ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ದೇವೇಂದ್ರ ಸುವರ್ಣ ((42 ತಂದೆ: ರಾಜು ಅಮೀನ್‌, ವಾಸ: ಪಾಲಾಕ್ಷ ನಿಲಯ, ಎಂ.ಜಿ. ಕಾಲೋನಿ, ವಡ್ಡರ್ಸೆ ಗ್ರಾಮ, ಬ್ರಹ್ಮಾವರ ರು ಈ ದಿನ ದಿನಾಂಕ 22/01/2023 ರಂದು ಕೆಲಸದ ನಿಮಿತ್ತ ಕೋಟ ಪೇಟೆಯಲ್ಲಿ ನಿಂತಿರುವಾಗ ಮಧ್ಯಾಹ್ನ 3:30 ಗಂಟೆಗೆ ರಾ.ಹೆ. 66 ಉಡುಪಿ - ಕುಂದಾಪುರ ಮುಖ್ಯರಸ್ತೆಯಲ್ಲಿ ಕುಂದಾಪುರ ಕಡೆಯಿಂದ ಬಂದ ನಂ KA-51 AF-6741 ನೇ ಡಿಸೆಂಟ್‌ಬಸ್ಸಿನ ಚಾಲಕ ಮೋಹಿತ್‌ಎಂಬಾತನು, ಕೋಟ ಜಂಕ್ಷನ್‌ಬಳಿ ಬಂದಾಗ ಸರ್ವಿಸ್‌ರಸ್ತೆಗೆ ಬಸ್ಸನ್ನು ಚಲಾಯಿಸದೇ ಮುಖ್ಯರಸ್ತೆಯಲ್ಲಿಯೇ ಚಲಾಯಿಸಿಕೊಂಡು ಬಂದು ಕೋಟ ಬಸ್‌ನಿಲ್ದಾಣದ ಎದುರು ಯಾವುದೇ ಸೂಚನೇ ನೀಡದೇ ಏಕಾಏಕಿ ರಸ್ತೆಮಧ್ಯೆ ನಿಲ್ಲಿಸಿದ್ದು, ಆಗ ಹಿಂದಿನಿಂದ ಅಂದರೆ ಕುಂದಾಪುರ ಕಡೆಯಿಂದ ಬಿಳಿ ಬಣ್ಣದ ನಂ KA-20 ES-9244 ನೇ ಅಪಾಚಿ ಬೈಕ್‌ನಲ್ಲಿ ಸವಾರ ಗಣೇಶ್‌ಎಂಬಾತನು ತನ್ನ ಹಿಂಬದಿ ಸುಮಂತ್‌ಎಂಬಾತನನ್ನು ಕುಳ್ಳಿರಿಸಿಕೊಂಡು ಬಂದು ಬಸ್ಸಿನ ಹಿಂದಿನ ಬಲಬದಿಗೆ ಢಿಕ್ಕಿ ಹೊಡೆದನು. ಅಪಘಾತದಲ್ಲಿ ಬೈಕ್‌ಸವಾರನ ತಲೆಯ ಹಿಂಬದಿ ತೀವ್ರ ರಕ್ತಗಾಯ ಮತ್ತು ಇತರೆಡೆಗಳಿಗೆ ಸಣ್ಣಪುಟ್ಟ ತರಚಿದ ಗಾಯಗಳೂ ಹಾಗೂ ಹಿಂಬದಿ ಸವಾರನ ಕುತ್ತಿಗೆಗೆ ತೀವ್ರ ಗಾಯಗಳಾಗಿರುತ್ತದೆ. ಗಾಯಾಳುಗಳಿಬ್ಬರು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಾಗಿರುತ್ತಾರೆ. ಈ ಅಪಘಾತಕ್ಕೆ ಡಿಸೆಂಟ್‌ಬಸ್ಸಿನ ಚಾಲಕ ಮೋಹಿತ್‌ಎಂಬಾತನ ಅಜಾಗರೂಕತೆ ಮತ್ತು ನಿರ್ಲಕ್ಷ್ಯತನವೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 11/2023  ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಫುರ: ದಿನಾಂಕ 22/01/2023 ಬೆಳಿಗ್ಗೆ ಸುಮಾರು 7:40 ಗಂಟೆಗೆ, ಕುಂದಾಪುರ  ತಾಲೂಕಿನ, ಕಾವ್ರಾಡಿ ಗ್ರಾಮದ ಕಂಡ್ಲೂರು ಜೂಮ್‌‌ಸೂಪರ್‌ಮಾರ್ಕೆಟ್ ಬಳಿ SH52  ರಸ್ತೆಯಲ್ಲಿ, ಆಪಾದಿತ ಶ್ರೀಷ ಶೆಟ್ಟಿ ಎಂಬವರು  KA-19-EN-8590ನೇ ಬೈಕನ್ನು ಸಿದ್ದಾಪುರ ಕಡೆಯಿಂದ ಕುಂದಾಪುರ ಕಡೆಗೆ ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಸವಾರಿ  ಮಾಡಿಕೊಂಡು ಬಂದು, ಅದೇ ದಿಕ್ಕಿನಲ್ಲಿ ನಡೆದುಕೊಂಡು ಹೋಗಿ, ರಸ್ತೆ ದಾಟುತ್ತಿದ್ದ  ಮೊಹಮ್ಮದ್‌ ವಾಹೀದ್‌ (11) ಎಂಬವನಿಗೆ ಹಿಂದಿನಿಂದ ಡಿಕ್ಕಿ ಹೊಡೆದ  ಪರಿಣಾಮ, ಮೊಹಮ್ಮದ್‌ವಾಹೀದ್‌ನ  ತಲೆಗೆ ಒಳಪೆಟ್ಟಾಗಿದ್ದು, ಕೈ ಕಾಲುಗಳಿಗೆ  ಗಾಯವಾಗಿ  ಪ್ರಜ್ಞೆ ಹೋಗಿದ್ದು, ಮೊಹಮ್ಮದ್‌ ವಾಹೀದ್‌ ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ಅಲ್ಲಿಂದ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ಹೋಗಿ, ಆ ಬಳಿಕ   ಮಂಗಳೂರು ಯನಫೋಯ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಶ್ರೀಷ ಶೆಟ್ಟಿ ಗಾಯಗೊಂಡು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ ಒಳ ರೋಗಿಯಾಗಿ ದಾಖಲಾಗಿರುತ್ತಾರೆ. ಎಂಬುದಾಗಿ ಕಲೀಫಾ ಅಬ್ದುಲ್‌ ‌ಖಾದೀರ್‌ (67) ತಂದೆ  ಕಲೀಫಾ ಅಮ್ಮ ಸಾಹೇಬ್‌  ವಾಸ:  ಜೆ.ಎಂ  ರಸ್ತೆ, ಜನತಾ ಕಾಲೋನಿ ಕಂಡ್ಲೂರು  ಕಾವ್ರಾಡಿ ಗ್ರಾಮ ಕುಂದಾಪುರ ಇವರು ನೀಡಿದ ದೂರಿನಂತೆ ಕುಂದಾಫುರ ಗ್ರಾಮಾಂತರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 10/2023  ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 23-01-2023 09:53 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080