ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಶಿರ್ವ:  ದಿನಾಂಕ 22.01.2023  ರಂದು  ಪಿರ್ಯಾದಿ: ಮಂಜಪ್ಪ (24) ತಂದೆ: ಬಸವಣ್ಣ ವಾಸ: ಮನೆ ನಂ.4-110 F, ಸುಭಾಸ್‌ನಗರ ಅಂಚೆ, ಕುರ್ಕಾಲು ಗ್ರಾಮ,ಹಾಲಿ ವಾಸ: ಅರಸಿಕಟ್ಟೆ,  ಮಧ್ವ ವಾದಿರಾಜ್‌ಇಂಜಿನಿಯರಿಂಗ್‌ ಕಾಲೇಜ್‌ಹಿಂಭಾಗ, ಐವನ್‌ಗಾಗ ಹೌಸ್‌ರವರ ಬಾಡಿಗೆ ಮನೆ, ಬಂಟಕಲ್‌ಅಂಚೆ, ಶಿರ್ವ ಗ್ರಾಮ ಇವರ ತಾಯಿ ಯಲ್ಲಮ್ಮ (49)  ರವರು ಸಂಜೆ  ವೇಳೆಗೆ ಮನೆಯಿಂದ ದಿನಸಿ ಸಾಮಾನು ತರುವರೇ  ಶಂಕರಪುರ  ಪೇಟೆಗೆಂದು ಬಸ್‌ನಲ್ಲಿ  ಹೋಗಿ ಸಾಮಾನುಗಳನ್ನು ಖರೀದಿಸಿ  ವಾಪಾಸು ಶಂಕರಪುರ ಪೇಟೆಯಿಂದ ಬಸ್‌ನಲ್ಲಿ ಬಂಟಕಲ್‌ ಮಧ್ವ ವಾದಿರಾಜ್‌ ಇಂಜಿನಿಯರಿಂಗ್‌ ಕಾಲೇಜ್‌ ಬಳಿ ಮನೆ ಕಡೆಗೆ  ಹೋಗುವರೇ  ಬಸ್‌ನಿಂದ ಇಳಿದು   ರಸ್ತೆಯನ್ನು  ದಾಟಿ  ಇಂಜಿನಿಯರಿಂಗ್‌ ಕಾಲೇಜ್‌ಬಳಿ ಇರುವ  ಬಸ್‌ಸ್ಟಾಂಡ್‌ ಬಳಿ ಸಾರ್ವಜನಿಕ ಡಾಮಾರು ರಸ್ತೆಯ ಬದಿ  ನಡೆದುಕೊಂಡು  ಹೋಗುತ್ತಿರುವಾಗ ಸಮಯ ಸಂಜೆ 7:15  ಗಂಟೆ ಸುಮಾರಿಗೆ  ಎದುರಿನಿಂದ ಅಂದರೆ ಬಂಟಕಲ್‌ ಕಡೆಯಿಂದ  ಕಟಪಾಡಿ  ಕಡೆಗೆ ಓರ್ವ  ಮೋಟಾರ್‌ ಸೈಕಲ್‌ ಸವಾರ ತಾನು   ಸವಾರಿ ಮಾಡಿಕೊಂಡು ಬರುತ್ತಿದ್ದ ಮೋಟಾರ್‌ ಸೈಕಲ್‌ನ್ನು ಅತೀ  ವೇಗ  ಹಾಗೂ  ಅಜಾಗರೂಕತೆಯಿಂದ  ಸವಾರಿ ಮಾಡಿಕೊಂಡು  ಬಂದು  ಪಿರ್ಯಾದಿ ದಾರರ  ತಾಯಿ ಯಲ್ಲಮ್ಮ ರವರಿಗೆ  ಮುಂದಿನಿಂದ  ಡಿಕ್ಕಿ ಹೊಡೆದ  ಪರಿಣಾಮ    ತಾಯಿ  ರಸ್ತೆಗೆ ಬಿದ್ದು, ಹಿಂಬದಿ  ತಲೆಗೆ  ತೀವ್ರ  ಸ್ವರೂಪದ  ಗಾಯಗೊಂಡವರನ್ನು  ಅಲ್ಲಿ  ಸೇರಿದ  ಸಾರ್ವಜನಿಕರು  ಉಪಚರಿಸಿ  ಕೂಡಲೇ ಆಂಬ್ಯುಲೆನ್ಸ್‌‌ನಲ್ಲಿ  ಚಿಕಿತ್ಸೆ  ಬಗ್ಗೆ ಉಡುಪಿ ಜಿಲ್ಲಾ ಸರಕಾರಿ  ಆಸ್ಪತ್ರೆಗೆ  ಕರೆದುಕೊಂಡು  ಹೋಗಿರುವ  ವಿಚಾರ ತಿಳಿದು  ಕೂಡಲೇ ಪಿರ್ಯಾದಿದಾರರು ಅಪಘಾತವಾದ  ಸ್ಥಳಕ್ಕೆ ಬಂದಿದ್ದು,  ಅಪಘಾತಪಡಿಸಿದ  ಮೋಟಾರ್‌ಸೈಕಲ್‌   ಅಲ್ಲಿಯೇ ಸ್ಥಳದಲ್ಲಿ ಇದ್ದು ನಂಬ್ರ  ನೋಡಲಾಗಿ  KA20EX3833 ನೇ ಮೋಟಾರ್‌ ಸೈಕಲ್‌ ಆಗಿದ್ದು,  ಸವಾರನ  ಹೆಸರು  ಗುರುಪ್ರಸಾದ್‌ ಎಂಬುದಾಗಿ ತಿಳಿಯಿತು.  