ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಹಿರಿಯಡ್ಕ: ಪಿರ್ಯಾದಿದಾರರಾದ ಉಮೇಶ್ ಪೂಜಾರಿ (43), ತಂದೆ: ದಿ. ಮುತ್ತಯ್ಯ ಪೂಜಾರಿ, ವಾಸ: ತುಂಬೆ ಹಿತ್ಲು,ಜೋಡು ರಸ್ತೆ, ಕುಕ್ಕುಂದೂರು ಗ್ರಾಮ, ಕಾರ್ಕಳ ತಾಲೂಕು ಕು,  ಉಡುಪಿ ಜಿಲ್ಲೆ ಇವರು KA-20-A-7729 ಎಸ್.ವಿ.ಟಿ. ಬಸ್ ನಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತಾರೆ. ದಿನಾಂಕ 22/03/2021 ರಂದು ಬಸ್ ನಲ್ಲಿ ಕಂಡಕ್ಟರ್ ಸುರೇಶ್ ನವರು ಇದ್ದು, ಸಂಜೆ 5:40 ಗಂಟೆಗೆ ಅಜೆಕಾರಿನಿಂದ ಪ್ರಯಾಣಿಕರನ್ನು ತುಂಬಿಸಿಕೊಂಡು ಉಡುಪಿ ಕಡೆಗೆ ಹೊರಟಿದ್ದು ಸಂಜೆ 6:20 ಗಂಟೆಗೆ ರಾಷ್ಟ್ರೀಯ ಹೆದ್ದಾರಿ 169 ಎ ರಲ್ಲಿ ಪುತ್ತಿಗೆಯ ಇಳಿಜಾರು ರಸ್ತೆಯಲ್ಲಿ ಬರುತ್ತಿದ್ದಾಗ ಹಿರಿಯಡ್ಕ ಕಡೆಯಿಂದ ಪೆರ್ಡೂರು ಕಡೆಗೆ ಒರ್ವ ಮೋಟಾರು ಸೈಕಲ್ ಸವಾರ ಹೆಂಗಸೊಬ್ಬರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ತನ್ನ ಎದುರಿನಿಂದ ಕಾರೊಂದನ್ನು ಹಿಂದಿಕ್ಕುವ ಭರದಲ್ಲಿ ರಸ್ತೆಯ ತೀರಾ ಬಲಭಾಗಕ್ಕೆ ಚಲಾಯಿಸಿ ಬಸ್ಸಿನ ಬಲಭಾಗಕ್ಕೆ  ಢಿಕ್ಕಿ ಹೊಡೆದ ಹೊಡೆದ ಪರಿಣಾಮ ಮೋಟಾರ್ ಸೈಕಲ್ ಸವಾರರು ಮೋಟಾರು ಸೈಕಲ್ ಸಮೇತ ರಸ್ತೆಗೆ ಬಿದ್ದಿದ್ದು, ಮೋಟಾರು ಸೈಕಲ್ ಸವಾರರ ತಲೆಗೆ ಗಂಭೀರ ಸ್ವರೂಪದ ರಕ್ತಗಾಯವಾಗಿದ್ದು, ಹಿಂಬದಿ ಸವಾರರಿಗೆ ಕೂಡ ಗಾಯವಾಗಿರುತ್ತದೆ. ಇಬ್ಬರೂ ಕೂಡ ಮಾತನಾಡುತ್ತಿರಲಿಲ್ಲ. ಅವರು ಸವಾರಿ ಮಾಡಿಕೊಂಡಿದ್ದ ಮೋಟಾರು ಸೈಕಲ್ ನಂಬ್ರ KA-17-HD-5620 ಆಗಿದ್ದು, ಗಾಯಗೊಂಡ ಅವರಿಬ್ಬರನ್ನು ಒಂದು ಅಂಬುಲೆನ್ಸ್ ನಲ್ಲಿ ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಅದರಲ್ಲಿ ಸವಾರನ ಹೆಸರು ಶರಣ್,  ಸಹಸವಾರರ ಹೆಸರು ಉಷಾ ಆಗಿದ್ದು, ಅದರಲ್ಲಿ ಶರಣ್ ರವರು ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯದಲ್ಲಿಯೇ ಮೃತಪಟ್ಟಿದ್ದು, ಸಹ ಸವಾರೆ ಚಿಕಿತ್ಸೆಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 13/2021 ಕಲಂ: 279, 337, 304(ಎ) ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಶ್ರೀಮತಿ ಲಕ್ಷ್ಮಿ (65), ಗಂಡ: ದಿ. ಹೆರಿಯ ಪೂಜಾರಿ, ವಾಸ: ಬೈಲು ಮನೆ ಮುದ್ದೇರು ಬೆಟ್ಟು  ಕೊರವಡಿ ತೆಕ್ಕಟ್ಟೆ ಗ್ರಾಮ ಕುಂದಾಪುರ ತಾಲೂಕು ಇವರು ದಿನಾಂಕ 22/03/2021 ರಂದು ಬೆಳಿಗ್ಗೆ 10:00 ಗಂಟೆಗೆ ಮನೆಯ ಸಾಮಾನು ತೆಗೆದುಕೊಂಡು ಬರಲು  ಕೊರವಡಿಯಿಂದ ಹೊರಟು ತೆಕ್ಕಟ್ಟೆ ಪೇಟೆಗೆ ಹೋಗಿ ಸಾಮಾನುಗಳನ್ನು ತೆಗೆದುಕೊಂಡು ವಾಪಾಸ್ಸು ಮನೆಯಾದ ಕೊರವಡಿಗೆ ಹೋಗಲು ಉಡುಪಿ –ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರ ಮಣ್ಣು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ 11:25 ಗಂಟೆಗೆ ತೆಕ್ಕಟ್ಟೆಯ ರಾಘವೆಂದ್ರ ಮಠಕ್ಕೆ ಹೋಗುವ ರಸ್ತೆಯ ಬಳಿಯಲ್ಲಿ ಹೋಗುತ್ತಿರುವಾಗ ಪಿರ್ಯಾದಿದಾರರ ಹಿಂಬದಿಯಿಂದ KA-20-EB-7799 ನೇ ಮೋಟಾರ್ ಸೈಕಲ್ ಸವಾರ ಲೊಕೇಶ ಆಚಾರ್ಯ  ತನ್ನ ಮೋಟಾರ್ ಸೈಕಲನ್ನು ಅತಿವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದ ಪರಿಣಾಮ ಕಾಲು ಮತ್ತು ಕೈಗೆ ನೋವಾಗಿದ್ದು, ಕೂಡಲೇ ಅಲ್ಲಿದ್ದವರು ಚಿಕಿತ್ಸೆಯ ಬಗ್ಗೆ ಎನ್.ಆರ್ ಆಚಾರ್ಯ ಆಸ್ಪತ್ರೆ ಕೊಟೇಶ್ವರಕ್ಕೆ ಚಿಕಿತ್ಸೆಯ ಬಗ್ಗೆ ದಾಖಲಿಸಿರುತ್ತಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 49/2021  ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ನಳಿನಾಕ್ಷಿ (65), ಗಂಡ : ದಿ. ಶ್ರೀನಿವಾಸ ಭಟ್, ವಾಸ : ಶ್ರೀ ನಿಲಯ ಅನಂತರಾಜ ಮಾರ್ಗ ಮಲ್ಲಾರು ಗ್ರಾಮ ಕಾಪು ಅಂಚೆ & ತಾಲೂಕು ಇವರ ಪರಿಚಯದ ಹರೀಶ ರವರ  KA-20-C-9231 ಆಟೋ ರಿಕ್ಷಾದಲ್ಲಿ ಬಾಡಿಗೆ ಮಾಡಿಕೊಂಡು ದಿನಾಂಕ 21/03/2021 ರಂದು ಪಿರ್ಯಾದಿದಾರರು ಅವರ ಸೊಸೆ ಶ್ರೀಮತಿವರೊಂದಿಗೆ  ಕುಳಿತುಕೊಂಡು ಅಲೆವೂರು ಕಡೆಗೆ ಹೋಗುತ್ತಿರುವಾಗ ಅಲೆವೂರು ಜಂಕ್ಷನ್ ನಿಂದ ಸ್ವಲ್ಪ ಮುಂದೆ ಕಲ್ಮಂಜೆ ಎಂಬಲ್ಲಿಗೆ ತಲುಪುತ್ತಿದ್ದಂತೆ ಬೆಳಗ್ಗೆ 11:30 ಗಂಟೆಗೆ ಪಿರ್ಯಾದಿದಾರರ ಎದುರಿನಿಂದ ಉಡುಪಿ ಕಡೆಯಿಂದ ದೆಂದೂರಕಟ್ಟೆ ಕಡೆಗೆ ಹಾದು ಹೋಗಿರುವ ರಸ್ತೆಯಲ್ಲಿ ಡೋಮೆನಿಕ್ ರೋನಾಲ್ಡ ರವರು ತನ್ನ KA-20-D-7572 ನೇ ಆಟೋ ರಿಕ್ಷಾವನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಒಮ್ಮೇಲೆ ಎಡಕ್ಕೆ ತಿರುಗಿಸಿ ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಹರೀಶರವರ ಹತೋಟಿ ತಪ್ಪಿ ಆಟೋ ರಿಕ್ಷಾವನ್ನು ಮಗುಚಿ ಬಿದ್ದು, ಕೂಡಲೇ ಅಲ್ಲಿ ಸೇರಿದ ಜನರು ರಿಕ್ಷಾದಲ್ಲಿವರನ್ನು ಎತ್ತಿ ಉಪಚರಿಸಿ ನೋಡಲಾಗಿ ಪಿರ್ಯಾದಿದಾರಿಗೆ ಬಲ ಭುಜಕ್ಕೆ, ಬಲಕಿವಿಯ ಬಳಿ ಗಾಯವಾಗಿದ್ದು, ಬಲ ಕೈಯ ಕೋಲುಕೈಗೆ  ಗುದ್ದಿದ ಒಳ ನೋವು ಉಂಟಾಗಿದ್ದು, ಪಿರ್ಯಾದಿದಾರರು ಸೊಸೆಗೆ ನೊಡಲಾಗಿ ಯಾವುದೇ ಗಾಯಗಳಾಗಿರುವುದಿಲ್ಲ. ಆಟೋ ರಿಕ್ಷಾ ಚಾಲಕ ಹರೀಶ ರವರಿಗೆ ನೋಡಲಾಗಿ ಅವರ ಕುತ್ತಿಗೆಯ ಬಲ ಬದಿ, ಬಲಕೈ, ಭುಜಕ್ಕೆ, ಸೊಂಟಕ್ಕೆ ತೀವೃ ತರಹದ ಗಾಯಗಳಾಗಿರುವುದು ತಿಳಿದಿರುತ್ತದೆ. ಅಲ್ಲಿ ಸೇರಿದ ಜನರ ಸಹಾಯದಿಂದ ಪಿರ್ಯಾದಿದಾರರ ಸೊಸೆ ಶ್ರೀಮತಿಯವರು ಪಿರ್ಯಾದಿದಾರರನ್ನು ಮತ್ತು ಆಟೋ ಚಾಲಕ ಹರೀಶರವನ್ನು ಒಂದು ವಾಹನದಲ್ಲಿ ಮಣಿಪಾಲ  KMC ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಪರೀಕ್ಷಿಸಿದ ಅಲ್ಲಿನ ವೈದ್ಯರು ಹರೀಶರವರನ್ನು ಒಳರೋಗಿಯನ್ನಾಗಿ ದಾಖಲಿಸಿಕೊಂಡಿದ್ದು, ಪಿರ್ಯಾದಿದಾರರಿಗೆ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 44/2021  ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 21/03/2021 ರಂದು ಸಂಜೆ 5:30 ಗಂಟೆಗೆ ಕುಂದಾಪುರ ತಾಲೂಕಿನ, ಗುಲ್ವಾಡಿ ಗ್ರಾಮದ ಮಾವಿನಕಟ್ಟೆಯ ಸ್ವೀಕಾರ್ ಹೋಟೆಲ್ ಹತ್ತಿರ ರಸ್ತೆಯಲ್ಲಿ, ಆಪಾದಿತ ಬಾಬು ಪೂಜಾರಿ ಎಂಬುವವರು ತನ್ನ KA-20-W-3434 ನೇ ಸ್ಕೂಟರ್ ನ್ನು ಮಾವಿನಕಟ್ಟೆಯಿಂದ  ಗುಲ್ವಾಡಿ ಕಡೆಗೆ  ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ  ಚಾಲನೆ ಮಾಡಿಕೊಂಡು ಬಂದು ಪಿರ್ಯಾದಿದಾರರಾದ ಎಂ.