ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಬ್ರಹ್ಮಾವರ: ದಿನಾಂಕ 21/03/2022 ರಂದು ಪಿರ್ಯಾದಿದಾರರಾದ ಮನೀಶ (24), ತಂದೆ: ಕೃಷ್ಣ, ವಾಸ: ಪಡುಬೆಟ್ಟು, 33ನೇ ಶಿರೂರು ಗ್ರಾಮ, ಬ್ರಹ್ಮಾವರ ತಾಲೂಕು ಇವರು ತನ್ನ KA-20-EP-2925 ನೇ ನಂಬ್ರದ ಹೀರೊ ಸ್ಪ್ಲೆಂಡರ್ ಮೋಟಾರ್‌ಸೈಕಲ್‌ನ್ನು ಸವಾರಿ ಮಾಡಿಕೊಂಡು ಬ್ರಹ್ಮಾವರ–ಬಾರ್ಕೂರು ಮುಖ್ಯ ರಸ್ತೆಯಲ್ಲಿ ಬಾರ್ಕೂರು ಕಡೆಗೆ ಹೋಗುತ್ತಾ ಬಾರ್ಕೂರು ಸೇತುವೆ ದಾಟಿ  ಕಚ್ಚೂರು ಗ್ರಾಮದ  ಬಾರ್ಕೂರು ದುರ್ಗಾ ಪರಮೇಶ್ವರಿ ದೇವಸ್ಥಾನ ಸಮೀಪ ತಲುಪುವಾಗ ಸಂಜೆ  6:15 ಗಂಟೆಗೆ ಅವರ ಎದುರಿನಿಂದ  ಬಾರ್ಕೂರು ಕಡೆಯಿಂದ ಆರೋಪಿ ರವಿ ಪೂಜಾರಿ ಅವರ KA-20-EX-1878  ನೇ ನಂಬ್ರದ ಹೀರೊ ಸ್ಪ್ಲೆಂಡರ್ ಮೋಟಾರ್ ಸೈಕಲ್ ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ  ರಸ್ತೆಯ ತೀರ ಬಲಭಾಗಕ್ಕೆ ಸವಾರಿ ಮಾಡಿ ಪಿರ್ಯಾದಿದಾರರ ಮೋಟಾರ್‌ಸೈಕಲ್‌ಗೆ ಡಿಕ್ಕಿ ಹೊಡೆದ ಪರಿಣಾಮ ಎರಡೂ ಮೋಟಾರ್ ಸೈಕಲ್‌ಗಳು ರಸ್ತೆಗೆ ಅಡ್ಡ ಬಿದ್ದು, ಪಿರ್ಯಾದಿದಾರರ ಬಲಕೈ ಹಸ್ತದ ಹೊರಭಾಗಕ್ಕೆ, ಹಣೆಗೆ, ಎಡಕಣ್ಣಿನ ಕೆಳಭಾಗ, ಕೆನ್ನೆಗೆ ಬಲ ಕಾಲಿನ ಕೋಲುಕಾಲಿಗೆ ರಕ್ತಗಾಯವಾಗಿದ್ದು.  ಅಲ್ಲದೇ ಆರೋಪಿಯ ಬಲಕೈ, ಭುಜಕ್ಕೆ, ಎಡಕಾಲು ಪಾದದ ಗಂಟಿನ ಬಳಿ ಒಳ ಜಖಂ ಆಗಿರುತ್ತದೆ. ಗಾಯಗೊಂಡ ಪಿರ್ಯಾದಿದಾರರು ಹಾಗೂ ಆರೋಪಿಯು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಬಂದು ಅಲ್ಲಿಂದ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಇಬ್ಬರೂ ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ  ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ     44/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 