ಅಭಿಪ್ರಾಯ / ಸಲಹೆಗಳು

ವಂಚನೆ ಪ್ರಕರಣ

  • ಮಣಿಪಾಲ: ಪಿರ್ಯಾದಿದಾರರಾದ ಶ್ರೀಮತಿ ಎಸ್ ಸುಧಾ ಆರ್ ನಾಯಕ್ (74), ಗಂಡ:ದಿವಂಗತ. ರಮಾನಂದ ನಾಯಕ್,  ವಾಸ: ರೀಗಲ್ ಹೌಸ್, 1 ನೇ ಅಡ್ಡ ರಸ್ತೆ, ಈಶ್ವರನಗರ,ಹೆರ್ಗಾ ಗ್ರಾಮ ಉಡುಪಿ ತಾಲೂಕು ಮತ್ತು ಜಿಲ್ಲೆ ಇವರ ಜಂಟಿ ಖಾತೆಯಲ್ಲಿರುವ ಉಡುಪಿ ತಾಲೂಕು 80 ಬಡಗಬೆಟ್ಟು ಗ್ರಾಮದ ಆದರ್ಶ ನಗರ ಎಂಬಲ್ಲಿರುವ ಲೇಕ್‌ ವ್ಯೂ ಬಾರ್‌ ಮತ್ತು ರೆಸ್ಟೋರೆಂಟ್‌ ಹಾಗೂ ಲಾಡ್ಜಿಂಗ್‌ನಲ್ಲಿ ಆರೋಪಿ ಮೈಕಲ್ ಡಿಸೋಜಾ, ತಂದೆ: ಕ್ಲೇವಿಯರ್ ಡಿಸೋಜಾ, ವಾಸ: 9-101, ಬೀಚ್ ರಸ್ತೆ, ಸೋಡಾ ಕಂಪೌಂಡ್, ಗಂಗೊಳ್ಳಿ ಕುಂದಾಪುರ ತಾಲೂಕು ಇವರು 2018 ರಿಂದ ಮ್ಯಾನೇಜರ್‌ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಪಿರ್ಯಾದಿದಾರರ ಹೆಸರಿನಲ್ಲಿರುವ ಡೋರ್‌ ನಂ: 4/26F ನೇದನ್ನು ಅವರಿಗೆ ತಿಳಿಯದೇ ಅವರ ಹಾಗೂ ಅವರ ಸೊಸೆ ಪ್ರಿಯ ನಾಯಕ್‌ರವರ ನಕಲಿ ಸಹಿಯನ್ನು ಹಾಕಿ ದಿನಾಂಕ 11/12/2019 ರಂದು ಆಪಾದಿತನ ಹೆಸರಿಗೆ ಬಾಡಿಗೆ ಕರಾರು ಪತ್ರವನ್ನುತಯಾರಿಸಿ ನಕಲಿ ಬಾಡಿಗೆ ಕರಾರು ಪತ್ರದ ಆಧಾರದಲ್ಲಿ ಡೋರ್‌ ನಂ: 4/26F ರಲ್ಲಿ ಮಣಿಪಾಲ ರಿಕ್ರಿಯೇಶನ್‌ ಕ್ಲಬ್‌ನ್ನು ಪ್ರಾರಂಭಿಸಲು ತನ್ನನ್ನು ಅದ್ಯಕ್ಷ ಎಂದು ನಮೂದಿಸಿ ಇತರ 10 ಜನರನ್ನು ಸದಸ್ಯರನ್ನಾಗಿ ನಮೂದಿಸಿ  ಸದಸ್ಯರ ನಕಲಿ ಸಹಿಯನ್ನು ಹಾಕಿ ನಕಲಿ ದಾಖಲಾತಿಯನ್ನು ತಯಾರಿಸಿ ಈ ನಕಲಿ ದಾಖಲಾತಿಗಳು ನೈಜ ದಾಖಲಾತಿಗಳೆಂದು ಸರ್ಕಾರಿ ಅಧಿಕಾರಿಯವರಾದ ಸಂಘಗಳ ನೋಂದಾವಣಾಧಿಕಾರಿ, ಉಡುಪಿ ಜಿಲ್ಲೆರವರಿಗೆ ದಿನಾಂಕ 13/12/2019  ರಂದು ಹಾಜರುಪಡಿಸಿ ನೋಂದಾವಣೆ ಮಾಡಿ ಪಿರ್ಯಾದಿದಾರರಿಗೆ ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 170/2021 ಕಲಂ: 465, 468, 471,420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಸತೀಶ ಇವರು ಬ್ರಹ್ಮಾವರ ತಾಲೂಕು ಶಿರಿಯಾರ ಗ್ರಾಮದ  ಪಂಚಾಯತ್ ಅಭಿವೃದ್ದಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದು,  ಪಂಚಾಯತ್ ವತಿಯಿಂದ ಶಿರಿಯಾರ ಗ್ರಾಮದ  ಪಡುಮುಂಡು ಮಾರ್ಗದ ಕೆದ್ಲಹಕ್ಲು ತೌಡಿನಹಕ್ಲು ಎಂಬಲ್ಲಿ 15 ನೇ ಹಣಕಾಸಿನ ಯೋಜನೆಯಡಿ  ಸೋಲಾರ್ ದಾರಿ ದೀಪವನ್ನು ಅಳವಡಿಸಿದ್ದು, ಸೋಲಾರ್ ದೀಪವನ್ನು  ದಿನಾಂಕ 10/12/2021 ರಿಂದ 13/12/2021 ರ ನಡುವಿನಲ್ಲಿ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುವುದಾಗಿ ಸಾರ್ವಜನಿಕರಿಂದ ಮಾಹಿತಿ ಬಂದಂತೆ ಸ್ಥಳಕ್ಕೆ  ತೆರಳಿ  ಪರಿಶೀಲನೆ ಮಾಡಿದಾಗ ಸೋಲಾರ್ ದಾರಿ ದೀಪ ಕಂಬ ಸಮೇತ  ಕಳವಾಗಿದ್ದು ಕಂಡುಬಂದಿರುತ್ತದೆ.  ಕಳವಾದ  ಸೋಲಾರ್ ದಾರಿ ದೀಪದ ಒಟ್ಟು ಮೌಲ್ಯ 24,500/- ರೂಪಾಯಿ ಆಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 213 /2021 ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತರ ಪ್ರಕರಣ

  • ಬೈಂದೂರು: ದಿನಾಂಕ 21/12/2021 ರಂದು ಬೆಳಿಗ್ಗೆ 02:00 ಗಂಟೆಗೆ ಪವನ್ ನಾಯಕ್ ಪೊಲೀಸ್, ಉಪ ನಿರೀಕ್ಷಕರು (ಕಾ&ಸು), ಬೈಂದೂರು ಪೊಲೀಸ್ ಠಾಣೆ ಇವರಿಗೆ ಒಂದು ಮಾರುತಿ ಸುಜುಕಿ ರಿಡ್ಜ್ ವಾಹನದಲ್ಲಿ ಜಾನುವಾರುಗಳನ್ನು ಕಳ್ಳತನ ಮಾಡಿಕೊಂಡು ಕಾರಿನಲ್ಲಿ ತುಂಬಿಸಿಕೊಂಡು ಕಿರಿಮಂಜೇಶ್ವರ ಕಡೆಯಿಂದ ಬೈಂದೂರು ಕಡೆಗೆ ಬಂದಿರುವುದಾಗಿ ಬಂದ ಮಾಹಿತಿ ಮೇರೆಗೆ ಯಡ್ತರೆ ಜಂಕ್ಷನ್ ಬಳಿ ಕಾಯುತ್ತಾ ನಿಂತಿರುವಾಗ 02:20 ಗಂಟೆಗೆ ಉಪ್ಪುಂದ ಕಡೆಯಿಂದ ಬೈಂದೂರು ಕಡೆಗೆ ಒಂದು ಕಾರು ಅತೀ ವೇಗವಾಗಿ ಬರುತ್ತಿರುವುದನ್ನು ಗಮನಿಸಿ ಅದನ್ನು ನಿಲ್ಲಿಸುವಂತೆ ಸೂಚನೆ ನೀಡಿದಾಗ ಕಾರಿನ ಚಾಲಕನು ಕಾರನ್ನು ಯಡ್ತರೆ ಜಂಕ್ಷನ್ ನಿಂದ ಸ್ವಲ್ಪ ಹಿಂದೆಯೇ ನಿಲ್ಲಿಸಿದ್ದು ಕಾರಿನಲ್ಲಿದ್ದವರು