ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಬಿ. ಫಾತಿಮಾ (23), ಗಂಡ : ಮಹಮ್ಮದ್ ಇಕ್ಬಾಲ್ ,ವಾಸ: ಜುಬೀನಾ ಮಂಜಿಲ್ ಕಂಚಿನಡ್ಕ ಪಡುಬಿದ್ರೆ ನಡ್ಸಾಲು ಗ್ರಾಮ ಇವರು ದಿನಾಂಕ 21/11/2021 ರಂದು ತನ್ನ ಮೈದುನ ಹನೀಫ್ ,ಆತನ ಹೆಂಡತಿ ರುಬೀನಾ ಅವರ ಮಗಳು ಹೈಫ್ (5) ರವರೊಂದಿಗೆ ಹನೀಫ್ ರವರ ಆಟೋ ರಿಕ್ಷಾ KA-20-B-4563 ನೇದರಲ್ಲಿ ಬೆಳಿಗ್ಗೆ ಪಡುಬಿದ್ರೆಯಿಂದ ಕುಂದಾಪುರದ ಕಡೆಗೆ ಹೊರಟು ರಾ ಹೆ 66 ರ ರಸ್ತೆಯಲ್ಲಿ ಬರುತ್ತಿರುವಾಗ ಮಣೂರು ಗ್ರಾಮದ ಉಮಾನಾಥ ಪೈ ರವರ ಅಂಗಡಿಯ ಎದುರು ಬರುವಾಗ ಮಧ್ಯಾಹ್ನ 1:30 ಗಂಟೆಯ ಸಮಯಕ್ಕೆ ಆಟೋ ಚಾಲಕ ಹನೀಫ್ ತನ್ನ ಆಟೋ ರಿಕ್ಷಾ ವನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿದ ಪರಿಣಾಮ ಆಟೋ ರಿಕ್ಷಾ ನಿಯಂತ್ರಣ ತಪ್ಪಿ ರಸ್ತೆಯಲ್ಲಿಮಗುಚಿ ಬಿದ್ದಿರುತ್ತದೆ. ಪರಿಣಾಮ ಹಿಂಬದಿ ಕುಳಿತಿದ್ದ ಪಿರ್ಯಾದಿದಾರರು ಹಾಗೂ ರುಬೀನಾ ಮತ್ತು ಹೈಫ್ ಬಿದ್ದಿರುತ್ತಾರೆ. ಹೈಫ್ ಳ ಎಡ ಕೈನ ಮೂರು ಬೆರಳುಗಳಿಗೆ ಗುದ್ದಿದ ರಕ್ತಗಾಯವಾಗಿರುತ್ತದೆ. ಪಿರ್ಯಾದಿದಾರರಿಗೆ ಹಣೆಗೆ ತರಚಿದ ರಕ್ತಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 197/2021 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಪವನ (25 ), ತಂದೆ:ಉಮೇಶ ಆಚಾರ್ಯ, ವಾಸ: ಬೆಳ್ಮಣ್ ಚರ್ಚಬಳಿ ಮಾರ್ಟಿಸ್ ಕಾಂಪ್ಲೆಕ್ಷ ಬೆಳ್ಮಣ್ ಗ್ರಾಮ ಕಾರ್ಕಳ ತಾಲೂಕು ಇವರು ದಿನಾಂಕ 21/11/2021 ರಂದು ಸತೀಶ ಆಚಾರ್ಯ ರವರ ಜೊತೆಯಲ್ಲಿ ತನ್ನ KA-20-ET-8212 ನೇ ಆಕ್ಟಿವಾ ಸ್ಕೂಟಿಯಲ್ಲಿ ಉಡುಪಿಗೆ ಹೋಗಿ ವಾಪಾಸ್ಸು ಬರುತ್ತಿರುವಾಗ ಮಧ್ಯಾಹ್ನ 1.15 ಗಂಟೆಯ ಸಮಯಕ್ಕೆ ಶಿರಿಯಾರ ಗ್ರಾಮದ ಸೈಬ್ರಕಟ್ಟೆ ಜಂಬೂರು ಕ್ರಾಸ್ ಬಳಿ ತಲುಪುವಾಗ ಪಿರ್ಯಾದಿದಾರರ ಎಡಬದಿಯಿಂದ KA-20-EW-1707 ನೆ ಸ್ಕೂಟಿಯ ಸವಾರ ಮುತ್ತಯ್ಯ ಶೆಟ್ಟಿ ತನ್ನ ಸ್ಕೂಟಿಯನ್ನು ರಸ್ತೆಯ ಬಲ ಬದಿಗೆ ಹೋಗಲು ಒಮ್ಮೆಲೆ ಯಾವುದೇ ಸೂಚನೆಯನ್ನು