ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

  • ಕೋಟ: ಪಿರ್ಯಾದಿ ಭೋಜ ಪೂಜಾರಿ ಇವರು ದಿನಾಂಕ: 21/10/2021 ರಂದು ಮಧ್ಯಾಹ್ನ ಸುಮಾರು 3.30 ಗಂಟೆಯ ಸಮಯಕ್ಕೆ ಬಾಡಿಗೆಯ ನಿಮಿತ್ತ ಸಾಲಿಗ್ರಾಮ ಪೇಟೆಗೆ ಬಂದು ಗುರು ನರಸಿಂಹ ದೇವಸ್ಥಾನಕ್ಕೆ ಹೋಗುವ ರಸ್ತೆಯ ಬದಿಯಲ್ಲಿ ನಿಲ್ಲಿಸಿಕೊಂಡಿರುವಾಗ  ಸಾಲಿಗ್ರಾಮ ಜಂಕ್ಷನ್ ನಲ್ಲಿ ರಾ ಹೆ 66 ರಲ್ಲಿ  ಸಾಸ್ತಾನ ಕಡೆಯಿಂದ  ಪಿರ್ಯಾದಿದಾರರ ಪರಿಚಯದ  ಮಂಜುನಾಥ ಪೂಜಾರಿ ಎಂಬವರು KA20ED3501 ನೇ ವಿಗೋ ಮೋಟಾರ್ ಸೈಕಲನ್ನು ಚಲಾಯಿಸಿಕೊಂಡು ಬಂದು ಕುಂದಾಪುದಿಂದ ಉಡುಪಿ ಕಡೆಗೆ ಹೋಗುವ ರಾ ಹೆ 66 ರ ರಸ್ತೆಗೆ  ಹೋಗಲು ಮೊಟಾರ್ ಸೈಕಲ್ ನಿಲ್ಲಿಸಿಕೊಂಡಿರುವಾಗ  ಕುಂದಾಪುರ ಕಡೆಯಿಂದ ಉಡುಪಿ    ಕಡೆಗೆ  ರಾ ಹೆ 66 ರಸ್ತೆಯಲ್ಲಿ PB10FF9992  ನೇ ಈಚರ್ ಲಾರಿಯನ್ನು ಅದರ ಚಾಲಕ ರಾಜ್ ಕುಮಾರ್ ನು ತನ್ನ ಲಾರಿಯನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ಕೊಂಡು ಬಂದು ಬೇರೆ ವಾಹನವನ್ನು ಓವರ್ ಟೇಕ್ ಮಾಡುವ ಭರದಲ್ಲಿ  ರಸ್ತೆಯ ತೀರಾಬಲ ಭಾಗಕ್ಕೆ ಬಂದು ಸಾಲಿಗ್ರಾಮ ಜಂಕ್ಷನ್ ಯು ಟರ್ನ ನಲ್ಲಿ ನಿಲ್ಲಿಸಿದ್ದ  ವಿಗೋ ಮೊಟಾರ್ ಸೈಕಲ್ ಗೆ ಢಿಕ್ಕಿ ಹೊಡೆದಿರುತ್ತಾನೆ ಇದರಿಂದ ಮೋಟಾರ್ ಸೈಕಲಿನಲ್ಲಿದ್ದ ಮಂಜುನಾಥ ಪೂಜಾರಿರವರು ರಸ್ತೆಗೆ ಬಿದ್ದ ಪರಿಣಾಮ ತಲೆಯ ಹಿಂಭಾಗ, ಬಲ ಕೈ ಬಳಿ ರಕ್ತ ಗಾಯವಾಗಿರುವುದಾಗಿದೆ. ಈ  ಬಗ್ಗೆ ಕೋಟ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 182/2021 ಕಲಂ: 279,  338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಅಸ್ವಾಭಾವಿಕ ಮರಣ ಪ್ರಕರಣ

  • ಕಾರ್ಕಳ: ಪಿರ್ಯಾದಿ ಶ್ರೀಮತಿ ಶಶಿಕುಮಾರಿ ಶೆಟ್ಟಿ ಇವರ ಮಗ ಪೃಥ್ವಿರಾಜ್ ಶೆಟ್ಟಿ ಎಂಬವರಿಗೆ ಇತ್ತೀಚೆಗೆ 2 ತಿಂಗಳಿನಿಂದ ಲಿವರ್ ತೊಂದರೆ ಇದ್ದು, ಈ ಬಗ್ಗೆ ಉಡುಪಿ ಬಾಳಿಗಾ ಆಸ್ಪತ್ರೆಯಲ್ಲಿ ಔಷಧಿ ಮಾಡಿಕೊಂಡಿದ್ದು ಇದೇ ಕಾರಣದಿಂದ ದಿನಾಂಕ 21/10/2021 ರಂದು ಮದ್ಯಾಹ್ನ 3.00 ಗಂಟೆಯಿಂದ 4.00 ಗಂಟೆಯ ಮದ್ಯಾವಧಿಯಲ್ಲಿ  ತನ್ನ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 35/2021 ಕಲಂ: 174 ಸಿಆರ್‌ಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 22-10-2021 05:55 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2022, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080