ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಹಿರಿಯಡ್ಕ: ಪಿರ್ಯಾದಿ ಕೃಷ್ಣ ಕುಲಾಲ್ ಇವರು ದಿನಾಂಕ: 22/02/2023 ರಂದು ರಾತ್ರಿ ಸುಮಾರು 9:30 ಗಂಟೆಗೆ ಪೆರ್ಡೂರು ಮೇಲ್ಪೇಟೆ ರಿಕ್ಷಾ ನಿಲ್ದಾಣ ಬಳಿ ಸುಜಾ ಫಾಸ್ಟ್ ಫುಡ್ ಬಳಿ ತಿಂಡಿ ತೆಗೆದುಕೊಳ್ಳುತ್ತಿರುವಾಗ ಪಕ್ಕದ ರಾ.ಹೆ 169 (ಎ) ರಲ್ಲಿ ಅವರ ಪರಿಚಯದ ರೋಹಿತ್ ಕುಲಾಲ್ ಎಂಬಾತನು ತನ್ನ ಬಾಬ್ತು ಮೋಟಾರು ಸೈಕಲ್ ನಂಬ್ರ KA-20-EF-0048 ನೇದನ್ನು ಪೆರ್ಡೂರು ಕಡೆಯಿಂದ ಹೆಬ್ರಿ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿದ್ದು  ಅತನ ಹಿಂದಿನಿಂದ ಅಂದರೆ ಪೆರ್ಡೂರು ಕಡೆಯಿಂದ KA-20-D-1896 ನೇ ಪಿಕ್‌ಅಪ್ ವಾಹನ ಚಾಲಕ ವಿರೇಶ್ ಎಂಬಾತನು ಅತೀ ವೇಗ ಹಾಗೂ ನಿರ್ಲಕ್ಷತನದಿಂದ ಪಿಕ್‌ಅಪ್‌ ವಾಹನವನ್ನು ಚಲಾಯಿಸಿ ಎದುರಿನಿಂದ ಹೋಗುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಹೊಡೆದ ಪರಿಣಾಮ ಮೋಟಾರು  ಸೈಕಲ್ ಸವಾರ ದ್ವಿಚಕ್ರ ವಾಹನ ಸಮೇತ ರಸ್ತೆಗೆ  ಬಿದ್ದಿದ್ದು ಪಿರ್ಯಾದುದಾರರು ಹೋಗಿ ನೋಡಲಾಗಿ  ಆತನಿಗೆ ತಲೆಗೆ ಒಳಜಖಂ ಆಗಿದ್ದು ಆತನು ಮಾತನಾಡುತ್ತಿರಲಿಲ್ಲ  ಕೂಡಲೆ  ಪಿರ್ಯಾದುದಾರರು  ಹಾಗೂ ಅಲ್ಲಿ  ಸೇರಿದವರು ರೋಹಿತ್‌ನನ್ನು  ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಂಸಿ  ಅಸ್ಪತ್ರೆಗೆ ದಾಖಲಿಸಿರುತ್ತಾರೆ. ಈ ಅಪಘಾತಕ್ಕೆ  KA-20-D-1896 ನೇ ಪಿಕ್‌ಅಪ್ ವಾಹನ ಚಾಲಕ ವಿರೇಶ್ ರವರ  ಅತಿವೇಗ ಹಾಗೂ ನಿರ್ಲಕ್ಷ್ಯತನದ ಚಾಲನೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಹಿರಿಯಡ್ಕ  ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 08/2023    ಕಲಂ: 279,338 ಐಪಿಸಿ ರಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.
  • ಬ್ರಹ್ಮಾವರ:  ಫಿರ್ಯಾದಿ ಅಭಿಷೇಕ್ ಇವರು ಉಪ್ಪೂರು ಹೆರಾಯಿಬೆಟ್ಟು  ಕ್ರಾಸ್‌ ಬಳಿ ನಿಂತಿರುವಾಗ ದಿನಾಂಕ: 12/02/2023 ರಂದು ಸಂಜೆ 5:15 ಗಂಟೆಗೆ KA.20.ER.1277ನೇ ಬಜಾಜ್‌ ಪಲ್ಸರ್‌ ಬೈಕ್‌ ಸವಾರ   ಹರೀಶ್  ರಾ.ಹೆ 66 ರ ಮಧ್ಯಭಾಗದ  U ತಿರುವು ಕಡೆಯಿಂದ ಬ್ರಹ್ಮಾವರ ಕಡೆಗೆ  ಹೊಗಲು  ಉಡುಪಿ ಕುಂದಾಪುರ ರಸ್ತೆಯಲ್ಲಿ  ಬರುತ್ತಿರುವಾಗ  ರಾ.ಹೆ 66 ರ ಉಡುಪಿ ಕಡೆಯಿಂದ ಕುಂದಾಪುರ ಕಡೆಗೆ KA.70.0565 ಲಾರಿಯ ಚಾಲಕ ಇಲಿಯಾಜ್ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಮೋಟಾರ ಸೈಕಲ್‌ಗೆ ಡಿಕ್ಕಿ ಹೊಡೆದನು ಅದೇ ಸಮಯಕ್ಕೆ  ಈ ಲಾರಿಯ ಹಿಂಭಾಗದಲ್ಲಿ ಕುಂದಾಪುರ ಕಡೆಗೆ ಹೋಗುತ್ತಿದ್ದ ಇನ್ನೊಂದು KA.30.A.3596 ಲಾರಿಯ ಚಾಲಕ ಮಹೇಶ್ ಎದುರಿನ ಲಾರಿಯ ಹಿಂಭಾಗಕ್ಕೆ  ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿ ರಾ.ಹೆ 66  ಪಶ್ಚಿಮ ಬದಿಯಲ್ಲಿರುವ ಕಬ್ಬಿಣದ ಗಾರ್ಡ್‌ಗೆ ತಾಗಿಕೊಂಡು ನಿಂತಿತ್ತು  ಈ ಅಪಘಾತದ ಪರಿಣಾಮ ಮೋಟಾರ ಸೈಕಲ್‌ ಸವಾರ ಮೋಟಾರ ಸೈಕಲ್‌ ಸಮೇತ ರಸ್ತೆಗೆ ಬಿದ್ದು ಅವನ ತಲೆಗೆ  ತೀವ್ರ  ರಕ್ತಗಾಯ ಎರಡು ಕಾಲುಗಳಿಗೆ ರಕ್ತಗಾಯ ಉಂಟಾಗಿರುತ್ತದೆ.  ಹಾಗೂ  KA.30.A.3596 ಲಾರಿಯ ಚಾಲಕ ಮಹೇಶ್ನಿಗೂ ರಕ್ತಗಾಯವಾಗಿರುತ್ತದೆ.  ಈ ಅಪಘಾತಕ್ಕೆ KA.70.0565 ಲಾರಿಯ ಚಾಲಕ ಇಲಿಯಾಜ್ ಮತ್ತು KA.30.A.3596 ಲಾರಿಯ ಚಾಲಕ ಮಹೇಶ್ರವರ ಅತೀ ವೇಗ ಹಾಗೂ ಅಜಾಗರೂಕತೆಯ ಚಾಲನಯೇ ಕಾರಣವಾಗಿರುತ್ತದೆ.  ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 23/2023 : ಕಲಂ 279,337,  338  ಐಪಿಸಿ ರಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.