ನೀಡದೇ ಪಿರ್ಯಾದಿದಾರರ ಸ್ಕೂಟಿಯನ್ನು ಗಮನಿಸದೇ ಏಕಾಏಕಿ ಅತೀವೇಗ ಹಾಗೂ ಅಜಾರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಸ್ಕೂಟಿಯ ಎಡ ಬದಿಗೆ ಢಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು ಸ್ಕೂಟಿ ಸಮೇತ ಬಲ ಮಗ್ಗಲಾಗಿ ಬಿದ್ದಿದರಿಂದ ಪಿರ್ಯಾದಿದಾರರ ಸ್ಕೂಟಿಯನ್ನು ಚಲಾಯಿಸುತ್ತಿದ್ದ ಸತೀಶ ಆಚಾರ್ಯ ರಿಗೆ ಬಲ ಕೈ ಯ ಕೋಲು ಕೈಯ ಬಳಿ ತರಚಿ ಚರ್ಮ ಸುಲಿದ ಗಾಯ ಹಾಗೂ ಎಡ ಕೈ ಕಿರು ಬೆರಳಿನ ಬಳಿ ಮೂಳೆ ಮುರಿತದ ಗಾಯವಾಗಿದ್ದು ಹಾಗೂ ಪಿರ್ಯಾದಿದಾರರಿಗೆ ಬಲ ಕಾಲಿನ ಮಣಿ ಗಂಟಿನ ಬಳಿ ತರಚಿದ ರಕ್ತಗಾಯ ತೊಡೆಯ ಬಳಿ ಮತ್ತು ಬಲ ಕಾಲಿನ ಹೆಬ್ಬೆರಳಿನ ಮೇಲ್ಭಾಗದಲ್ಲಿ ತರಚಿದ ರಕ್ತಗಾಯವಾಗಿರುತ್ತದೆ. ಢಿಕ್ಕಿ ಹೊಡೆದ ಸ್ಕುಟಿ ಸವಾರ ಮುತ್ತಯ್ಯ ಶೆಟ್ಟಿ ಯವರಿಗೂ ಕೂಡ ಬಲ ಕಾಲಿನ ಗಂಟಿನ ಬಳಿ ತರಚಿದ ಗಾಯವಾಗಿರುತ್ತದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 198/2021 ಕಲಂ: 279,338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಬೈಂದೂರು : ಪಿರ್ಯಾದಿದಾರರಾದ ಸುಮಿತ್ರ (28)' ತಂದೆ: ಮಹಾಬಲ ಗೌಡ, ವಾಸ: ಹಿಲ್ಲಾರ್ ಕೆಳಮನೆ ಗೋಳಿಹೊಳೆ ಗ್ರಾಮ ಬೈಂದೂರು ತಾಲೂಕು ಇವರ ಅಕ್ಕ ಸುಜಾತ (31) ಎಂಬುವವರು ಕಳೆದ 10 ವರ್ಷಗಳಿಂದ ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದು ಕುಂದಾಪುರದ ಶ್ರೀ ಮಾತಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರು ದಿನಾಂಕ 21/11/2021 ರಂದು ರಾತ್ರಿ 9:30 ಗಂಟೆಯಿಂದ ದಿನಾಂಕ22/11/2021 ರಂದು ಬೆಳಿಗ್ಗೆ 06:30 ರ ಮದ್ಯದ ಅವಧಿಯಲ್ಲಿ ತಾನು ವಾಸವಾಗಿರುವ ಬೈಂದೂರು ತಾಲೂಕು ಗೊಳಿಹೊಳೆ ಗ್ರಾಮದ ಹಿಲ್ಲಾರ್ ಕೆಳ ಮನೆ ಎಂಬಲ್ಲಿನ ಮನೆಯ ಹತ್ತಿರವಿರುವ ಗೇರು ಮರದ ಕೊಂಬೆಗೆ ನೈಲಾನ್ ಹಗ್ಗವನ್ನು ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದ್ದು, ಪಿರ್ಯಾದಿದಾರರ ಅಕ್ಕ ಮಾನಸಿಕ ಖಾಯಿಲೆ ಗುಣಮುಖವಾಗದೇ ಇದ್ದು ಅದೇ ಚಿಂತೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಯುಡಿಆರ್ ಕ್ರಮಾಂಕ 47/2021 ಕಲಂ: 174 ಸಿ.ಅರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಮಣಿಪಾಲ: ಪಿರ್ಯಾದಿದಾರರಾದ ಬಾಲಗೋಪಾಲ (67), ತಂದೆ: ಕೃಷ್ಣ ಕೊಡಂಚೆ, ವಾಸ: ಪ್ರೇಮಾಮೃತ 1-111 ಮೂಡು ಅಲೆವೂರು ಉಡುಪಿ ತಾಲೂಕು ಇವರ ಮಗಳು ಅಮೃತಾ ಸುಮಾರು 8 ವರ್ಷದಿಂದ ವಿದ್ಯೊದಯ ಪಬ್ಲಿಕ್‌ ಸ್ಕೊಲ್‌ ನಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡಿಕೊಂಡಿರುತ್ತಾರೆ. ಇತ್ತೀಚೆಗೆ ಕೆಲಸದ ಒತ್ತಡದಿಂದ ಖಿನ್ನತೆಗೆ ಒಳಗಾಗಿ ದಿನಾಂಕ 21/11/2021 ರಂದು ರಾತ್ರಿ 10:30 ಗಂಟೆಯಿಂದ ದಿನಾಂಕ: 22/11/2021 ರಂದು ಬೆಳಿಗ್ಗೆ 6:19 ಗಂಟೆ ಮಧ್ಯಾವಧಿಯಲ್ಲಿ ತಾನು ವಾಸವಿದ್ದ ಮನೆಯ ಖಾಸಗಿ ಕೋಣೆಯಲ್ಲಿ ಕುತ್ತಿಗೆಗೆ ನೇಣು ಬೀಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 37/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಗಂಡಸು ಕಾಣೆ ಪ್ರಕರಣ

  • ಶಂಕರನಾರಾಯಣ: ಪಿರ್ಯಾದಿದಾರರಾದ ಶೋಭಾ (32), ಗಂಡ:. ಕುಮಾರ್ @ ನಾಗರಾಜ, ವಾಸ: ಗುಮ್ಮಲ ಮನೆ ಬೆಳ್ವ ಗ್ರಾಮ ಹೆಬ್ರಿ ತಾಲೂಕು ಇವರ ಗಂಡ ಕುಮಾರ್ @ನಾಗರಾಜ ಪ್ರಾಯ 39 ವರ್ಷ ಇವರು ದಿನಾಂಕ 20/06/2017 ರಂದು ಹೆಬ್ರಿ ತಾಲೂಕಿನ ಬೆಳ್ಬೆ ಗ್ರಾಮದ ಗುಮ್ಮಲ ಎಂಬಲ್ಲಿ ಪಿರ್ಯಾದಿದಾರರ ಮನೆಯಿಂದ ಬೆಂಗಳೂರಿಗೆ ಕೆಲಸಕ್ಕೆ ಹೋಗುತ್ತೇನೆ ಎಂದು ಹೇಳಿ ಮನೆಯಿಂದ ಹೋದವರು ಈ ವರೆಗೆ ವಾಪಾಸು ಮನೆಗೆ ಬಾರದೇ ಹಾಗೂ ಆತನ ಸ್ವಂತಹ ಊರಾದ ಮಂಡ್ಯಕ್ಕೆ ಸಹ ಹೋಗದೇ ಕಾಣೆಯಾಗಿರುತ್ತಾರೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಅಪರಾಧ 104/2021 ಕಲಂ:ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 22-11-2021 06:41 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080