ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿದಾರರಾದ ಶಂಕರ ನಾಯ್ಕ (40), ತಂದೆ: ರಾಮ ನಾಯ್ಕ, ವಾಸ: ಜಂಬೂರು, ಸೈಬ್ರಕಟ್ಟೆ ಅಂಚೆ, ಶಿರಿಯಾರ ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಇವರು ದಿನಾಂಕ 20/10/2021 ರಂದು ಬೆಳಿಗ್ಗೆ ಅಚ್ಲಾಡಿ ಎಂಬಲ್ಲಿಗೆ ಕೆಲಸಕ್ಕೆ ಹೋಗಿದ್ದವರು ಸಂಜೆ ಕೆಲಸ ಮುಗಿಸಿ ವಾಪಾಸು ಅಚ್ಲಾಡಿಯಿಂದ ಮನೆಗೆ ನಡೆದುಕೊಂಡು ಹೋಗುತ್ತಿರುವಾಗ ಸಂಜೆ 5:30 ಗಂಟೆಗೆ ಶಿರಿಯಾರ ಗ್ರಾಮದ ಕಲ್ಮಾಡಿ ಎಂಬಲ್ಲಿ ಪಿರ್ಯಾದಿದಾರರ ಹಿಂದುಗಡೆಯಿಂದ ಸ್ಯಾಬ್ರಕಟ್ಟೆ ಕಡೆಯಿಂದ KA-20-EC-2980 ನೇ ಬಜಾಜ್‌ ಪಲ್ಸರ್‌ ಬೈಕ್‌ನ್ನು ಅದರ ಸವಾರ ಧನುಷ್‌ ಎಂಬಾತನು ಬೈಕ್‌ನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಯ ತೀರಾ ಬಲಬದಿಗೆ ಚಲಾಯಿಸಿ ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಿರ್ಯಾದಿದಾರರ ಹಿಂದಿನಿಂದ ಬಂದು ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರು  ರಸ್ತೆಯ ಬದಿಯಲ್ಲಿ ಬಿದ್ದಿದ್ದು, ಬಲ ಕಾಲಿನ ಮಂಡಿ ಮತ್ತು ಕೋಲು ಕಾಲು ಬಳಿ ತೀವ್ರ ಗಾಯ ಮತ್ತು ಬೆನ್ನಿನ ಎಡಬದಿಯಲ್ಲಿ ತರಚಿದ ರಕ್ತಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಉಡುಪಿ ಜಿಲ್ಲಾ ಅಜ್ಜರಕಾಡು ಸರಕಾರಿ ಆಸ್ಪತ್ರೆಗೆ ಒಳ ರೋಗಿಯಾಗಿ ದಾಖಲಾಗಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 181/2021 ಕಲಂ: 279,  338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಕಳವು ಪ್ರಕರಣ

  • ಕಾರ್ಕಳ: ದಿನಾಂಕ 21/10/2021 ರಂದು ಬೆಳಗ್ಗಿನ ಜಾವ 2:00 ಗಂಟೆಯಿಂದ 07:00 ಗಂಟೆಯ ಮಧ್ಯೆ ಕಾರ್ಕಳ ತಾಲೂಕು, ಬೆಳ್ಮಣ್ ಗ್ರಾಮದ ಬೆಳ್ಮಣ್ ಪೇಟೆಯಲ್ಲಿರುವ ಶ್ರೀ ಕೃಷ್ಣ ಪೆಟ್ರೋಲ್ ಪಂಪ್‌ನಲ್ಲಿ ಪಿರ್ಯದಿದಾರರಾದ ದೇವರಾಜ್ ಕೆ.