ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಪಡುಬಿದ್ರಿ: ಪಿರ್ಯಾದಿದಾರರಾದ ಧೀರಜ್ ಕುಮಾರ್ (20), ತಂದೆ: ದಿ. ಜಯ ಮೊಯಿಲಿ, ವಾಸ: 3128-2257, ಕದ್ರಿ ದೇವಸ್ಥಾನದ ಬಳಿ, ಬಿಜೈ ಅಂಚೆ, ಮಂಗಳೂರು ತಾಲೂಕು, ದ.ಕ ಜಿಲ್ಲೆ ಇವರು ನಿಟ್ಟೆಯ ಅಡ್ಯಂತಾಯ ಕಾಲೇಜಿನಲ್ಲಿ ಅಂತಿಮ ವರ್ಷದ ಇ & ಸಿ ವ್ಯಾಸಂಗ ಮಾಡಿಕೊಂಡಿದ್ದು, ಪ್ರತಿದಿನ ಮನೆಯಿಂದ ಕಾಲೇಜಿಗೆ ಬಸ್ಸಿನಲ್ಲಿ ಹೋಗಿ ಬರುವುದಾಗಿದೆ. ಎಂದಿನಂತೆ ದಿನಾಂಕ 21/11/2022 ರಂದು ಬೆಳಿಗ್ಗೆ ಕಾಲೇಜಿಗೆ ಮಂಗಳೂರಿನಿಂದ ಕಾರ್ಕಳಕ್ಕೆ ಹೋಗುವ KA-19-AB-2709 ನೇ ನಂಬ್ರದ ನವದುರ್ಗಾ ಬಸ್ಸಿನಲ್ಲಿ ಹೊರಟು, ಪಡುಬಿದ್ರಿ ಕಡೆಯಿಂದ ಕಾರ್ಕಳ ಕಡೆಗೆ ರಾಜ್ಯ ಹೆದ್ದಾರಿ-01 ರಲ್ಲಿ ಹೋಗುತ್ತಾ ಕಾಪು ತಾಲೂಕು ಸಾಂತೂರು ಗ್ರಾಮ ಕಾಂಜರಕಟ್ಟೆಯ ಬಸ್ಸು ನಿಲ್ದಾಣದಲ್ಲಿ ಪಿರ್ಯಾದಿದಾರರ ಕಾಲೇಜಿನಲ್ಲಿ ಕಲಿಯುತ್ತಿರುವ ಪರಿಚಯದ ಮನೀಶ್ ಪೂಜಾರಿ ಎಂಬುವವರು ಬಸ್ಸಿಗೆ ಎದುರಿನ ಬಾಗಿನಿಂದ ಹತ್ತಿದ್ದು, ನಂತರ  08:20 ಗಂಟೆಯ ವೇಳೆಗೆ ಬಸ್ಸು ಅಲ್ಲಿಂದ ಸ್ವಲ್ಪ ಮುಂದಕ್ಕೆ ಹೋಗುತ್ತಾ ಬಸ್ಸಿನ ಚಾಲಕ ಬಾಲಕೃಷ್ಣ ನಾಯಕ್  ತಿರುವಿನಲ್ಲಿ ಬಸ್ಸನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿ ಒಮ್ಮೆಲೇ ಬ್ರೇಕ್ ಹಾಕಿದ ಪರಿಣಾಮ ಬಸ್ಸು ಒಳಗಿದ್ದ ಮನೀಶ್ ಪೂಜಾರಿಯು ಆಯತಪ್ಪಿ ಕೆಳಗೆ ರಸ್ತೆಗೆ ಬಿದ್ದು, ಅವರ ತಲೆಗೆ, ಬಲಕಿವಿಯ ಬಳಿ, ಕೈಕಾಲುಗಳಿಗೆ ಸಾಧಾರಣ ಸ್ವರೂಪದ ಗಾಯವಾಗಿರುತ್ತದೆ. ನಂತರ ಗಾಯಾಳುವನ್ನು ಚಿಕಿತ್ಸೆಯ ಬಗ್ಗೆ ಕಾರ್ಕಳದ ಸ್ಪಂದನ ಆಸ್ಪತ್ರೆಗೆ ಕರೆದುಕೊಂಡು ಹೋಗಿ, ನಂತರ ಅಲ್ಲಿನ ವೈದ್ಯರ ಸಲಹೆಯಂತೆ ಅಂಬ್ಯುಲೆನ್ಸ್ ಒಂದರಲ್ಲಿ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 148/2022, ಕಲಂ: 279,  337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಶಂಕರ ನಾಯ್ಕ(39), ತಂದೆ: ರಾಮ ನಾಯ್ಕ, ವಾಸ: ಹೋರಿಗುಂಡಿ ನಂಚಾರು ಗ್ರಾಮ ಬ್ರಹ್ಮಾವರ ತಾಲೂಕು ಇವರು ದಿನಾಂಕ 20/11/2022 ರಂದು ಕೆಲಸ ಮುಗಿಸಿ ಶಿರೂರು ಮೂರು ಕೈ ಕಡೆಯಿಂದ ತನ್ನ ಮೋಟಾರು ಸೈಕಲ್ ನಂಬ್ರ, KA-20-ED-1579 ನೇದರಲ್ಲಿ ಮನೆಗೆ ನಂಚಾರು  ಕಡೆಗೆ ಹೊರಟು 15:40 ಗಂಟೆಗೆ ಆವರ್ಸೆ ಗ್ರಾಮದ ಮಾವಿನಕಟ್ಟೆಯಿಂದ ಸ್ವಲ್ಪ  ಮುಂದಕ್ಕೆ ತಲುಪಿದಾಗ ನಂಚಾರು ಕಡೆಯಿಂದ ಶಿರೂರು ಮೂರು ಕೈ ಕಡೆಗೆ  KA-20-ME-1884 ನೇ ಕಾರು ಚಾಲಕ ರಾಮ ಪ್ರಸಾದ್ ಮಯ್ಯ ತನ್ನ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ಪಿರ್ಯಾದಿದಾರರ ಬೈಕ್ ಗೆ ಢಿಕ್ಕಿ ಹೊಡೆದಿದ್ದು, ಪಿರ್ಯಾದಿದಾರರು ಬೈಕ್ ಸಮೇತ ರಸ್ತೆಗೆ ಬಿದ್ದ ಪರಿಣಾಮ ಪಿರ್ಯಾದಿದಾರರ  ಬಲಬದಿಯ ಕಾಲಿನ ಪಾದ ಜಖಂ ಗೊಂಡು ತೀವೃ ತರಹದ ಗಾಯವಾಗಿದ್ದು ಬಲಬದಿಯ ಕಾಲಿನ ಎರಡನೇ ಬೆರಳು ಜಖಂ  ಗೊಂಡಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 204/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
  • ಗಂಗೊಳ್ಳಿ: ದಿನಾಂಕ 20/11/2022 ರಂದು ಪಿರ್ಯಾದಿದಾರರಾದ ವಿಶ್ವನಾಥ ಶೆಟ್ಟಿ (36),  ತಂದೆ: ಸೀತಾರಾಮ ಶೆಟ್ಟಿ ವಾಸ: ಕೋಟೆಮಕ್ಕಿ ಹೊಸಾಡು ಗ್ರಾಮ ಕುಂದಾಪುರ ತಾಲೂಕು ಇವರು ತ್ರಾಸಿಗೆ ಮದುವೆಗೆ ಬಂದಿದ್ದು ವಾಪಾಸು ಕಾರಿನಲ್ಲಿ ಮುಳ್ಳಿಕಟ್ಟೆ ಕಡೆಯಿಂದ ಬಂಟ್ವಾಡಿ ಕಡೆಗೆ ಹೋಗುತ್ತಿರುವಾಗ ಮದ್ಯಾಹ್ನ 2:30 ಗಂಟೆಗೆ ಪಿರ್ಯಾದಿದಾರರ ಮುಂದಿನಿಂದ ಹೊಂಡಾ  ಆಕ್ಟಿವ್  ನಂಬ್ರ KA-05-HY-1903 ನೇ ಸ್ಕೂಟರ್‌ ಸವಾರ ಉದಯ ಗಾಣಿಗ ಎಂಬುವವರು ಜಗನ್ನಾಥ ಗಾಣಿಗ ರವರನ್ನು  ಸಹಸವಾರನನ್ನು  ಕುಳ್ಳಿರಿಸಿಕೊಂಡು ಬಂಟ್ವಾಡಿ ಕಡೆಗೆ ಹೋಗುತ್ತಿದ್ದಾಗ ಹೊಸಾಡು ಗ್ರಾಮದ ಮುಳ್ಳಿಕಟ್ಟೆ ಅಡಿಗ ಹೊಲೋಬ್ಲಾಕ್‌ಪ್ಯಾಕ್ಟರಿ  ಬಳಿ ತಲುಪುವಾಗ ಸ್ಕೂಟರ್ ಸವಾರನು ಅತೀ ವೇಗವಾಗಿ ಹಾಗೂ ಅಜಾಗರೂಕತೆಯಿಂದ ಸ್ಕೂಟರನ್ನು ಸವಾರಿ ಮಾಡಿಕೊಂಡು  ಹೋಗುತ್ತಿರುವಾಗ  ನಾಯಿಯೊಂದು ಅಡ್ಡ ಬಂದಿದ್ದು ಸ್ಕೂಟರ್ ಸವಾರ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ  ಸ್ಕೂಟರ್   ಸವಾರ ಹಾಗೂ ಸಹ ಸವಾರ ರಸ್ತೆಗೆ ಬಿದ್ದು ಸಹ ಸವಾರ ಜಗನ್ನಾಥ ಗಾಣಿಗ ರವರಿಗೆ  ಬಲಕೆನ್ನೆಗೆ ತರಚಿದ ಗಾಯ ಹಾಗೂ ಬಲ ಭುಜಕ್ಕೆ ಒಳಜಖಂ ಆಗಿರುತ್ತದೆ. ಹಾಗೂ ಸ್ಕೂಟರ್‌ ಸವಾರ ಉದಯ ಗಾಣಿಗ ರವರಿಗೂ  ಸಣ್ಣ ಪುಟ್ಟ ಗಾಯವಾಗಿರುತ್ತದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 106/2022 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಪಡುಬಿದ್ರಿ: ಪಿರ್ಯಾದಿದಾರರಾದ ಶ್ರೀಮತಿ ರಂಜಿತಾ (32), ಗಂಡ: ವಿಜಯ, ವಾಸ: # 2-22, ಬಿ-1, ಚೇಳಾರು ಪದವು ಗ್ರಾಮ ಪಂಚಾಯತ್   ಹತ್ತಿರ, ಹಳೆಯಂಗಡಿ, ಚೇಳಾರು ಪದವು ಗ್ರಾಮ, ಮಂಗಳೂರು  ತಾಲೂಕು, ದ.ಕ ಜಿಲ್ಲೆ ಇವರ ಚಿಕ್ಕಮ್ಮ ರೇವಣಿ  ಎಂಬುವವರು ಅವರ ಮಗ ಚರಣ್ ರವರನ್ನುಟ್ಯೂಷನ್ ಗೆ ಸೇರಿಸಲೆಂದು  ದಿನಾಂಕ  21/11/2022 ರಂದು ಸಂಜೆ  16:00 ಗಂಟೆಯ ವೇಳೆಗೆ ಕಾಪು ತಾಲೂಕು ನಡ್ಸಾಲು ಗ್ರಾಮ ಪಡುಬಿದ್ರಿಯ ಲಯನ್ಸ್ ಶಾಲೆಯ ಎದುರು ಪೆಟ್ರೋಲ್ ಪಂಪ್ ಬಳಿ ರಾಜ್ಯ ಹೆದ್ದಾರಿ-01 ರಲ್ಲಿ ರಸ್ತೆಯ ಬದಿಯಲ್ಲಿ ಕಾರ್ಕಳ ಕಡೆಯಿಂದ ಪಡುಬಿದ್ರಿ ಕಡೆಗೆ ನಡೆದುಕೊಂಡು ಹೋಗುತ್ತಿರುವಾಗ KA-20-MB-4006  ನೇ ನಂಬ್ರದ ಮಾರುತಿ ಈಕೋ ಕಾರು ಚಾಲಕ ರಾಜೇಶ್ ನಾಯಕ್ ಪರ್ಕಳ ತನ್ನ ಕಾರನ್ನು ಕಾರ್ಕಳ ಕಡೆಯಿಂದ ಪಡುಬಿದ್ರಿ ಕಡೆಗೆ  ಅತೀವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಚಿಕ್ಕಮ್ಮನ ಮಗ ಚರಣ್ ರವರಿಗೆ ಹಿಂದಿನಿಂದ ಡಿಕ್ಕಿ ಹೊಡೆದ ಪರಿಣಾಮ ಚರಣ್ ನು ರಸ್ತೆಗೆ ಬಿದ್ದು ಅವನ ತಲೆಗೆ ರಕ್ತಗಾಯ ಮತ್ತು ಸೊಂಟಕ್ಕೆ ಗುದ್ದಿದ ನೋವಾಗಿರುತ್ತದೆ. ನಂತರ ಗಾಯಾಳುವಿಗೆ ಪಡುಬಿದ್ರಿಯ ಸಿದ್ದಿವಿನಾಯಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ನಂತರ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿಯ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲಿಸಿರುವುದಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 149/2022, ಕಲಂ: 279,  337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