20/03/2022 ರಂದು ಪಿರ್ಯಾದಿದಾರರಾದ ದೀಕ್ಷಿತ್ (21), ತಂದೆ: ದಿನಕರ, ವಾಸ- ಮಾತೃಶ್ರೀ ನಿಲಯ, ಬೆನ್‌ಗಲ್ಲು, ಚೇರ್ಕಾಡಿ ಗ್ರಾಮ,ಬ್ರಹ್ಮಾವರ ತಾಲೂಕು ಇವರು ತನ್ನ KA-20-EE-4599 ನೇ ನಂಬ್ರದ ಯಮಹಾ ಆರ್15 ಮೋಟಾರ್ ಸೈಕಲ್‌ನಲ್ಲಿ ಧನುಶ್‌ ಎಂಬುವವರನ್ನುಸಹ ಸವಾರನಾಗಿ ಕುಳ್ಳಿರಿಸಿಕೊಂಡು ಪೇತ್ರಿಯಿಂದ ಮನೆಗೆ ಹೊರಟು ಪೇತ್ರಿ ಕನ್ನಾರು ಕೊಕರ್ಣೆ ರಸ್ತೆಯಲ್ಲಿ ಕನ್ನಾರು ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಾ ಸಂಜೆ 6:15 ಗಂಟೆಗೆ ಕನ್ನಾರು ಅನ್ನಪೂರ್ಣ ನರ್ಸರಿ ಬಳಿ ತಿರುವು ಹಾಗೂ ಸಪೂರ ರಸ್ತೆಯಲ್ಲಿ ತಲುಪುವಾಗ ಎದುರಿನಿಂದ ಕೊಕ್ಕರ್ಣೆ ಕನ್ನಾರು ಕಡೆಯಿಂದ ಆರೋಪಿಯು ಅವರ KA-20-ME-0708 ನೇ ನಂಬ್ರದ TATA TIGOR EV ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಅವರ ಮುಂಭಾಗದಲ್ಲಿ ಹೋಗುತ್ತಿದ್ದ ರಿಕ್ಷಾವನ್ನು ಓವರ್ ಟೇಕ್ ಮಾಡಲು ಅವರ ತೀರಾ ಬಲಭಾಗಕ್ಕೆ ಚಲಾಯಿಸಿ ಪಿರ್ಯಾದಿದಾರರ ಮೋಟಾರ್‌ಸೈಕಲ್‌ನ ಬಲಬದಿಯ ಸೈಲೆನ್ಸರ್ , ಹ್ಯಾಂಡಲ್‌ಬಾರ್‌ಗೆ ತಾಗಿಕೊಂಡು ಹೋಗಿರುತ್ತದೆ. ಪರಿಣಾಮ ಪಿರ್ಯಾದಿದಾರರು ರಸ್ತೆ ಎಡಭಾಗದ ಮಣ್ಣು  ರಸ್ತೆಯಲ್ಲಿ  ಸ್ವಲ್ಪ ಮುಂದೆ ಹೋಗಿ ಮೋಟಾರ್ ಸೈಕಲ್ ಸಮೇತ ಬಿದ್ದು ಅವರ ಬಲ ಕೈ ಕಿರುಬೆರಳಿಗೆ ಚರ್ಮ ಸುಲಿದು ಹೋದ ರಕ್ತಗಾಯ ಉಂಟಾಗಿದ್ದು ಅಲ್ಲದೇ ಬಲಕಾಲು ಗಂಟಿಗೆ ತರಚಿದ ಗಾಯವಾಗಿರುತ್ತದೆ. ಹಾಗೂ ಮೋಟಾರ್‌ಸೈಕಲ್‌ನಲ್ಲಿದ್ದ ಸಹ ಸವಾರ ಧನುಶ್‌ಗೆ ಯಾವುದೇ ನೋವು ಆಗಿರುವುದಿಲ್ಲ. ಗಾಯಗೊಂಡ ಪಿರ್ಯಾದಿದಾರರು ಚಿಕಿತ್ಸೆ ಬಗ್ಗೆ ಬ್ರಹ್ಮಾವರ ಮಹೇಶ್‌ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 46/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ: ದಿನಾಂಕ 20/03/2022 ರಂದು