗಿ ಕೆಲಸ ಮಾಡಿಕೊಂಡಿದ್ದು ಫಿರ್ಯಾದುದಾರರು  ಪ್ರತಿದಿನ ಕೆಲಸಕ್ಕೆ    ಹೋಗಲು ತಾಯಿಯ  ಹೆಸರಿನಲ್ಲಿರುವ ಕಪ್ಪು ಬಣ್ಣದ ಬೈಕ್ ಆಗಿದ್ದು  ಯಮಹಾ ಎಫ್ ಜಡ್ ಬೈಕ್   ನಂಬ್ರ  KA20EX0223  ನ್ನು ಉಪಯೋಗಿಸುತ್ತಾರೆ. ಪಿರ್ಯಾದಿದಾರರು ಹೊಟೇಲ್‌ನಿಂದ  ವಿಶ್ರಾಂತಿ ಪಡೆಯಲು ಕುಕ್ಕುಂದೂರು  ಗ್ರಾಮದ ಲಿಜ್  ಪ್ಲಾಜಾ ಎಂಬ ಕಟ್ಟಡದಲ್ಲಿ  ರೂಮ್  ನೀಡಿದ್ದು ಅದರಂತೆ ದಿನಾಂಕ 18-03-2023 ರಂದು  ಹೊಟೆಲ್‌ನಲ್ಲಿ  ರಾತ್ರಿ ಕೆಲಸ  ಮುಗಿಸಿ 12-00 ಗಂಟೆಗೆ  ಲಿಜಾ ಪ್ಲಾಜಾದ ಕಟ್ಟಡದ ಎದುರು ಬೈಕನ್ನು ಪಾರ್ಕ್  ಮಾಡಿ  ವಿಶ್ರಾಂತಿಗೆ   ರೂಮಿಗೆ ಹೋಗಿದ್ದು 19-03-2023 ರಂದು ಬೆಳಿಗ್ಗೆ   06-40 ಗಂಟೆಗೆ  ಬಂದು ನೋಡಿದಾಗ ಬೈಕ್ ನಿಲ್ಲಿಸಿದ ಸ್ಥಳದಲ್ಲಿ  ಇಲ್ಲದೇ   ಅದನ್ನು ಯಾರೋ  ಕಳವು  ಮಾಡಿಕೊಂಡು  ಹೋಗಿರುವುದಾಗಿದೆ. ಕಳವಾದ ಮೋಟಾರ್   ಸೈಕಲ್‌ನ  ಅಂದಾಜು ಮೌಲ್ಯ ರೂ  75,000/ ಆಗುಬಹುದು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ : 38/2023  ಕಲಂ 379 ಐಪಿಸಿ ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಮಾದಕ ವಸ್ತು ಸೇವನೆ ಪ್ರಕರಣ

