ಅಭಿಪ್ರಾಯ / ಸಲಹೆಗಳು

ಕಳವು ಪ್ರಕಣ

  • ಕಾರ್ಕಳ: ಪಿರ್ಯಾದಿ: ಶ್ರೀ ಚಂದ್ರಶೇಖರ ಕೆ , ಪ್ರಾಯ 51 ವರ್ಷ, ತಂದೆ ಜನಾರ್ಧನ ಶೆಟ್ಟಿಗಾರ್ ವಾಸ ಸೃಷ್ಟಿ , ಬಲಿಪರಹಾಡಿ  ಮನೆ, ಮಿಯಾರು ಗ್ರಾಮ ಇವರು ಕಾರ್ಕಳ ತಾಲೂಕು  ಮಿಯಾರು ಗ್ರಾಮದ ಬಲಿಪರಹಾಡಿ ಎಂಬಲ್ಲಿ ಹೆಂಡತಿ  ಮತ್ತು ಮಕ್ಕಳೊಂದಿಗೆ  ವಾಸವಾಗಿದ್ದು ಸೇಲ್ಸ್  ಮೆನೆಜರ್  ಕೆಲಸ  ಮಾಡಿಕೊಂಡಿರುತ್ತಾರೆ. ದಿನಾಂಕ  21-12-2022  ರಂದು  ಹೆಂಡತಿಯೊಂದಿಗೆ  ಮನೆಯಲ್ಲಿ ಬೆಡ್‌ರೂಮಿನಲ್ಲಿ  ಹಾಗೂ ಮಗ  ಮಹಡಿಯ ಮೇಲೆ   ಬೆಡ್‌ರೂಮಿನಲ್ಲಿ  ಮಲಗಿದ್ದ  ಸಮಯದಲ್ಲಿ  ದಿನಾಂಕ  21-12-2022  ರಂದು ರಾತ್ರಿ  23-30 ಗಂಟೆಯಿಂದ  ದಿನಾಂಕ 22-12-2022 ರ  ಬೆಳಿಗ್ಗೆ   06-00 ಗಂಟೆಗೆ ನಡುವಿನ ಅವಧಿಯಲ್ಲಿ  ಯಾರೋ ಕಳ್ಳರು  ಪಕ್ಕದಲ್ಲಿರುವ  ನಿರ್ಮಾಣ ಹಂತದ  ಮನೆಯಿಂದ ಏಣಿಯನ್ನು ತಂದು ಅಡುಗೆ ಕೋಣೆಯ ಯುಟಿಲಿಟಿ  ಕೋಣೆಯ ಹತ್ತಿರ  ಇಟ್ಟು ಮಹಡಿಯ ಮೇಲೆ  ಹೋಗಿ , ಮಹಡಿಯ ಮೇಲೆ  ಕಿಟಿಕಿಯ ಮೂಲಕ  ಮಹಡಿಯ ಬಾಗಿಲನ್ನು ತೆರೆದು ಒಳಪ್ರವೇಶಿಸಿ ಮನೆಯೊಳಗೆ  ಹುಡುಕಾಡಿ   ಶೆಲ್ಫ್  ಮೇಲೆ ಇಟ್ಟಿದ್ದ  ಪರ್ಸಿನಲ್ಲಿದ್ದ  ರೂ 800/ರೂ  ನಗದು ಹಣವನ್ನು  ಕಳವು ಮಾಡಿ ಶೆಲ್ಪ್ ನಲ್ಲಿ  ಇದ್ದ  ಸ್ಕೂಟರ್  ಕೀ ಯನ್ನು ತೆಗೆದುಕೊಂಡು ಅಂಗಳದಲ್ಲಿ ಇಟ್ಟಿದ್ದ  ನೀಲಿ ಬಣ್ಣದ ಹೊಂಡಾ  ಆಕ್ಟಿವಾ KA20EV3717 ನಂಬ್ರದ  ಸ್ಕೂಟರನ್ನು  ಕಳವು  ಮಾಡಿಕೊಂಡು  ಹೋಗಿದ್ದು ಸ್ಕೂಟರ್‌ನ ಅಂದಾಜು  ಮೌಲ್ಯ  50,000/ಆಗಬಹುದು ಕಳವಾದ   ಸೊತ್ತುಗಳ ಒಟ್ಟು ಮೌಲ್ಯ 50,800/ ಆಗಿರುತ್ತದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 155/2022 ಕಲಂ 457,380,379  ಐಪಿಸಿ.  ಯಂತೆ ಪ್ರಕರಣ ದಾಖಲಿಸಲಾಗಿದೆ.

