ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಅಜೆಕಾರು: ದಿನಾಂಕ 21/02/2022 ರಂದು ಪಿರ್ಯಾದಿದಾರರಾದ ಸತೀಶ್ ಹೆಗ್ಡೆ (41), ತಂದೆ: ರಾಮಣ್ಣ ಹೆಗ್ಡೆ , ವಾಸ: ಶ್ರೀ ಮಾತಾ ಸಿರಿಬೈಲು, ಕಡ್ತಲ ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಹಾಗೂ ವಿಶ್ವನಾಥ್ ಹೆಗ್ಡೆ ರವರು ಪಿರ್ಯಾದಿದಾರರ ಕಾರಿನಲ್ಲಿ ಮುಟ್ಲುಪಾಡಿಯ ಅರ್ಧನಾರೀಶ್ವರ ದೇವಸ್ಥಾನಕ್ಕೆ  ಹೋಗುತ್ತಾ  ಬೆಳಿಗ್ಗೆ  11:30 ಗಂಟೆಗೆ ಮುಟ್ಲುಪಾಡಿಯ ಬ್ರಿಡ್ಜ್ ನ್ನು ತಲುಪುವ ವೇಳಗೆ ಕಾರಿನ ಮುಂದೆ ಹೋಗುತ್ತಿದ್ದ ಓರ್ವ ಸ್ಕೂಟರ್ ನ ಸವಾರನು ಅತೀ ವೇಗ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಸ್ಕೂಟರ್ ನ್ನು ಚಲಾಯಿಸಿಕೊಂಡು ಹೋಗಿ ರಸ್ತೆ ಬದಿಗೆ ಬಿದ್ದಿದ್ದು, ಪಿರ್ಯಾದಿದಾರರು ಕೂಡಲೇ ಕಾರನ್ನು ನಿಲ್ಲಿಸಿ ಸ್ಕೂಟರ್ ನಿಂದ ಬಿದ್ದ ವ್ಯಕ್ತಿಯನ್ನು ನೋಡಲಾಗಿ ಪಿರ್ಯಾದಿದಾರರ ಪರಿಚಯದ ಕಡ್ತಲದ ನಿವಾಸಿ ರಾಘವೇಂದ್ರ ಹೆಗ್ಡೆ ರವರಾಗಿದ್ದು, ಅವರನ್ನು ಮೇಲಕ್ಕೆ ಎಬ್ಬಿಸಿ ಉಪಚರಿಸಿದ್ದು ತಲೆಯ ಬಲಭಾಗಕ್ಕೆ ಗುದ್ದಿದ ಹಾಗೆ ಆಗಿರುತ್ತದೆ. ಸ್ಕೂಟರ್ ನಂಬ್ರವನ್ನು ನೋಡಲಾಗಿ KA-20-EM-0950 ನೇ ಹೊಂಡಾ ಆ್ಯಕ್ಟಿವಾ ಸ್ಕೂಟರ್ ಆಗಿರುತ್ತದೆ. ಪಿರ್ಯಾದಿದಾರರು ಗಾಯಾಳುವನ್ನು  ಅವರ ಕಾರಿನಲ್ಲಿ ಹಾಕಿಕೊಂಡು ಕಾರ್ಕಳದ ಗಾಜರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರು ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಮಣಿಪಾಲಕ್ಕೆ ಕರೆದುಕೊಂಡು ಹೋಗುವಂತೆ ತಿಳಿಸಿದ ಮೇರೆಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 06/2022 ಕಲಂ: 279, 337 ಐಪಿಸಿಯಂತೆ  ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ರೇಖಾ ಪ್ರಕಾಶ್ ( 42), ಗಂಡ: ಪ್ರಕಾಶ್ ಪೂಜಾರಿ, ವಾಸ: ಕುದ್ರು