ಅಭಿಪ್ರಾಯ / ಸಲಹೆಗಳು

ಗಂಡಸು ಕಾಣೆ ಪ್ರಕರಣ 

  • ಉಡುಪಿ: ಪಿರ್ಯಾದಿದಾರರಾದ ಶಂಕರ ಪ್ರಾಯ: 42 ವರ್ಷ, ತಂದೆ: ದಿ. ಬಸವರಾಜ್‌ ವಾಸ: 2ನೇ ಅಡ್ಡರಸ್ತೆ, ಶಾಂತಿನಗರ, ಅಲೆವೂರು ರಸ್ತೆ, 80-ಬಡಗುಬೆಟ್ಟು ಗ್ರಾಮ, ಉಡುಪಿ ತಾಲೂಕು ಇವರ ಹಿರಿಯ ಮಗ ಸಚಿನ್‌ ಪ್ರಾಯ 18 ವರ್ಷ 5 ತಿಂಗಳು ಎಂಬಾತನು ಮಣಿಪಾಲ ಎಂಜೆಸಿ ಕಾಲೇಜಿನಲ್ಲಿ ಪ್ರಥಮ ವರ್ಷದ ಪಿಯುಸಿ ವಿದ್ಯಾಭ್ಯಾಸ ಮಾಡಿಕೊಂಡಿದ್ದು, ದಿನಾಂಕ 20/10/2022 ರಂದು 20:30 ಗಂಟೆಗೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಹೊಸ ಕೆ.ಎಸ್‌.ಆರ್‌.ಟಿ.ಸಿ ಬಸ್‌ ನಿಲ್ದಾಣದಿಂದ ಕಾಣೆಯಾಗಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 157/2022 ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ 

  • ಕೋಟ: ಪಿರ್ಯಾದಿದಾರರುಾದ ಅಣಪ್ಪ ಮಡಿವಾಳ, ಪ್ರಾಯ 69 ವರ್ಷ ತಂದೆ: ದಿ ರಾಮ ಮಡಿವಾಳ, ವಾಸ: ತುಳಸಿ ನಿಲಯ ಪಾಂಡೇಶ್ವರ ಗ್ರಾಮ ಬ್ರಹ್ಮಾವರ ತಾಲೂಕು ಇವರು ರಿಕ್ಷಾ ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 21/10/2022 ರಂದು ಮದ್ಯಾಹ್ನ ರಿಕ್ಷಾ ಬಾಡಿಗೆಗೆ ಹೋಗಿದ್ದು ಸಂಜೆ 07:00 ಗಂಟೆಗೆ ಮನೆಯಿಂದ ಫೋನ್ ಮಾಡಿ ಮಗಳ ಹುಟ್ಟುಹಬ್ಬದ ಸಂಬಂಧ ಮನೆಯಲ್ಲಿ ಎಲ್ಲರೂ ಉಡುಪಿ ದೇವಸ್ಥಾನಕ್ಕೆ ಹೋಗುವುದಾಗಿ ಪೋನ್ ಮಾಡಿ ತಿಳಿಸಿ ಅಳಿಯನ ಕಾರಿನಲ್ಲಿ ಹೋಗಿರುತ್ತಾರೆ . ನಂತರ ವಾಪಾಸ್ಸು ರಾತ್ರಿ 10:30 ಗಂಟೆಗೆ ಮನೆಗೆ ಬಂದಾಗ ಯಾರೋ ಕಳ್ಳರು ಮನೆಯ ಬೆಡ್ ರೂಮ್ ನ ಸೀಲಿಂಗ್ ಸಿಮೆಂಟ್ ಶೀಟ್ ಒಡೆದು ಅಲ್ಲಿ ಒಳಗೆ ಪ್ರವೇಶಿಸಿಲು ಆಗದೇ ಇದ್ದಾಗ, ನಂತರ ಅಡುಗೆ ಕೋಣೆಯ ಹಂಚನ್ನು ತೆಗೆದು ಮನೆ ಒಳಗೆ ಪ್ರವೇಶಿಸಿ ಬೆಡ್ ರೂಮ್ ನ ಬಾಗಿಲು ತೆಗೆದು ಲೈಟ್ ಹಾಕಿದ್ದು ಏನೂ ಸಿಗದೇ ಇದ್ದಾಗ ಮನೆಯ ಹಿಂದಿನ ಬಾಗಿಲಿನಿಂದ ಹೋರ ಹೋಗಿರುತ್ತಾರೆ ದಿನಾಂಕ 21/10/2022 ರಂದು ಸಂಜೆ 7:00 ಗಂಟೆಯಿಂದ ರಾತ್ರಿ 10:30 ಗಂಟೆ ನಡುವೆ ಮನೆಯ ಮಾಡಿನ ಹೆಂಚನ್ನು ತೆಗೆದು ಕಳವಿಗೆ ಪ್ರಯತ್ನಿಸಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 182/2022 ಕಲಂ: 457, 380, 511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ: 21/10/2022 ರಂದು ಪವನ್‌ ನಾಯಕ್‌ ಪಿಎಸ್‌ಐ, ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಇವರು ಮದ್ಯಾಹ್ನ ರೌಂಡ್ಸ್‌ ಕರ್ತವ್ಯದಲ್ಲಿರುವ ಸಮಯ ಕುಂದಾಪುರ ತಾಲೂಕು ಬಸ್ರೂರು ಗ್ರಾಮದ ಬಸ್ಸು ನಿಲ್ದಾಣದ ಬಳಿ ಓರ್ವ ವ್ಯಕ್ತಿಯು ನಿಷೇದಿತ ಮಾಧಕ ದ್ರವ್ಯ ಗಾಂಜಾವನ್ನು ಸೇವಿಸಿ ಓಡಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ಆರೋಪಿ ಆಕಾಶ್‌ (23)ಎಂಬಾತನನ್ನು ವಿಚಾರಿಸಿ ಆರೋಪಿಯನ್ನು ಗಾಂಜಾ ಸೇವಿಸಿರುವ ಬಗ್ಗೆ ದೃಢ ಪಡಿಸುವ ಬಗ್ಗೆ ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ವೈದ್ಯಾಧಿಕಾರಿವರ ಮುಂದೆ ಹಾಜರುಪಡಿಸಿದ್ದು ವೈದ್ಯಾಧಿಕಾರಿಯವರು ಆರೋಪಿಯನ್ನು ಪರೀಕ್ಷಿಸಿ ಆರೋಪಿಯು ನಿಷೇದಿತ ಮಾದಕ ದ್ರವ್ಯ ಗಾಂಜಾ ಸೇವನೆಯನ್ನು ಮಾಡಿರುವುದನ್ನು ದೃಡಪಡಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 56/2022 ಕಲಂ: 27(b) NDPS ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ದಿನಾಂಕ: 21/10/2022 ರಂದು ಪವನ್‌ ನಾಯಕ್‌, ಪಿಎಸ್‌ಐ, ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಇವರು ಮದ್ಯಾಹ್ನ ರೌಂಡ್ಸ್‌ ಕರ್ತವ್ಯದಲ್ಲಿರುವ ಸಮಯ ಕುಂದಾಪುರ ತಾಲೂಕು ಬಸ್ರೂರು ಗ್ರಾಮದ ಶಾರದಾ ಕಾಲೇಜಿನ ಬಳಿ ಓರ್ವ ವ್ಯಕ್ತಿಯು ನಿಷೇದಿತ ಮಾಧಕ ದ್ರವ್ಯ ಗಾಂಜಾವನ್ನು ಸೇವಿಸಿ ಓಡಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ಆರೋಪಿ ಗೌತಮ @ ಬುದ್ದ (26) ಎಂಬಾತನನ್ನು ವಿಚಾರಿಸಿ ಆರೋಪಿಯನ್ನು ಗಾಂಜಾ ಸೇವಿಸಿರುವ ಬಗ್ಗೆ ದೃಢ ಪಡಿಸುವ ಬಗ್ಗೆ ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ವೈದ್ಯಾಧಿಕಾರಿವರ ಮುಂದೆ ಹಾಜರುಪಡಿಸಿದ್ದು ವೈದ್ಯಾಧಿಕಾರಿಯವರು ಆರೋಪಿಯನ್ನು ಪರೀಕ್ಷಿಸಿ ಆರೋಪಿಯು ನಿಷೇದಿತ ಮಾದಕ ದ್ರವ್ಯ ಗಾಂಜಾ ಸೇವನೆಯನ್ನು ಮಾಡಿರುವುದನ್ನು ದೃಡಪಡಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 57/2022 ಕಲಂ: 27(b) NDPS ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ : ದಿನಾಂಕ 21/10/2022 ರಂದು ಪವನ್‌ ನಾಯಕ್‌, ಪಿಎಸ್‌ಐ, ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಇವರು