ಅಭಿಪ್ರಾಯ / ಸಲಹೆಗಳು

ಕೊಲೆ ಪ್ರಕರಣ

 • ಹಿರಿಯಡ್ಕ: ದಿನಾಂಕ 14/09/2022  ರಂದು ಪಿರ್ಯಾದಿದಾರರಾದ ಸಂಗೀತ ಸಾಲ್ಯಾನ್ (52), ಗಂಡ: ಕೃಷ್ಣ ಸಾಲ್ಯಾನ್, ವಾಸ: ಸಿ-116, ಶ್ರೀ ದುರ್ಗಾ ನಿಲಯ, ಪಡುಕಟ್ಟೆ ದರ್ಖಾಸು, ಬಜೆ, ಕುಕ್ಕೆಹಳ್ಳಿ ಗ್ರಾಮ ಮತ್ತು ಅಂಚೆ ಉಡುಪಿ ತಾಲೂಕು, ಉಡುಪಿ ಜಿಲ್ಲೆ , ಉಡುಪಿ ಇವರ ಅಣ್ಣನ ಮಗ ಕೃತಿಕ್ ಜೆ ಸಾಲಿಯಾನ್(22)  ನೇಣು  ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡ ಬಗ್ಗೆ  ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ  ಯುಡಿಅರ್ ನಂಬ್ರ 36/2022 ಕಲಂ: 174 ಸಿ.ಅರ್‌.ಪಿ.ಸಿಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ. ದಿನಾಂಕ 18/09/2022 ರಂದು ಮೃತ ಕೃತಿಕನ ಸೋದರತ್ತೆ ಸಂಗೀತಾ ಸಾಲಿಯಾನ್ ಎಂಬುವವರು ಕೃತಿಕ್ ಜೆ ಸಾಲಿಯಾನ್ ಈತನ ಮರಣದ ಬಗ್ಗೆ ದಿನೇಶ್ ಸಫಲಿಗ ಎಂಬುವವರ ಮೇಲೆ ಸಂಶಯ ವ್ಯಕ್ತಪಡಿಸಿ ಮಾನ್ಯ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರವ ರಿಗೆ ದೂರು ನೀಡಿದ್ದು, ಈ ದಿನ ದಿನಾಂಕ 21/10/2022 ರಂದು ದಿನೇಶ ಸಫಲಿಗರನ್ನು ಠಾಣೆಗೆ ಕರೆಯಿಸಿ ದೂರುದಾರರ ಸಮಕ್ಷಮದಲ್ಲಿ ವಿಚಾರಣೆಗೆ ಒಳಪಡಿಸಿದಾಗ  ದಿನೇಶ್ ಸಫಲಿಗನು ಕೃತಿಕಾನಿಂದ ಸುಮಾರು 13 ಲಕ್ಷಕ್ಕಿಂತ ಜಾಸ್ತಿ ಹಣವನ್ನು ಯಾವುದೇ ದಾಖಲೆ ಇಲ್ಲದೆ ಪಡೆದುಕೊಂಡಿದ್ದು ಈ ಹಣವನ್ನು ಹಿಂದಿರುಗಿಸದೇ ವಂಚಿಸುವ ಉದ್ದೇಶದಿಂದ ಕೃತಿಕನನ್ನು ಕೊಲೆ ಮಾಡುವ ಸಂಚು ಮಾಡಿ ಕೃತಿಕನ ಮನೋದೌರ್ಬಲ್ಯವನ್ನು ಉಪಯೋಗಿಸಿಕೊಂಡು ಕೃತಿಕನ ಕೈ ಬರಹದಲ್ಲಿ ಯಾರೋ ಶಾರದ ಎಂಬ ಹೆಂಗಸಿನ ಹೆಸರಿನಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ರ ಬರೆಯಿಸಿದ್ದಲ್ಲದೆ, ಅತ್ಮಹತ್ಯೆಯ ಅಣಕು ವಿಡಿಯೋವನ್ನು ಮಾಡಿ ಆ ಹೆಂಗಸಿಗೆ ಕಳುಹಿಸಿದರೆ ಆಕೆಯು ನಿನ್ನನ್ನು ಖಂಡಿತ ಒಪ್ಪಿಕೊಳ್ಳುತ್ತಾಳೆ ಎಂದು ನಂಬಿಸಿ, ದಿನಾಂಕ 14/09/2022  ರಂದು ಜನ ಸಂಚಾರ ಇಲ್ಲದ ಬೆಳಿಗ್ಗೆ 4:45  ರ ಸಮಯಕ್ಕೆ ಮನೆಯ ಹತ್ತಿರದ ಹಾಡಿ ಸ್ಥಳಕ್ಕೆ ಬರ ಮಾಡಿಕೊಂಡು ದಿನೇಶ ಸಫಲಿಗನೇ ಕುಣಿಕೆ ಹಗ್ಗವನ್ನು ದೂಪದ ಮರದ ಕೊಂಬೆಗೆ ಕಟ್ಟಿ ಕುಣಿಕೆಯನ್ನು ಕೃತಿಕನ ಕುತ್ತಿಗೆಗೆ ಹಾಕಿಕೊಳ್ಳುವಂತೆ ತಿಳಿಸಿ ಕುಣಿಕೆ ಎತ್ತರದಲ್ಲಿ ಇದ್ದುದರಿಂದ ಕೃತಿಕನ ಕಾಲಿನ ಬಳಿ ಒಂದು ಶಿಲೆಕಲ್ಲನ್ನು ಇಟ್ಟು ಅದರ ಮೇಲೆ ಹತ್ತಿಸಿ, ಕೃತಿಕನನ್ನು ಎತ್ತಿ ಕುತ್ತಿಗೆಗೆ ಕುಣಿಕೆಯನ್ನು ಹಾಕಿಕೊಳ್ಳುವಂತೆ ಮಾಡಿ ಕೃತಿಕನನ್ನು ಎತ್ತಿದ ಕೈಯನ್ನು ತಾನು ಒಮ್ಮೇಲೆ ಬಿಟ್ಟಿರುತ್ತಾನೆ. ಪರಿಣಾಮವಾಗಿ ಕುತ್ತಿಗೆಗೆ ಕುಣಿಕೆಯ ಹಗ್ಗ ಬಿಗಿದುಕೊಂಡಿದ್ದು ಹಗ್ಗದಲ್ಲಿ ಕೈಯಿಂದ ನೇತಾಡುತ್ತಿದ್ದ ಕೃತಿಕಾನು, ದಿನೇಶ ಸಫಲಿಗನಲ್ಲಿ, " ಕುತ್ತಿಗೆ ಬಿಗಿಯುತ್ತಿದೆ. ಉಸಿರುಗಟ್ಟುತ್ತಿದೆ. ತನ್ನನ್ನು ಎತ್ತು. ನಂದು ಮುಗೀತು " ಎಂದು ಅಂಗಲಾಚಿದರೂ ದಿನೇಶ ಸಫಲಿಗನು ಕೃತಿಕನು ನಿಂತಿದ್ದ ಕಾಲಿನ ಬುಡದ ಕಲ್ಲನ್ನು ಜಾರಿಸಿ ತಪ್ಪಿಸಿದ್ದು ಆತನ ಮೊಬೈಲ್ ಪೋನನ್ನು ತೆಗೆದುಕೊಂಡು ಬಂದು ಬಜೆ ಡ್ಯಾಂ ಬಳಿ ಬಂದು ನೀರಿಗೆ ಎಸೆದಿರುತ್ತಾನೆ.  ದಿನೇಶ ಸಫಲಿಗನು ಮತ್ತೆ ಕೃತಿಕನನ್ನು ಕೊಲೆ ಮಾಡಿದ ಸ್ಥಳಕ್ಕೆ ಹೋಗಿ ಕೃತಿಕನು ಮೃತಪಟ್ಟಿರುವುದನ್ನು ಖಚಿತಪಡಿಸಿಕೊಂಡಿರುವುದಾಗಿ ತಪ್ಪೊಪ್ಪಿಕೊಂಡಿದ್ದು  ದಿನೇಶ ಸಫಲಿಗನು ಕೃತಿಕನಿಂದ ಪಡೆದ ಹಣವನ್ನು ವಂಚಿಸುವ ದುರದ್ದೇಶದಿಂದ ಈ ರೀತಿಯಾಗಿ ಪೂರ್ವ ಯೋಜನೆ ನಡೆಸಿ ನಂಬಿಸಿ ಮೋಸದಿಂದ ಕೊಲೆ ಮಾಡಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 67/2022 ಕಲಂ: 302, 201 ಐಪಿಸಿಯಂತೆ ಪ್ರಕರಣದ ದಾಖಲಾಗಿರುತ್ತದೆ .

ಕಳವು ಪ್ರಕರಣ

 • ಅಮಾಸೆಬೈಲು: ದಿನಾಂಕ 21/10/2022 ರಂದು ಪಿರ್ಯಾದಿದಾರರಾದ ಜಯಲಕ್ಷ್ಮಿ ನಾಯಕ್ (45),ಗಂಡ:ಕೃಷ್ಣ ನಾಯಕ್,ವಾಸ: ಅಡಿಗಾಳ ಬೆಟ್ಟು,5 ಸೆಂಟ್ಸ್ ಶೇಡಿಮನೆ ಗ್ರಾಮ,ಹೆಬ್ರಿ ತಾಲೂಕು,ಉಡುಪಿ ಜಿಲ್ಲೆ ಇವರು ಮಡಾಮಕ್ಕಿ ಗ್ರಾಮ ಪಂಚಾಯ್ತಿಯಲ್ಲಿ ಅಧ್ಯಕ್ಷೆಯಾಗಿ ಕಾರ್ಯ ನಿರ್ವಹಿಕೊಂಡಿದ್ದು, ದಿನಾಂಕ:21/10/2022 ರಂದು 10:50 ಗಂಟೆಗೆ ಮನೆಗೆ ಬೀಗ ಹಾಕಿ ಮಡಾಮಕ್ಕಿ ಗ್ರಾಮ ಪಂಚಾಯತ್ ಕಛೇರಿಗೆ ಹೋಗಿ 13:30 ಗಂಟೆಗೆ ಮನೆಗೆ ಬಂದು ನೋಡಲಾಗಿ,ಮನೆಯ ಎದುರಿನ ಬಾಗಿಲಿಗೆ ಹಾಕಿದ ಬೀಗ ಡ್ಯಾಮೇಜ್ ಆಗಿದ್ದು,ನಂತರ ಮನೆಯ ಹಿಂದಿನ ಹಿತ್ತಲಿಗೆ ಹೋಗಿ ನೋಡಲಾಗಿ ಹಿಂಬದಿಯ ಬಾಗಿಲು ತೆರೆದಿದ್ದು,ಒಳಗಡೆ  ಗೋದ್ರೇಜ್ ಬೀರು ಓಪನ್ ಆಗಿದ್ದು,ಬಟ್ಟೆಗಳು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ಕಂಡು ಬಂದಿರುತ್ತದೆ.ಗೋದ್ರೇಜ್ ನಲ್ಲಿರುವ ವಿವೋ ಕಂಪನಿಯ ಮೊಬೈಲ್ ಹಾಗೂ 4 ಗ್ರಾಂ ನ 02 ಬಂಗಾರದ ಉಂಗುರ ಹಾಗೂ 45,000/- ರೂಪಾಯಿ ನಗದು ಹಣವನ್ನು ಯಾರೋ ಕಳ್ಳರು ಒಳಗೆ ಬಂದು ಕಳುವು ಮಾಡಿಕೊಂಡು ಹೋಗಿರುತ್ತಾರೆ. ಕಳುವಾದ ವಸ್ತುಗಳ ಒಟ್ಟು ಮೌಲ್ಯ 90,000/- ಆಗಿರುತ್ತದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 24/2022 ಕಲಂ: 454, 380 ಐಪಿಸಿಯಂತೆ ಪ್ರಕರಣದ ದಾಖಲಾಗಿರುತ್ತದೆ .
 • ಮಣಿಪಾಲ: ಪಿರ್ಯಾದಿದಾರರಾದ ರವಿಚಂದ್ರ ಮೂಲ್ಯ (34), ತಂದೆ: ತಿಮ್ಮಪ್ಪ ಮೂಲ್ಯ, ವಿಳಾಸ: 2-49/2 ಶ್ರೀ ಕೃಷ್ಣಾ ಕೃಪಾ ಕಡಿತಮನೆ  82 ಕುಡಿ ಗ್ರಾಮ ಕುಡಿಬೆಟ್ಟು ಪಂಚಾಯತ್ ಉಡುಪಿ ಜಿಲ್ಲೆ ಇವರು  ದಿನಾಂಕ 21/10/2022 ರಂದು ಬೆಳಗಿನ ಜಾವ 01:10 ಗಂಟೆಗೆ ಪಿರ್ಯಾದಿದಾರರು ತನ್ನ KA-20-H-5865 ಮೋಟಾರ್ ಸೈಕಲ್ ನ್ನು ಪರ್ಕಳದ ದಯಾ ಎಂಟರ್ ಪ್ರೈಸಸ್ ಅಂಗಡಿಯ ಎದುರುಗಡೆ ನಿಲ್ಲಿಸಿ  ಕೆಲಸಕ್ಕೆಂದು ಬೇರೆ ವಾಹನದಲ್ಲಿ ತೆರಳಿದ್ದು ನಂತರ  ಅದೇ ದಿನ ದಿನಾಂಕ 21/10/2022 ರಂದು ಬೆಳಿಗ್ಗೆ 09:30 ಗಂಟೆಗೆ ಕೆಲಸ ಮುಗಿಸಿಕೊಂಡು ಮೋಟಾರ್ ಸೈಕಲ್ ನಿಲ್ಲಿಸಿದ ಸ್ಥಳಕ್ಕೆ ಬಂದು ನೋಡಿದಾಗ ಪಿರ್ಯಾದಿದಾರರ ಮೋಟಾರ್ ಸೈಕಲ್ ಅಲ್ಲಿ ಇಲ್ಲದೇ ಇದ್ದು ದಿನಾಂಕ 21/10/2022 ರ ಬೆಳಗಿನ ಜಾವ  01:10 ಗಂಟೆಗೆ ಯಿಂದ ದಿನಾಂಕ 21/10/2022 ರ ಬೆಳಿಗ್ಗೆ 09:30 ಗಂಟೆಯ ಮಧ್ಯಾವಧಿಯಲ್ಲಿ ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಮೋಟಾರ್‌ಸೈಕಲ್‌ನ ಬೆಲೆ 5000/- ಆಗಿರುತ್ತದೆ . ಈ ಬಗ್ಗೆ ಮಣಿಪಾಲ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 194/2022  ಕಲಂ: 379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .
 • ಮಲ್ಪೆ: ಪಿರ್ಯಾದಿದಾರರಾದ ಕೃಷ್ಣಪ್ಪ ನೆರ್ಗಿ (65), ತಂದೆ: ಬಡಿಕಿಲಾ, ವಾಸ: ನೆರ್ಗಿ , ಮಲ್ಪೆ ಕೊಡವೂರು ಗ್ರಾಮ ಇವರು   ಕೊಡವೂರು  ಶ್ರೀ ಬಬ್ಬು ದೈವಸ್ಥಾನದ ಗುರಿಕಾರನಾಗಿದ್ದು , ದಿನಾಂಕ 18/10/2022  ರಂದು ಮಂಗಳವಾರ  ಸಂಕ್ರಮಣ  ಇದ್ದ  ಕಾರಣ  ಬೆಳಿಗ್ಗೆ ಅರ್ಚಕರು  7:00 ಗಂಟೆಗೆ  ದೈವಸ್ಥಾನ ದ  ಬಾಗಿಲು  ತೆರೆದು ದೇವರಿಗೆ  ವಿಶೇಷ  ಪೂಜೆ  ಸಲ್ಲಿಸಿ  ಬೆಳಿಗ್ಗೆ 9:00 ಗಂಟೆಗೆ ಸಮಯಕ್ಕೆ  ದೈವಸ್ಥಾನಕ್ಕೆ ಬಾಗಿಲು ಹಾಕಿ  ಬೀಗ ಹಾಕಿ   