ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

 • ಬ್ರಹ್ಮಾವರ: ಪಿರ್ಯಾದಿದಾರರಾದ ರಾಘವ (38) ತಂದೆ:ದಿ/ವಾಸುಕುಂದರ್  ವಾಸ:ಮಾತಶ್ರೀ ಸೂರಾಲು ಸೊಳ್ಳೆಕಟ್ಟು  ಕಂಬಳಗದ್ದೆ ಮನೆ ಕೊಕ್ಕರ್ಣೆ ಅಂಚೆ ಪೆಜಮಂಗೂರು ಗ್ರಾಮ ಬ್ರಹ್ಮಾವರ ಇವರ  ತಾಯಿ ಚಂದು ಮರಕಾಲ್ತಿ  (60) ರವರು ದಿನಾಂಕ 22/02/2021 ರಂದು ಬೆಳಿಗ್ಗೆ 09:15 ಗಂಟೆಗೆ ಅಲ್ಲೇ ಮನೆಯ ಹತ್ತಿರದಲ್ಲಿರುವ  ಹೊಳೆಯಿಂದ ನೀರನ್ನು ತರಲು ಕೊಡಪಾನ ಹಿಡಿದುಕೊಂಡು ಹೋಗಿದ್ದು ,ಹೊಳೆಯಿಂದ ನೀರನ್ನು ತೆಗೆಯಲು ನೀರಿಗೆ ಇಳಿದಾಗ ಆಕಸ್ಮಿಕವಾಗಿ ಕಾಲು ಜಾರಿ ಆಯತಪ್ಪಿ ನೀರಿನಲ್ಲಿ ಮುಳುಗಿ ಉಸಿರುಗಟ್ಟಿ  ತೀವ್ರ ಅಸ್ವಸ್ಥರಾಗಿದ್ದವರನ್ನು  ರಾಜೇಶ್ ರವರು ಹೊಳೆಯ ನೀರಿನಿಂದ ಬೆಳಿಗ್ಗೆ 09:30 ಗಂಟೆಗೆ ಮೇಲೆಕ್ಕೆ ಎತ್ತಿದ್ದು ಅವರನ್ನು ಚಿಕಿತ್ಸೆ ಬಗ್ಗೆ ಅಂಬ್ಯಲೆನ್ಸ್ ನಲ್ಲಿ ಬೆಳಿಗ್ಗೆ 10:30 ಗಂಟೆಗೆ  ಬ್ರಹ್ಮಾವರ  ಮಹೇಶ್  ಆಸ್ಪತ್ರೆಗೆ ಕರೆ ತಂದಿದ್ದುಪರೀಕ್ಷಿಸಿದ ವೈದ್ಯರು ಸದ್ರಿ ಚಂದು ಮರಕಾಲ್ತಿ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ . ಮೃತರ ಮರಣದಲ್ಲಿ  ಬೇರೆ ಯಾವುದೇ  ಸಂಸಯವಿರುವುದಿಲ್ಲವಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಯುಡಿಆರ್ ಕ್ರಮಾಂಕ 12/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

 • ಕುಂದಾಪುರ: ಪಿರ್ಯಾಧಿದಾರರಾಧ ಎಚ್.ಎಸ್.ಸುರೇಶ ಆಹಾರ ನಿರೀಕ್ಷಕರು, ಕುಂದಾಪುರ ಇವರು ಕುಂದಾಪುರದ ಆಹಾರ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸಿಕೊಂಡಿದ್ದು, ದಿನಾಂಕ 22/02/2021 ರಂದು ಕುಂದಾಪುರ ತಾಲೂಕು ಕುಂದಾಪುರ ಕಸಬಾ ಗ್ರಾಮದ ಕೋಡಿ ಕಡೆಯಿಂದ ಕುಂದಾಪುರ ಕಡೆಗೆ ಓಮಿನಿಯಲ್ಲಿ ಕಾನೂನು ಬಾಹಿರವಾಗಿ ಅಕ್ಕಿಯನ್ನು ಸಾಗಾಟ ಮಾಡುವ ಬಗ್ಗೆ ಮಾಹಿತಿ ಬಂದಿರುವುದಾಗಿ ಕುಂದಾಪುರ ಪೊಲೀಸ್ ಠಾಣೆಯಿಂದ ನೀಡಿದ ಮಾಹಿತಿಯ ಮೇರೆಗೆ ಇವರು ಕುಂದಾಪುರ ಠಾಣಾ ಪಿ.ಎಸ್.ಐ ಹಾಗು ಸಿಬ್ಬಂದಿಯವರು ಮತ್ತು ಪಂಚರೊಂದಿಗೆ 12:00 ಗಂಟೆಗೆ ಠಾಣೆಯಿಂದ ಹೊರಟು 12:15 ಗಂಟೆಗೆ ಕುಂದಾಪುರ ಕಸಬಾ ಗ್ರಾಮದ ಕೋಡಿ ಭಜನಾ ಮಂದಿರ ರಸ್ತೆಯ ‌ಬಳಿ KA-20-MB-8024 ಓಮಿನಿಯನ್ನು ವಶಕ್ಕೆ ಪಡೆದು ಓಮಿನಿಯ ಹಿಂಬದಿಯಲ್ಲಿ ಅಕ್ಕಿ ತುಂಬಿದ 25 ಕೆ.ಜಿ ತೂಕದ 14 ಪ್ಲಾಸ್ಟಿಕ್ ಚೀಲಗಳಿದ್ದು ಒಟ್ಟು 350 ಕೆ.ಜಿ. ಇರುತ್ತದೆ. ಸದ್ರಿ ಅಕ್ಕಿಯ ಅಂದಾಜು ಮೌಲ್ಯ ರೂಪಾಯಿ 5250/- ಆಗಬಹುದು. KA-20-MB-8024  ನಂಬ್ರದ ಓಮಿನಿ ವಾಹನದ ಅಂದಾಜು ಮೌಲ್ಯ ರೂಪಾಯಿ 1,50,000/- ಆಗಿರುತ್ತದೆ. ಆಪಾದಿತನ  ಹೆಸರು ವಿಳಾಸ ವಿಚಾರಿಸಲಾಗಿ ನಾಸಿರ್ (40) ತಂದೆ: ಹಸನ್ ಸಾಹೇಬ್ ವಾಸ:ನಸೀಬಾ ಮಂಜಿಲ್, ಹಳವಳ್ಳಿ ಬೀಜಾಡಿ ಗ್ರಾಮ,ಕುಂದಾಪುರ ತಾಲೂಕು ಉಡುಪಿ ಜಿಲ್ಲೆ ಎಂದು ತಿಳಿಸಿರುತ್ತಾನೆ. ಆಪಾದಿತನಿಂದ ನಗದು ಹಣ 1500/- ರೂಪಾಯಿಯನ್ನು ಪಂಚರ ಸಮಕ್ಷಮ ಮುಂದಿನ ಕ್ರಮದ ಬಗ್ಗೆ ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 25/2021 ಕಲಂ:3,6,7 ಅವಶ್ತಕ ವಸ್ತಗಳ ಅಧಿನಿಯಮ ಕಾಯ್ದೆ 1955 ಯಂತೆ ಪ್ರಕರಣ ದಾಖಲಾಗಿರುತ್ತದೆ.   
 • ಬ್ರಹ್ಮಾವರ: ಪಿರ್ಯಾದಿದಾರರಾಧ ತೇಜಪ್ಪ ಶೆಟ್ಟಿ (74) ತಂದೆ:ದಿ/ಮಹಾಬಲ ಶೆಟ್ಟಿ ವಾಸ:ಹೇರಂಜೆ ಕೆರೆಮನೆ 52 ನೇ ಹೇರೂರು ಗ್ರಾಮ ಬ್ರಹ್ಮಾವರ ಇವರು ಕೃಷಿ ಕೆಲಸ ಮಾಡಿಕೊಂಡಿದ್ದು ದಿನಾಂಕ 20/02/2021 ರಂದು ತೇಜಪ್ಪ ಶೆಟ್ಟಿ ರವರು ಬ್ರಹ್ಮಾವರ ತಾಲೂಕು 52 ನೇ ಹೇರುರು ಗ್ರಾಮದ ತನ್ನ ಮನೆಯಲ್ಲಿ ಮಲಗಿರುವಾಗ ರಾತ್ರಿ 10:30 ಗಂಟೆಗೆ ಕಾರಿನಲ್ಲಿ ಬಂದ ರವಿ, ಮಂಜುನಾಥ, ಮಧು ಎಂಬವರು ಮನೆಯ ಅಂಗಳಕ್ಕೆ ಬಂದು ಸೌಮ್ಯ ನಿಮ್ಮ ಮಗ ಸುಧೀರ ಶೆಟ್ಟಿಯ ಮಗಳಂತೆ ಅವಳು ನಿಮಗೆ ಪತ್ರ ಕೊಡಲು ನಿಮ್ಮ ವಿಳಾಸ ನೀಡಿರುತ್ತಾಳೆ. ಪತ್ರವನ್ನು ಸ್ವೀಕರಿಸಿ ಎಂದು ಹೇಳಿದರು ಅದಕ್ಕೆ ತೇಜಪ್ಪ ಶೆಟ್ಟಿ ರವರು ಅವರಲ್ಲಿ ನನಗೆ ಯಾವ ಪತ್ರ ಅಗತ್ಯ ಇಲ್ಲ ,ಯಾವ ಸಂಬಂಧವು ಇಲ್ಲ ನೀವು ಇಲ್ಲಿಂದ ಹೋಗಿ ಎಂದು ಹೇಳಿದ್ದು ಅವರು ಅಲ್ಲೇ ಮೊಬೈಲ್ ಟಾರ್ಚ ಹಾಕಿ ಆಚೆ ಇಚೆ ತಿರುಗಾಡುವುದನ್ನು ನೋಡಿ, ಅಳಿಯ ಸುಂದರನಿಗೆ ಕರೆ ಮಾಡಿದ್ದು ಹಾಗೂ ಅಕ್ಕಪಕ್ಕದವರಿಗೆ ಕರೆ ಮಾಡಿದ್ದು, ಸಂಬಂಧಿಕರಾದ ರಾಮ, ವಸಂತಿ, ರಮ್ಯ ರವರು ಬಂದಿದ್ದನ್ನು ನೋಡಿ ಮೂವರು ಇವರನ್ನುದ್ದೇಶಿಸಿ ಈ ಪತ್ರವನ್ನು ಸ್ವೀಕರಿಸದೇ ಇದ್ದರೇ ನಿನ್ನನ್ನು ಮುಂದಕ್ಕೆ ಬಿಡುವುದಿಲ್ಲ ಸೌಮ್ಯಳು ನಿಮ್ಮ ಮಗ ಮೃತ ಸುಧೀರನ ಮಗಳಾಗಿದ್ದು ಅವಳಿಗೆ ನಿಮ್ಮ ಆಸ್ತಿಯಲ್ಲಿ ಪಾಲು ಪಡೆದೇ ತಿರುತ್ತೇವೆ ನೀವು ಪತ್ರ ಸ್ವೀಕರಿಸದೇ ಇದ್ದಲ್ಲಿ ನಿಮ್ಮನ್ನು ಮುಂದಕ್ಕೆ ಕೊಲ್ಲದೇ ಬಿಡುವುದಿಲ್ಲ ಎಂದು ಅವಾಚ್ಯವಾಗಿ ಬೈದು ಬೆದರಿಕೆ ಹಾಕಿ ಕಾರಿನಲ್ಲಿ ಹೊರಟು ಹೋಗಿರುತ್ತಾರೆ. ಕಾರಿನ ನಂಬ್ರ ಟಾರ್ಚ ಹಾಕಿ ನೋಡಲಾಗಿ ಅದರ ನಂಬ್ರ ಕೆಎ-05-ಎಮ್-ಟಿ.4541 ಸ್ವೀಪ್ಟ್ ಕಾರು ಆಗಿರುತ್ತದೆ. ಸದ್ರಿ ಆಪಾದಿತು ತೇಜಪ್ಪ ಶೆಟ್ಟಿ ರವರ ಆಸ್ತಿಯನ್ನು ಕಬಳಿಸುವ ಉದ್ದೇಶದಿಂದ ಸೌಮ್ಯ ಎಂಬ ಮೊಮ್ಮಗಳು ಇದ್ದಾಳೆ ಎಂದು ಹೆದರಿಸಿ ಮನೆಯ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಅವಾಚ್ಯವಾಗಿ ಬೈದು ಬೆದರಿಕೆ ಹಾಕಿ ಹೋಗಿರುವುದಾಗಿದೆ. ಪಿರ್ಯಾದಿದಾರರು ವೃದ್ದನಾಗಿದ್ದು ಕಾನೂನಿನ ತಿಳುವಳಿಕೆ ಕಮ್ಮಿ ಇದ್ದು ಘಟನೆಯ ಬಗ್ಗೆ ಅಳಿಯ ಸುಂದರ ಶೆಟ್ಟಿಗೆ ಹೇಳಿ ಅವರು ದೂರು ನೀಡಲು ಹೇಳಿದಂತೆ ದೂರು ನೀಡಲು ವಿಳಂಬವಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 29/2021 ಕಲಂ: 447,504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