ನಿವಾಸ  ತಿಮ್ಮಣ್ಣಕುದ್ರು ಇವರ  ಗಂಡ ಪ್ರಕಾಶ್ ಪೂಜಾರಿ ಇವರು ದಿನಾಂಕ 21/02/2022  ರಂದು ರಾತ್ರಿ 9:00 ಗಂಟೆಗೆ ನಿಡಂಬಳ್ಳಿ  ಮಾರ್ಗವಾಗಿ ಕೆಮ್ಮಣ್ಣು ಕಡೆಗೆ ರಸ್ತೆಯ ಬದಿಯಲ್ಲಿ  ಜಾಲಿ ಐಸ್ ಕ್ರೀಮ್ ನ  ಜಾಹಿದಾ ಎಂಬುವವರ ಮನೆಯ ಹತ್ತಿರದ ರಸ್ತೆಯಲ್ಲಿ ನಡೆದುಕೊಂಡು ಬರುತ್ತಿರುವಾಗ  ಎದುರು ಗಡೆಯಿಂದ ಹೂಡೆ ಕೆಮ್ಮಣ್ಣು ಕಡೆಯಿಂದ ನಿಡಂಬಳ್ಳಿ ಕಡೆಗೆ KA0-19-EZ-6916 ನೇ ದ್ವಿಚಕ್ರ ಮೋಟಾರು ಸೈಕಲ್ ಸವಾರನು ತನ್ನ ದ್ವಿಕಚಕ್ರ ವಾಹನವನ್ನು ಅತೀ ವೇಗವಾಗಿ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಪಿರ್ಯಾದಿದಾರರ ಗಂಡನಿಗೆ ಡಿಕ್ಕಿ  ಹೊಡೆದ ಪರಿಣಾಮ ಅವರ ಬಲಕಾಲಿಗೆ ತೀವೃ ಒಳ ಜಖಂ ಮೂಳೆಮುರಿತವಾಗಿದ್ದು ಚಿಕಿತ್ಸೆ ಬಗ್ಗೆ ಉಡುಪಿ ಆದರ್ಶ ಆಸ್ವತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 23/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಬಾಲಕೃಷ್ಣ  ರಾವ್ (65), ತಂದೆ: ಟಿ ಸುಬ್ಬ ರಾವ್, ವಾಸ: ಗಣೇಶ ನಗರ ಮಂಗಳೂರು ದ.ಕ ಇವರ ಅಣ್ಣ  ವಾಸುದೇವ (78) ಇವರು ಒಂದು ವರ್ಷದಿಂದ ಮೂರ್ಚೆತಪ್ಪುವ ಖಾಯಿಲೆಯಿಂದ ಬಳಲುತ್ತಿದ್ದು, ದಿನಾಂಕ 22/02/2022  ರಂದು ಮನೆಯಾದ ಕಪ್ಪೆಟ್ಟು ನಲ್ಲಿ ಇದ್ದವರು ಬೆಳಿಗ್ಗೆ 7:15 ಗಂಟೆಗೆ ತಮ್ಮ  ಮನೆಯ  ಬಾವಿಯ ಕಟ್ಟೆಯಲ್ಲಿ ಕುಳಿತಿದ್ದು  ಮನೆಯವರ  ಜೊತೆ ಮಾತನಾಡುತ್ತಿರುವಾಗ  ಒಮ್ಮೆಲೆ  ಮೂರ್ಚೆ ತಪ್ಪಿ  ಬಾವಿಯ  ನೀರಿಗೆ  ಬಿದ್ದಿದ್ದು ತಕ್ಷಣ ನೆರೆಕರೆ ಹಾಗೂ ಅಗ್ನಿಶಾಮಕದಳ ರವರ  ಸಹಾಯದಿಂದ ವಾಸುದೇವ ರವರನ್ನು ಬಾವಿಯ ನೀರಿನಿಂದ ಮೇಲಕ್ಕೆ  ಎತ್ತಿ ಚಿಕಿತ್ಸೆ ಬಗ್ಗೆ  ಉಡುಪಿ ಹೈಟೆಕ್ ಆಸ್ವತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ವಾಸುದೇವ್ ರವರು ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 08 /2022  ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಮಲ್ಪೆ: ಪಿರ್ಯಾದಿದಾರರಾದ ಇಜಾಜ್  (23), ತಂದೆ: ಮೊಹಮ್ಮದ್ ಹನೀಫ್, ವಾಸ: ಸಂತೋಷ ನಗರ ,ಅಂಬಾಗಿಲು , ಶಿವಳ್ಳಿ ಗ್ರಾಮ ಉಡುಪಿ ಇವರು ದಿನಾಂಕ 22/02/2022 ರಂದು ತನ್ನ ಮೋಟಾರು ಸೈಕಲ್ ನಲ್ಲಿ ಅವರ ಆಂಟಿಯಾ ಮಗ ಆಪ್ಜಲ್  ನನ್ನು  ಮಿಲಾಗ್ರೀಸ್ ಕಾಲೇಜು ಕಲ್ಯಾಣಪುರ ಕ್ಕೆ ಬಿಟ್ಟು ಬರಲು ಹೋಗಿದ್ದು ಬೆಳಿಗ್ಗೆ 09:30 ಗಂಟೆಯ ಸಮಯಕ್ಕೆ ಮಿಲಾಗ್ರೀಸ್ ಕಾಲೇಜು ಕ್ಯಾಂಟೀನ್ ಬಳಿ ಹೂಡೆಯ ನಿವಾಸಿಗಳಾದ ಸದಾಪ್ ಹಾಗೂ ಸನದ್ ಪೂರ್ವದ್ವೇಷದಿಂದ ಪಿರ್ಯಾದಿದಾರರನ್ನು ಕೊಲೆ ಮಾಡುವ ಉದ್ದೇಶದಿಂದ  ಮಿಲಾಗ್ರೀಸ್ ಕಾಲೇಜಿನ ಕ್ಯಾಂಟೀನ  ಬಳಿ ಅಡಗಿ ಕುಳಿತಿದ್ದು ,ಆ ಪೈಕಿ ಆರೋಪಿತನಾದ ಸದಾಪ್  ಏಕಾಏಕಿಯಾಗಿ  ಕೈಯಲ್ಲಿ ಸೋಡಾದ ಬಾಟಲಿಯ ತುಂಡನ್ನು ಕೈಯಲ್ಲಿ ಹಿಡಿದುಕೊಂಡು ಪಿರ್ಯಾದಿದಾರರನ್ನು ಉದ್ದೇಶಿಸಿ ಬೆದರಿಕೆ ಹಾಕಿ  ಏಕಾಏಕಿಯಾಗಿ ಆತನ ಕೈಯಲ್ಲಿದ್ದ  ಸೋಡಾದ ಬಾಟಲಿಯ ತುಂಡಿನಿಂದ  ಪಿರ್ಯಾದಿದಾರರ ಹೊಟ್ಟೆಗೆ ಚುಚ್ಚಲು ಬಂದಾಗ ಪಿರ್ಯಾದಿದಾರರು ಎರಡು ಕೈಯಿಂದ ತಡೆದಿದ್ದು, ಸೋಡಾದ ಬಾಟಲಿಯ ತುಂಡು ಪಿರ್ಯಾದಿದಾರರ ಬಲಕೈಯ  ಮಣಿಗಂಟಿನ ಬಳಿ ತಾಗಿ  ರಕ್ತಗಾಯವಾಗಿರುತ್ತದೆ, ಅಲ್ಲದೆ ಆರೋಪಿತ ಸನದ್ ಇತನು ಪಿರ್ಯಾದಿದಾರರನ್ನು  ಉದ್ದೇಶಿಸಿ  ಅವಾಚ್ಯ ಶಬ್ದಗಳಿಂದ ಬೈದು ಕೈಯಿಂದ ಹೊಡೆದು ಆತನ  ಕೈಯಲ್ಲಿದ್ದ ಸೋಡಾದ ಬಾಟಲಿಯ ತುಂಡಿನಿಂದ ಪಿರ್ಯಾದಿದಾರ ಕಾಲಿಗೆ ಬಿಸಾಡಿದ್ದು ಸೋಡಾದ ಬಾಟಲಿಯ ತುಂಡು ಪಿರ್ಯಾದಿದಾರರ ಬಲಕಾಲಿನ  ಬೆರಳಿಗೆ ತಾಗಿ ರಕ್ತಗಾಯವಾಗಿರುತ್ತದೆ , ಅಲ್ಲದೆ ಆರೋಪಿತರಿಬ್ಬರು ಪಿರ್ಯಾದಿದಾರರಿಗೆ ನಿನ್ನನ್ನು ನೋಡಿಕೊಳ್ಳುತ್ತೇನೆಂದು ಬೆದರಿಕೆ ಹಾಕಿದ್ದು ಅಲ್ಲದೆ  ಸದಾಪ್ ಗಲಾಟೆಯ ಸಮಯ ಪಿರ್ಯಾದಿದಾರರು ಧರಿಸಿದ ಬಟ್ಟೆಯನ್ನು ಹಿಡಿದು ಎಳೆದಾಡಿದ್ದು , ಪಿರ್ಯಾದಿದಾರರು ಧರಿಸಿದ ಬಟ್ಟೆಗೆ ರಕ್ತ ತಾಗಿರುತ್ತದೆ. ಗಲಾಟೆ ಯ ಸಮಯ ಅಲ್ಲಿ ತುಂಬಾ ಜನ ಸೇರಿದ್ದು ಅಲ್ಲದೆ ಕಾಲೇಜಿನ ಬಂದೋಬಸ್ತ್ ಕರ್ತವ್ಯದಲ್ಲಿರುವ ಪೊಲೀಸರು ಬರುವುದನ್ನು  ನೋಡಿದ ಆರೋಪಿತರು ಓಡಿ ಹೋಗಿರುತ್ತಾರೆ.  ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 22/2022 ಕಲಂ: 307, 504, 506  ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ಪಿರ್ಯಾದಿದಾರರಾದ ಪ್ರಬಾಕರ ಶೆಟ್ಟಿ (41), ತಂದೆ: ಮಹಾಬಲ ಶೆಟ್ಟಿ, ವಾಸ ಯಳಜಿತ್ ತೊಂಡ್ಲೆ ಕ್ಯಾಶ್ಯು ಪ್ಯಾಕ್ಟರಿ ಬೈಂದೂರು  ತಾಲೂಕು ಇವರು ಬೈಂದೂರು ತಾಲೂಕು ಹೊಸಾಡು ಗ್ರಾಮದ ಹೆಗ್ಗಡೆಮಕ್ಕಿ, ಎಂಬಲ್ಲಿ ಆಶೀರ್ವಾದ ಕ್ಯಾಶ್ಯು ಪ್ಯಾಕ್ಟರಿಯನ್ನು ನಡೆಸಿಕೊಂಡಿದ್ದು,  ಹಾಗೂ ಯಳಜಿತ್ ತೊಂಡ್ಲೆ ಎಂಬಲ್ಲಿ ಶಾಖೆಯನ್ನು ಹೊಂದಿದ್ದು, ಆರೋಪಿ ನಿತಿನ ಪ್ರಕಾಶ್ ಪರಟೆ  (38), ತಂದೆ: ಪ್ರಕಾಶ್ ಪರಟೆ,  ಮಾಲಕರು ರುದ್ರ ಟ್ರೇಡರ್ಸ್ ರೂಮ್ ನಂಬ್ರ: 524 ಎಸ್ ಎಸ್ 2 ಸೆಕ್ಟ ರ್ 6 ಕೋಪ್ರ ಕೈರಾನೆ,ನವಿ ಮುಂಬಯಿ ಥಾನೆ ಮಹಾರಾಷ್ಟ್ರ ಇವರು ನವಿ ಮುಂಬಯಿಯಲ್ಲಿ ರುದ್ರ ಟ್ರೇಡರ್ಸ್ ಎಂಬ ಸಂಸ್ಥೆಯ ಮಾಲಿಕನಾಗಿದ್ದು ಜನವರಿ 2020  ನೇ ಸಾಲಿನಿಂದ ಆರೋಪಿಯು ಪಿರ್ಯಾದಿದಾರರಲ್ಲಿ ವ್ಯವಹಾರವನ್ನು ಮಾಡುತ್ತಿದ್ದು, ಆರೋಪಿಯು ಪಿರ್ಯಾದಿದಾರರಿಂದ ಮೇಲಿನ ಸಂಸ್ಥೆಯಿಂದ ಕಾಶ್ಯು ಕೆರ್‌ನಲ್ಸ್ ಗಳನ್ನು  ಖರೀದಿ  ಮಾಡುತ್ತಿದ್ದು, ವ್ಯವಹಾರದ ಪ್ರಾರಂಭದಲ್ಲಿ ಸೊತ್ತುಗಳನ್ನು ಖರೀದಿ ಮಾಡಿದಲ್ಲಿ ಪಿರ್ಯಾದಿದಾರರಿಗೆ ಹಣವನ್ನು ಪಾವತಿ ಮಾಡುತ್ತಿದ್ದು, ಹಾಗೂ ಡೊಡ್ಡ ಮೊತ್ತದ ಸೊತ್ತುಗಳನ್ನು ಖರೀದಿ ಮಾಡಿದಲ್ಲಿ ಸ್ವಲ್ಪದಿನ ಬಿಟ್ಟು ಹಣವನ್ನು ಸರಿಯಾದ ಸಮಯದಲ್ಲಿ ಪಾವತಿಸುತ್ತಾ ಬಂದಿದ್ದು, ಹೀಗೆ ಅರ್ಜಿದಾರರಿಗೆ  ಮತ್ತು ಆರೋಪಿಯವರೊಳಗೆ ವ್ಯವಹಾರ ಬೆಳೆಯುತ್ತಾ ಹೋಗಿ ಆರೋಪಿಯು ಪಿರ್ಯಾದಿದಾರರನ್ನು ಪ್ರೇರೇಪಿಸಿ, ಸಾಲದ ರೂಪದಲ್ಲಿ ಹೆಚ್ಚಿನ ಸೊತ್ತುಗಳನ್ನು  ಪಡೆದು ಸ್ವಲ್ಪ ದಿನಗಳ ಬಳಿಕ ಹಣ ಪಾವತಿ ಮಾಡುವುದಾಗಿ ಪಿರ್ಯಾದಿದಾರರಿಗೆ  ಭರವಸೆ ನೀಡಿ, ಪಿರ್ಯಾದಿದಾರರನ್ನು ನಂಬಿಸಿ ಹೆಚ್ಚಿನ ಸೊತ್ತುಗಳನ್ನು ಸಾಲದ ರೂಪದಲ್ಲಿ ಖರೀದಿ ಮಾಡುತ್ತಿದ್ದು,  ಆದರೆ ಆರೋಪಿಯು ದಿನಾಂಕ 02/09/2020 ರ ವೇಳೆಗೆ  ಪಿರ್ಯಾದಿದಾರರಿಗೆ 39,55,314/-  ರೂಪಾಯಿ ಮೊತ್ತದ ಹಣವನ್ನು ನೀಡಲು ಬಾಕಿ ಮಾಡಿದ್ದು, ಈ ಬಗ್ಗೆ  ಕೇಳಿದಾಗ ಆರೋಪಿಯು ಪಿರ್ಯಾದಿದಾರರಿಗೆ  ಈ ಮೇಲ್ ಮುಖೇನ  ಪತ್ರ ಬರೆದು ಮೇಲಿನ ಮೊತ್ತಕ್ಕೆ ಶೇಕಡಾ 18% ಬಡ್ಡಿನೀಡುವುದಾಗಿ  ಪುಸಲಾಯಿಸಿ ಪಿರ್ಯಾದಿದಾರರಿಗೆ  ಆರೋಪಿತನ ಮೇಲೆ ನಂಬಿಕೆ ಬರುವ ಹಾಗೆ ನಂಬಿಸಿ ತದ ನಂತರವೂ ಕೂಡಾ ಆರೋಪಿಯು ಪಿರ್ಯಾದಿದಾರರಿಂದ ಸಾಲದ ರೂಪದಲ್ಲಿ ಹೆಚ್ಚಿನ ಮೊತ್ತದ  ಸೊತ್ತುಗಳನ್ನು ಖರೀದಿ ಮಾಡಿದ್ದು, ಬಳಿಕ ಪಿರ್ಯಾದಿದಾರರು ಅರೋಪಿತನಲ್ಲಿ ಬರಬೇಕಾದ ಹಣ 37,55,314 /- ರೂಪಾಯಿ ಬಾಕಿ ಮೊತ್ತವನ್ನು ಕೊಡುವಂತೆ  ಕೇಳಿದಾಗ ಆರೋಪಿಯು ಬಾಕಿ ಇರುವ ಎಲ್ಲಾ ಮೊತ್ತವನ್ನು ದಿನಾಂಕ 20/10/2021 ರಂದು ಕೊಡುವುದಾಗಿ ಲಿಖಿತವಾಗಿ ಬರೆದು ಕೊಟ್ಟಿದ್ದು, ಆದರೆ ಆರೋಪಿಯು ಹಣವನ್ನು ನೀಡದೇ ಇದ್ದು, ಕೇಳಿದಾಗ  ಆರೋಪಿಯು ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು ಬೆದರಿಕೆ ಹಾಕಿದ್ದು, ಆರೋಪಿಯು  ಪಿರ್ಯಾದಿದಾರರಿಗೆ ಉದ್ದೇಶಪೂರ್ವಕವಾಗಿ ವಂಚಿಸುವ ಉದ್ದೇಶದಿಂದ ಪಿರ್ಯಾದಿದಾರರಿಗೆ ನಂಬಿಸಿ ಸಾಲದ ರೂಪದಲ್ಲಿ ಪಡೆದುಕೊಂಡ ಸೊತ್ತಿನ ಒಟ್ಟು  ಹಣ ರೂಪಾಯಿ 37,55,314/- ನೀಡದೇ ಮೋಸ  ಮಾಡಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  49/2022 ಕಲಂ: 420, 406,417, 504.506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 23-02-2022 09:40 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080