ಭದ್ರಪಡಿಸಿ  ಮನೆಗೆ ಹೋಗಿರುತ್ತಾರೆ. ಅರ್ಚಕರು   ದೈವಸ್ಥಾನದಲ್ಲಿ ಏನಾದರೂ ವಿಶೇಷತೆ ಇದ್ದರೆ ಪಿರ್ಯಾದಿದಾರರಿಗೆ ಕರೆ ಮಾಡಿ ವಿಷಯ ತಿಳಿಸುತ್ತಿದ್ದು, ಎಂದಿನಂತೆ  ದಿನಾಂಕ 21/10/2022  ರಂದು ಬೆಳಿಗ್ಗೆ  9:00  ಗಂಟೆಗೆ  ದೈವಸ್ಥಾನದ ಅರ್ಚಕರು  ದೈವಸ್ಥಾನದ ಬಳಿ ಬಂದು ನೋಡಿದಾಗ  ದೈವಸ್ಥಾನದ ಸಮುದಾಯ ಭವನದ ಸೆಟರ್ ಅರ್ಧ  ತೆರೆದಿದ್ದನ್ನು  ಕಂಡು   ,ಅರ್ಚಕರು ಪಿರ್ಯಾದಿದಾರರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದು ,  ಪಿರ್ಯಾದಿದಾರರು  ಊರಿನ ಸದಸ್ಯರಿಗೆ ವಿಷಯ ತಿಳಿಸಿ , ಅವರೊಂದಿಗೆ  ದೈವಸ್ಥಾನಕ್ಕೆ ಬಂದು  ನೋಡಲಾಗಿ  ಸಮುದಾಯ ಭವನದ ಎರಡು ಕೊಠಡಿಯ ಚಿಲಕವನ್ನು  ಯಾವುದೋ  ಆಯುಧದಿಂದ ಮೀಟಿ  ತೆರೆದು ಗೊಡ್ರೇಜ್ ಕಪಾಟಿನ  ಬೀಗವನ್ನು  ಮುರಿದು  ಲಾಕರಿನ  ಒಳಗೆ ಇದ್ದ  ಭಕ್ತಾಧಿಗಳಿಂದ  ಸಂಗ್ರಹವಾದ  ರೂಪಾಯಿ ರೂಪಾಯಿ 4,250/- ಹಣವು ಕಳವಾಗಿರುವುದು ಕಂಡು ಬಂದಿರುತ್ತದೆ.  ಯಾರೋ ಕಳ್ಳರು ದಿನಾಂಕ 19/10/2022  ರಿಂದ 21/10/2022 ರಂದು ಬೆಳಿಗ್ಗೆ 9:00 ಗಂಟೆಯ  ಮಧ್ಯಾವಧಿಯಲ್ಲಿ ದೈವಸ್ಥಾನದ ಸಮುದಾಯ ಭವನದ ಎರಡು ಕೊಠಡಿಯ ಚಿಲಕವನ್ನು  ಯಾವುದೋ  ಆಯುಧದಿಂದ ಮೀಟಿ  ಮುರಿದು ರೂ 4250 ಹಣವನ್ನು ಕಳವು ಮಾಡಿಕೊಂಡು ಹೋಗಿರುವುದಾಗಿದೆ . ಈ ಬಗ್ಗೆ ಮಲ್ಪೆ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 86/2022 ಕಲಂ: 457 , 454, 380 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .

ಗಂಡಸು ಕಾಣೆ ಪ್ರಕರಣ

 • ಪಡುಬಿದ್ರಿ: ಪಿರ್ಯಾದಿದಾರರಾದ ಸಂತೋಷ್ ಡಿ (24), ತಂದೆ: ದಿನೇಶ್ ಎಸ್. ವಾಸ: ಬಜೆಗುಂಡಿ ಕುಸುಬೂರು ಅಂಚೆ, ಬಜೆಗುಂಡಿ ಗ್ರಾಮ, ಸೋಮವಾರಪೇಟೆ ತಾಲೂಕು ಕೊಡಗು ಜಿಲ್ಲೆ ಇವರು   ಬೆಂಗಳೂರಿನ HBRL Lay Out ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಪಿರ್ಯಾದಿದಾರರ ತಂದೆ ದಿನೇಶ್ ಎಸ್ ಎಂಬುವವರು ಕಳೆದ 2 ವರ್ಷಗಳಿಂದ ಬಡಾ ಎರ್ಮಾಳ್ ಗ್ರಾಮದ ಬುದಗಿ ಪೆಟ್ರೋಲ್ ಬಂಕಿನಲ್ಲಿ ಹೌಸ್ ಕೀಪಿಂಗ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 13/07/2022 ರಂದು ಮಧ್ಯಾಹ್ನ13:30 ಗಂಟೆಗೆ ಬಂಕಿನ ಅಕೌಂಟೆಟ್ ಬಳಿ ತನಗೆ ಅನಾರೋಗ್ಯದ ನಿಮಿತ್ತ ಆಸ್ಪತ್ರೆಗೆ ಹೋಗಿ  ಬರುತ್ತೇನೆಂದು ಹೇಳಿ 2000/- ರೂಪಾಯಿ ಪಡೆದುಕೊಂಡು ಹೋದವರು ವಾಪಾಸ್ಸು ಬಂದಿರುವುದಿಲ್ಲ. ಪಿರ್ಯಾದಿದಾರರ ತಂದೆ ಮದ್ಯಪಾನ ಮಾಡುವ ಚಟ ಹೊಂದಿದ್ದು, ತುಂಬಾ ಸಲ ಮನೆಯಲ್ಲಿ ಹೇಳದೇ ಕೇಳದೇ ಬೇರೆ ಊರುಗಳಿಗೆ ಹೋಗುತ್ತಿದ್ದು, 15-20 ದಿವಸಗಳ ನಂತ್ರ ಮನೆಗೆ ವಾಪಸ್ಸು ಬರುತ್ತಿದ್ದರು. ಅದೇ ರೀತಿ ಪಿರ್ಯಾದಿದಾರರ ತಂದೆ ಎಲ್ಲಿಗೂ ಹೋಗಿರಬುಹುದೆಂದುಕೊಂಡು ಸಂಬಂಧಿಕರ ಮನೆಗಳಲ್ಲಿ, ಪರಿಚಿತರ ಮನೆ ಕಡೆಗಳಲ್ಲಿ ಹುಡುಕಾಡಿದ್ದು ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಪಡುಬಿದ್ರಿ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 132/2022, ಕಲಂ: ಗಂಡಸು ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

 • ಬೈಂದೂರು: ಪಿರ್ಯಾದಿದಾರರಾದ ಎನ್. ರಾಮ  (56 ), ಶಾಖಾ ವ್ಯವಸ್ಥಾಪಕರು,  ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ. ಕುಂದಾಪುರ ಶಾಖೆ: ಬೈಂದೂರು ಯಡ್ತರೆ ಗ್ರಾಮ ಬೈಂದೂರು ತಾಲೂಕು ಇವರು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ನಿ. ಕುಂದಾಪುರ, ಬೈಂದೂರು  ಶಾಖೆಯಲ್ಲಿ   ಶಾಖಾ ವ್ಯವಸ್ಥಾಪಕರಾಗಿ ಕೆಲಸ ಮಾಡಿಕೊಂಡಿದ್ದು. ದಿನಾಂಕ 20/10/2022 ರಂದು ಸಂಜೆ 5:30 ಗಂಟೆಗೆ ಕೆಲಸ ಮುಗಿಸಿ ಅಕೌಂಟೆಂಟ್ ಅರುಣ್ ಕುಮಾರ್ ಸೇರಿಕೊಂಡು