ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಕೋಟ: ಫಿರ್ಯಾದಿ ಬರ್ಕತ್ ಆಲಿ ಇವರು ದಿನಾಂಕ 21/03/2021 ರಂದು ತನ್ನ ತಾಯಿ ಶಾಭಿರಾಬಿ ಹಾಗೂ ಮಗನಾದ ಮಹಮ್ಮದ್ ಅಮಾನ್ ರೊಂದಿಗೆ ತನ್ನ  ಬಾಬ್ತು KA 20EV3158 ನೇ ಹೊಂಡ ಮ್ಯಾಟ್ರಿಕ್ಸ ಸ್ಕೂಟಿಯಲ್ಲಿ ಹಾಲಾಡಿಗೆ ಮದುವೆಗೆ ಹೋಗಿ ವಾಪಾಸ್ಸು ಹೊರಟು ಶಿರಿಯಾರ ಕಡೆಯಿಂದ ಸಾಯಿಬ್ರಕಟ್ಟೆ ಗೆ ಬರುವ ಮುಖ್ಯ ರಸ್ತೆಯಲ್ಲಿ ಬರುತ್ತಿರುವಾಗ ಸಮಯ ಸುಮಾರು ಮಧ್ಯಾಹ್ನ 2.30 ಗಂಟೆಗೆ ಶಿರಿಯಾರ ಗ್ರಾಮದ ಕುದ್ರು ಕಟ್ಟೆ ಕೆರೆಯ ಬಳಿ ಬರುವಾಗ ಪಿರ್ಯಾದಿದಾರರ ಎದುರಿನಿಂದ KA20EV4587 ನೇ ನಂಬ್ರದ ಸ್ಕೂಟಿ  ಸವಾರನು ತನ್ನ ಸ್ಕೂಟಿಯನ್ನು ಸಾಯಿಬ್ರಕಟ್ಟೆ ಯಿಂದ ಶಿರಿಯಾರದ ಕಡೆಗೆ ಅತಿವೇಗ ಹಾಗೂ ಅಜಾಗರೂಕತೆಯಿಂದ ಬೇರೆ ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ ರಸ್ತೆಯ ತೀರ ಬಲಭಾಗಕ್ಕೆ ಬಂದು ಪಿರ್ಯಾದಿದಾರರ ಸ್ಕೂಟಿಯ ಎದುರಿಗೆ ಢಿಕ್ಕಿ ಹೊಡೆದಿರುತ್ತಾನೆ. ಪರಿಣಾಮ ಪಿರ್ಯಾದಿದಾರರು ಹಾಗೂ ಅವರ ತಾಯಿ ಮತ್ತು ಮಗ ರಸ್ತೆಗೆ ಬಿದ್ದಿರುತ್ತಾರೆ. ಪಿರ್ಯಾದಿದಾರರ ಬಲಕಾಲಿನ ಪಾದದ ಮೊಣಗಂಟಿನ ಬಳಿ ರಕ್ತಗಾಯವಾಗಿರುತ್ತದೆ.ಹಾಗೂ ಪಿರ್ಯಾದಿದಾರರ ತಾಯಿಯ ತಲೆಯ ಹಿಂಭಾಗ ಹಾಗೂ ಕೈಗಳಿಗೆ ರಕ್ತ ಗಾಯವಾಗಿರುತ್ತದೆ.ಕೂಡಲೇ ಅಲ್ಲಿ ಸೇರಿದವರು ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಮಹೇಶ ಆಸ್ಪತ್ರೆಗೆ ದಾಖಲಿಸಿದ್ದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿರುತ್ತಾರೆ .ಢಿಕ್ಕಿ ಹೊಡೆದ ಸ್ಕೂಟಿ ಸವಾರನಿಗೆ ಸಣ್ಣಪುಟ್ಟ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 51/2021  ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತರ ಪ್ರಕರಣ

  • ಗಂಗೊಳ್ಳಿ: ದಿನಾಂಕ 20/03/2021 ರಂದು ತ್ರಾಸಿ ಬೀಚ್‌ ನಲ್ಲಿ ಕೆಲ ಹುಡುಗರು ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ಪಿ.ಎಸ್‌.ಐ ಗಂಗೊಳ್ಳಿ ಯವರಿಗೆ ಬಾತ್ಮೀದಾರರು ನೀಡಿದ ಖಚಿತ ಮಾಹಿತಿಯಂತೆ ಸಿಬ್ಬಂದಿಯವರೊಂದಿಗೆ ಇಲಾಖಾ ಜೀಪ್ ನಂಬ್ರ ನಲ್ಲಿ ಬೆಳಿಗ್ಗೆ 9:30 ಗಂಟೆಗೆ ತ್ರಾಸಿ ಬೀಚ್‌ ತಲುಪಿ, ಅಲ್ಲಿ ಮಾದಕ ವಸ್ತು ಸೇವನೆ ಮಾಡಿರುವ ಅನುಮಾನದ ಮೇಲೆ ಆಪಾದಿತ 1.ತಕ್ರೀಂ(22), ತಂದೆ ಸೈಪುದ್ದೀನ್, ವಾಸ:  ಅಣ್ಣಪ್ಪಯ್ಯ  ಸಭಾ ಭವನದ ಹತ್ತಿರ, ತ್ರಾಸಿ ಗ್ರಾಮ, ಕುಂದಾಪುರ ತಾಲೂಕು 2.ಜಯಂತ (20), ತಂದೆ ಲಕ್ಷ್ಮಿನಾರಾಯಣ ವಾಸ: ಬಾವಿಕಟ್ಟೆ, ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕು 3.ಆನಂದ ರಾಜ್(25), ತಂದೆ ಚಂದ್ರಶೇಖರ ಸೇರುಗಾರ, ವಾಸ: ರಾಮಮಂದಿರ ಹತ್ತಿರ, ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕು 4.ಮರ್ವಿನ್ (20), ತಂದೆ ಮೈಕಲ್ ರೆಬೆರೋ, ವಾಸ: ಮ್ಯಾಂಗನೀಸ್ ರೋಡ್, ಗಂಗೊಳ್ಳಿ ಗ್ರಾಮ, ಕುಂದಾಪುರ ತಾಲೂಕು ಇವರನ್ನು ಠಾಣೆಗೆ ಕರೆಯಿಸಿ ಸಿಬ್ಬಂದಿಯವರೊಂದಿಗೆ ಕೆ.ಎಂ.ಸಿ ಮಣಿಪಾಲ ಫಾರೆನ್ಸಿಕ್ ಮೆಡಿಸಿನ್ ವಿಭಾಗದ ತಜ್ಞರ ಮುಂದೆ ಹಾಜರುಪಡಿಸಿ ವೈದ್ಯಕೀಯ ಪರೀಕ್ಷೆ ನಡೆಸಲಾಗಿ ಇವರುಗಳು ಗಾಂಜಾ ಸೇವನೆ ಮಾಡಿರುವುದಾಗಿ ತಜ್ಞರು ವರದಿ ನೀಡಿದ್ದು ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 29/2021 ಕಲಂ 27(ಬಿ) NDPS Act ನಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕೊಲ್ಲೂರು: ಶಶಿಧರ ವಿ. ಎಮ್ ಪ್ರಾಯ:57 ವರ್ಷ ಇವರು ವಂಡ್ಸೆ  ಗ್ರಾಮದ ಮೇಲ್ಮನೆ ಎಂಬಲ್ಲಿ ವಾಸ ಮಾಡಿಕೊಂಡಿದ್ದು  ಸುಮಾರು 7 ವರ್ಷಗಳಿಂದ ಪಾರ್ಕಿಂಗ್ ಸನ್ ಖಾಯಿಲೆಯಿಂದ ಬಳಲುತ್ತಿದ್ದವರು ಮಣಿಪಾಲ ಕೆಂ. ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮಾಡುತ್ತಿದ್ದು ದಿನಾಂಕ 22-03-2021 ರಂದು ಮಧ್ಯಾಹ್ನ 12:30 ಗಂಟೆಗೆ ಶಶಿಧರ್ ರವರು ಮನೆಯಲ್ಲಿ ಅಡುಗೆ ಒಲೆಯ ಕಟ್ಟಿಗೆಯನ್ನು ಮುಂದಕ್ಕೆ ಹಾಕುತ್ತಿರುವ ಸಮಯ ಆಕಸ್ಮಿಕವಾಗಿ ಒಲೆಯ ಬೆಂಕಿಯು ಶರ್ಟಿಗೆ ತಾಗಿ ಬೆಂಕಿಯು ದೇಹಕ್ಕೆ ಹರಡಿದ್ದು ಕೂಡಲೇ ಶಶಿಧರ ರವರನ್ನುಮಗ ಅಭಿಷೇಕ್ 108 ವಾಹನದಲ್ಲಿ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ವೈದ್ಯಾಧಿಕಾರಿಯವರು ಪ್ರಥಮ ಚಿಕಿತ್ಸೆ ನೀಡಿ ವೈದ್ಯರ ಸೂಚನೆಯಂತೆ ಹೆಚ್ಚಿನ ಚಿಕಿತ್ಸೆ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿದ್ದು ಶಶಿಧರ ರವರು ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 23-03-2021 ರಂದು 00:25 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೊಲ್ಲೂರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 10/2021 ಕಲಂ:174  ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 23-03-2021 06:05 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