  • ಬ್ರಹ್ಮಾವರ: ಪಿರ್ಯಾದಿದಾರರಾದ ವಿಶ್ವನಾಥ ಪೂಜಾರಿ (40), ತಂದೆ : ಚೀಂಕ್ರ ಪೂಜಾರಿ, ವಾಸ : ಶ್ರೀದೇವಿ ನಿಲಯ, ಕೇಕಂಜೆ ಕೊಡ್ಲು ಚಾರಾ ಗ್ರಾಮ, ಹೆಬ್ರಿ ತಾಲೂಕು  ಬ್ರಹ್ಮಾವರ ತಾಲೂಕು ಇವರು ಉಪ್ಪೂರು ಗ್ರಾಮದ ಉಪ್ಪೂರಿನ ಕೆ.ಎಂ.ಎಫ್‌. ಡೈರಿಯಲ್ಲಿ ಹಾಲಿನ ಟ್ಯಾಂಕರ್‌ನಲ್ಲಿ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 18/11/2022 ರಂದು ಮದ್ಯಾಹ್ನ ವೇಳೆಗೆ ಡೈರಿಯ ಅಧಿಕಾರಿಗಳು ಹೇಳಿದಂತೆ ಆರೋಪಿ ದಿನಕರ ಚಾಲನೆ ಮಾಡಿಕೊಂಡಿದ್ದ ಟ್ಯಾಂಕರ್‌ನ್ನು ಗೋಡಾನ್‌ನ ಕೆಳಗೆ ನಿಲ್ಲಿಸಿ ಇಟ್ಟಿದ್ದು, ನಂತರ ಆರೋಪಿಯು ಮನೆಗೆ ಹೋದವನು ಮದ್ಯಾಹ್ನ 3:10 ಗಂಟೆ  ಗಂಟೆಗೆ ಬಂದಿದ್ದು, ಪಿರ್ಯಾದಿದಾರರನ್ನು ಉದ್ದೇಶಿಸಿ ಗಾಡಿಯನ್ನು ತೆಗೆಯಲಿಕ್ಕೆ ಹೇಳಿದ್ಯಾರು? ಎಂದು ಕೇಳಿದ್ದು, ಅದಕ್ಕೆ ಪಿರ್ಯಾದಿದಾರರು ಡೈರಿಯ ಅಧಿಕಾರಿಗಳು ಹೇಳಿದ್ದಕ್ಕೆ ತೆಗೆದಿದ್ದು ಎಂದಿದ್ದಕ್ಕೆ ದಿನಕರನು ಪಿರ್ಯಾದಿದಾರರಿಗೆ  ಅವಾಚ್ಯವಾಗಿ ಬೈದು ಕೈಯಿಂದ ದೂಡಿ ಕಾಲಿನಿಂದ ತುಳಿದ ಪರಿಣಾಮ ಪಿರ್ಯಾದಿದಾರರ ಗಲ್ಲಕ್ಕೆ, ಕೆನ್ನೆಯ ಬಲಭಾಗ ಕುತ್ತಿಗೆಯ ಹಿಂಭಾಗ ನೋವು, ಬಲಕಾಲಿನ ಮೊಣಗಂಟಿಗೆ ಒಳನೋವಾಗಿದ್ದು, ಈ ಬಗ್ಗೆ ಬ್ರಹ್ಮಾವರ ಸಮೂದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಪಡೆದು ವೈದ್ಯರ ಸಲಹೆಯ ಮೇರೆಗೆ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಉಡುಪಿ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ದಾಖಲಾಗಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 196/2022 ಕಲಂ : 504, 323 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಲ್ಪೆ: ಪಿರ್ಯಾದಿದಾರರಾದ ಸುಂದರ ಬಂಗೇರ (65),  ತಂದೆ: ದಿ. ಅಂತ ಬಂಗೇರ, ವಾಸ: ಬಂಗೇರ ನಿಲಯ,ವಡಬಾಂಡೇಶ್ವರ , ಮಲ್ಪೆ ಬೀಚ್ ಕೊಡವೂರು ಗ್ರಾಮ ಇವರು ಮಲ್ಪೆ ಬೀಚ್ ರಸ್ತೆಯಲ್ಲಿ ಮಹಾಲಕ್ಷ್ಮೀ ಸ್ಟೋ ರ್ಸ್  ಅಂಗಡಿ ಇಟ್ಟು ವ್ಯಾಪಾರ ಮಾಡಿಕೊಂಡಿದ್ದು.  