ಬಾಗಿಲುಗಳನ್ನು ಭದ್ರಪಡಿಸಿ ಬೀಗ ಹಾಕಿ ಹೋಗಿದ್ದು . ದಿನಾಂಕ 21/10/2022 ರಂದು ಬೆಳಿಗ್ಗೆ 9:30 ಗಂಟೆಗೆ ಬ್ಯಾಂಕ್ ಗೆ ಬಂದು ಬ್ಯಾಂಕ್ ನ ಎದುರಿನ ಶೆಟರ್ ಗೆ ಹಾಕಿದ ಬೀಗವನ್ನು ತೆರೆದು ಒಳಗೆ ಹೋದಾಗ ಕಿಟಕಿಗಳಿಗೆ ಕಪ್ಪು ಬಣ್ಣದ ಪ್ಲಾಸ್ಟಿಕ್ ಟಾರ್ಪಲ್ ಹಾಕಿರುವುದು  ಹಾಗೂ ಅಲ್ಲಲ್ಲಿ ಬಟ್ಟೆಗಳನ್ನು ಹಾಕಿರುವುದು ಕಂಡು ಬಂದಿದ್ದು, ಪರಿಶೀಲಿಸಿದಾಗ ಬ್ಯಾಂಕ್ ನ ಕ್ಯಾಶ್ ಕೌಂಟರ್ ಬಳಿ ಇರುವ ಕಿಟಕಿಯ ಬಾಗಿಲನ್ನು ತೆರೆದು ಕಿಟಕಿಯ ಕಬ್ಬಿಣದ ಸರಳುಗಳನ್ನು ಕತ್ತರಿಸಿರುವುದು ಮತ್ತು  ಲಾಕರ್ ಬಳಿ ರೂಂ ಬಳಿ ವೆಲ್ಡಿಂಗ್ ಮಾಡಲು ಉಪಯೋಗಿಸುವ ಕಡ್ಡಿಗಳ ಪ್ಯಾಕೇಟ್ ಇದ್ದು, ಲಾಕರ್ ನ್ನು ತೆರೆಯಲು ವೆಲ್ಡಿಂಗ್ ನಿಂದ ಪ್ರಯತ್ನಿಸಿರುವುದು ಕಂಡು ಬಂದಿರುತ್ತದೆ. ಬ್ಯಾಂಕ್ ನ ಒಳಗೆ ಸಿಸಿ ಕೆಮಾರ ಅಳವಡಿಸಿದ್ದು, ಅದರ ವೈರ್ ಗಳನ್ನು ಹಾಗೂ ಸೈರನ್ ವೈರ್ ಗಳನ್ನು ಕೂಡಾ ಕತ್ತರಿಸಿ ಹಾಕಿರುತ್ತಾರೆ. ನಂತರ ಬ್ಯಾಂಕ್ ನ ಹೊರಗೆ  ಕಿಟಕಿಯನ್ನು ಕತ್ತರಿಸಿದ ಸ್ಥಳದಲ್ಲಿ ವೆಲ್ಡಿಂಗ್ ಮಾಡಲು ಉಪಯೋಗಿಸುವ ಹೋಲ್ಡರ್ ಹಾಗೂ ಹೆಲ್ಮೆಟ್ ನ್ನು ಬಿಟ್ಟು ಹೋಗಿರುವುದು ಕಂಡು ಬಂದಿದ್ದು ಯಾರೋ ಕಳ್ಳರು ದಿನಾಂಕ 20/10/2022 ರಂದು ಸಂಜೆ 5:30 ಗಂಟೆಯಿಂದ ದಿನಾಂಕ 21/10/2022 ರಂದು ಬೆಳಿಗ್ಗೆ 9:30 ಗಂಟೆಯ ಮಧ್ಯಾವಧಿಯಲ್ಲಿ ಯಾವುದೋ ಆಯುಧದಿಂದ ಬ್ಯಾಂಕ್ ನ ಉತ್ತರ ಬದಿಯ ಕಿಟಕಿಯ ಸರಳುಗಳನ್ನು ಕತ್ತರಿಸಿ ಒಳಪ್ರವೇಶಿಸಿ ಕಿಟಕಿಗಳಿಗೆ ಕಪ್ಪು ಬಣ್ಣದ ಪ್ಲಾಸ್ಟಿಕ್ ಟಾರ್ಪಲ ನ್ನು  ಹಾಕಿ, ವೆಲ್ಡಿಂಗ್ ಮೆಷಿನ್ ನಿಂದ ಲಾಕರ್ ನ್ನು ತೆರೆಯಲು ಪ್ರಯತ್ನಿಸಿರುತ್ತಾರೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 212/2022 ಕಲಂ: 457, 380, 511 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ .    
