ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು :ಪಿರ್ಯಾದಿ ರಾಜೇಶ ಪೂಜಾರಿ ಪ್ರಾಯ:24 ವರ್ಷ ತಂದೆ: ನಾಗಪ್ಪ ಪೂಜಾರಿ ವಾಸ: ಸಿಂಗೂರು ಬಡಾ ಮನೆ , ನಾಗೂರು ಕಿರಿಮಂಜೇಶ್ವರ ಗ್ರಾಮ  ಇವರ  ತಮ್ಮನಾದ  ಸುನೀಲ್ ಪ್ರಾಯ  21 ವರ್ಷ ರವರು ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದು  ವಿಪರೀತ  ಮದ್ಯವ್ಯಸನಿಯಾಗಿದ್ದು   ಮಧ್ಯಪಾನ ಮಾಡಿ ಮನೆಗೆ ಬಂದಾಗ ಪದೇ ಪದೇ  ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದನು.   ಸುನೀಲನು 2 ವರ್ಷದ ಹಿಂದೆ ಮನೆಯಲ್ಲಿ ಇಲಿ ಪಾಷಾಣ ಸೇವಿಸಿದ್ದು  ಆತನಿಗೆ  ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಗುಣಮುಖನಾಗಿರುತ್ತಾನೆ. ಆ ಬಳಿಕ ಕೂಡಾ ಮದ್ಯಪಾನ ಮುಂದುವರೆಸಿ  ಮದ್ಯ ವ್ಯಸನಿಯಾಗಿ, ಮದ್ಯ ವ್ಯಸನದಿಂದ  ಬೇಸತ್ತು, ಜೀವನದಲ್ಲಿ ಜಿಗುಪ್ಸೆ ಹೊಂದಿ ಸುನೀಲನು ದಿನಾಂಕ 21/11/2022 ರಂದು  ಸಂಜೆ 6:00  ಗಂಟೆಯಿಂದ ದಿನಾಂಕ 22/11/2022 ರಂದು ಬೆಳಿಗ್ಗೆ  6:30 ಗಂಟೆಯ ಮಧ್ಯಾವಧಿಯಲ್ಲಿ ತಾನು ವಾಸವಿರುವ ಕಿರಿಮಂಜೇಶ್ವರ ಗ್ರಾಮದ ನಾಗೂರಿನ   ಸಿಂಗೂರು ಬಡಾ ಮನೆ ಎಂಬಲ್ಲಿನ  ಮನೆಯ ಹಿಂಬದಿಯ  ಮಾವಿನ ಮರಕ್ಕೆ  ನೈಲಾನ್ ಹಗ್ಗವನ್ನು ಕಟ್ಟಿ  ಕುತ್ತಿಗೆಗೆ ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿರುತ್ತಾನೆ . ಈ ಬಗ್ಗೆ ಬೈಂದೂರು ಪೊಲೀಸ್‌ಠಾಣಾ ಯುಡಿಅರ್‌ನಂಬ್ರ 60/2022 ಕಲಂ 174 ಸಿಅರ್‌ಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಕಳವು ಪ್ರಕರಣ

  •  ಮಲ್ಪೆ: ಪಿರ್ಯಾದಿ ಪದ್ಮನಾಭ ಕರ್ಕೆರಾ(56) ತಂದೆ: ತೋಮ ಪೂಜಾರಿ ವಾಸ: ಕಲ್ಸಂಕ, ,ಕುಂಜಿಬೆಟ್ಟು  ಇವರು  ಮಲ್ಪೆ ಯಲ್ಲಿ ನಾಗಶ್ರೀ  ಆಟೋ ಇಲೆಕ್ಟ್ರಿಕಲ್ಸ್  ನಲ್ಲಿ  ಕೆಲಸ ಮಾಡಿಕೊಂಡಿದ್ದು, ಪಿರ್ಯಾದಿದಾರರು ಪ್ರತಿ ದಿನ  ತನ್ನ ಬಾಬ್ತು KA-20-EU 8119  ಮೋಟಾರು ಸೈಕಲ್  ನಲ್ಲಿ  ಬಂದು ಅಂಗಡಿ ಪಕ್ಕದಲ್ಲಿ  ಮೋಟಾರು ಸೈಕಲ್ ನ್ನು  ನಿಲ್ಲಿಸಿ  ಅಂಗಡಿಯಲ್ಲಿ ಕೆಲಸ ಮಾಡಿ ಹೋಗುತ್ತಿದ್ದು , ದಿನಾಂಕ: 30-08-2022 ರಂದು  ಬೆಳಿಗ್ಗೆ 08:00 ಗಂಟೆಗೆ  ಪಿರ್ಯಾದಿದಾರರು  ತನ್ನ  ದ್ವಿಚಕ್ರ ವಾಹನವನ್ನು ತನ್ನ ಅಂಗಡಿಯ  ಬದಿಯಲ್ಲಿ ನಿಲ್ಲಿಸಿ ಅಂಗಡಿ ಯಲ್ಲಿ ಕೆಲಸ ಮಾಡಿ ರಾತ್ರಿ 20:00 ಗಂಟೆಗೆ ಬಂದು ನೋಡಿದಾಗ ಪಿರ್ಯಾದುದಾರರ ಮೋಟಾರು ಸೈಕಲ್  ಇಲ್ಲದೆ  ಇದ್ದು  , ಮೋಟಾರು  ಸೈಕಲ್ ಬಗ್ಗೆ ಅಂಗಡಿ ಕೆಲಸಗಾರರು ಮತ್ತು ಸಂಬಂಧಿಕರಲ್ಲಿ ವಿಚಾರಿಸಿದ್ದು ಸಿಕ್ಕಿರುವುದಿಲ್ಲ. ಈ ಬಗ್ಗೆ ಮಲ್ಪೆ ಠಾಣಾ ಅಪರಾಧ ಕ್ರಮಾಂಕ 101 /2022 ಕಲಂ 379 ಐಪಿಸಿ ಯಂತೆ ಪ್ರಕರಣ ದಾಖಲಿಸಲಾಗಿದೆ.