 • ಮಲ್ಪೆ: ಪಿರ್ಯಾದಿದಾರರಾಧ ಚಂದ್ರಹಾಸ ಶೆಟ್ಟಿ, (43) ತಂದೆ: ಚಂದ್ರಶೇಖರ ಶೆಟ್ಟಿ, ವಾಸ: ಚಂದ್ರಿಕ ನಿಲಯ, ಮೂಡುಬೆಟ್ಟು, ಕೊಡವೂರು ಗ್ರಾಮ, ಉಡುಪಿ ಇವರು ಬೆಂಗಳೂರಿನ ಮಹೀಂದ್ರ ಸಂಸ್ಥೆಯಲ್ಲಿ ಡಿವಿಜನಲ್ ಮೆನೇಜರ್ ಅಗಿ ಕೆಲಸ ಮಾಡಿಕೊಂಡಿದ್ದು ಕಳೆದ ಮಾರ್ಚ್‌ನಿಂದ ಕೊರೋನಾದಿಂದ ಮನೆಯಿಂದಲೇ ಕರ್ತವ್ಯ ನಿರ್ವಹಿಸಿಕೊಂಡಿದ್ದು ಚಂದ್ರಹಾಸ ಶೆಟ್ಟಿ ರವರು 2 ನೇ ಅರೋಪಿ ಸಾತ್ವಿಕ ಶೆಟ್ಟಿ ಇವರೊಂದಿಗೆ ದಿನಾಂಕ 10/05/2009  ರಂದು ವಿವಾಹ ಅಗಿದ್ದು ಒಂದು ಗಂಡು ಮಗು ಇರುತ್ತದೆ. ಕೆಲ ಸಮಯದ ನಂತರ ಚಂದ್ರಹಾಸ ಶೆಟ್ಟಿ ರವರು ಮತ್ತು 2 ನೇ ಅರೋಪಿ ಸಾತ್ವಿಕ ಶೆಟ್ಟಿ, ವಾಸ: ಪುತ್ತೂರು ದಕ್ಷಿಣ ಕನ್ನಡ, ಇವರ ದಾಂಪತ್ಯ ಜೀವನದಲ್ಲಿ 1 ನೇ ಅರೋಪಿ ಸಂಪತ್ ಶೆಟ್ಟಿ ಅಕ್ರಮ ಪ್ರವೇಶದಿಂದ  ವಿರಸ ಉಂಟಾಗಿ  ಬೇರೆ ವಾಸ ಮಾಡಿ ಕೊಂಡಿರುತ್ತಾರೆ. ದಿನಾಂಕ 11/12/2020 ರಂದು ಸ್ಕೋರ್ಪಿಯೋ ಗಾಡಿಯಲ್ಲಿ  ಬೆಳಗಿನ ಜಾವ 02:00 ಗಂಟೆ ಸಮಯಕ್ಕೆ 1 ನೇ ಅರೋಪಿ ಮತ್ತು ಇತರು 5 ರಿಂದ 6 ಮಂದಿ ಅಕ್ರಮ ಕೂಟ ಕಟ್ಟಿ ಕೊಂಡು ಬಂದು ಚಂದ್ರಹಾಸ ಶೆಟ್ಟಿ ರವರ ಮನೆಯ ಕೌಂಪೌಂಡಿನ ಒಳಗೆ ಅಕ್ರಮ ಪ್ರವೇಶ ಮಾಡಿ ಗೇಟನ್ನು ಕಾಲಿನಿಂದ ತುಳಿದು ಎರಡು ಗೇಟನ್ನು ಮೇಲಕ್ಕೆ ಎತ್ತಿ ಹಾಕಿ ಚಂದ್ರಹಾಸ ಶೆಟ್ಟಿ ಇವರನ್ನು ಜೋರಾಗಿ ಕೂಗಿ ಕರೆದು ದೈರ್ಯವಿದ್ದರೆ ಹೊರಗೆ ಬಾ ನಿನ್ನನ್ನು ಮುಗಿಸುತ್ತೆನೆ ಎಂದು ಬೆದರಿಕೆ ಹಾಕಿರುತ್ತಾರೆ. ಈ ಎಲ್ಲಾ ಕ್ರತ್ಯವನ್ನು 1 ನೇ ಅರೋಪಿಯು 2 ನೇ ಅರೋಪಿಯವರ ಕುಮ್ಮಕ್ಕಿನಿಂದ ಇತರ ಗೂಂಡಾಗಳೂಂದಿಗೆ ಕ್ರಿಮಿನಲ್ ಸಂಚು ರೂಪಿಸಿ ಪಿರ್ಯಾದುದಾರರನ್ನು ಮುಗಿಸಿ 1 ಮತ್ತು 2 ನೇ ಅರೋಪಿತರು ಸೇರಿ ಅನೈತಿಕವಾಗಿ ಜೀವಿಸುವ ಉದ್ದೇಶದಿಂದಲೇ ಈ ತಕ್ಷೀರು ನಡೆಸಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 20/2021  ಕಲಂ 120ಬಿ, 143, 147, 428, 442, 448, 506, ಜೊತೆಗೆ 149 ಐ.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 23-02-2021 05:31 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080