 • ಕುಂದಾಪುರ: ಪಿರ್ಯಾದಿದಾರರಾದ ಅನುಶ (27), ತಂದೆ: ಮಂಜುನಾಥ ಹರಿಜನ ವಾಸ: ಜನತಾ ಕಾಲೋನಿ, ವಕ್ವಾಡಿ , ಗ್ರಾಮ, ಕುಂದಾಪುರ ಇವರು ಕೋಟೇಶ್ವರ  ಎನ್ ಆರ್ ಆಚಾರ್ಯ ಆಸ್ಪತ್ರೆ ಯಲ್ಲಿ ಇನ್ಸುರೆನ್ಸ  ಸೆಕ್ಷನ್ ನಲ್ಲಿ  ಕೆಲಸಮಾಡಿಕೊಂಡಿದ್ದು  ಪರಿಚಯದ ಪ್ರಕಾಶ ಆಚಾರಿ ಪಿರ್ಯಾದಿದಾರರು ದಿನಾಂಕ 21/10/2022 ರಂದು ಕೆಲಸ ಮುಗಿಸಿ ಸಂಜೆ 6:30 ಗಂಟೆಗೆ  ಮನೆಗೆ  ಮಹಾದೇವಿ ಬಸ್ಸಿನಲ್ಲಿ  ಬರುವಾಗ ವಕ್ವಾಡಿ ಸಮೀಪ ತಲುಪುತ್ತಿರುವಾಗ ಬಸ್ಸಿನಲ್ಲಿ  ಪಿರ್ಯಾದಿದಾರರ ಬಳಿ ನಿಂತಿದ್ದ ಪ್ರಕಾಶ ಆಚಾರಿ  ಪಿರ್ಯಾದಿದಾರರಿಗೆ ತೊಂದರೆ ಮಾಡಿದ್ದು, ಬಸ್ಸಿನಲ್ಲಿ ಇದನ್ನು ನೋಡಿದ ಪಿರ್ಯಾದಿದಾರರ ತಮ್ಮನ ಸ್ನೇಹಿತ  ಸಿದ್ದೀಶನು ಜೋರು ಮಾಡಿರುತ್ತಾನೆ. ಬಳಿಕ ಬಸ್ಸಿನಿಂದ ಇಳಿದು  ಮನೆಗೆ ಹೋಗಿ ತಮ್ಮ ಕಾಂತೇಶನಿಗೆ ವಿಚಾರ ತಿಳಿಸಿದಾಗ  ತಮ್ಮ ಕಾಂತೇಶ ಮತ್ತು ಸಿದ್ದೀಶ ಕಳ್ಳಿಗುಡ್ಡೆ  ಪ್ರಕಾಶ ಆಚಾರಿ   ಮನೆ ಬಳಿ  ಸಂಜೆ 7:45 ಗಂಟೆಗೆ ಹೋಗಿ  ಪಿರ್ಯಾದಿದಾರರಿಗೆ  ತೊಂದರೆ  ಮಾಡಿದ ಬಗ್ಗೆ ಕೇಳಿದಾಗ ಪ್ರಕಾಶ ಆಚಾರಿ   ಮತ್ತು ಅವರ  ತಂದೆ ಶ್ರೀನಿವಾಸ  ಆಚಾರಿ  ಪಿರ್ಯಾದಿದಾರರ  ತಮ್ಮ ಕಾಂತೇಶನಿಗೆ ಕೈಯಿಂದ ಹೊಡೆದು ಅವಾಚ್ಯ ಶಬ್ದದಿಂದ ಬೈದು  ಜೀವ ಸಹಿತ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿದ್ದಲ್ಲದೇ  ಮನೆಯೊಳಗೆ  ಅಕ್ರಮವಾಗಿ ಕೂಡಿ ಹಾಕಿದ್ದು ಪಿರ್ಯಾದಿದಾರರು  ಹಾಗೂ ಅವರ  ಅಣ್ಣ ಹರೀಶ ಮತ್ತು ಆತನ ಸ್ನೇಹಿತ  ಶರತ ರವರೊಂದಿಗೆ  ಹೋಗಿ ಕಾಂತೇಶ  ಕರೆದುಕೊಂಡು  ಬಂದಿದ್ದು  ಹಲ್ಲೆ ನೆಡೆಸಿದ್ದರಿಂದ ಕಾಂತೇಶನಿಗೆ  ಕೈಗೆ ಗಾಯ ದೇಹದ ಬಾಗಗಳಿಗೂ  ನೋವು ಉಂಟಾಗಿದ್ದು  ಕುಂದಾಪುರ ಸರಕಾರಿ ಆಸ್ಪತ್ರೆ ಗೆ ಚಿಕಿತ್ಸೆ  ಬಗ್ಗೆ ಕರೆದುಕೊಂಡು  ಬಂದು ಒಳ ರೋಗಿಯಾಗಿ  ದಾಖಲು ಮಾಡಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 115/2022 354(a)(d), 323, 342, 504, 506 ಜೊತೆಗೆ  34 ಐಪಿಸಿ & ಕಲಂ: 3 (1) (r) (s),(w-1) 3(2) (v-a) SC/ST (POA) Act 1989 ರಂತೆ ಪ್ರಕರಣ ದಾಖಲಾಗಿರುತ್ತದೆ .     

ಇತ್ತೀಚಿನ ನವೀಕರಣ​ : 22-10-2022 09:57 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080