ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಮಲ್ಪೆ: ದಿನಾಂಕ 21/09/2021 ರಂದು ಮಧ್ಯಾಹ್ನ 3:45 ಗಂಟೆಯ ಸಮಯಕ್ಕೆ ತೊಟ್ಟಂ ಪೊಟ್ಟಳಿವೆ ಕಡಲ ಕಿನಾರೆಯಲ್ಲಿ ಪಿರ್ಯಾದಿದಾರರಾದ ಶಿವ ಕುಂದರ್ (45), ತಂದೆ: ದೇಜು, ವಾಸ: ಪ್ರೀತಿ ಬೇಕರಿ ಬಳಿ, ಬೈಲಕೆರೆ, ತೆಂಕನಿಡಿಯೂರು ಗ್ರಾಮ, ಉಡುಪಿ ತಾಲೂಕು ಇವರು ಸ್ವಂತ ಕೈರಂಪಣಿ ನಾಡದೋಣಿಯಲ್ಲಿ ಕೈರಂಪಣಿ ಮೀನುಗಾರಿಕೆಯ ಬಗ್ಗೆ 35 ಮೀನುಗಾರರ ತಂಡ ಮೀನುಗಾರಿಕೆ ನಡೆಸುತ್ತಿದ್ದು, ಈ ಸಮಯ ದೋಣಿಯಲ್ಲಿ ವಿಶ್ವನಾಥ, ಉಮೇಶ್, ಮಾಧವ, ಶಂಭು, ವಿಶು, ಸುಭಾಸ್‌, ಸಾಧು ಹಾಗೂ ಕದಿಕೆಯ ರಾಜೇಶ್ ಶ್ರೀಯಾನ್ ರವರುಗಳು ಇದ್ದು, ಸಮುದ್ರದಲ್ಲಿ ಬಲೆಯನ್ನು ಬಿಡುತ್ತ ಬರುತ್ತಿರುವಾಗ ಸಮುದ್ರದ ಅಲೆಗಳ ಅಬ್ಬರಕ್ಕೆ ದೋಣಿಯಲ್ಲಿದ್ದ ರಾಜೇಶ್ ಶ್ರೀಯಾನ್ (37) ರವರು ಆಯ ತಪ್ಪಿ ಸಮುದ್ರದ ನೀರಿಗೆ ಬಿದ್ದು, ಮುಳುಗಿದ್ದು, ಈ ಸಮಯ ದೋಣಿಯಲ್ಲಿದ್ದ ಉಮೇಶ ಎಂಬುವವರು ಸಮುದ್ರಕ್ಕೆ ಹಾರಿ ರಾಜೇಶ್ ಶ್ರೀಯಾನ್ ರವರನ್ನು ಮೇಲಕ್ಕೆ ಎತ್ತಿ ದಡಕ್ಕೆ ತಂದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದವರನ್ನು ಒಂದು ವಾಹನದಲ್ಲಿ ಉಡುಪಿಯ ಹೈಟೆಕ್ ಆಸ್ಪತ್ರೆಗೆ ಕರೆದು ಕೊಂಡು ಹೋದಲ್ಲಿ ಅಲ್ಲಿ ಪರೀಕ್ಷಿಸಿದ ವೈದ್ಯರು ರಾಜೇಶ್ ಶ್ರೀಯಾನ್ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 41/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
    ಮಣಿಪಾಲ: ಪಿರ್ಯಾದಿದಾರರಾದ ಹೇಮರಾಜ್ ಎಸ್ ಶೆಟ್ಟಿಗಾರ್ (43),ತಂದೆ:ದಿ. ಶಂಕರ ಎಸ್ ಶೆಟ್ಟಿಗಾರ್, ವಾಸ:ಶ್ರೀಶುಭ, ಲಕ್ಷೀಂದ್ರ ನಗರ, ಶಿವಳ್ಳಿ ಗ್ರಾಮ, ಉಡುಪಿ, ಮಣಿಪಾಲ ಇವರ ತಾಯಿ ಲಲಿತ ಎಸ್ ಶೆಟ್ಟಿಗಾರ್ (72) ರವರು ದಿನಾಂಕ 20/09/2021 ರಂದು ರಾತ್ರಿ ಊಟ ಮಾಡಿ ತನ್ನ ಪ್ರತ್ಯೇಕ ಕೋಣೆಯಲ್ಲಿ ಮಲಗಿದ್ದವರನ್ನು ದಿನಾಂಕ 21/09/2021 ರಂದು ಬೆಳಿಗ್ಗೆ 08:30 ಗಂಟೆಗೆ ಎಬ್ಬಿಸಲು ಅವರು ಮಲಗಿದ್ದ ಕೋಣೆಯ ಬಾಗಿಲನ್ನು ಬಡಿದಾಗ ಅವರು ಸ್ಪಂದಿಸಲಿಲ್ಲ ನಂತರ ಬಲವಂತವಾಗಿ ಬಾಗಿಲು ತಗೆದು ನೋಡಿದಾಗ ಅವರು ಮಲಗಿದ್ದ ಮಂಚದ ಕೆಳಗೆ ಬಿದ್ದಿದರು ತಲೆಯ ಭಾಗಕ್ಕೆ ಗಾಯವಾಗಿ ರಕ್ತ ಸೋರುತ್ತೀದ್ದವರನ್ನು ಚಿಕಿತ್ಸೆಗಾಗಿ ಮಣಿಪಾಲದ ಕೆ ಎಂ ಸಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಪರೀಕ್ಷಿಸಿದ ವೈದ್ಯರು ಲಲಿತ ಎಸ್ ಶೆಟ್ಟಿಗಾರ್ ರವ್ರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 33/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕೋಟ: ಪಿರ್ಯಾದಿದಾರರಾದ ಮನೋಹರ ಲಚ್ಚ ನಾಯ್ಕ್‌(39), ತಂದೆ: ಲಚ್ಚಯ್ಯ ನಾಯ್ಕ್‌ , ವಾಸ: ವಿ.ವಿ ರಸ್ತೆ 2ನೇ ಕ್ರಾಸ್‌ ನಗರ ಭಟ್ಕಳ್‌ ತಾಲೂಕು ಸೂಸಗಡಿ ಗ್ರಾಮ ಉತ್ತರ ಕನ್ನಡ ಜಿಲ್ಲೆ ಇವರ ತಮ್ಮ ಮನೋಜ್‌ ಕುಮಾರ್‌ (33) ರವರು ಭಟ್ಕಳ ನಗರದ ರಥಬೀದಿಯಲ್ಲಿರುವ ವಿನಾಯಕ ಸೌಹಾರ್ದ ಸೊಸೈಟಿಯಲ್ಲಿ ಅಟೆಂಡರ್‌ ಆಗಿ ಕೆಲಸ ಮಾಡಿಕೊಂಡಿದ್ದು. ರಾಷ್ಟ್ರ ಹಾಗೂ ರಾಜ್ಯ ಮಟ್ಟದ ಕಬ್ಬಡಿ ಅಟಗಾರನಾಗಿರುತ್ತಾರೆ. ಮನೋಜ್‌ ರವರಿಗೆ ಮೂರು ನಾಲ್ಕು ತಿಂಗಳ ಹಿಂದೆ ಅಪಘಾತವಾಗಿ ಕಾಲು ಮುರಿದಿದ್ದು ಈ ಬಗ್ಗೆ ಚಿಕಿತ್ಸೆಯನ್ನು ಕೊಡಿಸಿದ್ದು, ಮನೋಜ್‌ ಕಬ್ಬಡಿ ಅಟಗಾರನಾಗಿದ್ದು ಮನೋಜ್‌ ರವರು ದಿನಾಂಕ 20/09/2021 ರಂದು ಸಂಜೆ 6:00 ಗಂಟೆಗೆ ಮನೆಯಿಂದ ಹೊರಟು ಮಂಗಳೂರಿಗೆ ಹೋಗುವುದಾಗಿ ತಿಳಿಸಿ ಮನೆಯಿಂದ ಹೋಗಿರುತ್ತಾನೆ. ದಿನಾಂಕ 21/09/2021 ರಂದು ಮಧ್ಯಾಹ್ನ ಮೃತ ಮನೋಜ ನ ಸ್ನೇಹಿತ ಪುರುಷೋತ್ತಮ ಎಂಬುವವರು ಪಿರ್ಯಾಧಿದಾರರಿಗೆ ಪೋನ್‌ ಕರೆ ಮಾಡಿ ಮನೋಜನಿಗೆ ಅಸೌಖ್ಯವಾಗಿದ್ದು ಚಿಕಿತ್ಸೆಯ ಬಗ್ಗೆ ಕುಂದಾಪುರದ ಕೋಟೇಶ್ವರದ ಎನ್‌.