ಪಿರ್ಯಾದಿದಾರರ ಮಗಳಾದ ನಮಿತ ಇವರನ್ನು 10 ವರ್ಷಗಳ ಹಿಂದೆ ಮಲ್ಪೆ ಕೊಳ ನಿವಾಸಿ ಸತೀಶ್ ಎಂಬಾತನಿಗೆ ವಿವಾಹ ಮಾಡಿಕೊಟ್ಟಿದ್ದು. ಸಂಸಾರಿಕ ಭಿನ್ನಾಭಿಪ್ರಾಯದಿಂದ ಪಿರ್ಯಾದಿದಾರರ ಮಗಳು ನಮಿತಾ ಪಿರ್ಯಾದಿದಾರರ ಮನೆಯಲ್ಲಿಯೇ ಇದ್ದು.  ನಮಿತಾಳ ಗಂಡ ಸತೀಶನು ಶರಾಬು ಕುಡಿದು ಬಂದು ಪಿರ್ಯಾದಿದಾರರ ಮನೆಯ ಬಳಿ ಜಗಳ ಮಾಡಿ ಈ ಹಿಂದೆ ಆತನ ವಿರುದ್ದ ಮಲ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ. ದಿನಾಂಕ 20/11/2022 ರಂದು ಪಿರ್ಯಾದಿದಾರರು ಅಂಗಡಿಯಲ್ಲಿ ಇರುವಾಗ  ಪಿರ್ಯಾದಿದಾರರ ಮಗಳ ಗಂಡ ಸತೀಶನು ಸಂಜೆ 6:00 ಗಂಟೆ ಸಮಯಕ್ಕೆ ಪಿರ್ಯಾದಿದಾರರ ಅಂಗಡಿಗೆ ಅಕ್ರಮ ಪ್ರವೇಶ ಮಾಡಿ ಪಿರ್ಯಾದಿದಾರರಿಗೆ ಅವಾಚ್ಯ ಶಬ್ದಗಳಿಂದ ಬೈದು , ಪಿರ್ಯಾದಿದಾರರ ಮಗಳಿಗೂ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದು  ಆ ಸಮಯ ಪಿರ್ಯಾದಿದಾರರಿಗೂ ಆರೋಪಿತ ಸತೀಶನಿಗೆ ಮಾತಿನ ಚಕಮಕಿ ಆಗಿದ್ದು .ಸತೀಶನು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ ಪಿರ್ಯಾದಿದಾರರ ಅಂಗಿಯ ಕೊಲರ್ ಗೆ ಕೈ ಹಾಕಿ ಕೈಯಿಂದ  ಬೆನ್ನಿಗೆ ಗುದ್ದಿದ್ದು  ಅಲ್ಲದೆ ದೂಡಿ ಹಾಕಿರುತ್ತಾನೆ. ಪರಿಣಾಮ ಪಿರ್ಯಾದಿದಾರರಿಗೆ ಒಳ ನೋವು ಆಗಿರುತ್ತದೆ. ಈ ಗಲಾಟೆಯ ವಿಚಾರ ತಿಳಿದ  ಪಿರ್ಯಾದಿದಾರರ ಮಗಳು ನಮಿತಾ ಅಲ್ಲಿಗೆ ಬಂದಾಗ ಅವಳಿಗೂ ಸತೀಶನು ಅವಾಚ್ಯ ಶಬ್ದಗಳಿಂದ ಬೈದು ಅವಳ ಜುಟ್ಟನ್ನು ಹಿಡಿದು ಬೆನ್ನಿಗೆ ಗುದ್ದಿದ್ದು ಅಲ್ಲದೆ  ಆರೋಪಿತನು, ಗಲಾಟೆಯನ್ನು ತಡೆಯಲು ಬಂದ ಪಿರ್ಯಾದಿದಾರರ ಹೆಂಡತಿ ಲಲಿತಾ ರವರಿಗೂ ಹಲ್ಲೆ ಮಾಡಿರುತ್ತಾನೆ. ಆ ಗಲಾಟೆಯ ಸಮಯ ಸಾರ್ವಜನಿಕರು ಒಟ್ಟಾದ ಕಾರಣ ಸತೀಶನು ಅಲ್ಲಿಂದ ಹೋಗಿದ್ದು ಹೋಗುವಾಗ ಪಿರ್ಯಾದಿದಾರರಿಗೂ ಅವರ  ಮನೆಯವರಿಗೆ  ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 100/2022ಕಲಂ: 448, 341, 323, 354, 504, 506  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
     

ಇತ್ತೀಚಿನ ನವೀಕರಣ​ : 22-11-2022 09:36 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080