ಗಂಡಸು ಕಾಣೆ

  • ಪಡುಬಿದ್ರಿ: ಪಿರ್ಯಾದಿ ಭರತ್, ಪ್ರಾಯ: 35 ವರ್ಷ, ತಂದೆ: ವಿಶ್ವನಾಥ ಎನ್ ಸಾಲ್ಯಾನ್, ವಾಸ: ಭಾಗ್ಯಲಕ್ಷ್ಮೀ ನಿಲಯ, ಅಣ್ಣು ಗುರಿಕಾರ ಕಂಪೌಂಡ್, ಕೆಳಗಿನ ಪೇಟೆ, ಪಡುಬಿದ್ರಿ, ನಡ್ಸಾಲು ಗ್ರಾಮ ಇವರ ತಂದೆ ವಿಶ್ವನಾಥ ಎನ್ ಸಾಲ್ಯಾನ್ (69) ಎಂಬುವರು ಕಳೆದ ಎರಡು ವರ್ಷಗಳಿಂದ ಮರೆವಿನ ಖಾಯಿಲೆಯನ್ನು ಹೊಂದಿದ್ದು, ಈ ಬಗ್ಗೆ ಮಂಗಳೂರಿನ ಖಾಸಗಿ ವೈದ್ಯರಿಂದ ಚಿಕಿತ್ಸೆ ಕೊಡಿಸುತ್ತಿದ್ದು, ಅವರು ನಿನ್ನೆ ದಿನ ದಿನಾಂಕ:21.12.2022 ರಂದು ಸಂಜೆ KA-20-EM-3346 ನೇ ನಂಬ್ರದ ಸ್ಕೂಟಿಯಲ್ಲಿ ಅವರ ಪತ್ನಿ ವಿನೋದಾ ವಿ ಸಾಲ್ಯಾನ್ ರವರನ್ನು ಚಿಕಿತ್ಸೆಯ ಬಗ್ಗೆ ಪಡುಬಿದ್ರಿಯ ಗುರು ಡಾಕ್ಟರ್ ರವರ ಕ್ಲಿನಿಕ್‌‌ಗೆ ಕರೆದುಕೊಂಡು ಹೋಗಿ ಕ್ಲಿನಿಕ್ ಎದುರು ಅವರ ಪತ್ನಿಯನ್ನು ಸ್ಕೂಟಿಯಿಂದ ಇಳಿಸಿ, ಒಮ್ಮೆಲೇ ಸ್ಕೂಟಿಯನ್ನು ಪಡುಬಿದ್ರಿ ಕಡೆಗೆ ಚಲಾಯಿಸಿಕೊಂಡು ಹೋದವರು, ನಂತರ ಸಂಜೆ 18:40 ಗಂಟೆಯ ವೇಳೆಗೆ ಪಡುಬಿದ್ರಿಯ ಕಲ್ಲಟ್ಟೆಯ ಬಳಿ ರಮೇಶ್ ಪೂಜಾರಿ ಎಂಬುವರಿಗೆ ಕಾಣಸಿಕ್ಕವರು, ನಂತರ ಈವರೆಗೂ ಮನೆಗೆ ಬಾರದೇ ಕಾಣೆಯಾಗಿರುತ್ತಾರೆ. ನಂತರ ಅವರ ಪತ್ತೆಯ ಬಗ್ಗೆ ಸಂಬಂಧಿಕರ ಮನೆಗಳಲ್ಲಿ, ಪರಿಚಿತರಲ್ಲಿ ವಿಚಾರಿಸಿ ಈವರೆಗೂ ಹುಡುಕಾಡಿದ್ದು, ಪತ್ತೆಯಾಗದೇ ಇದ್ದು, ನಂತರ ಠಾಣೆಗೆ ಬಂದು ಪಿರ್ಯಾದು ನೀಡಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 161/2022, ಕಲಂ: ಗಂಡಸು ಕಾಣೆ. ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ:

  • ಕೋಟ: ಪಿರ್ಯಾದಿ: ವಸಂತ ಶೆಟ್ಟಿ (55 ವರ್ಷ),  ತಂದೆ  ದಿ ಬೊಮ್ಮಯ್ಯ  ಶೆಟ್ಟಿ,   ಬಡಗಾವಳಿ, ಹಳ್ಳಾಡಿ ಹರ್ಕಾಡಿ ಗ್ರಾಮ ಇವರು ನಿನ್ನೆ ದಿನ ದಿನಾಂಕ:21/12/2022 ರಂದು ಸುಮಾರು 19:00 ಗಂಟೆಗೆ ಹಾರ್ದಳ್ಳಿ ಮಂಡಳ್ಳಿ ಗ್ರಾಮದ ಬಿದ್ಕಲಕಟ್ಟೆ ಜಂಕ್ಷನ್ ನಿಂದ ಸ್ವಲ್ಪ ಹಿಂದಕ್ಕೆ ಮಂಜುನಾಥ ನಾಟಿ ಕೋಳಿ ಪಾರಂ ನವರ ಫಾಸ್ಟಫುಡ್ ಅಂಗಡಿಯಲ್ಲಿ ಇರುವಾಗ ಬಿದ್ಕಲಕಟ್ಟೆ-ಹಾಲಾಡಿ ರಸ್ತೆಯಲ್ಲಿ ಬಿದ್ಕಲಕಟ್ಟೆ ಕಡೆಯಿಂದ ಹಲಾಡಿ ಕಡೆಗೆ KA 68 1407 ನೇ ಅಶೋಕ್ ಲೈಲ್ಯಾಂಡ್‌ಲಾರಿಯ ಚಾಲಕ ಖಾದರ್‌ಸಾಬ್‌ಎಂಬಾತನು ರಸ್ತೆಯಲ್ಲಿ ಏಕಾಏಕಿ ಯಾವುದೇ ಸೂಚನೆ ನೀಡದೇ ಬ್ರೇಕ್ ಹಾಕಿ ನಿಲ್ಲಿಸಿದ್ದು, ಆಗ ಹಿಂದಿನಿಂದ ಅಂದರೆ ಬಿದ್ಕಲ್‌ಕಟ್ಟೆ ಕಡೆಯಿಂದ ಬರುತ್ತಿದ್ದ ನಂ: KA 20 EQ 8880 ಸ್ಕೂಟಿಯನ್ನು ಅದರ ಸವಾರಿಣೆ ಶ್ರೀಮತಿ ಸರೋಜಾ ರವರು ತನ್ನ ಹಿಂಬದಿ ಒರ್ವ ಗಂಡಸನ್ನು ಕುಳ್ಳಿರಿಸಿಕೊಂಡು ಬಂದು ಲಾರಿಯ ಹಿಂಬದಿಗೆ ಡಿಕ್ಕಿ ಹೊಡೆದಳು. ಪರಿಣಾಮ ಸವಾರಿಣಿಯ ಎಡಕಾಲಿಗೆ ಮತ್ತು ತಲೆಗೆ ಹಾಗೂ ಹಿಂಬದಿ ಕುಳಿತ ವಿಠ್ಠಲ ಶೆಟ್ಟಿ ಯವರ ತಲೆಗೆ ಹಾಗೂ ಕುತ್ತಿಗೆಗೆ ತೀವ್ರ ಸ್ವರೂಪದ ರಕ್ತಗಾಯವಾಗಿರುದಾಗಿದೆ. ಈ ಅಪಘಾತಕ್ಕೆ ಅಶೋಕ್ ಲೈಲ್ಯಾಂಡ್‌ಲಾರಿಯ ಚಾಲಕ ಖಾದರ್‌ಸಾಬ್‌ಎಂಬಾತನ ನಿರ್ಲಕ್ಷ್ಯತನ ಹಾಗೂ ಅಜಾಗರೂಕತೆಯ ಚಾಲನೆಯೇ ಕಾರಣವಾಗಿರುತ್ತದೆ . ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 229/2022 ಕಲಂ: 279, 338 IPC ಯಂತೆ ಪ್ರಕರಣ ದಾಖಲಿಸಲಾಗಿದೆ.
  • ಉಡುಪಿ: ಪಿರ್ಯಾದಿ : ವಿಜಯ್ ಪ್ರಾಯ 41 ವರ್ಷ, ತಂದೆ: ನಾರಾಯಣ ಗೌಡ, ವಾಸ: ಗಣೇಶ್ ಪ್ರಸಾದ್ ನಿಲಯ, ರಾಜೀವ ನಗರ, ನಿಟ್ಟೂರು ಪುತ್ತೂರು ಗ್ರಾಮ  ಇವರು ದಿನಾಂಕ : 21-12-2022 ರಂದು ತನ್ನ ಸ್ಕೂಟರ್ ನಂಬ್ರ KA20EN7479ನೇ ದರಲ್ಲಿ ಉಡುಪಿಯಿಂದ ಮನೆಯಾದ ನಿಟ್ಟೂರು ಕಡೆಗೆ ರಾ.ಹೆ 66ನೇ ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ಬರುತ್ತಿರುವಾಗ ಪುತ್ತೂರು ಗ್ರಾಮದ ನಿಟ್ಟೂರು ಕೆ.ಎಸ್.ಆರ್.ಟಿ.ಸಿ  ಬಸ್ ಡಿಪ್ಪೋ ಎದುರುಗೆ ತಲುಪುವಾಗ ಪಿರ್ಯಾದಿದಾರರು ತನ್ನ ಮನೆಯವರಿಗೆ ಫೋನ್ ಮಾಡುವರೇ ಸ್ಕೂಟರ್ ನ್ನು ರಸ್ತೆಯ ಬದಿಯ ಮಣ್ಣಿನ ರಸ್ತೆಗೆ ಇಳಿಸಿ ಮೊಬೈಲ್ ನಲ್ಲಿ ಮಾತನಾಡಿ ವಾಪಾಸು ಮನೆಯ ಕಡೆಗೆ ಹೋಗಲು ಸ್ಕೂಟರ್ ನ್ನು ಸ್ಟಾರ್ಟ್ ಮಾಡುತ್ತಿರುವ ಸಮಯ ಸುಮಾರು ರಾತ್ರಿ 11-00 ಗಂಟೆಗೆ ಕರಾವಳಿ ಕಡೆಯಿಂದ ಸಂತೆಕಟ್ಟೆಯ ಕಡೆಗೆ KA432867ನೇ ಟಿ.ಟಿ ವಾಹನದ ಚಾಲಕ ಕುಮಾರ್ ಎಂಬಾತನು ತಾನು ಚಲಾಯಿಸುತ್ತಿದ್ದವಾಹನವನ್ನುದುಡುಕುತನ ಮತ್ತು ನಿರ್ಲಕ್ಷತನದಿಂದ ಚಲಾಯಿಸಿಕೊಂಡು ರಸ್ತೆಯ ತೀರಾ ಎಡಬದಿಗೆ ಬಂದು ಅಂದರೆ ಮಣ್ಣು ರಸ್ತೆಗೆ ಬಂದು ಪಿರ್ಯಾದಿದಾರರ ಸ್ಕೂಟರ್‌ನ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲಕಾಲಿಗೆ ಮೂಳೆಮುರಿತದ ಗಂಭೀರ ಸ್ವರೂಪದ ಜಖಂ ಆಗಿ ಚಿಕಿತ್ಸೆಯ ಬಗ್ಗೆ ಗಾಂಧೀ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವುದಾಗಿದೆ ಎಂಬಿತ್ಯಾದಿಯಾಗಿರುತ್ತದೆ. ಈ ಬಗ್ಗೆ ಉಡುಪಿ ಸಂಚಾರ ಠಾಣೆ .