ಅಭಿಪ್ರಾಯ / ಸಲಹೆಗಳು

  • ಅಫಘಾತ ಪ್ರಕರಣ
  • ಬೈಂದೂರು: ಪಿರ್ಯಾದಿ ವಿನಯ್ ಇವರು ದಿನಾಂಕ 22-03-2022 ರಂದು  ಬೆಳಿಗ್ಗೆ  9:45 ಗಂಟೆಗೆ ಅವರ ಬಾಬ್ತು  KA 20 ED 1497  ನೇ ಮೋಟಾರು ಸೈಕಲ್ ನಲ್ಲಿ ಅವರ ಅತ್ತೆ ಮಾಚಿ ರವರನ್ನು  ಸಹ ಸವಾರಳಾಗಿ ಕುಳ್ಳಿರಿಸಿಕೊಂಡು ಪಡಿತರ ರೇಷನ್ ತರುವ ಸಲುವಾಗಿ ಅಳ್ವೆಕೋಡಿ ತಾರಾಪಾತಿಯಿಂದ ಹೊರಟು ಉಪ್ಪುಂದ  ಗ್ರಾಮದ ಉಪ್ಪುಂದ ಸೇತುವೆ ಬಳಿ ರಾ ಹೆ 66 ರ ಪಶ್ಚಿಮ ಬದಿಯ ರಸ್ತೆಯ  ಎಡ ಬದಿಯಲ್ಲಿ ಹೋಗುತ್ತಿರುವಾಗ  ಪಿರ್ಯಾದುದಾರರ ಹಿಂದಿನಿಂದ  ಆರೋಪಿ ರಂಗೇಶ್ ನು ಆತನ ಬಾಬ್ತು KA 19 EW 6019 ನೇ ಮೋಟಾರು ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಪಿರ್ಯಾದುದಾರರ ಮೋಟಾರು ಸೈಕಲ್ ಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದುದಾರರು ಹಾಗೂ ಸಹ ಸವಾರಳಾದ ಮಾಚಿ ರವರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದು  ಪಿರ್ಯಾದುದಾರರಿಗೆ ಬಲ ಕಾಲಿನ ಮಂಡಿ ಹಾಗೂ ಪಾದದ ಹೆಬ್ಬೆರಳಿಗೆ ಸಣ್ಣಪುಟ್ಟ  ತರಚಿದ ಗಾಯವಾಗಿದ್ದು  ಸಹ ಸವಾರಳಾದ ಮಾಚಿರವರಿಗೆ ಎಡ ಕಾಲಿನ  ಪಾದದ ಮೇಲ್ ಭಾಗದ ಬಳಿ ತೀವ್ರ ಸ್ವರೂಪದ  ಮೂಳೆ ಮುರಿತದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ108 ವಾಹನದಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದು ಕೊಂಡು ಹೋದಲ್ಲಿ ವೈದ್ಯರು  ಪರೀಕ್ಷೀಸಿ ಹೆಚ್ಚಿನ ಚಿಕಿತ್ಸೆ ಬಗ್ಗೆ  ಸೂಚಿಸಿದಂತೆ ಕುಂದಾಪುರ ಶ್ರೀ ದೇವಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ 65/2022 ಕಲಂ. 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಪಡುಬಿದ್ರಿ: ಪಿರ್ಯಾದಿ ಹೆಚ್‌‌ಬಿ ಮಹಮ್ಮದ್  ಇವರು ಕಾಪು ತಾಲೂಕು ಹೆಜಮಾಡಿ ಗ್ರಾಮದ ಹೆಜಮಾಡಿ ಗುಂಡಿ ನಿವಾಸಿಯಾಗಿದ್ದು, ರಿಯಲ್ ಎಸ್ಟೇಟ್ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ: 20.03.2022 ರಂದು ಪಿರ್ಯಾದಿದಾರರ ಸಂಬಂಧಿ ಬಿ.ಕೆ. ಮಹಮ್ಮದ್ ಹೆಜಮಾಡಿ ಎಂಬುವರು ಹೆಜಮಾಡಿ ಹೈವೇಯ ಬಳಿ ಜಾಗ ನೋಡಲು ಇದೆ ಎಂದು ಹೇಳಿ ಪಿರ್ಯಾದಿದಾರರನ್ನು ತಮ್ಮ ಬಾಬ್ತು KA-20-EM-6247 ನೇ ನಂಬ್ರದ ಸ್ಕೂಟಿಯಲ್ಲಿ ಸಹ ಸವಾರರನ್ನಾಗಿ ಕುಳ್ಳಿರಿಸಿಕೊಂಡು ಅವರ ಮನೆಯಿಂದ ಹೊರಟಿದ್ದು, ಸಮಯ ಸಂಜೆ 19:35 ಗಂಟೆಯ ವೇಳೆಗೆ ಹೆಜಮಾಡಿ ಗುಂಡಿ ಒಳರಸ್ತೆಯ ಮಣ್ಣು ರಸ್ತೆಯಿಂದ ಕಾಂಕ್ರೀಟ್ ರಸ್ತೆಗೆ ಜಾಯಿಂಟ್ ಆಗುವಲ್ಲಿ ಸ್ವಲ್ಪ ಏರು ಇದ್ದು, ಸ್ಟೂಟಿ ಸವಾರ ಬಿ.