ಸಂಜೆ ರೌಂಡ್ಸ್‌ ಕರ್ತವ್ಯದಲ್ಲಿರುವ ಸಮಯ ಕುಂದಾಪುರ ತಾಲೂಕು ಕಟ್‌ಬೆಲ್ತೂರು ಗ್ರಾಮದ ಶ್ರೀ ಭದ್ರ ಮಹಾಕಾಳಿ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿರುವ ರಿಕ್ಷಾ ನಿಲ್ದಾಣದ ಬಳಿ ಓರ್ವ ವ್ಯಕ್ತಿಯು ನಿಷೇದಿತ ಮಾಧಕ ದ್ರವ್ಯ ಗಾಂಜಾವನ್ನು ಸೇವಿಸಿ ಓಡಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ಆರೋಪಿ ಪ್ರವೀಣ (26) ಎಂಬಾತನನ್ನು ವಿಚಾರಿಸಿ ಆರೋಪಿಯನ್ನು ಗಾಂಜಾ ಸೇವಿಸಿರುವ ಬಗ್ಗೆ ದೃಢ ಪಡಿಸುವ ಬಗ್ಗೆ ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ವೈದ್ಯಾಧಿಕಾರಿವರ ಮುಂದೆ ಹಾಜರುಪಡಿಸಿದ್ದು ವೈದ್ಯಾಧಿಕಾರಿಯವರು ಆರೋಪಿಯನ್ನು ಪರೀಕ್ಷಿಸಿ ಆರೋಪಿಯು ನಿಷೇದಿತ ಮಾದಕ ದ್ರವ್ಯ ಗಾಂಜಾ ಸೇವನೆಯನ್ನು ಮಾಡಿರುವುದನ್ನು ದೃಡಪಡಿಸಿರುತ್ತಾರೆ . ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 58/2022 ಕಲಂ: 27(b) NDPS ACT ರಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ : ದಿನಾಂಕ: 21/10/2022 ರಂದು ಪವನ್‌ ನಾಯಕ್‌, ಪಿಎಸ್‌ಐ, ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಇವರು ಸಂಜೆ ರೌಂಡ್ಸ್‌ ಕರ್ತವ್ಯದಲ್ಲಿರುವ ಸಮಯ ಕುಂದಾಪುರ ತಾಲೂಕು ಕಾವ್ರಾಡಿ ಗ್ರಾಮದ ದೂಪದಕಟ್ಟೆ ಬಳಿ ಇರುವ ರಿಕ್ಷಾ ನಿಲ್ದಾಣದ ಬಳಿ ಓರ್ವ ವ್ಯಕ್ತಿಯು ನಿಷೇದಿತ ಮಾಧಕ ದ್ರವ್ಯ ಗಾಂಜಾವನ್ನು ಸೇವಿಸಿ ಓಡಾಡುತ್ತಿರುವ ಬಗ್ಗೆ ಮಾಹಿತಿ ಬಂದ ಮೇರೆಗೆ ಸ್ಥಳಕ್ಕೆ ಹೋಗಿ ಆರೋಪಿ ಎಮ್‌.ಜಿ ನಿದೀಶ್‌ (20) ಎಂಬಾತನನ್ನು ವಿಚಾರಿಸಿ ಆರೋಪಿಯನ್ನು ಗಾಂಜಾ ಸೇವಿಸಿರುವ ಬಗ್ಗೆ ದೃಢ ಪಡಿಸುವ ಬಗ್ಗೆ ಕುಂದಾಪುರ ಶ್ರೀ ಮಾತಾ ಆಸ್ಪತ್ರೆಯ ವೈದ್ಯಾಧಿಕಾರಿವರ ಮುಂದೆ ಹಾಜರುಪಡಿಸಿದ್ದು ವೈದ್ಯಾಧಿಕಾರಿಯವರು ಆರೋಪಿಯನ್ನು ಪರೀಕ್ಷಿಸಿ ಆರೋಪಿಯು ನಿಷೇದಿತ ಮಾದಕ ದ್ರವ್ಯ ಗಾಂಜಾ ಸೇವನೆಯನ್ನು ಮಾಡಿರುವುದನ್ನು ದೃಡಪಡಿಸಿರುತ್ತಾರೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 59/2022 ಕಲಂ: 27(b) NDPS ACT ರಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 22-10-2022 06:34 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080