ಅಪರಾಧ ಕ್ರಮಾಂಕ 107/2022 ಕಲಂ: 279, 338 IPC ಯಂತೆ ಪ್ರಕರಣ ದಾಖಲಿಸಲಾಗಿದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿ: ಸುಕೇಶ್ ಪೂಜಾರಿ (27) ತಂದೆ: ವಿಠಲ ಪೂಜಾರಿ ವಾಸ: ಮಾಂಜ ಹೊಸಮನೆ ತೆಳ್ಳಾರು ದುರ್ಗಾ ಗ್ರಾಮ ಇವರ ತಂದೆ ವಿಠಲ ಪೂಜಾರಿ   65    ವರ್ಷ ಇವರು ಕೂಲಿ ಕೆಲಸ ಮಾಡಿಕೊಂಡಿದ್ದು ಸುಮಾರು 30 ವರ್ಷಗಳಿಂದ  ವಿಪರೀತ ಮದ್ಯ ಸೇವಿಸುವ ಚಟವುಳ್ಳವರಾಗಿದ್ದು ಇವರಿಗೆ  ಎರಡು ದಿನಗಳ ಹಿಂದೆ ಎಡ ಕೈಗೆ ಕತ್ತಿ ತಾಗಿ ಗಾಯವಾಗಿದ್ದು ಕಾರ್ಕಳ ಗಾಜ್ರಿಯ ಆಸ್ಪತ್ರೆಯಿಂದ ಚಿಕಿತ್ಸೆ ಪಡೆದುಕೊಂಡು ಬಂದಿದ್ದು  ದಿನಾಂಕ 22/12/2022 ರಂದು ಬೆಳಿಗ್ಗೆ 08:30 ಗಂಟೆಯಿಂದ ಬೆಳಿಗ್ಗೆ 11:30 ಗಂಟೆ ಮದ್ಯೆ ತೆಳ್ಳಾರುವಿನ  ಜಲದುರ್ಗಾ ದೇವಸ್ಥಾನದ ಹತ್ತಿರ ದೆಕ್ಕಾಜೆ ಚಡವಿನ ರಸ್ತೆಯ ಬದಿಯ ಗೇರು ಮರದ ಕೊಂಬೆಗೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಮೃತರು ವಿಪರಿತ   ಮದ್ಯಪಾನ ಮಾಡುವ  ಚಟದಿಂದ ಹಾಗೂ ಅವರ ಕೈಗೆ ಆದ ಗಾಯದಿಂದ ಮಾನಸಿಕವಾಗಿ ಜೀವನದಲ್ಲಿ ನೊಂದು ಆತ್ಮಹತ್ಯೆಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಠಾಣಾ  ಯು,ಡಿ,ಆರ್ ನಂಬ್ರ: 44/2022 ಕಲಂ: 174 ಸಿ,ಆರ್,ಪಿ,ಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತ್ತೀಚಿನ ನವೀಕರಣ​ : 22-12-2022 06:32 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080