ಪಿರ್ಯಾದಿದಾರರಾದ ಡಾ|| ಹೆಮಂತ್ ಭಟ್ (28), ತಂದೆ: ಪಿ ರಾಮಚಂದ್ರ ಭಟ್, ವಾಸ: ರಾಮಕೃಷ್ಣ ನಿಲಯ, ಪುಣಚೂರು, ಬೆಳ್ಳಂಪಳ್ಳಿ ಅಂಚೆ ಮತ್ತು ಗ್ರಾಮ, ಉಡುಪಿ ತಾಲೂಕು ತನ್ನ  KA-20-ME-0708 ನೇ ನಂಬ್ರದ TATA TIGOR EV ಕಾರಿನಲ್ಲಿ ಅವರ ತಂದೆ ಹಾಗೂ ತಂಗಿಯೊಂದಿಗೆ ಚೇರ್ಕಾಡಿ ಗ್ರಾಮದ ಪೇತ್ರಿ ಅನ್ನಪೂರ್ಣ ನರ್ಸರಿಯಿಂದ ಪೇತ್ರಿ ಕಡೆಗೆ ಸಪೂರ ಹಾಗೂ ತಿರುವು ರಸ್ತೆಯಲ್ಲಿ ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಸಂಜೆ 6:00 ಗಂಟೆಗೆ ಅವರ ಮುಂಭಾಗದಲ್ಲಿ  ರಿಕ್ಷಾವೊಂದು ಹೋಗುತ್ತಿದ್ದು, ಅದರ ಚಾಲಕ ರಿಕ್ಷಾವನ್ನು ನಿಧಾನಿಸಿ ನಿಲ್ಲಿಸಿದ್ದು, ಆಗ ಪಿರ್ಯಾದಿದಾರರು ಅವರ ಕಾರನ್ನು ರಿಕ್ಷಾದ ಹಿಂಭಾಗಲ್ಲಿ ನಿಲ್ಲಿಸಿರುತ್ತಾರೆ. ಅದೇ ಸಮಯ ಅವರ ಎದುರಿನಿಂದ  ಪೇತ್ರಿ ಕಡೆಯಿಂದ ಆರೋಪಿ ದೀಕ್ಷಿತ್ (21), ತಂದೆ: ದಿನಕರ, ವಾಸ- ಬೆನಗಲ್, ಚೇರ್ಕಾಡಿ ಗ್ರಾಮ  ತನ್ನ  KA-20-EE-4599  ನೇ ನಂಬ್ರದ ಯಮಹಾ ಆರ್15 ಮೋಟಾರ್ ಸೈಕಲ್‌ನ್ನು  ತಿರುವು ಹಾಗೂ ಸಪೂರ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಸವಾರಿ ಮಾಡಿಕೊಂಡು ಬಂದು ಪಿರ್ಯಾದಿದಾರರ  ಕಾರಿನ ಬಲಭಾಗದ ಎರಡೂ ಡೋರಿನ ಭಾಗಕ್ಕೆ ಗೀರಿಕೊಂಡು ಹೋಗಿ, ಮೋಟಾರ್ ಸೈಕಲ್ ನಿಯಂತ್ರಣ ತಪ್ಪಿ ಮುಂದಕ್ಕೆ ಹೋಗಿ ರಸ್ತೆಯ ಅಂಚಿನಲ್ಲಿ ಬಿದ್ದಿದ್ದು. ತಕ್ಷಣ ಆತ ಮೋಟಾರ್ ಸೈಕಲ್‌ನ್ನು ಬಿದ್ದ ಸ್ಥಿತಿಯಲ್ಲಿಯೇ ಬಿಟ್ಟು ಕಾರಿನ ಬಳಿ ಬಂದು ಪಿರ್ಯಾದಿದಾರರನ್ನು ಉದ್ಧೇಶಿಸಿ ಅವಾಚ್ಯ ಶಬ್ದಗಳಿಂದ ಬೈದಿದ್ದು, ಆಗ ಪಿರ್ಯಾದಿದಾರರು ಹಾಗೂ ಅವರ ತಂದೆ ಕಾರಿನಿಂದ ಇಳಿದಾಗ ಆರೋಪಿಯು ಪುನಃ ಅದೇ ರೀತಿ ಬೈದು ಅಂಗಿ, ಕಾಲರ್ ಪಟ್ಟಿಯನ್ನು ಹಿಡಿದು ಕೈಯಿಂದ ಪಿರ್ಯಾದಿದಾರರ ತಲೆಯ  ಎಡಭಾಗಕ್ಕೆ ಹೊಡೆದು ಅಲ್ಲಿಂದ ಆತನ ಮೋಟಾರ್‌ಸೈಕಲ್‌ನೊಂದಿಗೆ ಹೋಗಿರುತ್ತಾನೆ. ಬಳಿಕ ಪಿರ್ಯಾದಿದಾರರು ಮನೆಗೆ ಹೋಗಿ ಮನೆಯಲ್ಲಿಯೇ ಚಿಕಿತ್ಸೆ ಪಡೆದಿದ್ದು, ದಿನಾಂಕ 21/03/2022 ರಂದು ಅವರ ಎಡಭಾಗದ ತಲೆಯ ಭಾಗಕ್ಕೆ ನೋವು ಜಾಸ್ತಿ ಆಗಿದ್ದರಿಂದ ಕಣ್ಣು ಮಂಜಾದಂತೆ ಆಗಿದ್ದು ಈ ಬಗ್ಗೆ ಬ್ರಹ್ಮಾವರ ಸರ್ಕಾರಿ ಆಸ್ಪತ್ರೆಗೆ ಹೋಗಿ ಪರೀಕ್ಷಿಸಿ ಅಲ್ಲಿಂದ ಹೆಚ್ಚಿನ ಚಿಕಿತ್ಸೆ ಬಗ್ಗೆ ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 45/2022 ಕಲಂ: 279, 323, 504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ದಯಾನಂದ (54), ತಂದೆ: ದಿ. ಶ್ರೀನಿವಾಸ, ವಾಸ: ಅಡ್ಕ, 2 ನೇ ಕ್ರಾಸ್, ಭಗವತಿ ದೇವಸ್ಥಾನದ ಬಳಿ, ಸೋಮೇಶ್ವರ ಗ್ರಾಮ, ಮಂಗಳೂರು ತಾಲೂಕು, ದ.ಕ. ಜಿಲ್ಲೆ ಇವರ ಮಗ ವಿರಾಜ್ ಡಿ (20) ಇವರು ಮದುವೆ ಕಾರ್ಯಕ್ರಮಗಳ ಡೆಕೋರೇಷನ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 20/03/2022 ರಂದು ಆತನ ಹುಟ್ಟಿದ ದಿನವಾಗಿದ್ದು, ಆತನು ತಾನು ಉಡುಪಿಗೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ಹೋಗಿದ್ದು,  KA-19-HF-2172 ನೇ ನಂಬ್ರದ ಮೋಟಾರ್ ಸೈಕಲ್ಲಿನಲ್ಲಿ ರಾಷ್ಟ್ರೀಯ ಹೆದ್ದಾರಿ-66 ರಲ್ಲಿ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಸಾಗುವ ಏಕಮುಖ ಸಂಚಾರ ರಸ್ತೆಯಲ್ಲಿ  ಹೋಗುತ್ತಾ 13:40 ಗಂಟೆಗೆ ಕಾಪು ತಾಲೂಕು ಬಡಾ ಎರ್ಮಾಳು ಗ್ರಾಮದ ಬುದಗಿ ಪೆಟ್ರೋಲ್ ಪಂಪ್ ಡಿವೈಡರ್ ಬಳಿ ಆತನು ತನ್ನ ಮೋಟಾರ್ ಸೈಕಲ್ಲನ್ನು ಅತೀವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿದ್ದರಿಂದ ಮೋಟಾರ್‌ಆತನ ನಿಯಂತ್ರಣ ತಪ್ಪಿ ರಸ್ತೆಯ ಮಧ್ಯದ ಡಿವೈಡರ್‌‌ಗೆ  ಬೈಕಿನ ಬಲಬದಿಯ ಗಾರ್ಡ್‌ತಾಗಿ ವಿರಾಜನು ಮೋಟಾರ್‌‌ ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಇದರಿಂದ ಆತನ ಕುತ್ತಿಗೆ ಮತ್ತು ಬಲಕೈಗೆ ಮೂಳೆ ಮುರಿತದ ಗಾಯವಾಗಿರುತ್ತದೆ. ನಂತರ ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಅಂಬ್ಯುಲೆನ್ಸ್‌‌ನಲ್ಲಿ ಹೈಟೆಕ್‌‌ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯಾಧಿಕಾರಿಯವರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳ ರೋಗಿಯಾಗಿ ದಾಖಲಿಸಿರುವುದಾಗಿದೆ.  ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 30/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ರವಿ ದೇವಾಡಿಗ (24), ತಂದೆ: ನರಸಿಂಹ ದೇವಾಡಿಗ ವಾಸ: ಸಣ್ಣ ಬೆಸ್ಕೂರು  ತಾರಾಪತಿ ಪಡುವರಿ ಗ್ರಾಮ ಬೈಂದೂರು ತಾಲೂಕು ಇವರ ಮನೆಯ ಪಕ್ಕದಲ್ಲಿ ಅಜ್ಜಿ  ಕಸ್ತೂರಿ ದೇವಾಡಿಗ (58) ರವರು  ಮಗಳಾದ ಮುಕಾಂಬು  ಹಾಗೂ ಜ್ಯೋತಿ ರವರ ಜೊತೆಯಲ್ಲಿ ವಾಸ ಮಾಡಿಕೊಂಡಿದ್ದು ಮನೆಯಲ್ಲಿ ದನಕರುಗಳನ್ನು ಸಾಕಿಕೊಂಡು ಕೃಷಿ ಕೆಲಸ ಮಾಡಿಕೊಂಡಿರುತ್ತಾರೆ. ಕಸ್ತೂರಿ ದೇವಾಡಿಗ ರವರು  ದಿನಾಂಕ 22/03/2022 ರಂದು ಬೆಳಿಗ್ಗೆ  08:00 ಗಂಟೆಗೆ ದನಕರುಗಳಿಗೆ ಹುಲ್ಲು ಮೇವು ತರಲು ಮನೆಯಿಂದ ಹೋದವರು ಬೆಳಿಗ್ಗೆ 10:00 ಗಂಟೆಯಾದರೂ ಬಾರದೇ ಇರುವುದನ್ನು ಕಂಡು ಕಸ್ತೂರಿ ದೇವಾಡಿಗ ರವರ ಮಗಳು  ಮುಕಾಂಬುರವರು ಪಿರ್ಯಾದಿದಾರರ ಮನೆಗೆ ಬಂದು ವಿಚಾರ ತಿಳಿಸಿದಂತೆ  ಪಿರ್ಯಾದಿದಾರರು ಮುಕಾಂಬು ರವರೊಂದಿಗೆ  ಕಸ್ತೂರಿ ದೇವಾಡಿಗರನ್ನು ಹುಡುಕಿಕೊಂಡು  ಹೋಗುವ ವೇಳೆ  ಪಡುವರಿ ಗ್ರಾಮದ ಸಣ್ಣ ಬೆಸ್ಕೂರು  ಎಂಬಲ್ಲಿ ಸುಮನಾ ಹೊಳೆಯಲ್ಲಿ  ಮೃತ ದೇಹ ಒಂದು ತೇಲುತ್ತಿರುವುದನ್ನು ಕಂಡು ಪಿರ್ಯಾದಿದಾರರು ಸ್ಥಳೀಯರ ಸಹಾಯದಿಂದ  ಮೃತ ದೇಹವನ್ನು ಹೊಳೆಯಿಂದ  ಮೇಲಕ್ಕೆ ಎತ್ತಿ  ತಂದು ನೋಡಿದಾಗ ಪಿರ್ಯಾದಿದಾರರ ಅಜ್ಜಿ  ಕಸ್ತೂರಿ ದೇವಾಡಿಗ ರವರ ಮೃತ ದೇಹವಾಗಿರುತ್ತದೆ. ಪಿರ್ಯಾದಿದಾರರು ವಾಹನದಲ್ಲಿ  ಬೈಂದೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಾಗ ವೈದ್ಯರು  ಪರೀಕ್ಷೀಸಿ  ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಕಸ್ತೂರಿ ದೇವಾಡಿಗ  ರವರು ಮೇವು ಹುಲ್ಲನ್ನು  ತಲೆಯ ಮೇಲೆ ಹೊತ್ತುಕೊಂಡು  ಮನೆ ಕಡೆ ಬರುವಾಗ  ಸಣ್ಣ  ಬೆಸ್ಕೂರು  ಸುಮನಾ ಹೊಳೆಯ ಬದಿ ದನಗಳು ಒಂದಕ್ಕೊಂದು  ಗುದ್ದಾಟ ಮಾಡಿ ಕೊಂಡಿದ್ದು ಆ ಸಮಯ ದನಗಳು ಹಾಯುವುದನ್ನು ತಪ್ಪಿಸಲು  ಕಸ್ತೂರಿ ದೇವಾಡಿಗ ರವರು  ರಸ್ತೆಯ ಬದಿಗೆ ಹೋದಾಗ  ಆಕಸ್ಮಿಕವಾಗಿ ಕಾಲು ಜಾರಿ ಆಯತಪ್ಪಿ ಸುಮನಾ ಹೊಳೆಗೆ ಬಿದ್ದು ಮೃತಪಟ್ಟಿರುವುದಾಗಿ ಸ್ಥಳೀಯರಿಂದ ತಿಳಿದಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 14/2022 ಕಲಂ: 174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಶ್ರೀಮತಿ  ವಿಮಲ.ವಿ (25),  ಗಂಡ: ಸುನೀಲ್‌ .ಕೆ  ವಾಸ: ಮನೆ ನಂಬ್ರ A143, ಸುಬ್ರಹ್ಮಣ್ಯ ದೇವಸ್ಥಾನದ ಬಳಿ, ಕುಕ್ಕಿಕಟ್ಟೆ, ಉಡುಪಿ ತಾಲೂಕು ಖಾಯಂ ವಿಳಾಸ: ಮನೆ ನಂಬ್ರ: 24, 1 ಮುಖ್ಯರಸ್ತೆ, 1ನೇ ಅಡ್ಡರಸ್ತೆ, ಕುವೆಂಪುನಗರ, ಹೆಚ್‌. ಗೊಲ್ಲಹಳ್ಳಿ, ಕೆಂಗೇರಿ, ಬೆಂಗಳೂರು ಇವರ ಗಂಡ ಸುನಿಲ್‌.ಕೆ  (28) ರವರು ಆಟೋ  ರಿಕ್ಷಾ ಚಾಲಕರಾಗಿದ್ದು, ತನಗಿದ್ದ  ಆರ್ಥಿಕ  ಸಂಕಷ್ಟದಿಂದ  ಜೀವನದಲ್ಲಿ  ಬೇಸತ್ತು  ದಿನಾಂಕ 15/03/2022 ರಂದು  ಮಧ್ಯಾಹ್ನ 2:00  ಗಂಟೆಯ  ಸುಮಾರಿಗೆ  ಮನೆಯಲ್ಲಿ  Ratol ಇಲಿ  ಪಾಷಾಣವನ್ನು  ಸೇವಿಸಿ, ತೀವ್ರ ಅಸ್ವಸ್ಥರಾದವರನ್ನು  ಚಿಕಿತ್ಸೆಯ  ಬಗ್ಗೆ ಅಜ್ಜರಕಾಡು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಐಸಿಯುನಲ್ಲಿ ಚಿಕಿತ್ಸೆಯಲ್ಲಿರುತ್ತಾ ಚಿಕಿತ್ಸೆ ಫಲಕಾರಿಯಾಗದೇ  ದಿನಾಂಕ 22/03/2022 ರಂದು ಮಧ್ಯಾಹ್ನ 