ನಂತರ ತಾಯಿಯವರನ್ನು ನೋಡುವರೇ  ಉಡುಪಿ ಜಿಲ್ಲಾ  ಸರಕಾರಿ  ಆಸ್ಪತ್ರೆಗೆ ತೆರಳಿದ್ದು,  ಅಲ್ಲಿನ  ವೈದ್ಯಾಧಿಕಾರಿಯವರು  ತಾಯಿಯವರನ್ನು ಪರೀಕ್ಷಿಸಿ  ರಾತ್ರಿ 8:10  ಗಂಟೆಗೆ  ಮೃತಪಟ್ಟಿರುವುದಾಗಿ  ದೃಢೀಕರಿಸಿರುತ್ತಾರೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ  04/2023 ಕಲಂ 279,   304(A),  IPC ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಗಂಗೊಳ್ಳಿ: ದಿನಾಂಕ: 05.01.2023 ರಂದು KA-20 EA 8003 ನೇ ಮೋಟಾರು ಸೈಕಲ್‌ನಲ್ಲಿ ಪಿರ್ಯಾದಿ: ಸುರೇಶ ಪ್ರಾಯ 47 ವರ್ಷ, ತಂದೆ: ಬಸವ, ವಾಸ: ಹಕ್ಲಾಡಿ ಅಂಚೆ ಮತ್ತು ಗ್ರಾಮ, ರವರನ್ನು ಸಹಸವಾರರನ್ನಾಗಿ ಕುಳ್ಳಿರಿಸಿಕೊಂಡು ಜಗಧೀಶ ಎಂಬವರು ಗಂಗೊಳ್ಳಿಯಿಂದ ತ್ರಾಸಿ ಕಡೆಗೆ ಸವಾರಿ ಮಾಡಿಕೊಂಡು ಕುಂದಾಪುರ ತಾಲೂಕು ಗುಜ್ಜಾಡಿ ಗ್ರಾಮದ ನಾಯಕ್‌ವಾಡಿ ಜಂಕ್ಷನ್‌ಬಳಿ ರಸ್ತೆಯಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತೀರುವಾಗ ಸಮಯ ಸುಮಾರು 14-15 ಗಂಟೆಗೆ ನಾಯಿಯೊಂದು ಬೈಕ್‌ಗೆ ಅಡ್ಡಬಂದಾಗ ಬೈಕ್‌ಸವಾರ ಜಗದೀಶ ಒಮ್ಮೇಲೆ ಬ್ರೇಕ್‌ಹಾಕಿದ್ದು ಪರಿಣಾಮ ಬೈಕ್‌ ಸ್ಕೀಡ್‌ಆಗಿ, ಸವಾರನ ಹತೋಟಿ ತಪ್ಪಿ ರಸ್ತೆಗೆ ಬಿದ್ದಿದ್ದು ಬೈಕ್‌ನಲ್ಲಿ ಸಹಸವಾರನಾಗಿ ಕುಳಿತಿರುವ ಪಿರ್ಯಾದಿದಾರರು ರಸ್ತೆಗೆ ಬಿದ್ದು ಬಲಕೈಯ ಮೊಣಕೈ ಮುರಿದಿದ್ದು, ಕಾಲು ಹಾಗೂ ಇತರ ಬಾಗಗಳಿಗೆ ಗಾಯವಾಗಿರುತ್ತದೆ, ಬೈಕ್‌ಸವಾರ ಜಗದೀಶನಿಗೆ ಸಣ್ಣಪುಟ್ಟ ಗಾಯವಾಗಿರುತ್ತದೆ. ಈ ಅಪಘಾತದಿಂದಾದ ಗಾಯದ ಬಗ್ಗೆ ಪಿಯಾದಿದಾರರು ಕುಂದಾಪುರ ನ್ಯೂ ಮೇಡಿಕಲ್‌ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವುದಾಗಿದೆ. ಈ ಅಪಘಾತದಿಂದ ಪಿರ್ಯಾದಿದಾರರಿಗೆ ಉಂಟಾದ ನಷ್ಟಗಳಿಗೆ ಪರಿಹಾರವನ್ನು ಆಪಾದಿತನು ತಾನೇ ನೀಡುವುದಾಗಿ ಹಾಗೂ ಪೊಲೀಸರಿಗೆ ದೂರು ನೀಡುವುದು ಬೇಡ ಎಂದು ತಿಳಿಸಿರುವುದರಿಂದ ಈವರೆಗೆ ಕಾದು ಪರಿಹಾರ ನೀಡದೇ ಇರುವುದರಿಂದ ಈ ದಿನ ದೂರು ನೀಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಠಾಣಾ ಅಪರಾಧ ಕ್ರಮಾಂಕ 10/2023 ಕಲಂ: 279,338 IPC  ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ 22/01/2023 ಸಂಜೆ ಸುಮಾರು 06:00  ಗಂಟೆಗೆ ಕುಂದಾಪುರ  ತಾಲೂಕಿನ, ಕಸಬಾ ಗ್ರಾಮದ ಸಂಗಮ್‌ಜಂಕ್ಷನ್‌ಬಳಿ NH66 ರಸ್ತೆಯಲ್ಲಿ, ಆಪಾದಿತ ರಾಹುಲ್‌ಎಂಬವರು KA01-AG-9101ನೇ ಟ್ಯಾಂಕರ್‌‌‌ನ್ನು  ಬೈಂದೂರು ಕಡೆಯಿಂದ ಕುಂದಾಪುರ ಕಡೆಗೆ ಪೂರ್ವ ಬದಿಯ NH66 ರಸ್ತೆಯಲ್ಲಿ, ಅತೀವೇಗ ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ  ಮಾಡಿಕೊಂಡು ಬಂದು, ರಸ್ತೆಯಲ್ಲಿ ವೇಗ ನಿಯಂತ್ರಣಕ್ಕೆ ಹಾಕಿದ ಬ್ಯಾರಿಕೇಡ್‌‌ನ್ನು ನೋಡಿ ಟ್ಯಾಂಕರ್‌‌‌ನ್ನು  ರಸ್ತೆಯ ಬಲಬದಿಗೆ ಒಮ್ಮೇಲೆ  ಚಲಾಯಿಸಿದಾಗ  ಟ್ಯಾಂಕರ್‌ಆಪಾದಿತನ ನಿಯಂತ್ರಣ ತಪ್ಪಿ ಟ್ಯಾಂಕರ್‌‌‌ನ್ನು  NH66 ರಸ್ತೆ ಮಧ್ಯೆದ ಡಿವೈಡರ್‌‌ಮೇಲೆ ಹಾಯಿಸಿ ಬಳಿಕ ನಿಯಂತ್ರಣ ತಪ್ಪಿ ಅಡ್ಡ ಮಗ್ಗುಲಾಗಿ ಬಿದ್ದು ಪಶ್ಚಿಮ  ಬದಿಯ NH66 ರಸ್ತೆಯಲ್ಲಿ ಬಿದ್ದು ಜಾರಿಕೊಂಡು ಬಂದು, ಪಿರ್ಯಾದಿದಾರರಾದ ನರಸಿಂಹ ಆಚಾರ್‌ಪ್ರಾಯ 50 ವರ್ಷ ತಂದೆ ದಿ. ಆನಂತಯ್ಯ ಆಚಾರ್‌ವಾಸ:  ಜ್ಯೂನಿಯರ್‌ಕಾಲೇಜ್‌‌ಹಿಂಭಾಗ, ನಾವುಂದ ಗ್ರಾಮ ರವರು ಕುಂದಾಪುರ ಕಡೆಯಿಂದ ನಾವುಂದ ಕಡೆಗೆ ಚಲಾಯಿಸಿಕೊಂಡು ಹೋಗುತ್ತಿದ್ದ KA02-MA-7602ನೇ ಮಾರುತಿ Alto ಕಾರಿಗೆ ಎದುರುಗಡೆಯಿಂದ ಡಿಕ್ಕಿ ಹೊಡೆದ ಪರಿಣಾಮ, ಪಿರ್ಯಾದಿದಾರರ ಬಲ ಎದೆಗೆ ಗಾಯವಾಗಿ ಈ ದಿನ ದಿನಾಂಕ 23/01/2023 ರಂದು ಬೆಳಿಗ್ಗೆ ಕುಂದಾಪುರ ನ್ಯೂ ಮೆಡಿಕಲ್‌‌ಸೆಂಟರ್‌ಆಸ್ಪತ್ರೆಗೆ ಚಿಕಿತ್ಸೆ ಬಗ್ಗೆ ದಾಖಲಾಗಿರುತ್ತಾರೆ ಹಾಗೂ ಈ  ಅಪಘಾತದಿಂದ ಎರಡೂ ವಾಹನಗಳು, ಹಾಗೂ  NH66 ರಸ್ತೆಯಲ್ಲಿ ಆಳವಡಿಸಿದ ಸಿ.