ಎಲ್. (56), ತಂದೆ: ಕೆ. ಲಿಂಗೇ ಗೌಡ, ವಾಸ: ಕೊಳ್ಳೆಗನ ಹಳ್ಳಿ ಮತ್ತು ಅಂಚೆ, ಅರೋಹಳ್ಳಿ ಹೋಬಳಿ, ಪಿಲ್ಟರ್ ಟ್ಯಂಕ್ ಬಳಿ, ಕನಕಪುರ ತಾಲೂಕು, ರಾಮ ನಗರ ಜಿಲ್ಲೆ ಇವರು ನಿಲ್ಲಿಸಿದ್ದ ಟಿಪ್ಪರ್ ನಂಬ್ರ KA-42-A-6060 ನೇಯದರ  ಹಾಗೂ ಪೆಟ್ರೋಲ್ ಪಂಪ್ ನಲ್ಲಿ ನಿಲ್ಲಿಸಿದ್ದ ಟ್ರಾಕ್ಟರ್ ನಂಬ್ರ KA-17-T-B6796, ಟಿಪ್ಪರ್ ನಂಬ್ರ KA-46-5331, KA-20-C-6747, KA-20-B-7282, KA-19-C-0234, KA-20-AA-0121 ಹಾಗೂ KA-20-AA-8912  ನೇಯದರ ಒಟ್ಟು 10 ಬ್ಯಾಟರಿಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಬ್ಯಾಟರಿಗಳ  ಮೌಲ್ಯ 80,000/- ರೂಪಾಯಿ ಆಗಿರುತ್ತದೆ . ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಅಪರಾದ ಕ್ರಮಾಂಕ 124/2021 ಕಲಂ:379 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಲಚ್ಚು ಮರಾಠಿ (47), ತಂದೆ: ಪುಟ್ಟಯ್ಯ ಮರಾಠಿ, ವಾಸ: ಬಸ್ರಿ ಬೇರು ಕೋರಿಜೆಡ್ಡು, ಜಡ್ಕಲ್ ಗ್ರಾಮ, ಬೈಂದೂರು ತಾಲೂಕು ಇವರ ಮಗ ಪ್ರಶಾಂತ (19) ರವರು ಕುಂದಾಪುರ ನಂದಿನಿ ಹೋಟೆಲ್‌ನಲ್ಲಿ 3 ವರ್ಷಗಳಿಂದ ಕೆಲಸ ಮಾಡಿಕೊಂಡಿದ್ದು, ಕುಂದಾಪುರದ ಹರಿಪ್ರಸಾದ ಹೋಟೆಲಿನ ಮೇಲಿನ ಅಂತಸ್ತಿನಲ್ಲಿ ವಾಸ್ತವ್ಯ ಮಾಡಿಕೊಂಡಿದ್ದು. ದಿನಾಂಕ 21/10/2021 ರಂದು ಬೆಳಿಗ್ಗೆ 02:00 ಗಂಟೆಯಿಂದ 03:00 ಗಂಟೆಯ ಮದ್ಯಾವದಿಯಲ್ಲಿ ಪ್ರಶಾಂತನು ಹರಿಪ್ರಸಾದ ಹೋಟೆಲ್‌ನ ಆತನು ವಾಸ್ತವ್ಯವಿದ್ದ ರೂಮಿನ ಶೌಚಾಲಯದ ಹಿಂಬದಿ ಮಹಡಿಯ ಕಬ್ಬಿಣದ ಟ್ರಿಸ್‌ಗೆ ಬಟ್ಟೆಯಿಂದ ಕಟ್ಟಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ.  ಬಳಿಕ ಆತನ ಮೊಬೈಲ್ ಸ್ಟೇಟಸ್ ನೋಡಲಾಗಿ ಆತನು ‘’ಏನೂ ಇಲ್ಲದವನ ಮುಂದೆ ಎಲ್ಲ ಇದ್ದವನ ಆಟ’’ ಎಂದು ಬರೆದಿರುವುದು ಕಂಡುಬಂದಿದ್ದು ಆತನ ಆತ್ಮಹತ್ಯೆಯ ಬಗ್ಗೆ ಸಂಶಯವಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್‌ ಕ್ರಮಾಂಕ 40/2021 ಕಲಂ: 174(C) ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದಿದಾರರಾದ ವಿ ಚಂದ್ರಶೇಖರ ಶೆಟ್ಟಿಗಾರ (62), ತಂದೆ: ದಿ. ಬಸವ ಶೆಟ್ಟಿಗಾರ, ವಕ್ವಾಡಿ ಮುಖ್ಯ ರಸ್ತೆ, ವಕ್ವಾಡಿ ಗ್ರಾಮ ಮತ್ತು ಅಂಚೆ, ಕುಂದಾಪುರ ತಾಲೂಕು ಇವರ ತಾಯಿ ಪಾರ್ವತಿ ಶೆಟ್ಟಿಗಾರ (88) ಇವರೊಂದಿಗೆ ವಾಸವಾಗಿದ್ದು,  ದಿನಾಂಕ 21/10/2021 ರಂದು ಪಿರ್ಯಾದಿದಾರರು 09:30 ಗಂಟೆಗೆ ಅವರ ತಾಯಿಗೆ ಔಷಧಿ ತರಲು ಕೋಟೇಶ್ವರಕ್ಕೆ ಹೋಗಿದ್ದು 12:15ಕ್ಕೆ ವಾಪಾಸು ಮನೆಗೆ ಬಂದು ನೋಡಲಾಗಿ ಪಿರ್ಯಾದಿದಾರರ ತಾಯಿ ಮನೆಯಲ್ಲಿ ಇಲ್ಲದೇ ಇದ್ದು ಹುಡುಕಾಡಲಾಗಿ ಮನೆಯ ಪಕ್ಕದ ಬಾವಿಯಲ್ಲಿ ಚಂದ್ರಾವತಿ ಶೆಟ್ಟಿಗಾರ್ ರವರು ತೇಲಾಡುವ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ನೆರೆಕರೆಯವರ ಸಹಾಯದಿಂದ ಅವರನ್ನು ಮೇಲಕ್ಕೆತ್ತಿ ಚಿಕಿತ್ಸೆ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯದಲ್ಲಿ ಚಂದ್ರಾವತಿರವರು ಮೃತ ಪಟ್ಟಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ  42/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಶಂಕರನಾರಾಯಣ: ದಿನಾಂಕ 20/10/2021 ರಂದು 24:00 ಗಂಟೆಯಿಂದ ದಿನಾಂಕ 21/10/2021 ರಂದು ಬೆಳಿಗ್ಗೆ 08:00 ಗಂಟೆಯ ಮಧ್ಯಾವದಿಯಲ್ಲಿ ಕುಂದಾಪುರ ತಾಲೂಕು ಹೆಂಗವಳ್ಳಿ ಗ್ರಾಮದ ಮರೂರು ತೊಂಬತ್ತು ಹೊಳೆಗೆ ರಾಘವೇಂದ್ರ (43), ತಂದೆ :ಚಂದ್ರ ಶೆಟ್ಟಿ, ವಾಸ: ಹೆಂಗವಳ್ಳಿ ಗ್ರಾಮ ಇವರು ನೀರಿಗೆ ಹಾರಿ ಮುಳುಗಿ ಮೃತಪಟ್ಟಿದ್ದು, ಮೃತರು 4 ವರ್ಷದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದು ಮದ್ಯ ಸೇವನೆ ದುಶ್ಚಟ ಮತ್ತು ಮಾನಸಿಕ ಖಿನ್ನತೆ ಇದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೆಗೊಂಡು ಹೊಳೆಯ ನೀರಿಗೆ ಹಾರಿ ನೀರಿನಲ್ಲಿ ಮುಳುಗಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 40/2021 ಕಲಂ:  174   ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾಪು: ಪಿರ್ಯಾದಿದಾರರಾದ ಇಡ್ವಿನ್ ಸುವಾರಿಸ್‌‌ (32), ತಂದೆ: ಇಗ್ನೇಶಿಯಸ್ ಸುವಾರಿಸ್‌, ವಾಸ: ಜುಮ್ಮಾ ಮಸೀದಿ ಹತ್ತಿರ, ಮಣಿಪುರ ವೆಸ್ಟ್, ಮಣಿಪುರ ಗ್ರಾಮ, ಉಡುಪಿ ತಾಲೂಕು ಇವರ ತಂದೆ ಇಗ್ನೇಶಿಯಸ್ ಸುವಾರಿಸ್‌  (72) ರವರು ಶುಗರ್ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ದಿನಾಂಕ 21/10/2021 ರಂದು ಮಧ್ಯಾಹ್ನ 12:20 ಗಂಟೆಗೆ ಪಿರ್ಯಾದಿದಾರರು ಮನೆಯಲ್ಲಿರುವಾಗ ಅವರ ತಂದೆ ಇಗ್ನೇಶಿಯಸ್ ಸುವಾರಿಸ್‌ ರವರು ಸುಸ್ತಾದಂತೆ ಕಂಡು ಬಂದಿದ್ದು ಕೂಡಲೇ ಪಿರ್ಯಾದಿದಾರರು ಹಾಗೂ ಅವರ ಚಿಕ್ಕಪ್ಪ ಡೊಲ್ಫಿ ಸುವಾರಿಸ್‌ ರವರು ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ.ಎಂ ಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು ಅಲ್ಲಿನ ವೈದ್ಯರು ಮಧ್ಯಾಹ್ನ 1:30 ಗಂಟೆಗೆ ಪರೀಕ್ಷಿಸಿ  ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ. ಪಿರ್ಯಾದಿದಾರರ ತಂದೆ ಇಗ್ನೇಶಿಯಸ್ ಸುವಾರಿಸ್‌ ರವರು ಶುಗರ್‌ ಖಾಯಿಲೆಯಿಂದ ಬಳಲುತ್ತಿದ್ದು, ಇದರಿಂದಲೇ ಮೃತಪಟ್ಟಿರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 37/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬೈಂದೂರು: ಪಿರ್ಯಾದಿದಾರರಾದ ಅಣ್ಣಪ್ಪ ಶೆಟ್ಟಿ (41) , ತಂದೆ: ನರಸಿಂಹ ಶೆಟ್ಟಿ,  ವಾಸ:ಕಾವೇರಿ ನಿಲಯ, ಕಾಲ್ತೋಡು ಗ್ರಾಮ, ಬೈಂದೂರು ತಾಲೂಕು ಇವರು ಬೈಂದೂರು ತಾಲೂಕು ಶಿರೂರು ಗ್ರಾಮದ ನೀರ್ಗದ್ದೆಯ ಸಿಲ್ವರ್ ಅರ್ಚ್ ಫ್ಯಾಮಿಲಿ ಬಾರ್ & ರೆಸ್ಟೊರೆಂಟ್ ನ್ನು ನಡೆಸಿಕೊಂಡಿದ್ದು, ದಿನಾಂಕ 20/10/2021 ರಂದು ರಾತ್ರಿ 09:00 ಗಂಟೆಗೆ ಬಾರ್ ನಲ್ಲಿ ಮೆನೆಜರ್ ಆಗಿರುವ ಅಶ್ವೀಜ್ ಶೆಟ್ಟಿ ರವರಿಗೆ ಕಿರಣ ಪೂಜಾರಿ ಹಾಗೂ ಅಶೋಕ್ ಹಣ ಕೊಡುವಂತೆ ಹೆದರಿಸಿ ಬಾಟಲಿಯಿಂದ ಹೊಡೆದು ಅವಾಚ್ಯವಾಗಿ ಬೈದು ಕೊಲೆ ಬೆದರಿಕೆ ಹಾಕಿದ ಬಗ್ಗೆ ಅಶ್ವೀಜ್ ಶೆಟ್ಟಿ ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಜರು ತಯಾರಿಸಲು ಬಾರ್ & ರೆಸ್ಟೊರೆಂಟ್ ಬಳಿ ಬರುವುದಾಗಿ ತಿಳಿಸಿದಂತೆ ಪಿರ್ಯಾದಿದಾರರು ಒಂದು ಕಾರಿನಲ್ಲಿ ಹಾಗೂ ಪಿರ್ಯಾದಿದಾರರ ಸ್ನೇಹಿತರಾದ ರವಿ ಶೆಟ್ಟಿ, ಪ್ರಶಾಂತ್‌ ಶೆಟ್ಟಿ ಹಾಗೂ ಅಕ್ಷಯ ಆಚಾರ್ಯ ರವರು ಇನ್ನೊಂದು ಕಾರಿನಲ್ಲಿ ಹೊರಟು ಮಧ್ಯಾಹ್ನ 01:30 ಗಂಟೆಗೆ ಶಿರೂರು ನಿರ್ಗದ್ದೆಯ ನಿಖಿಲ್‌ ಹೊಟೇಲ್‌ ಸಮೀಪ ತಲುಪಿದಾಗ ಪಿರ್ಯಾದಿದಾರರ ಕಾರಿನ ಹಿಂಬಂದಿಯಿಂದ ಬರುತ್ತಿದ್ದ ಕಾರಿನಲ್ಲಿದ್ದ ಸ್ನೇಹಿತರು ಕಾರನ್ನು ನಿಲ್ಲಿಸಿ ಇಳಿಯುತ್ತಿರುವುದನ್ನು ನೋಡಿ ಪಿರ್ಯಾದಿದಾರರು ಕಾರನ್ನು ಸ್ವಲ್ಪ ಮುಂದೆ ನಿಲ್ಲಿಸಿ ಕಾರಿನಿಂದ ಇಳಿದು ನೋಡಿದಾಗ ರವಿ ಶೆಟ್ಟಿ, ಪ್ರಶಾಂತ್‌ ಶೆಟ್ಟಿ ಹಾಗೂ ಅಕ್ಷಯ ಆಚಾರ್ಯ ರವರು ನಿಖಿಲ್‌ ಹೋಟೆಲ್‌ ಬಳಿ ನಿಂತಿದ್ದ ಪರಿಚಯವಿರುವ ಕಿರಣ್‌ ಪೂಜಾರಿ,ಹಾಗೂ ಆಶೋಕ ದೇವಾಡಿಗ ಹಾಗೂ ಇತರ 3 ಜನರಲ್ಲಿ  ಮಾತನಾಡಲು  ಹೋಗಿ ಮಾತನಾಡುತ್ತಿರುವಾಗ ಆರೋಪಿತರು ರವಿ ಶೆಟ್ಟಿ ಪ್ರಶಾಂತ ರವರಿಗೆ ಏಕಾಏಕಿ ಅವಾಚ್ಯವಾಗಿ ಬೈದು ಅಣ್ಣಪ್ಪ ಶೆಟ್ಟಿಯವರ ಪರವಾಗಿ ಬಂದಿದ್ದೀರಾ ಎಂದು ಅವಾಚ್ಯವಾಗಿ ಬೈದು ಅವರ ಪರವಾಗಿ ಬಂದರೆ ನಿಮ್ಮನ್ನೂ ಕೂಡ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿ ಅಲ್ಲಿಯೇ ಹೊಟೇಲ್‌ ಬದಿಯಲ್ಲಿ ಈ ಮೊದಲೇ ತಂದಿರಿಸಿದ್ದ ಒಂದು ತಲವಾರು ಹಾಗೂ ಒಂದು ಹಾರೆಯನ್ನು ಕಿರಣ್‌ ಪೂಜಾರಿ, ಅಶೋಕ ದೇವಾಡಿಗರವರು ಹಿಡಿದುಕೊಂಡು ಬಂದು ರವಿ ಶೆಟ್ಟಿ, ಪ್ರಶಾಂತ ಶೆಟ್ಟಿ  ಹಾಗೂ ಅಕ್ಷಯ ಆಚಾರ್ಯರವರನ್ನು  ಕೊಲೆ ಮಾಡುವ ಉದ್ದೇಶದಿಂದಲೇ ಕಿರಣನು ತಲವಾರನ್ನು ಬೀಸಿದ್ದು ಆಗ ರವಿ ಶೆಟ್ಟಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ತಲವಾರು ರವಿ ಶೆಟ್ಟಿ ಬೆನ್ನಿಗೆ ತಾಗಿ ಗಾಯವಾಗಿರುತ್ತದೆ. ಆರೋಪಿ ಅಶೋಕ ದೇವಾಡಿಗನು ಹಾರೆಯಿಂದ ಪ್ರಶಾಂತ್‌ ಶೆಟ್ಟಿಗೆ ಹಣೆಗೆ ಹೊಡೆದಿದ್ದು ಕಿರಣನು ರವಿ ಶೆಟ್ಟಿಯನ್ನು ದೂಡಿ ಹಾಕಿದಾಗ ರವಿ ಶೆಟ್ಟಿಯು ನೆಲಕ್ಕೆ ಬಿದ್ದಿದ್ದು ಕಿರಣ್ ಪೂಜಾರಿಯು ಪುನಃ ತಲವಾರಿನಿಂದ ಕೊಲ್ಲುವ ಉದ್ದೇಶದಿಂದ ಕಡಿಯಲು ಬೀಸಿದಾಗ ಪಿರ್ಯಾದಿದಾರರು ಓಡಿ ಹೋಗಿ ಆಪಾದಿತನ ಕೈಯನ್ನು ಹಿಡಿದುಕೊಂಡು ತಪ್ಪಿಸಿದ್ದು ಹಾಗೂ ಅವರ ಜೊತೆಯಲ್ಲಿದ್ದ ಇನ್ನೊಬ್ಬ ವ್ಯಕ್ತಿ ಕೈಯಲ್ಲಿ ರಾಡ್‌ನಿಂದ ಅಕ್ಷಯ ಹಾಗೂ ಪ್ರಶಾಂತನಿಗೆ ಹೊಡೆದಿದ್ದು ಮತ್ತು ಇತರ ಇಬ್ಬರು ಕಿರಣ ಹಾಗೂ ಅಶೋಕ ಹೊಡೆಯುತ್ತಿರುವಾಗ ಬಿಡಬೇಡಿ ಹೊಡೆಯಿರಿ, ಕೊಂದು ಹಾಕಿ ಎಂದು ಪ್ರಚೋದಿಸುತ್ತಿದ್ದು  ಈ ಗಲಾಟೆಯನ್ನು ನೋಡಿ ಅಲ್ಲಿಯ ಸಾರ್ವಜನಿಕರು ಬರುವುದದನ್ನು  ನೋಡಿ ತಲವಾರಿನೊಂದಿಗೆ ಓಡಿ ಹೋಗಿದ್ದು ಪಿರ್ಯಾದಿದಾರರಿಗೂ  ಸಹ ಮುಂದಕ್ಕೆ ನೀನು ಬಾರ್‌ನಲ್ಲಿ ಹೇಗೆ ವ್ಯವಹಾರ ಮಾಡುತ್ತೀಯಾ ನೋಡಿಕೊಳ್ಳುತ್ತೇನೆ ಎಂದು ಜೀವ ಬೆದರಿಕೆ ಹಾಕಿ ಹೋಗಿರುತ್ತಾರೆ. ನಂತರ ಗಾಯಗೊಂಡ ರವಿ ಶೆಟ್ಟಿ ಹಾಗೂ ಪ್ರಶಾಂತನನ್ನು ಪಿರ್ಯಾದಿದಾರರು ವಾಹನದಲ್ಲಿ ಕುಂದಾಪುರ ನ್ಯೂ ಮೆಡಿಕಲ್‌ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಒಳರೋಗಿಯಾಗಿ ದಾಖಲು ಮಾಡಿರುವುದಾಗಿ ನೀಡಿದ ದೂರಿನಂತೆ ಬೈಂದೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 166/2021 ಕಲಂ: 504, 506, 324, 307, 114 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕಾರ್ಕಳ: ಪಿರ್ಯಾದಿದಾರರಾದ ಸಂತೋಷ್ ಕುಮಾರ್ ಹೆಗ್ಡೆ (51), ತಂದೆ: ಶೇಷಪ್ಪ ಹೆಗ್ಡೆ, ವಾಸ; ಯರ್ಲಪಾಡಿ ಗ್ರಾಮ ಕಾರ್ಕಳ ತಾಲೂಕು ಇವರು ದನಗಳನ್ನು ಸಾಕುತ್ತಿದ್ದು ಮೇವಿಗಾಗಿ ಪಿರ್ಯಾದಿದಾರರ ಪಟ್ಟಾ ಜಾಗ ಬೈಲು ಗದ್ದೆಗೆ ಬಿಡುತ್ತಿದ್ದು, ಹಾಗೆ ಮೇವಿಗಾಗಿ ಬಿಟ್ಟ ದನವೊಂದು  ದಿನಾಂಕ 21/10/2021 ರಂದು ಮಧ್ಯಾಹ್ನ 14:30 ಗಂಟೆಗೆ ದಾಸು ಹೆಗ್ಡೆಯವರ ಪತ್ನಿ ಅಮಣ್ಣಿ ಹೆಗ್ಡೆ ಎಂಬುವವರು ದನ ತನ್ನ ಗದ್ದೆಗೆ ಹೋಗಿರುತ್ತದೆ ಎಂಬ ದ್ವೇಷದಿಂದ ದನದ ಕಾಲಿಗೆ ಕತ್ತಿಯಿಂದ ಕಡಿದಿರುತ್ತಾರೆ. ಅಲ್ಲದೇ ಅಮಣಿ ಹೆಗ್ಡೆರವರ 1 ನೇ ಮಗ ಸಂತೋಷ ಪಿರ್ಯಾದಿದಾರರನ್ನು  ವಾಹನ ಅಪಘಾತ ಮಾಡಿ ಕೊಲ್ಲುತ್ತೇನೆಂದು ಜೀವ ಬೆದರಿಕೆ ಹಾಕಿರುತ್ತಾನೆ. ಮತ್ತು ಅಮಣಿ ಹೆಗ್ಡೆರವರ 2 ನೇ ಮಗನಾದ  ಸಂದೇಶ ಹೆಗ್ಡೆ ಕರೆಮಾಡಿ ಹಿಂದಿ ಭಾಷೆಯಲ್ಲಿ ಅವಾಚ್ಯ ಶಬ್ದಗಳಿಂದ ಬೈದು ಕೊಲೆ ಬೆದರಿಕೆ ಹಾಕಿರುತ್ತಾನೆ ಹಾಗೂ ಅಮಣಿ ಹೆಗ್ಡೆರವರ 3 ನೇ ಮಗ ಸುದರ್ಶನ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದಲ್ಲದೇ ಅವಾಚ್ಯ ಶಬ್ದಗಳಿಂದ ಬೈದಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 131/2021 ಕಲಂ: 429, 504, 506 ಜೊತೆಗೆ 34  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
  • ಕುಂದಾಪುರ: ಪಿರ್ಯಾದಿದಾರರಾದ ಪಿಯುಸ್ ಕರ್ವೆಲ್ಲೋ (60), ತಂದೆ: ಮೈಕೆಲ್ ಕರ್ವೇಲ್ಲೋ, ವಾಸ: ಕರ್ವೆಲ್ಲೋ ವಿಲ್ಲಾ, ಚಿಕ್ಕನ್ ಸಾಲ್ ರಸ್ತೆ, ಕುಂದಾಪುರ ಕಸಬಾ ಗ್ರಾಮ, ಕುಂದಾಪುರ ತಾಲೂಕು ಇವರು ಕುಟುಂಬದೊಂದಿಗೆ ಕುಂದಾಪುರ ಕಸಬಾ ಗ್ರಾಮದ ಚಿಕ್ಕನ್ ಸಾಲ್ ರಸ್ತೆಯಲ್ಲಿರುವ   ಕರ್ವೆಲ್ಲೋ ವಿಲ್ಲಾ ದಲ್ಲಿ ವಾಸವಾಗಿದ್ದು. ದಿನಾಂಕ 20/10/2021 ರಂದು 18:00 ಗಂಟೆಗೆ ಪಿರ್ಯಾದಿದಾರರು ಮತ್ತು ಅವರ ಪತ್ನಿ ಮನೆಗೆ ವಾಪಾಸು ಬರುವ ವೇಳೆ ಆಪಾದಿತರಾದ 1) ರಿಚರ್ಡ್ ಕರ್ವೆಲ್ಲೋ, 2) ವಾಲ್ಟರ್ ಕರ್ವೇಲ್ಲೋ,  3) ರಿನ್ಸನ್, 4)  ಅವಿನಾಶ್, 5) ಲಿಲ್ಲಿ ಡಿ ಸೋಜಾ, 6) ಗ್ರೇಸಿ ಫೆರ್ನಾಂಡಿಸ್, 7) ರೆನೋಲ್ ಫೆರ್ನಾಂಡಿಸ್ ಇವರು ಪಿರ್ಯಾದಿದಾರರನ್ನು ತಡೆದು ನಿಲ್ಲಿಸಿ, ಪಿರ್ಯಾದಿದಾರರ ಮನೆಯ ಬಟ್ಟೆ ಸೇರಿದಂತೆ ಇನ್ನಿತರ ವಸ್ತುಗಳನ್ನು ಮನೆಯಿಂದ ಹೊರಗೆ ಹಾಕಿ ಬಟ್ಟೆಗೆ ಬೆಂಕಿ ಹಚ್ಚಿ ನಷ್ಟವುಂಟು ಮಾಡಿದ್ದು ಇದನ್ನು ಪ್ರಶ್ನಿಸಿದ ಪಿರ್ಯಾದಿದಾರರು ಮತ್ತು ಅವರ ಪತ್ನಿ ಝೀಟಾ ರೆಬೆಲ್ಲೋ ರವರಿಗೆ ಆಪಾದಿತರು ಕೈಯಿಂದ ಹೊಡೆದು ಅವಾಚ್ಯ ಶಬ್ದದಿಂದ ಬೈದು ಇನ್ನು ಮುಂದಕ್ಕೆ ಈ ಮನೆಗೆ ಬರಬೇಡಿ ಬಂದರೆ ಸುಮ್ಮನೆ ಬಿಡುವುದಿಲ್ಲವಾಗಿ ಜೀವ ಬೆದರಿಕೆ ಹಾಕಿರುವುದಾಗಿದೆ. ಘಟನಾ ಸಮಯ ಪಿರ್ಯಾದಿದಾರರು ಮನೆಯಲ್ಲಿ ಇಟ್ಟಿದ್ದ 1,00,000/- ಹಣ ಇದ್ದಿರುವುದಿಲ್ಲ. ಕೌಟುಂಬಿಕ  ವಿಚಾರವಾಗಿರುವುದರಿಂದ ದೂರು ನೀಡದೇ ಇದ್ದು ಹಲ್ಲೆಯಿಂದ ಒಳನೋವು ಹೆಚ್ಚಾಗಿ ಒಳರೋಗಿಯಾಗಿ ದಾಖಲಾಗಿ ದೂರು