ಇತರ ಪ್ರಕರಣಗಳು

  • ಕೋಟ: ಪಿರ್ಯಾದಿ ವಿಜಯ ಪ್ರಾಯ  49 ವರ್ಷ (ಪರಿಶಿಷ್ಟ ಜಾತಿ) ತಂದೆ: ನಂದಿ ವಾಸ: ಗಿಳಿಯಾರು ಗ್ರಾಮ ಇವರು   ದಿನಾಂಕ: 21/11/2022 ರಂದು ಸಂಜೆ ಸುಮಾರು 5 ರಿಂದ 5.30 ಗಂಟೆಯ ಮಧ್ಯಾವಧಿಯಲ್ಲಿ ಪಿರ್ಯಾದಿದಾರರ ತಂದೆಯವರ ಉಳ್ತೂರಿನಲ್ಲಿರುವ ಸ್ಥಳದಲ್ಲಿ ಜೆ,ಸಿ,ಬಿಯಿಂದ ಕೆಲಸ ಮಾಡಿಸುತ್ತಿರುವಾಗ  ಸುರೇಂದ್ರ ಹೆಗ್ಡೆ  ಮತ್ತು ಸುರೇಂದ್ರ ಹೆಗ್ಡೆಯವರ ಮಗ ಹಾಗೂ ಇತರರು  ಏಕಾ ಏಕಿಯಾಗಿ ಎಲ್ಲರೂ ಒಟ್ಟು ಗೂಡಿಕೊಂಡು ಇದು ನಮ್ಮ ಪಟ್ಟಾ ಸ್ಥಳ ಇಲ್ಲಿ  ನಿನಗೇನು ಕೆಲಸ ಇದೆ ಎಂದು ಸುರೇಂದ್ರ ಹೆಗ್ಡೆ ಹಾಗೂ ಸುರೇಂದ್ರ ಹೆಗ್ಡೆಯವರ ಮಗ ಪಿರ್ಯಾದಿದಾರರ ಅಂಗಿಯ  ಕಾಲರಿನ ಪಟ್ಟಿಯನ್ನು  ಹಿಡಿದು ಕೈಯಿಂದ ದೂಡಿ  ನೀನು ಇಲ್ಲಿಂದ ಈ ಕೂಡಲೇ ಜಾಗ ಖಾಲಿ ಮಾಡದಿದ್ದರೆ  ನಿನ್ನನ್ನು ಕೊಂದು ಇದೇ ಸ್ಥಳದಲ್ಲಿ  ನಿನ್ನನ್ನು ಹುಗಿದು ಹಾಕುತ್ತೇನೆ.  ಎಂದು ಬೆದರಿಕೆ ಹಾಕಿರುತ್ತಾರೆ ಇನ್ನು ಮುಂದುವರಿದು  ಅವರ ಸಂಗಡಿಗರಿಗೆ ಇಲ್ಲಿಂದ ಇವನು ಜಾಗ ಖಾಲಿ ಮಾಡದಿದ್ದರೆ  ಕಾರಿನಲ್ಲಿರುವ ಕತ್ತಿಯಯನ್ನು  ತೆಗೆದುಕೊಂಡು ಬನ್ನಿ  ಆದೇಶಿಸಿದಾಗ ಪಿರ್ಯಾದಿದಾರರು ಹೆದರಿ ಜೀವ ಭಯದಿಂದ ಅಲ್ಲಿಂದ ಹಿಂತಿರುಗಿ  ಹೋಗಿರುತ್ತಾರೆ. ಈ ಬಗ್ಗೆ ಕೋಟ ಠಾಣಾ ಅಪರಾಧ ಕ್ರಮಾಂಕ 205/2022 ಕಲಂ: 323.504.506 RW 34 IPC 3(1)(r)(v-a) SC ST ACT   ಯಂತೆ ಪ್ರಕರಣ ದಾಖಲಿಸಲಾಗಿದೆ.

 

ಇತ್ತೀಚಿನ ನವೀಕರಣ​ : 22-11-2022 06:19 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080