ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಸಂತೋಷ ರಾಘವ ಅಮೀನ್‌ (44), ತಂದೆ: ರಾಘವ  ಅಮೀನ್‌, ವಾಸ: C/4, ಬ್ಯಾಪ್ಟಿಸ್ಟಾ  ಬ್ಲಾಕ್‌, ಅಂಧೇರಿ  ಪೂರ್ವ,  ಮುಂಬೈ, ಮಹಾರಾಷ್ಟ್ರ  ರಾಜ್ಯ ಇವರ ತಮ್ಮ ಸಚಿನ್‌ ಅಮೀನ್‌ ರಾಘು (41) ರವರು ಕಳದೆರಡು  ದಿನಗಳಿಂದ  ಮೈ-ಕೈ ನೋವು  ಹಾಗೂ ಎದೆ ನೋವಿನಿಂದ  ಬಳಲುತ್ತಿದ್ದವರು ದಿನಾಂಕ 22/02/2022 ರಂದು ಬೆಳಿಗ್ಗೆ 10:00 ಗಂಟೆಗೆ ವೈದ್ಯಕೀಯ ತಪಾಸಣೆಯ ಸಲುವಾಗಿ ಉಡುಪಿ ಸಿಟಿ ಬಸ್‌ನಿಲ್ದಾಣದ ಬಳಿಯ ರೆಹಮಾನ್‌ಕಾಂಫ್ಲೆಕ್ಸ್‌ನ ಆರ್‌.ಎನ್‌ ಭಟ್‌ರವರ ಕ್ಲಿನಿಕ್‌ಗೆ ಬಂದವರು, ಅಲ್ಲಿ ತೀವ್ರ ಅಸ್ವಸ್ಥರಾದವರನ್ನು ಚಿಕಿತ್ಸೆಯ ಬಗ್ಗೆ ಉಡುಪಿಯ  ಆದರ್ಶ ಆಸ್ಪತ್ರೆಗೆ ಕರೆತಂದಾಗ 12:00 ಗಂಟೆಗೆ ಪರೀಕ್ಷಿಸಿದ ವೈದ್ಯರು, ಸಚಿನ್‌ ಅಮೀನ್‌ ರಾಘುರವರು ಅದಾಗಲೇ ಮೃತಪಟ್ಟಿರುವುದಾಗಿ  ತಿಳಿಸಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 12/2022 ಕಲಂ: 174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ಪಿರ್ಯಾದಿದಾರರಾದ ಶರತ್ ಶೆಣೈ (31), ತಂದೆ: ಗಣಪತಿ ಶೆಣೈ, ವಾಸ: ಕುದ್ರೆಕೆರೆಬೆಟ್ಟು, ಮಾರ್ಕೋಡು, ಕೋಟೇಶ್ವರ ಗ್ರಾಮ, ಕುಂದಾಪುರ ತಾಲೂಕು ಇವರ ತಂದೆ ಗಣಪತಿ ಶೆಣೈ (58) ರವರು ರಕ್ತದೊತ್ತಡ ಖಾಯಿಲೆಯಿಂದ ಬಳಲುತ್ತಿದ್ದು ಈ ವಿಚಾರವಾಗಿ ಮಾನಸಿಕ ಖಿನ್ನತೆಗೊಳಗಾಗಿದ್ದು ದಿನಾಂಕ  22/02/2022 ರಂದು ಮದ್ಯಾಹ್ನ 14:30 ಗಂಟೆಯಿಂದ 16:00  ಗಂಟೆಯ ನಡುವಿನ ಅವಧಿಯಲ್ಲಿ ಕೋಟೇಶ್ವರ ಗ್ರಾಮದ ಮಾರ್ಕೋಡು ಕುದ್ರೆಕೆರೆಬೆಟ್ಟುವಿನಲ್ಲಿರುವ ವಾಸದ ಮನೆಯ ಬೆಡ್ ರೂಮಿನ ಮಹಡಿಯ ಕಬ್ಬಿಣದ ಪಟ್ಟಿಗೆ ನೈಲಾನ್ ರೋಪಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ.  ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 06/2022 ಕಲಂ: 174 ಸಿ.ಆರ್.ಪಿ.ಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.   
