ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕೋಟ: ಪಿರ್ಯಾದಿದಾರರಾದ ಮಹಮ್ಮದ್ ಆಸಿಫ್ (40), ತಂದೆ: ಅಬ್ದುಲ್ ಘನಿ, ವಾಸ: ಆಸಿಫ್ ಮಂಜಿಲ್ ಗ್ರಾಮ, ಕುಂದಾಪುರ ತಾಲೂಕು ಇವರು ದಿನಾಂಕ 21/02/2023 ರಂದು 19:15 ಗಂಟೆಗೆ ಉಳ್ತೂರು ಕಡೆಯಿಂದ ತೆಕ್ಕಟ್ಟೆ ಕಡೆಗೆ ಬರುತ್ತಿರುವಾಗ ತೆಕ್ಕಟ್ಟೆ ಗ್ರಾಮದ ಮಲ್ಯಾಡಿ ಮಾಸ್ಟರ್ ಸದಾರಾಮ ಶೆಟ್ಟಿ ರವರ ಮನೆಯ ಬಳಿ ಬರುವಾಗ ತೆಕ್ಕಟ್ಟೆ ಕಡೆಯಿಂದ ಉಳ್ತೂರು ಕಡೆಗೆ ಡಾಂಬಾರು ರಸ್ತೆಯಲ್ಲಿ  ಒಂದು ಲಾರಿಯನ್ನು ಅದರ ಚಾಲಕ ಶ್ರೀಕಾಂತ ಅತಿವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಬಲಬದಿಗೆ ಬಂದು ಪಿರ್ಯಾದಿದಾರರ ಎದುರಿನಿಂದ ಹೊಗುತ್ತಿದ್ದ KA-19-HK-4998 ನೇ ಸ್ಕೂಟಿಗೆ ಡಿಕ್ಕಿ ಹೋಡೆದ ಪರಿಣಾಮ ಸ್ಕೂಟಿ ಸವಾರನಾದ ಫಾಹೀಮ್ ರವರಿಗೆ ಬಲಗಾಲು ಮೂಳೆ ಮುರೀತದ ತೀವ್ರ ತರಹದ  ಗಾಯವಾಗಿದ್ದು, ಮುಖ, ಬೆರಳು, ಬೆನ್ನಿಗೆ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 28/2023  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  ಕುಂದಾಪುರ: ಪಿರ್ಯಾದಿದಾರರಾದ ಭಾಸ್ಕರ ಆಚಾರ್ಯ (52), ತಂದೆ ದಿ. ಶಂಕರ ಆಚಾರ್ಯ, ವಾಸ: ಸರ್ಕಾರಿ ಶಾಲೆ ಹತ್ತಿರ ದೇವಸ್ಥಾನ ಬೆಟ್ಟು ಬಳ್ಕೂರು  ಗ್ರಾಮ ಕುಂದಾಪುರ ತಾಲೂಕು  ಇವರು  ದಿನಾಂಕ 21/02/2023  ರಂದು  18:00   ಗಂಟೆಗೆ ತನ್ನ  ಬೈಕ್ ನಂಬ್ರ KA-20-EA-7462 ನೇದರಲ್ಲಿ ಸವಾರಿ ಮಾಡಿಕೊಂಡು ಕುಂದಾಪುರ  ಕಡೆಯಿಂದ ಸಿದ್ದಾಪುರ ಕಡೆಗೆ  ಹೋಗುವಾಗ ಕುಂದಾಪುರ ತಾಲೂಕು,  ಬಳ್ಕೂರು  ಗ್ರಾಮದ ಬಳ್ಕೂರು ಬಸ್ ನಿಲ್ದಾಣದ  ಬಳಿ  ಎಸ್ ಹೆಚ್ 52 ರಸ್ತೆಯಲ್ಲಿ ಆಪಾದಿತ ಚರಣ್ KA-20-ED-5948 ನೇ ಬೈಕಿನಲ್ಲಿ ಸಹ ಸವಾರನನ್ನು ಕುಳ್ಳಿರಿಸಿಕೊಂಡು ಕುಂದಾಪುರ  ಕಡೆಯಿಂದ ಸಿದ್ದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ  ಮಾಡಿಕೊಂಡು ಬಂದು ಪಿರ್ಯಾದಿದಾರರ ಬೈಕಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರಿಗೆ ಎಡ ಕೈ ಗೆ ಒಳನೋವು ಹಾಗೂ ಬಲ ಕಾಲಿಗೆ ತರಚಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಕುಂದಾಪುರ ನ್ಯೂ ಮೆಡಿಕಲ್  ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ . ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 22/2023 ಕಲಂ: 279, 337  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಬ್ರಹ್ಮಾವರ: ದಿನಾಂಕ 22/02/2023 ರಂದು ಪಿರ್ಯಾದಿದಾರರಾದ ಗುರುಪ್ರಸಾದ ಎಸ್‌ ಆಚಾರ್ಯ (35), ತಂದೆ: ವಾಸುದೇವ ಆಚಾರ್ಯ, ವಾಸ: ಭಾಗೀರಥಿ ನಿಲಯ, ಪೆರ್ವಾಜೆ, ಕಾರ್ಕಳ ತಾಲೂಕು ಇವರು KA-20-MC-6916 ನೇ ಮಾರುತಿ Scross ಕಾರನ್ನು ಹೆಬ್ರಿ ಕಡೆಯಿಂದ ಬ್ರಹ್ಮಾವರ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಸಮಯ ಮಧ್ಯಾಹ್ನ 3:40 ಗಂಟೆಗೆ ಚೇರ್ಕಾಡಿ ಗ್ರಾಮದ ಚೇರ್ಕಾಡಿ ಶಾರದಾ ಹೈಸ್ಕೂಲ್‌ ಸಮೀಪ ಮುಖ್ಯ ರಸ್ತೆಯ “U” ತಿರುವು ಬಳಿ ತಲುಪುವಾಗ ರಸ್ತೆಯ ಎಡಭಾಗದಲ್ಲಿ ಬ್ರಹ್ಮಾವರ ಕಡೆಗೆ ಹೋಗುವ ಬಸ್ಸ್‌ ಒಂದು ನಿಂತು ಪ್ರಯಾಣಿಕರನ್ನು ಹತ್ತಿಸಿ ಕೊಳ್ಳುವಾಗ ಬಸ್ಸಿನ ಮುಂಭಾಗದಿಂದ ಆರೋಪಿ ಕೃಷ್ಣ ಮೊಗವೀರ ರವರು ಅವರ KA-20-AB-3260 ನೇ TVS ಆಟೋ ರಿಕ್ಷಾವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ “U” ತಿರುವುನಿಂದಾಗಿ ಬೆನಗಲ್‌ ಕಡೆ ಹೋಗಲು ಒಮ್ಮೇಲೆ ಮುಖ್ಯ ರಸ್ತೆಗೆ ರಿಕ್ಷಾವನ್ನು ಚಲಾಯಿಸಿದಾಗ, ಪಿರ್ಯಾದಿದಾರರು ಅಪಘಾತವನ್ನು ತಪ್ಪಿಸಲು ಕಾರಿನ ಬ್ರೇಕ್‌ ಹಾಕಿ ಬಲಕ್ಕೆ ತಿರುಗಿಸಿದಾಗ ಕಾರು ನಿಯಂತ್ರಣ ತಪ್ಪಿ ರಿಕ್ಷಾದ ಬಲ ಭಾಗಕ್ಕೆ ತಾಗಿ, ಮುಖ್ಯ ರಸ್ತೆಯ ಮಧ್ಯದ ಡಿವೈಡರ್‌ಗೆ ತಾಗಿ ರಸ್ತೆಯಲ್ಲಿ ಪಲ್ಟಿಯಾಗಿ ರಸ್ತೆಯ ಎಡಭಾಗದ ಮಣ್ಣು ರಸ್ತೆಯಲ್ಲಿ ಅಡಿ ಮೇಲಾಗಿ ಬಿದ್ದಿರುವುದಾಗಿದೆ. ಈ ಅಪಘಾತದ ಪರಿಣಾಮ ಕೃಷ್ಣ ಮೊಗವೀರ ರವರಿಗೆ ಬಲಕಾಲಿನ ಬೆರಳಿಗೆ ಮೂಳೆ ಮುರಿತದ  ಒಳ ಜಖಂ ಉಂಟಾಗಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 30/2023 : ಕಲಂ 279,  338  ಐಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.
