ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾಫು: ಪಿರ್ಯಾದಿದಾರರಾದ ಸೃಜನ್ (30) ತಂದೆ : ಎಮ್. ಗೋಪಾಲ ಕೃಷ್ಣ ವಾಸ: ಶ್ರೀಗಂಧ ಮಟ್ಟು ವಿಷ್ಣುಮೂರ್ತಿ ದೇವಸ್ಥಾನದ ಬಳಿ ಮಟ್ಟು ಗ್ರಾಮ ಕಟಪಾಡಿ ಇವರ ತಂದೆ ಎಮ್. ಗೋಪಾಲ ಕೃಷ್ಣ (75) ರವರು ದಿನಾಂಕ 22/12/2021 ರಂದು ಬೆಳಗ್ಗೆ 09.30 ಗಂಟೆಯ ಸಮಯಕ್ಕೆ ಮೂಡಬೆಟ್ಟು ಗ್ರಾಮದ ಅಚ್ಚಡ ಮುಖ್ಯ ಪ್ರಾಣ ಹೊಟೇಲ್ ಬಳಿ ಕಟಪಾಡಿ ಶಿರ್ವ ರಸ್ತೆಯ ಬದಿಯಲ್ಲಿ ಕಟಪಾಡಿ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ, ವೈಭವ ರವರು ತನ್ನ KA-20 EX-1854 ನೇದನ್ನು ಶಿರ್ವ ಕಡೆಯಿಂದ ಕಟಪಾಡಿ ಕಡೆಗೆ ಅತೀ ವೇಗ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಸವಾರಿ ಮಾಡಿಕೊಂಡು ಬಂದು ಸೃಜನ್‌ ರವರ ತಂದೆಗೆ ಢಿಕ್ಕಿ ಹೊಡೆದು ನೆಲಕ್ಕೆ ಬಿದ್ದ ಪರಿಣಾಮ ತಲೆಗೆ ಗಾಯವಾಗಿ ಮೈಕೈಗಳಿಗೆ ತರಚಿದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಉಡುಪಿ ಆದರ್ಶ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 187/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿದಾರರಾದ ಹರೀಶ್ (42) ತಂದೆ: ದಿ. ಗಣೇಶ್, ವಾಸ: ರಾಘವೇಂದ್ರ ಮಠದ ಬಳಿ, ಕಂಚಿನಡ್ಕ, ನಡ್ಸಾಲು ಗ್ರಾಮ, ಕಾಪು ಇವರ ತಾಯಿ ಸುಶೀಲ(60) ಎಂಬುವರು ಬೀಡಿ ಕಟ್ಟುವ ಕೆಲಸ ಮಾಡಿಕೊಂಡಿದ್ದು. ಅವರ ಮನೆ ವಠಾರದ ಬಳಿ ಪ್ರತಿ ದಿನದಂತೆ ದಿನಾಂಕ 30/06/2021 ರಂದು ಕೂಡ ಬೆಳಿಗ್ಗೆ ವಾಕಿಂಗ್ ಮಾಡುತ್ತಿರುವ ಸಮಯ ಸುಮಾರು 07:00 ಗಂಟೆಯ ವೇಳೆಗೆ ಕಾಪು ತಾಲೂಕು ನಡ್ಸಾಲು ಗ್ರಾಮ ಕಂಚಿನಡ್ಕ ರಾಘವೇಂದ್ರ ಮಠದ ಬಳಿ ಆನಂದ ರವರ ಮನೆಯ ಅಂಗಳದಲ್ಲಿ ಆನಂದ ರವರ ಮಗ ಮಣಿ @ ಮಣಿಕಂಠ ಎಂಬಾತನು ಹಾರೆಯಿಂದ ಸುಶೀಲ ಇವರ ತಲೆಗೆ ಹೊಡೆದು ಗಂಭೀರ ಗಾಯವನ್ನುಂಟು ಮಾಡಿದ್ದು, ಈ ಬಗ್ಗೆ ಮುಕ್ಕಾ ಶ್ರೀನಿವಾಸ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ನಂತರ ಆಸ್ಪತ್ರೆಯಿಂದ ಬಿಡುಗಡೆಗೊಂಡು ಮನೆಯಲ್ಲಿಯೇ ಚಿಕಿತ್ಸೆ ಮತ್ತು ಆರೈಕೆಯಲ್ಲಿದ್ದವರು, ದಿನಾಂಕ 22/12/2021 ರಂದು ಬೆಳಗಿನ ಜಾವ 03:30 ಗಂಟೆಗೆ ಮೃತಪಟ್ಟಿರುತ್ತಾರೆ. ಸದ್ರಿ ಸುಶೀಲ ರವರು ತಲೆಗೆ ಹಲ್ಲೆಯಿಂದ ಉಂಟಾದ ಗಾಯದಿಂದ ಅಥವಾ ಇನ್ನಾವುದೋ ಕಾರಣದಿಂದ ಮೃತಪಟ್ಟಿರ ಬಹುದಾಗಿರುವುದಾಗಿದೆ, ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ 27/2021 ಕಲಂ: 174(3)(3)(IV) ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
 • ಶಿರ್ವಾ: ಪಿರ್ಯಾದಿದಾರರಾದ ಸ್ಟ್ಯಾನಿ ಬ್ರಿಟ್ಟೋ (60) ತಂದೆ: ದಿ/ಲಾಜರಸ್ ಬ್ರಿಟ್ಟೋ, ವಾಸ: ಮನೆ ನಂ-14-103,ಶಿರ್ವಾ ಮಸೀದಿ ಬಳಿ, ಶಿರ್ವಾ ಗ್ರಾಮ. ಕಾಪು ತಾಲೂಕು, ಇವರ ತಮ್ಮ ಫ್ರಾನ್ಸಿಸ್ ಬ್ರಿಟ್ಟೋ (56) ಎಂಬವರು ಕೂಲಿ ಕೆಲಸ ಮಾಡಿಕೊಂಡಿದ್ದು, ಮದುವೆಯಾಗಿರುವುದಿಲ್ಲ. ಅಲ್ಲದೇ ವಿಪರೀತ ಕುಡಿತದ ಚಟವನ್ನು ಕೂಡಾ ಹೊಂದಿರುತ್ತಾರೆ. ಸದ್ರಿಯವರಿಗೆ ರಕ್ತದೊತ್ತಡ ಮತ್ತು ಉಬ್ಬಸ ಖಾಯಿಲೆಯಿದ್ದು ಕೂಲಿ ಕೆಲಸಕ್ಕೆ ಹೋದರೆ 3-4  ದಿನ ಮನೆಗೆ ಬರುತ್ತಿರಲಿಲ್ಲ. ದಿನಾಂಕ 19/12/2021 ರಂದು ಫ್ರಾನ್ಸಿಸ್ ಬ್ರಿಟ್ಟೋ ರವರು ಶಿರ್ವಾ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆ ಬಗ್ಗೆ ಅಂಬುಲೆನ್ಸ್ ನಲ್ಲಿ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಯಲ್ಲಿದ್ದ ಫ್ರಾನ್ಸಿಸ್ ಬ್ರಿಟ್ಟೋ ರವರು ದಿನಾಂಕ 21/12/2021  ರಂದು ಮದ್ಯಾಹ್ನ 12.30 ಗಂಟೆಗೆ ಚಿಕಿತ್ಸೆಗೆ ಸ್ವಂದಿಸದೇ ಮೃತಪಟ್ಟಿರುವುದಾಗಿದೆ. ಫ್ರಾನ್ಸಿಸ್ ಬ್ರಿಟ್ಟೋರವರು ಉಬ್ಬಸ ಖಾಯಿಲೆ ಉಲ್ಬಣಗೊಂಡಿದ್ದರಿಂದ ಮೃತಪಟ್ಟಿದ್ದು ಸದ್ರಿಯವರ ಮರಣದಲ್ಲಿ ಬೇರೆ ಯಾವುದೇ ಸಂಶಯ ಇರುವುದಿಲ್ಲವಾಗಿದೆ, ಈ ಬಗ್ಗೆ ಶಿರ್ವಾ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ 23/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