ಎ ಶೇಖ್ ಅಹಮ್ಮದ್ (43),  ತಂದೆ :  ಅಬ್ಬಾಸ್ ಬ್ಯಾರಿ, ವಾಸ:  ಅಬ್ಬಿಗುಡ್ಡೆ ಗುಳ್ವಾಡಿ ಗ್ರಾಮ ಕುಂದಾಪುರ ತಾಲೂಕು ಇವರು ಮುರ್ಸಲಿನ್ ಎಂಬುವವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಕುಂದಾಪುರದಿಂದ ಮಾವಿನಕಟ್ಟೆ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿದ್ದ KA-15-EC-3430 ನೇ ಸ್ಕೂಟಿಗೆ ಎದುರಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹಸವಾರ ಸ್ಕೂಟಿ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ ಎಡಕೈ ಮೊಣಗಂಟಿಗೆ ತೀವೃ ತರಹದ ಒಳಜಖಂ ಆಗಿ ಮೂಳೆ ಮುರಿತದ ಗಾಯ ಹಾಗೂ ಸಹಸವಾರ ಮುರ್ಸಲಿನ್ ರವರಿಗೆ ತರಚಿದ ಗಾಯವಾಗಿದ್ದು, ಪಿರ್ಯಾದಿದಾರರು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿ ಹಾಗೂ ಸಹಸವಾರ ಮುರ್ಸಲಿನ್ ಹೊರರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 38/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.    

ಗಂಡಸು ಕಾಣೆ ಪ್ರಕರಣ

  • ಕಾಪು: ಪಿರ್ಯಾದಿದಾರರಾದ ಪಾರ್ವತಿ @ ಪಾರವ್ವ (39), ಗಂಡ: ರಮೇಶ, ವಾಸ: ಸರಕಾರಿ ಹಿ. ಪ್ರಾ. ಶಾಲೆಯ ಬಳಿ  ಹೊಸಹಳ್ಳಿ, ಕುರ್ಮಕೋಟೆ, ಗದಗ ತಾ. ಮತ್ತು ಜಿಲ್ಲೆ, ಹಾಲಿ ವಾಸ: ಹೋಟೆಲ್ ಮುಖ್ಯ ಪ್ರಾಣದ ಎದುರು ಬಾಡಿಗೆ ಮನೆ ಏಣಗುಡ್ಡೆ ಗ್ರಾಮ ಇವರು ಮತ್ತು ಅವರ ಗಂಡ ರಮೇಶ @ ರಾಮಪ್ಪ  20 ವರ್ಷಗಳಿಂದ ಉಡುಪಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಪಿರ್ಯಾದಿದಾರರ ಗಂಡ ರಮೇಶ @ ರಾಮಪ್ಪ ರವರಿಗೆ 2 ವರ್ಷಗಳ ಹಿಂದೆ ಕಟಪಾಡಿಯಲ್ಲಿ ಅಪಘಾತಗೊಂಡು ಎಡಬದಿಯ ಕೈ ಇಲ್ಲದೇ ಇದ್ದು ದಿನಾಂಕ 21/03/2021 ರಂದು ಪಿರ್ಯಾದಿದಾರರು ಮತ್ತು ಪಿರ್ಯಾದಿದಾರ ಗಂಡ ಕೆಲಸ ಮುಗಿಸಿಕೊಂಡು ಮಧ್ಯಾಹ್ನ 3:30 ಗಂಟೆಗೆ ಮನೆಗೆ ಬಂದಿದ್ದು, ಸಂಜೆ 6ಳ00 ಗಂಟೆಯ ಸಮಯಕ್ಕೆ ಪಿರ್ಯಾದಿದಾರರ ಗಂಡ ರಮೇಶ @ ರಾಮಪ್ಪ ಕಟಪಾಡಿ ಪೇಟೆಗೆ ಹೋಗಿ ಬರುತ್ತೇನೆಂದು ಹೇಳಿ ಹೋದವರು  ಮನೆಗೆ ಬಂದಿರುವುದಿಲ್ಲ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 43/2021 ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ಸುಮತಿ (40), ಗಂಡ: ಉದಯ ನಾಯ್ಕ, ವಾಸ: ಅಲ್ತಾರು, ಕಲ್ಬೇರ್‌ಬೆಟ್ಟು , ಯಡ್ತಾಡಿ ಗ್ರಾಮ, ಬ್ರಹ್ಮಾವರ ತಾಲೂಕು ಇವರ ಗಂಡ ಉದಯ ನಾಯ್ಕ (47) ಇವರು ವಿಪರೀತ ಮಧ್ಯಪಾನ ಮಾಡುವ ಚಟಹೊಂದಿದ್ದು, ಕೆಲಸಕ್ಕೆ ಹೋಗದೇ ಮನೆಯಲ್ಲಿಯೇ ಇರುವುದಾಗಿದೆ. ಹಣ ವಿಲ್ಲದಿದ್ದಾಗ ಸಾಲ ಮಾಡಿ ಮಧ್ಯಪಾನ ಮಾಡುತ್ತಿದ್ದು, ಕುಡಿಯಲು ಹಣವಿಲ್ಲದೇ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 22/03/2021 ರಂದು ರಾತ್ರಿ 9:00 ಗಂಟೆಯಿಂದ ಬೆಳಿಗ್ಗೆ 11:00 ಗಂಟೆಯ ಮದ್ಯಾವಧಿಯಲ್ಲಿ ಮನೆಯಲ್ಲಿ ಯಾರು ಇಲ್ಲದ ಸಮಯ ಮನೆಯ ಹಾಲ್‌ನ ತೆಂಗಿನ ಪಕಾಸಿಗೆ ಕೇಬಲ್‌ ವೈಯರ್‌ನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 20/2021 ಕಲಂ: 174 ಸಿ.ಆರ್,ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಪಡುಬಿದ್ರಿ: ದಿನಾಂಕ 22/03/2021 ರಂದು 11:00 ಗಂಟೆಗೆ ಪಡುಬಿದ್ರಿ ಪೊಲೀಸ್ ಠಾಣಾ ಅಪರಾಧ ವಿಭಾಗದ  ಪೊಲೀಸ್ ಉಪ ನಿರೀಕ್ಷಕರಾದ ಜಯ, ಕೆ. ರವರಿಗೆ ಹೆಜಮಾಡಿ ಗ್ರಾಮದ ಹೆಜಮಾಡಿ ಗುಂಡಿ ಬಳಿ ಪುಶ್ಯ ವೈನ್ ಶಾಪ್ ಹತ್ತಿರ  ಮಟ್ಕಾ ಜುಗಾರಿ ಬಗ್ಗೆ ಹಣ ಸಂಗ್ರಹಿಸುತ್ತಿರುವುದಾಗಿ ಬಂದ ಮಾಹಿತಿಯಂತೆ ದಾಳಿ ನಡೆಸಿ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ  ಹಣ ಸಂಗ್ರಹಿಸುತ್ತಿದ್ದ ಆರೋಪಿ ಎಂ. ಹೆಚ್. ಮೊಹಮ್ಮದ್ (54), ತಂದೆ: ಮುಕ್ರಿ ಹಸೈನ್, ವಾಸ:ಅಲ್ ಹುದಾ ಮಂಜಿಲ್, ಹೆಜಮಾಡಿ ಕೋಡಿ ಹೆಜಮಾಡಿ ಅಂಚೆ, ಕಾಪು ತಾಲೂಕು ಎಂಬಾನನ್ನು ದಸ್ತಗಿರಿ ಮಾಡಿ ಆತನ ವಶದಲ್ಲಿದ್ದ ಮಟ್ಕಾ ಜುಗಾರಿ ಆಟದ ಬಗ್ಗೆ ಸಾರ್ವಜನಿಕರಿಂದ ಸಂಗ್ರಹಿಸಿದ ನಗದು ರೂಪಾಯಿ 1400/-, ಮಟ್ಕಾ ನಂಬ್ರ ಬರೆದ ಚೀಟಿ-01, ಬಾಲ್ ಪೆನ್ನು- 01 ನ್ನು ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 18/2021  ಕಲಂ:  78 (I) (III) ಕೆಪಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.    

