ಅಭಿಪ್ರಾಯ / ಸಲಹೆಗಳು

ಹೆಂಗಸು ಕಾಣೆ ಪ್ರಕರಣ

  • ಕಾಪು: ಪಿರ್ಯಾದಿ ಅಮೀರ್ ಅಬ್ದುಲ್ ಖಾಸಿಂ ಇವರ ಮಗಳಾದ ಸನಾ ಅಫ್ರೀನಾಳನ್ನು ಮೂಳೂರಿನ ವಾಸಿ ಅಬ್ದುಲ್ ಸತ್ತಾರ್ ಎಂಬಾತನಿಗೆ ಮದುವೆ ಮಾಡಿಕೊಟ್ಟಿದ್ದು, ಆತನು ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವುದಾಗಿದೆ. ಸನಾ ಅಫ್ರೀನಾಳು ಸುಮಾರು 1 ತಿಂಗಳ ಹಿಂದೆ ಗಂಡನ ಮನೆಯಿಂದ ತವರು ಮನೆಗೆ ಬಂದು ಇಲ್ಲಿಯೇ ಇದ್ದಳು. ದಿನಾಂಕ 21-02-2021 ರಂದು ಸನಾ ಅಫ್ರೀನಾಳ ಗಂಡ ಅಬ್ದುಲ್ ಸತ್ತಾರನು ಪಿರ್ಯಾದಿದಾರರಿಗೆ ಪೋನ್ ಮಾಡಿ ಸನಾ ಅಫ್ರೀನಾಳು ಎಲ್ಲಿ ಎಂದು ವಿಚಾರಿಸಿ ಕೂಡಲೇ ಅವಳನ್ನು ಮೂಳೂರಿನ ತನ್ನ ಮನೆಗೆ ಕಳುಹಿಸಿಕೊಡುವಂತೆ ತಿಳಿಸಿದ್ದು ಅದರಂತೆ ಪಿರ್ಯಾದಿದಾರರ ದೊಡ್ಡ ಮಗಳು ಶಬಾನ್ ಎಂಬಾತಳು ಸನಾ ಅಫ್ರೀನಾಳನ್ನು ಅವಳ ಗಂಡನ ಮನೆಯಾದ ಮೂಳೂರಿಗೆ ಬಿಟ್ಟು ಬಂದಿರುತ್ತಾಳೆ. ದಿನಾಂಕ 21-02-2021 ರಂದು ರಾತ್ರಿ ಸುಮಾರು 10.30 ಗಂಟೆ ಸಮಯಕ್ಕೆ ಗಂಡನ ಮನೆಯಲ್ಲಿ ಅವಳು ತನ್ನ ಅತ್ತೆ ಮಾವನೊಂದಿಗೆ ಮಾತನಾಡಿಕೊಂಡಿದ್ದು ನಂತರ ತನ್ನ ಕೋಣೆಯಲ್ಲಿ ಹೋಗಿ ಮಲಗಿದ್ದು ದಿನಾಂಕ 22-02-2021 ರಂದು ಬೆಳಿಗ್ಗೆ ಸುಮಾರು 5:00 ಗಂಟೆಗೆ ಸನಾ ಅಫ್ರೀನಾಳ ಅತ್ತೆ ಹಾಜಿರಾ ರವರು ಎದ್ದು ನೋಡುವಾಗ ಸನಾ ಅಫ್ರೀನಾಳು ಕೋಣೆಯಲ್ಲಾಗಲೀ, ಮನೆಯ ಕಂಪೌಂಡ್ ಮತ್ತು ಆಸು ಪಾಸುಗಳಲ್ಲಿ ಎಲ್ಲಿಯೂ ಕಂಡು ಬರಲಿಲ್ಲ. ನಂತರ ಹಾಜಿರಾ ರವರ ಮಗಳು ಸಮೀನಾ ಪೋನ್ ಮಾಡಿ ತಿಳಿಸಿದಂತೆ ಪಿರ್ಯಾದಿದಾರರು ಅವರ ಮನೆಗೆ ಹೋಗಿ ಮನೆಯ ಆಸು ಪಾಸುಗಳಲ್ಲಿ ಸನಾ ಆಫ್ರೀನಾಳನ್ನು ಹುಡುಕಾಡಿದಲ್ಲಿ ಅವಳು ಎಲ್ಲಿಯೂ ಕಂಡು ಬಂದಿರುವುದಿಲ್ಲ. ಅವಳು ಎಲ್ಲಿಗೆ ಹೋಗಿರುತ್ತಾಳೆಂದು ಯಾರಿಗೂ ತಿಳಿದು ಬಂದಿರುವುದಿಲ್ಲ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 24/2021 ಕಲಂ ಹೆಂಗಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.     

ಇತ್ತೀಚಿನ ನವೀಕರಣ​ : 23-02-2021 05:58 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