 • ಬ್ರಹ್ಮಾವರ: ಪಿರ್ಯಾದಿ ಕೆ. ಸುರೇಶ ಅಮೀನ್‌‌‌(51), ತಂದೆ: ದಿವಂಗತ ಕೊರ್ಗು ಮರಕಾಲ, ವಾಸ: ದೇವಿ ನಿಲಯ , ಕಾಡೂರು ಶಾಲೆ ಹತ್ತಿರ  ಕಾಡೂರು ಗ್ರಾಮ, ಬ್ರಹ್ಮಾವರ ತಾಲೂಕು. ಇವರ ತಮ್ಮ  ದಿನೇಶ ಪ್ರಾಯ 39 ವರ್ಷ ಇವರು ಕಳೆದ 4-5 ವರ್ಷದಿಂದ ಶರಾಬು ಕುಡಿಯುವ  ಆಭ್ಯಾಸವಿದ್ದು  ನಿನ್ನೆ ದಿನಾಂಕ: 22-02-2022 ರಂದು ರಾತ್ರಿ 8:00 ಗಂಟೆಯಿಂದ ದಿನೇಶ ಪ್ರಾಯ 39ವರ್ಷ ಇವರು ಮನೆಯಲ್ಲಿ ಇರದೇ ಇದ್ದು ದಿನೇಶ 2 -3 ದಿನಗಳಿಂದ  ಆತನ ತಮ್ಮ ಹರೀಶ  ಕಾಣೆಯಾಗಿರುವ ಬಗ್ಗೆ  ಮಾನಸ್ಸಿಗೆ  ತೆಗೆದುಕೊಂಡು  ಮಾನಸಿಕನಂತೆ ವರ್ತಿಸುತ್ತಿರುವುದಾಗಿ ರಾತ್ರಿ 9:00 ಗಂಟೆಗೆ ಫಿರ್ಯಾದಿದಾರರ ತಮ್ಮನ ಮಗಳು  ಸಿಂಚನ್‌‌ ಪೋನ್‌‌ ಮಾಡಿ ತಿಳಿಸಿದ್ದು ನಂತರ  ಫಿರ್ಯಾದಿದಾರರು ಹಾಗೂ ಸಂಭಂಧಿಕರು  ಹುಡುಕಾಡಿದಲ್ಲಿ  ಪತ್ತೆಯಾಗಿ ರುವುದಿಲ್ಲ  ಈ ದಿನ ದಿನಾಂಕ: 23-02-2022 ರಂದು  ಬೆಳಿಗ್ಗೆ  ಕಾಡೂರು ಕಣಪೆ ಭವಾನಿ  ಶೆಡ್ತಿಯವರ  ಹಾಡಿ ಜಾಗದಲ್ಲಿ  ಹೋಗುವ ಕಾಲು ದಾರಿಯ ಪಕ್ಕದಲ್ಲಿ  ಬಿದ್ದಿದ್ದ  ಟವಲ್‌‌‌ ಒಂದನ್ನು ನೋಡಿ ಹಾಡಿ ಜಾಗದಲ್ಲಿ ಹುಡುಕಾಡಿದಾಗ  ಹಾಡಿಯ ಮಧ್ಯದ ಭಾಗದ ಮತ್ತಿ  ಗಿಡದ ಕೊಂಬೆಗೆ ಟೆವೆಲ್‌ಯನ್ನು  ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದ್ದು  ಆಗ ಸಮಯ ಸುಮಾರು10:45 ಗಂಟೆ ಆಗಿರುತ್ತದೆ. ಫಿರ್ಯಾದಿದಾರರ ತಮ್ಮ ದಿನೇಶ  ಅವಿವಾಹಿತನಾಗಿದ್ದು  ಆತನ ತಮ್ಮ ಹರೀಶ ಕಾಣೆಯಾದ ಬಳಿಕ ಆದನ್ನು ಬಹಳ  ಮನಸ್ಸಿಗೆ  ಹಚ್ಚಿಕೊಂಡು  ಮಾನಸಿಕನಂತೆ ವರ್ತಿಸುತ್ತಿದ್ದು 3-4 ದಿನದಿಂದ ಕೆಲಸಕ್ಕೆ  ಹೊಗದೇ ಮನೆಯಲ್ಲಿ ಇರುತ್ತಾ ಅದೇ ಚಿಂತೆಯಲ್ಲಿ ಜೀವನದಲ್ಲಿ ಜಿಗುಪ್ಸೆಗೊಂಡು ಕುತ್ತಿಗೆಗೆ  ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರು ವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ  ಯುಡಿಆರ್ ನಂ. 10/2022 ಕಲಂ 174 ಸಿಆರ್‌ಪಿಸಿ ಯಂತೆ ಪ್ರಕರಣ ದಾಖಲಾಗಿರುತ್ತದೆ.     