 • ಕಾರ್ಕಳ: ಪಿರ್ಯಾದಿದಾರರಾದ ಪ್ರವೀಣ, (19) ತಂದೆ : ಸುಂದರ, ವಾಸ: 5 ಸೆಂಟ್ಸ್,  ಹೆಪ್ಪಳ, ಎರ್ಲಪಾಡಿ ಗ್ರಾಮ, ಕಾರ್ಕಳ ಇವರ ತಂದೆ ಸುಂದರ, (50) ರವರು ಕೂಲಿ ಕೆಲಸ ಮಾಡಿಕೊಂಡಿದ್ದು ಮದ್ಯಪಾನ ಮಾಡುವ ಅಭ್ಯಾಸವಿದ್ದವರು, ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಚಿಕಿತ್ಸೆ ಕೊಡಿಸಿದರೂ ಗುಣಮುಖವಾಗದ ಕಾರಣ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 16/12/2021 ರಂದು ಬೆಳಿಗ್ಗೆ 08:00 ಗಂಟೆಯಿಂದ ದಿನಾಂಕ 22/12/2021 ಬೆಳಿಗ್ಗೆ 08:00 ಗಂಟೆಯ ಮದ್ಯಾವದಿಯಲ್ಲಿ ಕಾರ್ಕಳ ತಾಲೂಕು ಎರ್ಲಪ್ಪಾಡಿ ಗ್ರಾಮದ ಜೀವಾನಂದ ಶೆಟ್ಟಿರವರ ಹಾಡಿಯಲ್ಲಿ ಗೇರು ಮರದ ಕೊಂಬೆಗೆ ನೇಣುಬಿಗಿದು  ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತರ ಸಾವಿನಲ್ಲಿ ಯಾವುದೇ ಸಂಶಯವಿರುವುದಿಲ್ಲವಾಗಿದೆ, ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯು.ಡಿ.ಆರ್‌ ಕ್ರಮಾಂಕ 50/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಅಮಾಸೆಬೈಲು: ದಿನಾಂಕ 21/12/2021 ತಂದೆ:ರಾತ್ರಿ 10:00 ಗಂಟೆಯ ಸಮಯಕ್ಕೆ ಹೊಸಂಗಡಿ ಪೇಟೆಯಲ್ಲಿರುವ ಲಕ್ಷ್ಮೀ ಕೃಪಾ ಎಂಬ ಹೋಟೆಲ್ ಗೆ ಆಪಾದಿತರಾದ ಸಾಧಿಕ್, ಸುನೀಲ್ ಮತ್ತು ಸತೀಶ ಎಂಬುವವರು ಊಟಕ್ಕೆ ಹೋಗಿ ಮಟನ್ ಬಿರಿಯಾನಿ ಕೇಳಿದ್ದು ಪಿರ್ಯಾದಿದಾರರಾದ ಶಂಭು ಶೆಟ್ಟಿ (51)ತಂದೆ: ಸಂಜೀವ ಶೆಟ್ಟಿ ವಾಸ: ಹೊಟೇಲ್ ಲಕ್ಷ್ಮೀ ಕೃಪಾ ಹೊಸಂಗಡಿ ಕುಂದಾಫುರ ತಾಲೂಕು ಉಡುಪಿ ಎಂಬುವವರು ಮಟನ್ ಬಿರಿಯಾನಿ ಇಲ್ಲ ಬೇರೆ ಏನು ಬೇಕು ಎಂದು