ಅಭಿಪ್ರಾಯ / ಸಲಹೆಗಳು

ಅಫಘಾತ ಪ್ರಕರಣ

  • ಕಾರ್ಕಳ: ಪಿರ್ಯಾದಿ ಶಿವ ಪ್ರಸಾದ್ ಇವರು ರಿಕ್ಷಾ ಚಾಲಕರಾಗಿದ್ದು ದಿನಾಂಕ: 22.01.2022 ರಂದು ಆಟೋರಿಕ್ಷಾದಲ್ಲಿ ಪುಲ್ಕೇರಿಯಿಂದ ಬಜಗೋಳಿ ಕಡೆಗೆ ಹೋಗಲು ರಾಷ್ಟ್ರೀಯ ಹೆದ್ದಾರಿ 169 ರಲ್ಲಿ ಚಲಾಯಿಸಿಕೊಂಡು ಬಜಗೋಳಿಗೆ ಹೋಗುತ್ತಿದ್ದ ಸಮಯದಲ್ಲಿ ಸಮಯ ಸುಮಾರು ಬೆಳಗ್ಗೆ 09:00 ಗಂಟೆಗೆ ಮಿಯಾರು ಗ್ರಾಮದ ಕುಂಟಿಬೈಲು ದುರ್ಗಾಪರಮೇಶ್ವರಿ ದೇವಾಸ್ಥಾನದ ಕ್ರಾಸ್ ತಲುಪುವಾಗ ಬಜಗೋಳಿ ಕಡೆಯಿಂದ ಪುಲ್ಕೇರಿ ಕಡೆಗೆ KA03Z 2810 ನೇ ನೋಂದಣಿ ಸಂಖ್ಯೆಯ ಕಾರಿನ ಚಾಲಕ ಸುಜಿತ್ ನು ಅತಿ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ಮಣ್ಣು ರಸ್ತೆಯಲ್ಲಿ ಓರ್ವ ವ್ಯಕ್ತಿ KA18EF 9614 ನೇ ನೋಂದಣಿ ಸಂಖ್ಯೆಯ ದ್ವಿಚಕ್ರ ವಾಹನವನ್ನು ನಿಲ್ಲಿಸಿಕೊಂಡು ಮಾತನಾಡುತ್ತಿರುವಾಗ ಡಿಕ್ಕಿ ಹೊಡೆದ ಪರಿಣಾಮ ದ್ವಿ ಚಕ್ರ ವಾಹನ ಸವಾರನಿಗೆ ತಲೆಯ ಹಿಂಬದಿ ಓಳಜಖಂ ಆಗಿದ್ದು ಮಾತನಾಡುತ್ತಿರಲಿಲ್ಲ, ಪಿರ್ಯಾದಿದಾರರು ಹಾಗೂ ಕಾರಿನ ಚಾಲಕ ಗಾಯಗೊಂಡ ದ್ವಿಚಕ್ರ ವಾಹನ ಸವಾರನನ್ನು ಚಿಕಿತ್ಸೆ ಬಗ್ಗೆ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಪ್ರಾಥಮಿಕ ಚಿಕಿತ್ಸೆ ನೀಡಿದ್ದು, ಆ ಸಮಯ ದ್ವಿಚಕ್ರ ವಾಹನ ಸವಾರನು ಮಾತನಾಡಿದ್ದು ತನ್ನ ಹೆಸರು ಮೋರಿಸ್ ಪಿಂಟೋ ಎಂದು ತಿಳಿಸಿರುತ್ತಾರೆ. ಆ ಸಮಯ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಮೋರಿಸ್ ಪಿಂಟೋರವರ ಸಂಬಂಧಿಕರು ಬಂದಿದ್ದು ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ  ಮೋರಿಸ್ ಪಿಂಟೋರವರನ್ನು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು,  ಮೋರಿಸ್ ಪಿಂಟೋರವರನ್ನು ಸಂಬಂಧಿಕರು ಬೇರೆ ಆಸ್ಪತ್ರೆಗೆ ಕರೆದುಕೊಂಡು ಹೋಗಿರುತ್ತಾರೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 14/2022  ಕಲಂ 279,338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಬೈಂದೂರು: ದಿನಾಂಕ :21/01/2022 ರಂದು ಮಧ್ಯಾಹ್ನ 1:00 ಗಂಟೆಗೆ  ಪಿರ್ಯಾದಿ ಕೃತನ್ ಶೆಟ್ಟಿ ಇವರು  ನಾವುಂದ ಜ್ಯೂನಿಯರ್ ಕಾಲೇಜಿಗೆ ಹೋಗಿ ವಾಪಾಸು  ಮನೆಯಾದ ಉಳ್ಳೂರಿಗೆ  ಹೋಗಲು ಅರೆಹೊಳೆ ಕ್ರಾಸ್ ನಲ್ಲಿ  ಬಸ್ ಹತ್ತಲು ನಾವುಂದ ಜ್ಯೂನಿಯರ್ ಕಾಲೇಜು ಬಳಿ ರಾ.