ಸಿ ಕೆಮರಾ ಹಾಗೂ NH66 ರಸ್ತೆಯಲ್ಲಿ ಹಾಕಿದ  ಸೂಚನಾ ಫಲಕಗಳು ಜಖಂಗೊಂಡಿರುತ್ತದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ, ಅಪರಾಧ ಕ್ರಮಾಂಕ 11/2023 ಕಲಂ 279,337 IPC ಯಂತೆ ಪ್ರಕರಣ ದಾಖಲಿಸಲಾಗಿದೆ.


ಅಸ್ವಾಭಾವಿಕ ಮರಣ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿ: ಪೀಟರ್ ಡಿ’ಆಲ್ಮೇಡಾ (43) ತಂದೆ: ಅಲ್ಬರ್ಟ್ ಡಿ’ಆಲ್ಮೇಡಾ ವಾಸ: ಗಿಫ್ಟ್ ಆಫ್ ಗಾಡ್, ತೆಳ್ಳಾರ ರಸ್ತೆ, ದುರ್ಗಾ ಗ್ರಾಮ  ಇವರ ತಂದೆಯಾದ ಅಲ್ಬರ್ಟ್ ಡಿ’ಆಲ್ಮೇಡಾ, ಪ್ರಾಯ 72 ವರ್ಷ ಎಂಬವರು ಒಬ್ಬರೆ ವಾಸವಿದ್ದು, ಫಿರ್ಯಾದಿದಾರರ ತಾಯಿ ಆಗಾಗ ಬಂದು ತನ್ನ ಗಂಡನನ್ನು ನೋಡಿಕೊಂಡು ಹೋಗುತ್ತಿರುವುದಾಗಿದೆ. ಅಲ್ಬರ್ಟ್ ಡಿ’ಆಲ್ಮೇಡಾ ರವರು ಪ್ರತಿದಿನ ಮದ್ಯಪಾನ ಮಾಡುವ ಚಟವನ್ನು ಹೊಂದಿರುತ್ತಾರೆ. ಅವರು ಮನೆಯಲ್ಲಿ ಒಬ್ಬರೆ ಇರುವುದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ದಿನಾಂಕ: 21/01/2023 ರಂದು ಮಧ್ಯಾಹ್ನ 4.00 ಗಂಟೆಯಿಂದ ದಿನಾಂಕ : 23/01/2023 ರಂದು ಬೆಳಿಗ್ಗೆ 9.00 ಗಂಟೆ ಮಧ್ಯಾವಧಿಯಲ್ಲಿ ಮನೆಯಲ್ಲಿದ್ದವರು “Pardon” ವಿಷ ಪದಾರ್ಥ ಸೇವಿಸಿ ಮೃತಪಟ್ಟಿರಬಹುದಾಗಿದೆ.  ಅವರು 7 ವರ್ಷಗಳ ಹಿಂದೆ ಇಂತಹದ್ದೆ “Pardon” ಸೇವಿಸಿದ್ದು ನಂತರ ಚಿಕಿತ್ಸೆ ಕೊಡಿಸಿ, ಗುಣಮುಖರಾಗಿರುತ್ತಾರೆ. ಅಲ್ಬರ್ಟ್ ಡಿ’ಆಲ್ಮೇಡಾ ರವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲ. ಈ ಬಗ್ಗೆ ಬ್ರಹ್ಮಾವರ ಠಾಣೆ ಯುಡಿಆರ್ ನಂ. 07/2023 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬ್ರಹ್ಮಾವರ:   ಪಿರ್ಯಾದಿ: ಗಿರೀಶ ಬಿ ಪ್ರಾಯ : 45 ವರ್ಷ ತಂದೆ : ದಿ. ತಿಮ್ಮ ಪೂಜಾರಿ ವಾಸ : ಬಿ.