ಕೆ. ಮಹಮ್ಮದ್ ಹೆಜಮಾಡಿ ರವರು ಸ್ಕೂಟಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸುತ್ತಾ ಒಮ್ಮೆಲೇ ಬ್ರೇಕ್ ಹಾಕಿದ  ಪರಿಣಾಮ ಸ್ಕೂಟಿ ರಸ್ತೆಗೆ ಬಿದ್ದು, ಪಿರ್ಯಾದಿದಾರರೂ ರಸ್ತೆಗೆ ಬಿದ್ದಿರುತ್ತಾರೆ. ಸದ್ರಿ ಸಮಯ ಪಿರ್ಯಾದಿದಾರರ ಸೊಂಟ ನೋವುಂಟಾಗಿದ್ದು, ನಂತರ ಮನೆಗೆ ಬಂದು ನೋವಿನ ಮಾತ್ರೆ ತಿಂದಿರುತ್ತಾರೆ. ನಂತರ ದಿನಾಂಕ: 21.03.2022 ರಂದು ಪಿರ್ಯಾದಿದಾರರಿಗೆ ಎಡಭಾಗ ಸೊಂಟದ ಕೆಳಗೆ ವಿಪರೀತ ನೋವುಂಟಾಗಿದ್ದರಿಂದ, ಅವರ ಪತ್ನಿ ಝರೀನಾ ರವರು ಪಿರ್ಯಾದಿದಾರರನ್ನು ಚಿಕಿತ್ಸೆಯ ಬಗ್ಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿಅಲ್ಲಿನ ವೈದ್ಯರು ಪರೀಕ್ಷಿಸಿ ಅವರ ಎಡಭಾಗ ಸೊಂಟದ ಕೆಳಗೆ ಮೂಳೆ ಮುರಿತ ಉಂಟಾಗಿರುವುದಾಗಿ ತಿಳಿಸಿ ಒಳ ರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ 31/2022 ಕಲಂ 279,  338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 

ಅಸ್ವಾಭಾವಿಕ ಮರಣ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿ ಪ್ರಕಾಶ್ ಶೆಟ್ಟಿ ಇವರ ತಂದೆಯ ಅಕ್ಕನ ಮಗಳು ಲಲಿತಾ ಶೆಟ್ಟಿ ರವರ ಮಗನಾದ ಯಶವಂತ ಶೆಟ್ಟಿ(54 ವರ್ಷ) ಎಂಬವರು ಈ ಹಿಂದೆ ಮುಂಬೈಯಲ್ಲಿ ಹೋಟೆಲ್ ಮಾಡಿಕೊಂಡಿದ್ದು, ಕಳೆದ 3 ವರ್ಷದ ಹಿಂದೆ ಲಾಕ್‌‌ಡೌನ್ ಕಾರಣ ಕಾಪು ತಾಲೂಕು ಹೆಜಮಾಡಿ ಗ್ರಾಮದಲ್ಲಿರುವ ಅವರ ಮನೆಗೆ  ಬಂದಿದ್ದು, ಯಾವುದೇ ಕೆಲಸವಿಲ್ಲದೇ ಮನೆಯಲ್ಲಿಯೇ ಇದ್ದು, ನಂತರ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ಈ ಬಗ್ಗೆ ಸುರತ್ಕಲ್ ನಲ್ಲಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿರುವುದಾಗಿದೆ. ಸದ್ರಿ ಯಶವಂತ ಶೆಟ್ಟಿ ಯವರು ಮನೆಯಲ್ಲಿ ಯಾರೊಂದಿಗೂ ಬೆರೆಯದೇ ಅವರಷ್ಟಕ್ಕೇ ಇರುತ್ತಿದ್ದು, ನ ದಿನಾಂಕ:23.03.2022 ರಂದು ಬೆಳಿಗ್ಗೆ 07:00 ಗಂಟೆಯಿಂದ 07:45 ಗಂಟೆಯ ಮದ್ಯಾವಧಿಯಲ್ಲಿ ಮಾನಸಿಕ ಖಿನ್ನತೆಯ ವಿಚಾರಕ್ಕೆ  ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 15/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 23-03-2022 05:39 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080