ಹೆ 66 ರ  ರಸ್ತೆಯ ಪಶ್ಚಿಮ ದಿಕ್ಕಿನಲ್ಲಿ ನಡೆದುಕೊಂಡು ಹೋಗುತ್ತಿರುವಾಗ  ಪಿರ್ಯಾದುದಾರರ ಹಿಂದಿನಿಂದ ಅಂದರೆ ತ್ರಾಸಿ ಕಡೆಯಿಂದ ಬೈಂದೂರು ಕಡೆಗೆ ಆರೋಪಿ  ಚಂದ್ರ ಶೇಖರನು ಆತನ ಬಾಬ್ತು KA 20 EY 1368 ನೇ ಮೊಟಾರು ಸೈಕಲ್ ನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಎಡಬದಿಗೆ  ಚಲಾಯಿಸಿಕೊಂಡು  ಬಂದು  ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದುದಾರರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ  ಪಿರ್ಯಾದುದಾರರು ರಸ್ತೆ ಬಿದ್ದು ಅವರ  ಎಡ ಕಾಲಿಗೆ ತೀವ್ರ ತರಹದ ರಕ್ತಗಾಯ ಮತ್ತು ಎಡ ಕೈ ಮೊಣಗಂಟಿಗೆ ತರಚಿದ ರಕ್ತಗಾಯವಾದವರಿಗೆ ಕುಂದಾಪುರ  ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ  ಹೆಚ್ಚಿನ ಚಿಕಿತ್ಸೆಯ  ಬಗ್ಗೆ ವೈದ್ಯರ ಸಲಹೆಯ ಮೇರೆಗೆ ಕುಂದಾಪುರ ಚಿನ್ಮಯಿ ಆಸ್ಪತ್ರೆಗೆ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣಾ ಅಪರಾಧ ಕ್ರಮಾಂಕ 21/2022 ಕಲಂ 279,338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ. 
  • ಕಾಪು: ಪಿರ್ಯಾದಿ ಯಾದವ ಡಿ ಪೂಜಾರಿ  ಇವರು ದಿನಾಂಕ: 21-01-2022 ರಂದು ಅವರ ತಮ್ಮ ಮಾಧವ ಪೂಜಾರಿ ರವರ ಬಾಬ್ತು ಕೆ. ಎ. 20 ಇ.ಬಿ. 1868 ನೇದರಲ್ಲಿ  ಸಹಸವಾರನಾಗಿ  ಕೆಲಸದ ನಿಮಿತ್ತ  ಶಂಕರಪುರಕ್ಕೆ  ಹೋಗಿ ವಾಪಾಸ್ಸು  ಮನೆಗೆ  ಬರುತ್ತಿರುವಾಗ ಸಮಯ ಸುಮಾರು ಸಂಜೆ 4.30 ಗಂಟೆಯ ಸಮಯಕ್ಕೆ ಇನ್ನಂಜೆ ಗ್ರಾಮದ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಹತ್ತಿರ ತಲುಪುತ್ತಿದ್ದಂತೆ ನಾಯಿಯೊಂದು ಅಡ್ಡ ಬಂದ ಕಾರಣ ಪಿರ್ಯಾದಿದದಾರರ ತಮ್ಮ ಮಾಧವ ಪೂಜಾರಿ  ಒಮ್ಮೇಲೆ ಬ್ರೇಕ್  ಹಾಕಿದ ಪರಿಣಾಮ  ಮೋಟಾರು  ಸೈಕಲ್ ಸಮೇತ ಇಬ್ಬರು ರಸ್ತೆಗೆ ಬಿದ್ದು,   ಪರಿಣಾಮ ಪಿರ್ಯಾದಿದಾರರಿಗೆ ಎಡ ತೋಳಿನ ಮೂಳೆ ಮುರಿತದ  ಗಾಯವಾಗಿ ಹಾಗೂ ಮೋಟಾರು ಸೈಕಲ್ ಸವಾರ ಮಾಧವ ಪೂಜಾರಿ ರವರಿಗೆ  ತರಚಿದ  ಗಾಯವಾಗಿರುತ್ತದೆ. ಈ ಅಪಘಾತಕ್ಕೆ  ಮೋಟಾರು ಸೈಕಲ್ ಸವಾರ ಮಾಧವ ಪೂಜಾರಿ ರವರ ಅತೀ  ವೇಗ ಹಾಗೂ ಅಜಾಗರೂಕತೆಯೇ ಕಾರಣವಾಗಿರುತ್ತದೆ. ಈ ಬಗ್ಗೆ ಕಾಪು ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ 07/2022  ಕಲಂ 279,338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿ ಕೆ. ಎಮ್. ಶೇಕ್ ಅಮೀರ್ ಇವರ ತಮ್ಮ ಶಬ್ಬೀರ ಅಹಮ್ಮದ್ ರವರು  ದಿನಾಂಕ 21-02-2022 ರಂದು  ಮಂಗಳೂರು ಉಡುಪಿ  ರಾ ಹೆ 66 ರಲ್ಲಿ ತನ್ನ  ಬಾಬ್ತು ಕೆ. ಎ 18 ಕ್ಯೂ 852  ನೇ ಮೋಟಾರು ಸೈಕಲ್‌ನಲ್ಲಿ  ಮಂಗಳೂರು ಕಡೆಯಿಂದ ಉಡುಪಿ ಕಡೆಗೆ  ಹೋಗುತ್ತಿರುವಾಗ ಅಪರಾಹ್ನ 4.30 ಗಂಟೆಯ ಸಮಯಕ್ಕೆ  ಕಾಪು ಪಡು  ಗ್ರಾಮದ ಕಾಪು-ರಾಮನಗರ-ಬೀಚ್‌ ಕ್ರಾಸ್‌ ಬಳಿ ತಲುಪುತ್ತಿದ್ದಂತೆ ಮಂಗಳೂರು ಉಡುಪಿ  ರಾ ಹೆ 66 ರ ಪಶ್ವಿಮ  ಬದಿಯ ರಸ್ತೆಯಲ್ಲಿ  ವಿರುದ್ಧ ದಿಕ್ಕಿನಲ್ಲಿ  ಕಮಲಾಕ್ಷ ರವರು ತನ್ನ ಬಾಬ್ತು ಆಟೋ ರಿಕ್ಷಾ ನಂಬ್ರ  ಕೆ.ಎ. 20 ಡಿ. 2267 ನೇದನ್ನು ಅತೀ  ವೇಗ ಹಾಗೂ ಅಜಾಗರೂಕತೆಯಿಂದ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಮ್ಮನ ಮೋಟಾರು ಸೈಕಲ್‌ ಗೆ  ಢಿಕ್ಕಿ  ಹೊಡೆದ ಪರಿಣಾಮ  ಪಿರ್ಯಾದಿದಾರರ ತಮ್ಮ  ಶಬ್ಬೀರ್ ಅಹಮ್ಮದ್ ರವರು  ಮೋಟಾರು ಸೈಕಲ್‌ ಸಮೇತ  ರಸ್ತೆಗೆ ಬಿದ್ದು ಎರಡು ಕಾಲಿನ ಮಂಡಿನ ಹಾಗೂ  ಎದೆಗೆ ತೀವೃ ಗಾಯವಾಗಿ ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ  ದಾಖಲಿಸಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್‌ಠಾಣಾ ಅಪರಾಧ ಕ್ರಮಾಂಕ 08/2022  ಕಲಂ 279,338  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     

ಅಸ್ವಾಭಾವಿಕ ಮರಣ ಪ್ರಕರಣ

  • ಅಜೆಕಾರು: ಪಿರ್ಯಾದಿ ಶ್ರೀನಿವಾಸ ಪೂಜಾರಿ ಇವರಿಗೆ ಅವರ ಚಿಕ್ಕಮ್ಮನ ಮಗಳ ಗಂಡ ಲೋಕೇಶ್ ಎಂಬವರು ಫೋನ್ ಮಾಡಿ ತನ್ನ ಮಾವ ಸತೀಶ (42 ವರ್ಷ) ರವರು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿಸಿದ್ದು, ಅಲ್ಲಿಗೆ ಹೋಗಿ ನೋಡಿದಾಗ ಅವರ ಮಾವ ಸತೀಶರವರು ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಅವರು ವನ್ಯಜೀವಿ ವಿಭಾಗ ಕಛೇರಿಯಲ್ಲಿ ವಲಯಾರಣ್ಯಾಧಿಕಾರಿಯವರ ಜೀಪು ಚಾಲಕನಾಗಿ ಕರ್ತವ್ಯ ಮಾಡಿಕೊಂಡಿದ್ದು, ಈ ದಿನ ಅರಣ್ಯವೀಕ್ಷಕ ಸುಜಿತ್ ಕುಮಾರ್ ಎಂಬವರಲ್ಲಿ ಸತೀಶರವರು ನನಗೆ ಮಂಗಳೂರಿಗೆ ಹೋಗಲು ಇದೆ ನನ್ನನ್ನು ನಿಮ್ಮ ಬೈಕಿನಲ್ಲಿ ಕಾರ್ಕಳ ಬಸ್‌ಸ್ಟಾಂಡಿಗೆ ಬಿಡುವಂತೆ ತಿಳಿಸಿದ ಮೇರೆಗೆ ಸುಜಿತ್ ಕುಮಾರ್‌ ರವರು ಸತೀಶರವರನ್ನು ಕಾರ್ಕಳ ಬಸ್ ನಿಲ್ದಾಣಕ್ಕೆ ಬಿಟ್ಟು ವಾಪಾಸು ವನ್ಯಜೀವಿ ವಲಯ ಕಛೇರಿಗೆ ಹೋಗಿದ್ದ ಸಮಯದಲ್ಲಿ ಸುಮಾರು 12:40 ಗಂಟೆಗೆ ಸತೀಶರವರು ಸುಜಿತ್‌‌ಕುಮಾರ್ ರವರಿಗೆ ಫೋನ್ ಮಾಡಿ ನನ್ನ ಸ್ಕೂಟಿ ಕಛೇರಿ ಬಳಿ ಇದೆ, ಅದನ್ನು ಮನೆಗೆ ಕೊಟ್ಟು ಬನ್ನಿ ಎಂಬುದಾಗಿ ತಿಳಿಸಿದ್ದು, ಆವಾಗ ಅವರು ನೀವು ವಾಪಾಸು ಬರುವಾಗ ತೆಗೆದುಕೊಂಡು ಬನ್ನಿ ಎಂದು ತಿಳಿಸಿದಾಗ ಸತೀಶರವರು ನಾನು ಇನ್ನು ಮುಂದಕ್ಕೆ ವಾಪಾಸು ಮನೆಗೆ ಬರುವುದಿಲ್ಲ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ತಿಳಿಸಿದ್ದು ನಾವು ಸಂಶಯಗೊಂಡು ಇಲಾಖಾ ಸಿಬ್ಬಂದಿಯವರೊಂದಿಗೆ ಸೇರಿ ಮುಂಡ್ಲಿ ಪರಿಸರದಲ್ಲಿ ಹುಡುಕಾಡಿ ಜಾರ್ಕಳ ಮುಂಡ್ಲಿ ಗ್ರಾಮದ ಅರ್ಬಿ ಎಂಬಲ್ಲಿಗೆ ಬಂದು ನೋಡಿದಾಗ ಸತೀಶರವರು ಮರದ ಕೊಂಬೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಅವರು ಆರೋಗ್ಯ ಸಮಸ್ಯೆಯಿಂದ ಬಲಳುತ್ತಿದ್ದುದಲ್ಲದೇ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದುದಾಗಿ ಅರಣ್ಯ ಇಲಾಖೆ ಸಿಬ್ಬಂದಿಯವರಿಂದ ತಿಳಿದುಬಂತು ಇದೇ ಕಾರಣದಿಂದ ಫಿರ್ಯಾದುದಾರರ  ಮಾವ ಸತೀಶರವರು ಮನನೊಂದು ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ: 22/01/2022 ರಂದು 12:40 ಗಂಟೆಯಿಂದ ಸಂಜೆ 4:00 ಗಂಟೆಯ ಮದ್ಯಾವಧಿಯಲ್ಲಿ ಮರದ ಕೊಂಬೆಗೆ ಕುತ್ತಿಗೆಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 03/2022 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 23-01-2022 10:21 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080