3:40  ಗಂಟೆಗೆ ಮೃತಪಟ್ಟಿರುತ್ತಾರೆ. ಈ ಬಗ್ಗೆ  ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 17/2022 ಕಲಂ: 174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿದಾರರಾದ ಶೋಭಾ(50),  ಗಂಡ: ಗೋವಿಂದ ಕುಂಬಾರ, ವಾಸ: ಬಂಗ್ರಬೈಲು ಮನೆ, ಪೆರ್ಡೂರು ಅಂಚೆ ಮತ್ತು ಗ್ರಾಮ ಉಡುಪಿ ಇವರು ದಿನಾಂಕ 22/03/2022 ರಂದು ತನ್ನ ವಾಸದ  ಮನೆಯಲ್ಲಿದ್ದು ಮದ್ಯಾಹ್ನ 12:30 ಗಂಟೆಗೆ ಮನೆಯ ಗೇಟಿನ ಬಳಿ ಒರ್ವ ವ್ಯಕ್ತಿ  ಬೈಕಿನಲ್ಲಿ ಬಂದು ಪಿರ್ಯಾದಿದಾರರನ್ನು ಕರೆದು ಮಾರಾಟ ಮಾಡುವ ಕೋಳಿ ಇದೆಯ ಎಂದು ಕೇಳಿರುತ್ತಾನೆ. ಪಿರ್ಯಾದಿದಾರರು ಇಲ್ಲ ಎಂದು ತಿಳಿಸಿದ್ದು , ಅತನು ಇನ್ನೆರಡು ಮನೆಯಲ್ಲಿ ಕೋಳಿ ಇದೆಯ ಎಂದು ಕೇಳಿ ಬರುತ್ತೇನೆ ಎಂದು  ಹೇಳಿ ಬೈಕಿನಲ್ಲಿ ಹೋಗಿರುತ್ತಾನೆ.  ಸ್ವಲ್ಪ ಸಮಯದ ನಂತರ 12:45 ಗಂಟೆಗೆ  ವಾಪಾಸು ಬಂದು  ಎಲ್ಲಿಯೂ ಕೋಳಿ ಸಿಗಲಿಲ್ಲ ಎಂದು ಹೇಳಿ ಮನೆಯ ಪಕ್ಕದಲ್ಲಿದ್ದ ಜಂಬು ನೇರಳೆ  ಕಾಯಿಯನ್ನು ಕೊಯ್ಯತ್ತಿದ್ದನು. ಪಿರ್ಯಾದಿದಾರರು ಅತನಿಗೆ ಪ್ಲಾಸ್ಟಿಕ್ ಕವರ್‌ನ್ನು ನೀಡಿ ಜಂಬು ನೇರಳೆ ಹಣ್ಣನ್ನು ನೋಡುತ್ತಿದ್ದರು ಅ ಸಮಯ ಆ ವ್ಯಕ್ತಿ ಪಿರ್ಯಾದಿದಾರ ಹಿಂದಿನಿಂದ ಬಂದು ಕುತ್ತಿಗೆಗೆ ಕೈ ಹಾಕಿ ಕುತ್ತಿಗೆಯಲ್ಲಿದ್ದ ಕರಿಮಣಿ ಸರವನ್ನು ಕೈಗಳಿಂದ ಎಳೆದು ತುಂಡು ಮಾಡಿ ಕಸಿದುಕೊಂಡು ಅಲ್ಲಿಂದ ಮನೆಯ ಪಶ್ಚಿಮ ಭಾಗದ ಹಾಡಿಗೆ ಓಡಿ ಹೋಗಿರುತ್ತಾನೆ. ಕರಿಮಣಿ ಸರ  4 ಪವನ್ ಇದ್ದು ಅದರ ಮೌಲ್ಯ 1,20000/- ಆಗಿರುತ್ತದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 13/2022 ಕಲಂ: 392 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 23-03-2022 09:39 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080