  • ಉಡುಪಿ: ದಿನಾಂಕ: 18.03.2023 ರಂದು ಉಡುಪಿ ತಾಲೂಕು, ಹೆರ್ಗ ಗ್ರಾಮದ ಈಶ್ವರ ನಗರದ ಶಾಂಭವಿ ಪ್ಯಾಲೇಸ್ ಅಪಾರ್ಟ್‌ಮೆಂಟ್ ಬಳಿ  ಸಾರ್ವಜನಿಕ ಸ್ಥಳದಲ್ಲಿ ಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ ವ್ಯಕ್ತಿಯನ್ನು ಮಧ್ಯಾಹ್ನ 12:20 ಗಂಟೆಗೆ ವಶಕ್ಕೆ ಪಡೆದ್ದು, ಮುಂದಿನ ಕಾನೂನು ಕ್ರಮಕ್ಕಾಗಿ ವರದಿಯೊಂದಿಗೆ ಠಾಣೆಗೆ ಕರೆತಂದು ಠಾಣಾ ಪ್ರಭಾರ ಕರ್ತವ್ಯದಲ್ಲಿದ್ದ ಹೆಚ್.ಸಿ. 113 ನೇಯವರ ಮುಂದೆ ಹಾಜರುಪಡಿಸಿದ್ದು, ಸದ್ರಿಯವರು ವರದಿಯನ್ನು ಸ್ವೀಕರಿಸಿ, ಮೇಲಾಧಿಕಾರಿಯವರ ಸೂಚನೆಯ ಮೇರೆಗೆ ಆತನ ಸಮ್ಮತಿ ಪಡೆದು, ಮೆಡಿಕಲ್ ತಪಾಸಣೆಗೊಳಪಡಿಸಿರುತ್ತಾರೆ. ದಿನಾಂಕ 23.03.2023  ರಂದು ಪಿರ್ಯಾದಿ ಸುನಿಲ್ ಎ. ಪೊಲೀಸ್ ಉಪನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ ಇವರು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ಬಂದಿರುವ ತಜ್ಞ ವರದಿಯನ್ನು ಸ್ವೀಕರಿಸಿ, ವರದಿಯಲ್ಲಿ ಆರೋಪಿ ಕಾರ್ತಿಕ್ ಸಂಜೀವ ಈತನು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದರಿಂದ ಈತನ ವಿರುದ್ಧ ಸೆನ್ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 43/2023 ಕಲಂ 27 (b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಉಡುಪಿ: ದಿನಾಂಕ: 18.03.2023 ರಂದು ಉಡುಪಿ ತಾಲೂಕು,ಹೆರ್ಗಾ ಗ್ರಾಮದ ಈಶ್ವರ ನಗರ, ಪವಿತ್ರ ರೆಸಿಡೆನ್ಸಿ ಬಳಿಯ ಸಾರ್ವಜನಿಕಸ್ಥಳದಲ್ಲಿಮೇಲ್ನೋಟಕ್ಕೆ ಮಾದಕ ವಸ್ತುವನ್ನು ಸೇವಿಸಿರುವಂತೆ ಕಂಡು ಬಂದ ವ್ಯಕ್ತಿಯನ್ನು ಮಧ್ಯಾಹ್ನ 12:00 ಗಂಟೆಗೆ ವಶಕ್ಕೆ ಪಡೆದ್ದು,ಮುಂದಿನ ಕಾನೂನು ಕ್ರಮಕ್ಕಾಗಿ ವರದಿಯೊಂದಿಗೆ ಠಾಣೆಗೆ ಕರೆತಂದು ಠಾಣಾ ಪ್ರಭಾರ ಕರ್ತವ್ಯದಲ್ಲಿದ್ದ ಹೆಚ್.ಸಿ. 113 ನೇಯವರ ಮುಂದೆ ಹಾಜರುಪಡಿಸಿದ್ದು,ಸದ್ರಿಯವರು ವರದಿಯನ್ನು ಸ್ವೀಕರಿಸಿ, ಮೇಲಾಧಿಕಾರಿಯವರ ಸೂಚನೆಯ ಮೇರೆಗೆ ಆತನ ಸಮ್ಮತಿ ಪಡೆದು, ಮೆಡಿಕಲ್ ತಪಾಸಣೆಗೊಳಪಡಿಸಿರುತ್ತಾರೆ. ದಿನಾಂಕ23.03.2023  ರಂದು ಪಿರ್ಯಾದಿ ಸುನಿಲ್ ಎ.,ಪೊಲೀಸ್ ಉಪನಿರೀಕ್ಷಕರು, ಸೆನ್ ಅಪರಾಧ ಪೊಲೀಸ್ ಠಾಣೆ, ಉಡುಪಿ. ಇವರು ಮಣಿಪಾಲ ಕೆ.ಎಂ.ಸಿ. ಫಾರೆನ್ಸಿಕ್ ವಿಭಾಗದಿಂದ ಬಂದಿರುವ ತಜ್ಞ ವರದಿಯನ್ನುಸ್ವೀಕರಿಸಿ, ವರದಿಯಲ್ಲಿ ಆರೋಪಿ ಮ್ಯಾಥಿವ್ ಪಿ. ಥೋಮಸ್ ಈತನು ಗಾಂಜಾ ಸೇವನೆ ಮಾಡಿರುವುದು ಖಚಿತಪಟ್ಟಿರುವುದರಿಂದ ಈತನ ವಿರುದ್ಧ ಸೆನ್ ಅಪರಾಧ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 44/2023 ಕಲಂ 27 (b) ಎನ್‌.ಡಿ.ಪಿ.ಎಸ್ ಕಾಯ್ದೆ ಯಂತೆ ಪ್ರಕರಣ ದಾಖಲಿಸಲಾಗಿದೆ

ಅಸ್ವಾಭಾವಿಕ ಮರಣ ಪ್ರಕರಣ

  • ಶಂಕರನಾರಾಯಣ: ಮೃತ ರಮೇಶ ರಾವ್  ಪ್ರಾಯ 62 ವರ್ಷ ಇವರು   ಕೃಷಿ ಕೆಲಸ ಮಾಡಿಕೊಂಡಿದ್ದು, ಸುಮಾರು ಸಮಯದಿಂದ ಮಾನಸಿಕ  ಕಾಯಿಲೆಯಿಂದ  ಬಳಲುತ್ತಿದ್ದರು  ಹಾಗೂ  ಅವರ  ಮಗ  ರಂಜನ್ ರಾವ್ ಈತನು ಮನೆಯ ಜವಬ್ದಾರಿ ತೆಗೆದು ಕೊಳ್ಳಲಿಲ್ಲ ಎಂದು ಬೇಸರ  ಇದ್ದು,ಇದೇ ವಿಷಯದಲ್ಲಿ  ಅವರು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 23/03/2023  ರಂದು 06;30 ಘಂಟೆಯಿಂದ   09;15 ಘಂಟೆಯ ಮದ್ಯದ ಅವಧಿಯಲ್ಲಿ  ಅವರ ಅಡಿಕೆ  ತೋಟ ಇರುವ ಉಳ್ಳೂರು  74 ಗ್ರಾಮದ  ಜಾಂಬೂರು  ಎಂಬಲ್ಲಿಗೆ  ಹೋಗಿ  ಅಲ್ಲಿ  ಅಡಿಕೆ   ತೋಟದ ಬಳಿಯ  ಹಾಡಿಯಲ್ಲಿ ಇರುವ ಮರಕ್ಕೆ ಹೋಗಿ ಕುತ್ತಿಗೆಗೆ  ನೇಣು ಬಿಗಿದು  ಆತ್ಮಹತ್ಯೆ  ಮಾಡಿಕೊಂಡಿರುತ್ತಾರೆ . ಈ ಬಗ್ಗೆ ರಂಜನ್ ರಾವ್  ಪ್ರಾಯ 32  ವರ್ಷ ತಂದೆ, ರಮೇಶ  ರಾವ್  ವಾಸ, ಸುಶೀಲಾ ಸುಬ್ರಾಯ ಸದನ ಸಿದ್ದಾಪುರ ಗ್ರಾಮ  ಇವರು ದೂರು ನೀಡಿದ್ದು, ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್‌ನಂಬ್ರ 07/2023  ಕಲಂ:174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ

ಇತ್ತೀಚಿನ ನವೀಕರಣ​ : 23-03-2023 06:35 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080