ಕತ್ತಲೆಯಲ್ಲಿ ಓಡಿಹೋಗಿದ್ದು, ಕಾರನ್ನು ಪರಿಶೀಲಿಸಿದಲ್ಲಿ ಕಾರಿನ  ಕೀಯನ್ನು ವಾಹನದಲ್ಲಿ ಬಿಟ್ಟು ಹೋಗಿದ್ದು  ಕಾರನ್ನು ಪರಿಶೀಲಿಸಲಾಗಿ ಮಾರುತಿ ಸುಜುಕಿ ಕಂಪನಿಯ ರಿಡ್ಜ್ ಮಾದರಿಯ ಕಾರಾಗಿದ್ದು ಕಾರಿಗೆ ಹಿಂಬದಿಯ ನಂಬರ್ ಪ್ಲೇಟ್ ಇರುವುದಿಲ್ಲ, ಮುಂದಿನ ನಂಬರ್ ಪ್ಲೇಟನ್ನು ಉಜ್ಜಿ ನಂಬರ್ ಕಾಣದಂತೆ ಮಾಡಿದ್ದು ಕಾರಿನ ನಂಬರ್ ಪ್ಲೇಟ್ ನ್ನು ಸೂಕ್ಷ್ಮವಾಗಿ ನೋಡಲಾಗಿ KA-47-M-4170 ಆಗಿರುತ್ತದೆ. ಕಾರಿನ ಬಾಗಿಲನ್ನು ತೆರೆದು ಪರಿಶೀಲಿಸಲಾಗಿ ಹಿಂಬದಿಯಲ್ಲಿ ಕುಳಿತುಕೊಳ್ಳುವ ಸೀಟ್ ಇಲ್ಲದೇ ಇದ್ದು ಆ ಸ್ಥಳದಲ್ಲಿ 2 ಜಾನುವಾರುಗಳನ್ನು ಹಿಂಸೆಯಿಂದ ಉಸಿರುಗಟ್ಟುವ ರೀತಿಯಲ್ಲಿ ಕಾಲುಗಳನ್ನು ಕಟ್ಟಿ ಒಂದರಮೇಲೆ ಒಂದು ತುಂಬಿಸಿರುವುದು ಕಂಡುಬಂದಿದ್ದು ಜಾನುವಾರುಗಳನ್ನು ಕೆಳಗೆ ಇಳಿಸಿ ಪರಿಶೀಲಿಸಿದಾಗ 2 ಚಿಕ್ಕ ಗಂಡು ಕರುಗಳಾಗಿರುತ್ತವೆ. ಆರೋಪಿತರು ಠಾಣಾ ಸರಹದ್ದಿನಲ್ಲಿ ಎಲ್ಲಿಯೋ ಜಾನುವಾರುಗಳನ್ನು ಕಳ್ಳತನ ಮಾಡಿ ಮಾಂಸಮಾಡುವ ಉದ್ದೇಶದಿಂದ ಅಕ್ರಮವಾಗಿ ಪರವಾನಿಗೆ ಇಲ್ಲದೇ ಅವುಗಳಿಗೆ ಯಾವುದೇ ಮೇವು, ನೀರು ನೀಡದೇ, ಹಿಂಸೆಯಿಂದ ಉಸಿರುಗಟ್ಟುವ ರೀತಿಯಲ್ಲಿ ಕಾಲುಗಳನ್ನು ಕಟ್ಟಿ ಮಾರುತಿ ರಿಡ್ಜ್ ಕಾರು ನಂಬ್ರ KA-47-M-4170 ರಲ್ಲಿ ಸಾಗಾಟ ಮಾಡುತ್ತಿರುವುದಾಗಿರುತ್ತದೆ. ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 209/2021 ಕಲಂ: 379 ಐಪಿಸಿ ಮತ್ತು ಕಲಂ: 4,5,7,12  ಕರ್ನಾಟಕ ಗೋ  ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಆಧಿನಿಯಮ 2020 & 11(1) (ಡಿ) ಪ್ರಾಣಿಹಿಂಸೆ ನಿಷೇಧ ಕಾಯಿದೆ ಮತ್ತು ಕಲಂ: 66,192(ಎ) ಐ ಎಮ್ ವಿ ಆಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-12-2021 10:18 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080