ಅಭಿಪ್ರಾಯ / ಸಲಹೆಗಳು

ಇತರ ಪ್ರಕರಣ

  • ಉಡುಪಿ: ಪಿರ್ಯಾದಿದಾರರಾದ ಪ್ರಕಾಶ್‌ ಕಾಮತ್‌ (48), ತಂದೆ: ಸೀತಾರಾಮ ಕಾಮತ್‌, ವಾಸ: 4 ನೇ ಅಡ್ಡ ರಸ್ತೆ , ಸೀತಾಬಾಯಿ ಕಂಪೌಂಡ್‌ , ಜೈ ಪಾಂಡು ರಂಗ ನಿವಾಸ, ಟಲ್‌ ಪಾಡಿ, ಕಾರ್ಕಳ ತಾಲೂಕು, ಉಡುಪಿ ಜಿಲ್ಲೆ ಇವರು ಆಪಾದಿತ ಬಿ ವಿ ಲಕ್ಷ್ಮೀನಾರಾಯಣ ಭಟ್‌ ರವರು ಅಧ್ಯಕ್ಷರಾಗಿರುವ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘ ಉಡುಪಿ ಯಲ್ಲಿ 2019 ರಲ್ಲಿ ಎಫ್‌ ಡಿ ಯನ್ನು ಇಟ್ಟಿದ್ದು, ಹಣಕ್ಕೆ ಸಹಕಾರ ಸಂಘ ಪ್ರತಿ ತಿಂಗಳು 10% ನಂತೆ ಬಡ್ಡಿಯನ್ನು ಪಿರ್ಯಾದಿದಾರರ ಎಸ್‌ ಬಿ ಖಾತೆಗೆ ಹಾಕುತ್ತಿದ್ದುರು. ಹಾಗೂ 3 ವರ್ಷದ ನಂತರ ರಿನಿವಲ್‌ ಕೂಡಾ ಮಾಡಿರುತ್ತಾರೆ.  ಆದರೆ ಜೂನ್‌ 2022 ರಿಂದ ಪಿರ್ಯಾದಿದಾರರ ಖಾತೆಗೆ ಬಡ್ಡಿ ಹಣವನ್ನು ಹಾಕಿರುವುದಿಲ್ಲ ಹಾಗೂ ಈ ಬಗ್ಗೆ ವಿಚಾರಿಸಿದಾಗ ಸ್ವಲ್ಪ ದಿನದಲ್ಲೆ ಬಡ್ಡಿಯನ್ನು ನೀಡುವುದಾಗಿ ನಂಬಿಸುತ್ತಿದ್ದರು ಆದರೆ ಈ ತನಕ ನೀಡಿರುವುದಿಲ್ಲ. ದಿನಾಂಕ 20/12/2022 ರಂದು ಉದಯವಾಣಿ ದಿನಪತ್ರಿಕೆ ಯಲ್ಲಿ ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘ ಉಡುಪಿಯಲ್ಲಿ ಕೋಟ್ಯಂತರ ರೂಪಾಯಿ ವಂಚನೆ ಆರೋಪ ಪ್ರತಿಭಟನೆ ಎಂಬುದಾಗಿ ವರದಿಯಾಗಿರುತ್ತದೆ.ಪಿರ್ಯಾದಿದಾರರು ದಿನಾಂಕ 20/12/2022 ರಂದು ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘ ಉಡುಪಿಗೆ ಬಂದು ನೋಡಿದಲ್ಲಿ ಮುಚ್ಚಿರುತ್ತದೆ. ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದಲ್ಲಿ ಪಿರ್ಯಾದಿದಾರಂತೆ ಕೆ ಸತ್ಯಮೂರ್ತಿ ರಾವ್‌, ಲೀಲಾವತಿ, ಡಿ ಭಾಸ್ಕರ್‌ ಕೋಟ್ಯಾನ್‌, ಟಿ ಕೃಷ್ಣ ಗಾಣಿಗ, ಸುರೇಶ್‌ ಭಟ್‌ ರವರಿಂದ ಒಟ್ಟು 40,59,000/- ರೂಪಾಯಿ ಹೂಡಿಕೆ ಮಾಡಿಸಿಕೊಂಡಿರುತ್ತಾರೆ. ಹಾಗೂ ಇತರ ನೂರಾರು ಜನರಿಂದ  ಕೂಡಾ ಹೂಡಿಕೆ ಮಾಡಿಕೊಂಡು ಕಮಲಾಕ್ಷಿ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷರಾದ ಬಿ ವಿ ಲಕ್ಷ್ಮೀನಾರಾಯಣ ಭಟ್‌, ಮ್ಯಾನೇಜರ್‌ ಆಶಾ ಹಾಗೂ ಆಡಳಿತ ಮಂಡಳಿಯ ಸದಸ್ಯರು ಬಡ್ಡಿಯನ್ನು ಸರಿಯಾಗಿ ನೀಡಿರುವುದಿಲ್ಲ ಹಾಗೂ ಸಹಕಾರ ಸಂಘವನ್ನು ಮುಚ್ಚಿಕೊಂಡು ಹೋಗಿ ಪಿರ್ಯಾದಿದಾರರಿಗೆ ಹಾಗೂ ಇತರರಿಗೆ ಮೋಸ, ನಂಬಿಕೆ ದ್ರೋಹ  ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್‌ ಅಪರಾಧ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 98/2022 ಕಲಂ: 406, 420, 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 22-12-2022 09:25 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080