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಶರಣ್ಯ ಎಂ. (29), ಗಂಡ: ಸತೀಶ್‌ ಕುಮಾರ್ ವಾಸ: 29/11, ಆರ್‌.ಕೆ.ಕೆ.ನಗರ, ಸಿಂಗನಲ್ಲೂರು ಗ್ರಾಮ, ಕೊಯಮುತ್ತೂರು ತಾಲೂಕು ಮತ್ತು ಜಿಲ್ಲೆ ಹಾಲಿ ವಾಸ: ಕ್ವಾಟ್ರಸ್  ನಂ 5, ಮಾಹೆ ಕ್ಯಾಂಪಸ್ ಮಣಿಪಾಲ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ಆಪಾದಿತನನ್ನು ದಿನಾಂಕ 04/09/2017 ರಂದು ತಿರುಚಿಯಲ್ಲಿರುವ ಗುಣಶೀಲಂ ದೇವಸ್ಥಾನದಲ್ಲಿ ಗುರುಹಿರಿಯರು ನಿಶ್ವಿಯಿಸಿದಂತೆ ವಿವಾಹವಾಗಿದ್ದು ಇವರಿಗೆ ದಿನಾಂಕ 19/12/2018 ರಂದು ಗಂಡು ಮಗು ಜನಿಸಿರುತ್ತದೆ. ಪಿರ್ಯಾದಿದಾರರು ಮಗುವಾದ ನಂತರ ಆಪಾದಿತನೊಂದಿಗೆ ಮಣಿಪಾಲ ಇಂದ್ರಾಳಿ ವಿ.ಪಿ.ನಗರದ 5ನೇ ಕ್ರಾಸ್ 1ನೇ ಮೈನ್ ರೋಡಿನಲ್ಲಿರುವ ನಂ 5/185 ಅಂಜನ  ಹೌಸ್ ನಲ್ಲಿ ವಾಸ ಮಾಡಿಕೊಂಡಿದ್ದು ಆಪಾದಿತನು ಪಿರ್ಯಾದಿದಾರರಿಗೆ  ಅವಾಚ್ಯ  ಶಬ್ದಗಳಿಂದ ಬೈಯ್ದು, ಕೈಯಿಂದ ಹೊಡೆದು ಪಿರ್ಯಾದಿದಾರರೊಂದಿಗೆ ಮಾತನಾಡದೇ ಮಾನಸಿಕ ಹಾಗೂ ದೈಹಿಕ ಹಿಂಸೆಯನ್ನು ನೀಡಿ ಪಿರ್ಯಾದಿದಾರರ ಹಾಗೂ ಮಗುವಿನ ಖರ್ಚಿಗೆ ಹಣವನ್ನು ನೀಡುತ್ತಿರಲಿಲ್ಲ ಹಾಗೂ ಪಿರ್ಯಾದಿದಾರರನ್ನು ಹಾಗೂ ಮಗುವನ್ನು  ಮನೆಯೊಳಗೆ ಸೇರಿಸಿಕೊಳ್ಳುತ್ತಿಲ್ಲ ಎಂಬುದಾಗಿ ನೀಡಿದ ದೂರಿನಂತೆ ಉಡುಪಿ ಮಹಿಳಾ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 12/2021 ಕಲಂ: 498(ಎ), 323,.504 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 22/03/2021 ರಂದು ಸಕ್ತಿವೇಲು, ಪೊಲೀಸ್ ಉಪನಿರೀಕ್ಷಕರು, ಉಡುಪಿ  ನಗರ ಪೊಲೀಸ್ ಠಾಣೆ ಇವರು ಉಡುಪಿ ತಾಲೂಕು ಪುತ್ತೂರು ಗ್ರಾಮದ ನಿಟ್ಟೂರು ಆಭರಣ ಷೋರೂಮಿನ ಹಿಂಭಾಗದ ಶ್ರೀ ಮೂಕಾಂಬಿಕಾ ಪಾಲಿ ಪ್ರಾಡ್ಟಕ್ಸ್ ಎದುರು ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಪರವಾನಿಗೆ ಇಲ್ಲದೆ, ಗಾಂಜಾವನ್ನು