ಕಳವು ಪ್ರಕರಣ

 • ಅಜೆಕಾರು : ಪಿರ್ಯಾದಿದಾರರಾದ ಶ್ರೀಮತಿ. ದೀಪಿಕಾ (32), ಗಂಡ: ದಿ. ಸುಕೇಶ್, ವಾಸ: ಸಾನ್ವಿನಿಲಯ ಸೂರ್ಯಂತೊಕ್ಲು ಶಿರ್ಲಾಲು ಗ್ರಾಮ, ಕಾರ್ಕಳ ತಾಲೂಕು ಇವರು ದಿನಾಂಕ 22/02/2022 ರಂದು ಸಂಜೆ 18:30 ಗಂಟೆಗೆ ಮನೆಗೆ ಬೀಗ ಹಾಕಿ ತನ್ನ ತಾಯಿ ಮನೆಯಾದ ಶಿರ್ಲಾಲು ಗ್ರಾಮದ ಪಯ್ಯಂದೆಗೆ ಹೋಗಿದ್ದು, ದಿನಾಂಕ 23/02/2022 ರಂದು ಬೆಳಿಗ್ಗೆ 08:30 ಗಂಟೆಗೆ ಮನೆಗೆ ಬಂದಿದ್ದು ಮನೆಯ ಮುಂಭಾಗದ ಬಾಗಿಲು ತೆಗೆದು ಮನೆಯೊಳಗೆ ನೋಡಲಾಗಿ ಮನೆಯ ಬೆಡ್‌ರೂಂ ನಲ್ಲಿ ಇಟ್ಟಿದ್ದ ಕಬ್ಬಿಣದ ಬೀರುವಿನ ಬಾಗಿಲಿನ ಬೀಗ ತೆಗೆದು ಅದರಲ್ಲಿದ್ದ ಬಟ್ಟೆ ಹಾಗೂ ಚಿನ್ನಾಭರಣ ಇಟ್ಟಿದ್ದ ಕರಡಿಗೆ ಹಾಗೂ ಪರ್ಸ್‌ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು, ನೋಡಲಾಗಿ 29 ½ ಗ್ರಾಂ ಚಿನ್ನದ ಒಡವೆಗಳನ್ನು ಅದರ  ಮೌಲ್ಯ ರೂಪಾಯಿ 1,18,000/-  ಹಾಗೂ ಪರ್ಸ್‌ನಲ್ಲಿದ್ದ ನಗದು ಹಣ ರೂಪಾಯಿ 15,000/- ಗಳನ್ನು ರೂಮಿನ ಮೇಲ್ಭಾಗದ ಮಾಡಿನ ಹೆಂಚನ್ನು ತೆಗೆದು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 07/2022 ಕಲಂ: 457, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
   

ಇತ್ತೀಚಿನ ನವೀಕರಣ​ : 23-02-2022 06:23 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080