ಕೇಳಿದ್ದಕ್ಕೆ ಆಪಾದಿತರು ಕೋಪದಲ್ಲಿ ನಾವು ಕೇಳಿದ್ದು ನಿಮ್ಮಲ್ಲಿ ಇಲ್ಲ ಬೇರೆ ಎನು ಕೊಡುತ್ತಿಯಾ ಎಂದು ಬೈದು ಕೈಯಿಂದ ಮತ್ತು ಬಾಟಲಿಯಿಂದ ಹಲ್ಲೆ ಮಾಡಿದ್ದು, ಗಲಾಟೆ ತಡೆಯಲು ಬಂದ ಶಂಭು ಶೆಟ್ಟಿ ರವರ ಹೆಂಡತಿ ಶ್ರೀಮತಿ ರವರಿಗೂ ಕೈಯಿಂದ ಹೊಡೆದು ನೋವುಂಟು ಮಾಡಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 41/2021ಕಲಂ: 504,323,324,354 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾರ್ಕಳ: ಪಿರ್ಯಾದಿದಾರರಾದ ವಿನುತ, (34) ತಂದೆ: ನವೀನ, ವಾಸ: ಈಶ್ವರಿ ನಿಲಯ, ಆದಿಶಕ್ತಿ ರೈಸ್ ಮಿಲ್ ಬಳಿ, ಹಿರ್ಗಾನ ಗ್ರಾಂ, ಕಾರ್ಕಳ, ಇವರು ದಿನಾಂಕ 13/12/2021 ರಂದು 14:30 ಗಂಟೆಗೆ ಹಿರ್ಗಾನ ಗ್ರಾಮ ಪಂಚಾಯತ್ ಬಳಿ KA-20 ES-3468 ನೇ ನೊಂದಣಿ ಸಂಖ್ಯೆಯ ಹೊಂಡಾ ಕಂಪನಿ ತಯಾರಿಕೆಯ  ಆ್ಯಕ್ಟೀವಾ ದ್ವಿಚಕ್ರ ವಾಹನವನ್ನು ನಿಲ್ಲಿಸಿ ನಿಂತುಕೊಂಡಿರುವಾಗ ಎಣ್ಣೆಹೊಳೆ ಕಡೆಯಿಂದ ಪೈಪ್ ಲೈನ್ ಕಾಮಗಾರಿಯನ್ನು ನೆಡೆಸುತ್ತಿರುವ ಹಳದಿ ಬಣ್ಣದ ಹುಂಡೈ ಕಂಪನಿ ತಯಾರಿಕೆಯ ಹಿಟಾಚಿಯನ್ನು ಅದರ ಚಾಲಕನು ವಿನುತ್‌ ರವರು ದ್ವಿ ಚಕ್ರ ವಾಹನವನ್ನು ನಿಲ್ಲಿಸಿ ನಿಂತುಕೊಂಡಿರುವುದನ್ನು ನೋಡಿ ನಿರ್ಲಕ್ಷದಿಂದ ಇವರ ಜೀವಕ್ಕೆ ಅಪಾಯವಾಗುವ ರೀತಿ ಓಮ್ಮಲೇ ಇವರ ಕಡೆ ಚಲಾಯಿಸಿಕೊಂಡು ಬಂದಿದ್ದು ವಿನುತ್‌ ರವರು ದ್ವಿಚಕ್ರ ವಾಹನವನ್ನು ಬಿಟ್ಟು ಓಡಿ ಹೋಗಿದ್ದು, ಹಿಟಾಚಿ ಚಾಲಕನು ದ್ವಿಚಕ್ರ ವಾಹನದ ಮೇಲೆ ಚಲಾಯಿಸಿದ್ದರಿಂದ ದ್ವಿಚಕ್ರ ವಾಹನವು ಜಖಂಗೊಂಡು 42,000/- ನಷ್ಟ ಸಂಭವಿಸಿರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 163/2021 ಕಲಂ: 336, 427 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-12-2021 06:21 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080