ಮಾರಾಟ ಮಾಡುವ ಸಲುವಾಗಿ ನಿಂತಿದ್ದ ಆರೋಪಿಗಳಾದ ಗೌತಮ್‌  ಮತ್ತು  ವಿಜಿತ್‌  ಇವರನ್ನು ದಸ್ತಗಿರಿ ಮಾಡಿ, ಆರೋಪಿತರ ವಶದಿಂದ 4,500/- ರೂಪಾಯಿ  ಮೌಲ್ಯದ 150 ಗ್ರಾಂ ಗಾಂಜಾ ಎರಡು ಮೊಬೈಲ್ ಫೋನ್‌ಗಳು ಹಾಗೂ ನಗದು ಹಣ 720/- ರೂಪಾಯಿಯನ್ನುಸ್ವಾದೀನಪಡಿಸಿಕೊಂಡಿದ್ದು , ಆರೋಪಿತರು ಗಾಂಜಾವನ್ನು ಮಂಗಳೂರಿನ  ನವೀನ್‌ ಎಂಬಾತನಿಂದ  ಮಾರಾಟದ ಸಲುವಾಗಿ  ಖರೀದಿಸಿ ತಂದಿರುವುದಾಗಿ  ತಿಳಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 49/2021 ಕಲಂ: 8(c),20(b) (ii) (A)  NDPS Act ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ದಿನಾಂಕ 22/03/2021 ರಂದು  ಮಂಜಪ್ಪ ಡಿ.ಆರ್, ಪೊಲೀಸ್ ನಿರೀಕ್ಷಕರು, ಡಿ.ಸಿ.ಐ.ಬಿ. ಉಡುಪಿ ಜಿಲ್ಲೆ ಇವರಿಗೆ ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಕೈಲಕೆರೆ ಮಾವಿನಕಟ್ಟೆ ಎಂಬಲ್ಲಿ ಒಬ್ಬ ವ್ಯಕ್ತಿಯು ವಿಸ್ಕಿ ಮಾರಾಟ ಮಾಡುತ್ತಿರುವುದಾಗಿ ಬಂದ ಮಾಹಿತಿ ಮೇರೆಗೆ ಕುಂದಾಪುರ ತಾಲೂಕು ಕೈಲಕೆರೆ ಮಾವಿನಕಟ್ಟೆ ಎಂಬಲ್ಲಿಗೆ ತಲುಪಿ ದಾಳಿ ನಡೆಸಿ ಸಂತೋಷ್ ಶೆಟ್ಟಿ (53), ತಂದೆ: ಲಕ್ಷ್ಮಣ ಶೆಟ್ಟಿ, ವಾಸ: ಕೊರಾಳ, ಒಳಗಿನ ಸಾಲು, ಮೊಳಹಳ್ಳಿ ಗ್ರಾಮ, ಕುಂದಾಪುರ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು ಆತನ ಸ್ವಾದೀನದಲ್ಲಿದ್ದ 1) ಮೈಸೂರು ಲ್ಯಾನ್ಸರ್ 90 ಮಿ.ಲೀ. ಎಂದು ಬರೆದಿರುವ ಟೆಟ್ರಾ ಪ್ಯಾಕೇಟ್ಗಳು – 11, 2)  ಸ್ಟೀಲಿನ ಲೋಟ-2, ಹಾಗೂ 3) ನಗದು ರೂಪಾಯಿ 700/- ನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 50/2021  ಕಲಂ: 15 (A), KE Act ರಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 23-03-2021 10:07 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080