ಟಿ. ಕಾಂಪೌಂಡ್‌, ಪಾಂಡುರಂಗ ದೇವಸ್ಥಾನ ರಸ್ತೆ, ಚಾತಾರು ಗ್ರಾಮ, ಇವರ ಅಕ್ಕನ ಮಗನಾದ ಕಾರ್ತಿಕ್‌ಕುಮಾರ್‌(31 ವರ್ಷ) ಎಂಬವರು ಸುಮಾರು 1 ತಿಂಗಳಿನಿಂದ ವಿಪರೀತ ಕೆಮ್ಮು ಕಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಅವರಿಗೆ ಬ್ರಹ್ಮಾವರ ಮಹಾಬಲ ಡಾಕ್ಟರ್‌ರವರ  ಕ್ಲಿನಿಕ್‌, ಬ್ರಹ್ಮಾವರ ಸರಕಾರಿ ಆಸ್ಪತ್ರೆ, ಬಳಿಕ ಒಂದು ವಾರದ ಹಿಂದೆ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಕೊಡಿಸಿ ಅಲ್ಲಿಯ ವೈದ್ಯರ ಸಲಹೆಯ ಮೇರೆಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ಹೊರರೋಗಿಯಾಗಿ ಚಿಕಿತ್ಸೆ ಕೊಡಿಸಿದ್ದರೂ ಕೂಡಾ ಕೆಮ್ಮು ಕಮ್ಮಿಯಾಗಿರುವುದಿಲ್ಲ.  ದಿನಾಂಕ 22/01/2023 ರಂದು ಮದ್ಯಾಹ್ನ 3:00 ಗಂಟೆ ಸುಮಾರಿಗೆ ಬ್ರಹ್ಮಾವರ ತಾಲೂಕು ಕುಮ್ರಗೋಡು ಗ್ರಾಮದ ಜಂಬಾಡಿ  ಎಂಬಲ್ಲಿ ಪಿರ್ಯಾದಿದಾರರ ದೈವದ ಮನೆಯಲ್ಲಿ ದರ್ಶನ ಆಗುತ್ತಿರುವಾಗ  ಕಾರ್ತಿಕ್‌ಕುಮಾರ್‌ನು ಕುರ್ಚಿಯಲ್ಲಿ ಕುಳಿತಿದ್ದವನು ಅಲ್ಲಿಯೇ ನಿತ್ರಾಣಗೊಂಡು ತೀವೃ ಅಸ್ವಸ್ಥನಾಗಿ ಮಾತನಾಡುವ ಸ್ಥಿತಿಯಲ್ಲಿ ಇಲ್ಲದೆ ಇದ್ದವನನ್ನು ಚಿಕಿತ್ಸೆಯ ಬಗ್ಗೆ  ಬ್ರಹ್ಮಾವರ ಮಹೇಶ್‌ ಆಸ್ಪತ್ರೆಗೆ  ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ವೈದ್ಯರ ಸಲಹೆಯ ಮೇರಗೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿಯ ವೈದ್ಯರು ಚಿಕಿತ್ಸೆ ನೀಡಿದ್ದು, ಚಿಕಿತ್ಸೆ ಫಲಕಾರಿಯಾಗದೇ 19:36 ಗಂಟೆಗೆ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಠಾಣೆ  ಯುಡಿಆರ್ ನಂ. 06/2023 ಕಲಂ 174 ಸಿಆರ್‌ಪಿಸಿ  ಯಂತೆ ಪ್ರಕರಣ ದಾಖಲಾಗಿರುತ್ತದೆ.

     

ಇತ್ತೀಚಿನ ನವೀಕರಣ​ : 23-01-2023 06:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080