ನೀಡಲು ವಿಳಂಬವಾಗಿರುವುದಾಗಿ ನೀಡಿದ ದೂರಿನಂತೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 114 /2021  ಕಲಂ: 143, 147, 341, 323, 504, 506, 435 ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೊಲ್ಲೂರು: ದಿನಾಂಕ 20/10/2021 ರಂದು ರಾತ್ರಿ 10:00 ಗಂಟೆಗೆ ಪಿರ್ಯಾದಿದಾರರಾದ ರಕ್ಷಿತ್ ಪೂಜಾರಿ (23). ತಂದೆ: ಮಂಜಪ್ಪ ಪೂಜಾರಿ. ವಾಸ:  ಮಾರಣಕಟ್ಟೆ  ಮೇಲ್ ಮಾಜಿ  ಚಿತ್ತೂರು ಗ್ರಾಮ ಕುಂದಾಪುರ ತಾಲೂಕು ಇವರು ಮಾರಣಕಟ್ಟೆಯಲ್ಲಿದ್ದಾಗ ಅವರ ಸ್ನೇಹಿತ  1ನೇ ಆರೋಪಿ  ನಾಗೇಂದ್ರ ಆಚಾರಿ ಪಿರ್ಯಾದಿದಾರರಿಗೆ  ಚಿತ್ತೂರು ಅರಮನೆ ಹೋಟೇಲ್ ಬಳಿ ಕರೆ ಮಾಡಿ  ಬರಲು ಹೇಳಿದಂತೆ  ಪಿರ್ಯಾದಿದಾರರು 10:15 ಗಂಟೆಗೆ ಅಲ್ಲಿಗೆ ಬಂದಾಗ ಆರೋಪಿತರಾದ 1) ನಾಗೇಂದ್ರ ಆಚಾರಿ, 2) ರಕ್ಷೀತ್ ಶೆಟ್ಟಿ, 3) ಕಾರ್ತಿಕ್ ಆಚಾರಿ, 4) ವಿಜಯ ದಾಸ್ ಇವರು  ಪಿರ್ಯಾದಿದಾರರನ್ನು ಏಕಾಏಕಿ ಅಡ್ಡಗಟ್ಟಿ ಅವಾಚ್ಯ ಶಬ್ದಗಳಿಂದ ಬೈದು ಆರೋಪಿ 1 ನೇಯವರು ಕೈಯಿಂದ ಮುಷ್ಟಿ ಕಟ್ಟಿ ಮುಖಕ್ಕೆ ಮತ್ತು ಬೆನ್ನಿಗೆ ಹೊಡೆರುತ್ತಾರೆ.  2 ನೇ ಆರೋಪಿ ರಕ್ಷಿತ್ ಶೆಟ್ಟಿ ಕಬ್ಬಿಣದ ರಾಡ್ ನಿಂದ  ಪಿರ್ಯಾದಿದಾರರಿಗೆ ಹೊಡೆಯಲು  ಬೀಸಿದಾಗ ಪಿರ್ಯಾದಿದಾರರು ತಪ್ಪಿಸಿಕೊಳ್ಳುವ ವೇಳೆ ತಲೆಗೆ ತಾಗಿ ರಕ್ತಗಾಯವಾಗಿರುತ್ತದೆ. ಆರೋಪಿ 3 ನೇ ಆರೋಪಿ ಕಾರ್ತಿಕ್ ಆಚಾರಿ ಕಾಲಿನಿಂದ ಹೊಟ್ಟೆಗೆ ಮತ್ತು ಬಲಕಾಲಿಗೆ ತುಳಿದು  ಆರೋಪಿ 4 ನೇಯವರು ಕೈಯಿಂದ ಬಲಕೆನ್ನೆಗೆ ಹೊಡೆದಿರುತ್ತಾರೆ.  ಆರೋಪಿಗಳು ಪಿರ್ಯಾದಿದಾರರಿಗೆ ಕೊಲ್ಲದೇ ಬಿಡುವುದಿಲ್ಲವಾಗಿ ಬೆದರಿಕೆ ಹಾಕಿರುವುದಾಗಿ ನೀಡಿದ ದೂರಿನಂತೆ ಕೊಲ್ಲೂರು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 37/2021 ಕಲಂ: 341, 323, 324, 504, 506 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 22-10-2021 10:27 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080