   

ಇತರ ಪ್ರಕರಣ

 • ಬ್ರಹ್ಮಾವರ : ಪಿರ್ಯಾದಿದಾರರಾದ ಫೆಡ್ರಿಕ್‌ ವಿನ್ಸೆಂಟ್‌ ಗೊನ್ಸಾವ್‌ಲೀಸ್‌ (43), ತಂದೆ: ದಿ. ಸ್ಟ್ಯಾನಿ ಫಿಲಿಫ್‌ ಗೊನ್ಸಾವ್‌ಲೀಸ್‌ ವಾಸ: ಕಲ್ಚಪ್ಪರ ರೋಡ್‌, ಬಾರ್ಕೂರು ಅಂಚೆ ಹೊಸಾಳ ಗ್ರಾಮ, ಬ್ರಹ್ಮಾವರ ತಾಲೂಕು ಉಡುಪಿ ಜಿಲ್ಲೆ ಇವರ ಅಣ್ಣ ವಲೇರಿಯನ್‌  (55) ರವರಿಗೆ ದಿನಾಂಕ 14/02/2023 ರಂದು ಆರೋಪಿ 2 ನೇ ಬಾರ್ಕೂರು ನಿವಾಸಿ ರವೀಂದ್ರ ದೇವಾಡಿಗ ರವರು ಮರ ಲೋಡ್‌ ಮಾಡುವ ಕೆಲಸ ಇದೆ ಎಂಬುದಾಗಿ ಹೇರಾಡಿ ಗ್ರಾಮದ ಚಂಡೆ  ಅಜಿತ್‌ ಭಟ್‌ ರವರ ಜಾಗಕ್ಕೆ ಮರ ಲೋಡ್‌ ಮಾಡುವ ಬಗ್ಗೆ ಕರೆದುಕೊಂಡು ಹೋಗಿದ್ದು, ಪಿರ್ಯಾದಿದಾರರ ಅಣ್ಣ  ಕೆಲಸ ಮಾಡುತ್ತಿರುವಾಗ 1 ನೇ ಆರೋಪಿ ಓಂ ಪ್ರಕಾಶ್‌  KA-55-M-1481 ಕ್ರೇನ್‌ ಅನ್ನು ಮರ ಲೋಡ್‌ ಮಾಡುವ ಬಗ್ಗೆ ಕ್ರೇನ್‌ ನೊಂದಿಗೆ ಇದ್ದು, 1 & 2ನೇ  ಆರೋಪಿಯವರ ಸೂಚನೆಯಂತೆ ವಲೇರಿಯನ್‌ ಗೊನ್ಸಾಲ್ವೀಸ್‌ ರವರು ಮರದ ದಿಮ್ಮಿಗಳಿಗೆ ಬೆಲ್ಟ್ ಹಾಕಿ ಕ್ರೇನ್‌ಗೆ ಸಿಕ್ಕಿಸುತ್ತಾ ಇರುವ  ಸಮಯ  ಸಂಜೆ 06:30 ಗಂಟೆಗೆ ‌ನೇ ಆರೋಪಿ  ಕ್ರೇನ್‌ ಚಾಲಕ ಕ್ರೇನ್‌ ಸಹಾಯದಿಂದ ಮರದ ದಿಮ್ಮಿಯನ್ನು  ಎತ್ತುತ್ತಿರುವಾಗ ಮರದ ದಿಮ್ಮಿಗೆ ಹಾಕಿದ ಬೆಲ್ಟ ಜಾರಿ ಮರದ ದಿಮ್ಮಿ ವಲೇರಿಯನ್‌ ಗೊನ್ಸಾಲ್ವೀಸ್‌ ರವರ ಎಡ ಕಾಲಿನ ಮೇಲೆ ಬಿದ್ದು ಅವರ ಎಡಕಾಲಿನ ಹಿಮ್ಮಡಿ ಮತ್ತು ಪಾದದ ಬಳಿ ತೀವೃ ತರಹದ ರಕ್ತಗಾಯವಾಗಿರುತ್ತದೆ, ಈ ಘಟನೆಗೆ 1ನೇ ಆರೋಪಿ  ಮತ್ತು 2ನೇ ಆರೋಪಿಗಳು  ಮರದ ದಿಮ್ಮಿಯ ಲೋಡಿಂಗ್‌ ಕೆಲಸಕ್ಕೆ ಸಂಬಂದಪಟ್ಟ ಯಾವುದೇ ಮುಂಜಾಗ್ರತಾ ಕ್ರಮ ವಹಿಸದೇ ವಲೇರಿಯನ್‌ ಗೊನ್ಸಾಲ್ವೀಸ್‌ ರವರಲ್ಲಿಕೆಲಸ ಮಾಡಿಸಿರುವುದೇ ಕಾರಣವಾಗಿರುವುದಾಗಿ ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 29/2023 ಕಲಂ: 287,  338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಮಣಿಪಾಲ: ದಿನಾಂಕ 22/02/2023 ರಂದು ದೇವರಾಜ್‌ ಟಿ.ವಿ, ಪೊಲೀಸ್ ನಿರೀಕ್ಷಕರು, ಮಣಿಪಾಲ ಪೊಲೀಸ್ ಠಾಣೆ ಇವರಿಗೆ  ಉಡುಪಿ ತಾಲೂಕು ಹೆರ್ಗಾ ಗ್ರಾಮದ ಶ್ರೀ ಸಾಯಿ ಲಾಡ್ಜ್‌ ನಲ್ಲಿ ರೂಮ್‌ ನಂಬರ್‌ 201 ಮತ್ತು 202 ರಲ್ಲಿ ಅನೈತಿಕ ವೇಶ್ಯಾವಾಟಿಕೆ ನಡೆಸುತ್ತಿರುವುದಾಗಿ ಬಂದ ಮಾಹಿತಿಯಂತೆ ದಾಳಿ ನಡೆಸಿದಲ್ಲಿ ರೂಮ್‌ ನಂಬರ್‌ 201 ಒಂದು ಹೆಂಗಸು ಮತ್ತು 202 ರಲ್ಲಿ ಒಂದು ಹೆಂಗಸು ಮತ್ತು ಒಂದು ಗಂಡಸು ಇದ್ದು, ಅನೈತಿಕ ವೇಶ್ಯಾವಟಿಕೆಯಲ್ಲಿ ತೊಡಗಿದವರನ್ನು ವಶಕ್ಕೆ ಪಡೆದು ಅವರ ವಶದಲ್ಲಿದ್ದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಹೋಟೆಲ್‌ ನ ಮೇನೇಜರ್‌ ಸಂಪತ್‌ ಕುಮಾರ್‌ ಮತ್ತು  ಕೆಲಸಕ್ಕೆ ಇರುವ ಸಂತೋಷ್‌ ಮತ್ತು ದಿನೇಶ್‌ ಇವರು ಹೆಂಗಸರನ್ನು  ಅನೈತಿಕ ವೇಶ್ಯವಾಟಿಕೆ ಚಟುವಟಿಕೆ ಮಾಡುವಂತೆ ಈ ರೂಮಿನಲ್ಲಿ ಇರಿಸಿದ್ದಾಗಿರುತ್ತದೆ. ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 34/2023 ಕಲಂ: 370(A)(2) ಐಪಿಸಿ ಮತ್ತು 3, 4, 5, 6, 7 ITP Act ರಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 23-02-2023 10:01 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080