 ಇತರ ಪ್ರಕರಣ

  • ಕುಂದಾಪುರ: ಮಾನ್ಯ ನ್ಯಾಯಾಲಯದ ಖಾಸಗಿ ಪಿರ್ಯಾದಿ ಸಂಖ್ಯೆ 31/2023 ರ ಸಾರಾಂಶವೆನೆಂದರೇ, ಪಿರ್ಯಾದಿ ರಾಘವೇಂದ್ರ, ಇವರು ಕುಂದಾಪುರ ತಾಲೂಕು ಕೋಟೇಶ್ವರ ಗ್ರಾಮದ ವಾಸಿಯಾಗಿದ್ದು, ಪ್ರಸ್ತುತ ದಾವಣಗೆರೆಯಲ್ಲಿ ಹೊಟೇಲ್‌ ವ್ಯವಹಾರ ನಡೆಸಿಕೊಂಡಿರುವುದಾಗಿದೆ. ಪಿರ್ಯಾದಿದಾರರಿಗೆ ಕೋಟೇಶ್ವರ ಗ್ರಾಮದಲ್ಲಿ ಪೂರ್ವಿಕರ ಕೃಷಿ ಭೂಮಿಗಳಿದ್ದು,  ಸದ್ರಿ ಭೂಮಿಯ ಬಗ್ಗೆ ಸೀತಾರಾಮ ತವಳ ಮತ್ತು ಅವರ ಮಗ ಸುಧೀಂದ್ರ ಸೇರಿ ನೋಟರಿ ಆನಂದ ಭಂಢಾರಿರವರ ಸಮಕ್ಷಮ ಅಧಿಕಾರ ಪತ್ರ ತಯಾರಿಸಿ ಸದ್ರಿ ಅಧಿಕಾರ ಪತ್ರಕ್ಕೆ ಪಿರ್ಯಾದಿದಾರರ ನಕಲಿ ಸಹಿ ಹಾಕಿಸಿ ತಮ್ಮ ಹೆಸರಿಗೆ ಕ್ರಯ ಪತ್ರವನ್ನು ಮಾಡಿಕೊಂಡು ಪಿರ್ಯಾದಿದಾರರಿಗೆ ಮೋಸ ಮಾಡಿರುವುದಾಗಿದೆ. ಅಲ್ಲದೆ ಆರೋಪಿತರಾದ  ಸೀತಾರಾಮ ತವಳರವರು ಮೋಸದಿಂದ ಆರೋಪಿಗಳಾದ ಕೆ ಉಪೇಂದ್ರ ಕುಮಾರ್‌ ಮತ್ತು ಅನುರಾಧಾ ಎಂ ಪುರಾಣಿಕ್‌ರವರು ಮತ್ತೊಂದು ಮೋಸದ ಕ್ರಯ ಪತ್ರ ಮಾಡಿ ಪಿರ್ಯಾದಿದಾರ ಕುಟುಂಬಕ್ಕೆ ಸಾಲ ಮಾಡಿಸಿಕೊಡುವ ಉದ್ದೇಶದಿಂದ ಪಿರ್ಯಾದಿದಾರರನ್ನು ನಂಬಿಸಿ  ಪಿರ್ಯಾದಿದಾರರಿಗೆ ತಿಳಿಸದೆ ಅವರಿಂದ ಸಹಿಯನ್ನು ಮಾಡಿಸಿಕೊಂಡು ಜಾಗವನ್ನು ಬೇರೆಯವರಿಗೆ ಮಾರಾಟ ಮಾಡಿರುವುದಾಗಿದೆ.  ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 25/2023 ಕಲಂ: 415, 420, 465, 468, ಜೊತೆಗೆ 34   ಐಪಿಸಿ ರಂತೆ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.

ಇತ್ತೀಚಿನ ನವೀಕರಣ​ : 23-02-2023 06:08 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080