ಆರ್‌ ಅಚಾರ್ಯ ಅಸ್ಪತ್ರೆಗೆ ದಾಖಲಿಸಿರುವುದಾಗಿ ಮಾಹಿತಿ ಬಂದಂತೆ ಬಂದು ಆಸ್ಪತ್ರೆಯಲ್ಲಿ ವಿಚಾರಿಸಲಾಗಿ ಮನೋಜ್‌ ಕುಮಾರನು ಮಧ್ಯಾಹ್ನ 12:50 ಗಂಟೆಗೆ ಮೃತ ಪಟ್ಟಿರುವುದಾಗಿ ತಿಳಿಯಿತು. ಮನೋಜನ ಮೃತ ಶರೀರವನ್ನು ನೋಡಿರುವುದಾಗಿದ್ದು. ಮನೋಜನು ಸಾಲಿಗ್ರಾಮದ  ಲಾಡ್ಜ್‌ನಲ್ಲಿರುವಾಗ ದಿನಾಂಕ 21/09/2021 ರಂದು ಬೆಳಿಗ್ಗೆ 11:00 ಗಂಟೆಗೆ ಎದೆ ನೋವು ಕಾಣಿಸಿಕೊಂಡಿದ್ದು ಈ ಬಗ್ಗೆ ಸ್ಥಳಿಯ ಶಬರಿ ಕ್ಲಿನಿಕ್ ನಲ್ಲಿ ವೈಧ್ಯರಿಂದ ಪರಿಕ್ಷೀಶಿಸಿ ಅವರ ಸಲಹೆಯಂತೆ ಕೋಟೇಶ್ವರದ ಎನ್‌.ಆರ್‌. ಆಚಾರ್ಯ ಅಸ್ಪತ್ರೆಗೆ ಕರೆದುಕೊಂಡು ಬಂದು ಪರೀಕ್ಷಿಶಿಸಿದಲ್ಲಿ ವೈಧ್ಯರು ಮೃತ ಪಟ್ಟಿರುವುದಾಗಿ ತಿಳಿಸಿರುತ್ತಾರೆ.. ಮೃತ ಮನೋಜ್‌ ಕುಮಾರ ರವರಿಗೆ 3 ತಿಂಗಳ ಹಿಂದೆ ಹೃದಯ ಸಂಬಂಧಿ ಕಾಯಿಲೆ ಸಮಸ್ಯೆ ಕಾಣಿಸಿಕೊಂಡಿದ್ದು ಈ ಬಗ್ಗೆ ಕುಂದಾಪುರದ ಅಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿರುವುದಾಗಿದ್ದು. ಮೃತರು ಹೃದಯ ಸಂಬಂಧಿ ಕಾಯಿಲೆ ಹಾಗೂ ಅವನಿಗೆ ಇರುವ ಕಾಲು ನೋವು ಸಮಸ್ಯೆಯಿಂದ ದಿನಾಂಕ 21/09/2021 ರಂದು ಮಧ್ಯಾಹ್ನ 12:50 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ ನಂಬ್ರ 31 /2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ


  • ಕುಂದಾಪುರ: ದಿನಾಂಕ 19/09/2021 ರಂದು ಸದಾಶಿವ ಆರ್. ಗವರೋಜಿ, ಪೊಲೀಸ್ ಉಪನಿರೀಕ್ಷಕರು, ಕುಂದಾಪುರ ಪೊಲೀಸ್‌ ಠಾಣೆ ಇವರಿಗೆ ಕುಂದಾಪುರ ತಾಲೂಕು ಕೋಣಿ ಗ್ರಾಮದ ಕೋಣಿ ಸರಕಾರಿ ಶಾಲೆಯ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಎಂಬ ಇಸ್ಪೀಟು ಜುಗಾರಿ ಆಟ ಆಡುತ್ತಿದ್ದಾರೆಂದು ಬಂದ ಮಾಹಿತಿ ಮೇರೆಗೆ ದಾಳಿ ಮಾಡಿ ಇಸ್ಪೀಟ್ ಜುಗಾರಿ ಆಟ ಆಡುತ್ತಿದ್ದ 1) ರವೀಂದ್ರ (35), ತಂದೆ: ಲಕ್ಷ್ಮಣ ಮೊಗವೀರ, ವಾಸ: ಹಾಡಿಮನೆ, ಶಾಲೆ ರಸ್ತೆ ಕೋಣಿ ಗ್ರಾಮ, ಕುಂದಾಪುರ ತಾಲೂಕು, 2) ಉಮೇಶ ಪೂಜಾರಿ (33), ತಂದೆ : ಪಾಂಡು ಪೂಜಾರಿ, ವಾಸ : ಶಾಲೆ ರೋಡ್ ಕೋಣಿ ಗ್ರಾಮ, ಕುಂದಾಪುರ ತಾಲೂಕು, 3) ಪ್ರಾನ್ಸಿಸ್ (34) ತಂದೆ : ಭಾಜಿಲ್ ರೊಡ್ರಿಗೀಸ್, ವಾಸ : ಶಾಲೆ ರೋಡ್ ಕೋಣಿ ಗ್ರಾಮ, ಕುಂದಾಪುರ ತಾಲೂಕು , 4) ರವಿ ಪೂಜಾರಿ (48), ತಂದೆ : ದಿ: ದೊಟ್ಟ ಪೂಜಾರಿ, ವಾಸ : ಚಕ್ಕುಲಿ ಬೆಟ್ಟು, ಹೊಸಮನೆ ಕೋಣಿ ರೋಡ್ ಕೋಣಿ ಗ್ರಾಮ, ಕುಂದಾಪುರ ತಾಲೂಕು, 5)ಸತೀಶ ಪೂಜಾರಿ (34), ತಂದೆ : ರಾಮ ಪೂಜಾರಿ, ವಾಸ : ಅಣ್ಣು ಮನೆ, ಕೋಣಿ ಕೇಳಕೇರಿ ಕೋಣಿ ಗ್ರಾಮ, ಕುಂದಾಪುರ ತಾಲೂಕು , 6)ಸುನಿಲ್ ಡಿ’ಸೋಜಾ (34), ತಂದೆ: ಬಾಜಿಲ್ ಡಿ’ಸೋಜಾ, ವಾಸ: ಬಸ್ನಿಲ್ದಾಣದ ಬಳಿ ಸಟ್ವಾಡಿ, ಕಂದಾವರ ಗ್ರಾಮ, ಕುಂದಾಪುರ ತಾಲೂಕು ಇವರನ್ನು ಸಿಬ್ಬಂದಿಗಳ ಸಹಾಯದಿಂದ ಹಿಡಿದು ಇಸ್ಪೀಟು ಜುಗಾರಿ ಆಟಕ್ಕೆ ಉಪಯೋಗಿಸಿದ ನಗದು ರೂಪಾಯಿ 1050/, ಹಳೆಯ ದಿನಪತ್ರಿಕೆ-1, ಇಸ್ಪೀಟು ಎಲೆಗಳು-52, ಸ್ವಾಧೀನ ಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 107 /2021 ಕಲಂ: 87 KP ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಬ್ರಹ್ಮಾವರ: ದಿನಾಂಕ 21/09/2021 ರಂದು ಗುರುನಾಥ ಬಿ ಹಾದಿಮನಿ, ಪೊಲೀಸ್ ಉಪನಿರೀಕ್ಷಕರು, ಬ್ರಹ್ಮಾವರ ಪೊಲೀಸ್ ಠಾಣೆ ಇವರಿಗೆ ಚೇರ್ಕಾಡಿ ಗ್ರಾಮದಲ್ಲಿ ಆರೋಪಿ ಜಯನಾಯ್ಕ (46), ತಂದೆ: ತಿಮ್ಮಪ್ಪ ನಾಯ್ಕ, ವಾಸ:ಹಲಗೆ ಗುಂಡಿ ಬಾಯರ್‌ಬೆಟ್ಟು, ಚೇರ್ಕಾಡಿ ಗ್ರಾಮ, ಬ್ರಹ್ಮಾವರ ತಾಲೂಕು, ಉಡುಪಿ ಜಿಲ್ಲೆ ಎಂಬಾತ ಲೈಸನ್ಸ್‌ ‌ಹೊಂದಿದ ಆಯುಧದೊಂದಿಗೆ ಅನಧೀಕೃತವಾಗಿ ಇನ್ನೊಂದು ಆಯುಧವನ್ನು ಹೊಂದಿರುವ ಬಗ್ಗೆ ಬಂದ ಮಾಹಿತಿ ಮೇರೆಗೆ, ಸಿಬ್ಬಂದಿಗಳೊಂದಿಗೆ ಮನೆಯನ್ನು ಶೋಧಿಸಿದಾಗ ಮನೆಯ ಒಂದು ಕೋಣೆಯ ಗಾಡ್ರೇಜಿನ ಪಕ್ಕದಲ್ಲಿ ಆರೋಪಿಯು ಬಚ್ಚಿಟ್ಟಿದ್ದ 2 ಕೋವಿಗಳು ದೊರೆತಿದ್ದು, ಕೋವಿಗಳನ್ನು ನೋಡಲಾಗಿ 2 ಕೂಡ ಒಂದೇ ಮಾದರಿಯಂತೆ ಕಂಡು ಬಂದಿರುತ್ತದೆ., ಈ ಬಗ್ಗೆ ಆರೋಪಿಯು ಒಂದು ಜಿಲ್ಲಾಧಿಕಾರಿಯವರಿಂದ ಪಡೆದ ಲೈಸನ್ಸ್‌UDI/273/3 ಸಂಖ್ಯೆಯ SBML ಕೋವಿಯಾಗಿರುತ್ತದೆ ಎಂಬುವುದಾಗಿ ತಿಳಿಸಿರುತ್ತಾನೆ. ಇನ್ನೊಂದು ಕೋವಿಯ ಬಗ್ಗೆ ವಿಚಾರಿಸಲಾಗಿ ಅದು ಅನಧಿಕೃತವಾದ ಕೋವಿ ಆಗಿರುವುದು ಯಾರಿಗೂ ಸಂಶಯ ಬರದಿರಲಿ ಎಂದು ಆಯುದ ಸಂಖ್ಯೆ UDI/273/3 ಎಂದು ಹಾಕಿಸಿರುತ್ತೇನೆ ಎಂದು ತಪ್ಪನ್ನು ಒಪ್ಪಿಕೊಂಡಿರುತ್ತಾನೆ. ಆರೋಪಿಯು ಪರಿಶೀಲನಾ ಅಧಿಕಾರಿಗಳಿಗೆ ವಂಚನೆ ಮಾಡುವ ಉದ್ದೇಶದಿಂದ ಲೈಸನ್ಸ್ ಹೊಂದಿರುವ ಆಯುಧವನ್ನು ಹೋಲುವಂತಹ ಅನಧೀಕೃತ ಕೋವಿಯನ್ನು ಹೊಂದಿರುವ ಬಗ್ಗೆ ಕಂಡುಬಂದಿರುತ್ತದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 170/2021 ಕಲಂ 3(1), 25 Arms Act & ಕಲಂ: 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ಪಿರ್ಯಾದಿದಾರರಾದ ಭರತ್‌ ಕುಮಾರ್‌ ಹೆಗ್ಡೆ (44), ವಾಣಿಜ್ಯ ತೆರಿಗೆ ಉಪ ಆಯುಕ್ತರು , ವಿವೇಕಾನಂದ ನಗರ, 4ನೇ ಅಡ್ಡರಸ್ತೆ,ಮೂಡನಿಡಂಬೂರು ಉಡುಪಿ ತಾಲೂಕು ಮತ್ತು ಜಿಲ್ಲೆ ಇವರು ದಿನಾಂಕ 20/09/2021 ರಂದು 18:00 ಗಂಟೆಗೆ ಉಡುಪಿ ವಾಣಿಜ್ಯ ತೆರಿಗೆಗಳ ಉಪ ಆಯುಕ್ತರು, ಜಾರಿ, ಉಡುಪಿರವರ ಕಛೇರಿಯಲ್ಲಿ ಇದ್ದಾಗ ವಿಕ್ರಮ್‌ ಪೈ ಎಂಬುವವರು ಪಿರ್ಯಾದಿದಾರರು ದಿನಾಂಕ 25/08/2021 ರಂದು ಸರಕು ವಾಹನ ಸಂಖ್ಯೆ TN88D7855 ರಲ್ಲಿ ಸರಿಯಾದ ದಾಖಲೆಗಳಿಲ್ಲದೇ ಸಾಗಿಸುತ್ತಿದ್ದ ಅಡಿಕೆಯನ್ನು ತಡೆದು ಕ್ರಮ ಕೈಗೊಂಡಿರುವ ಬಗ್ಗೆ ವಿಷಯ ಪ್ರಸ್ತಾಪಿಸಿ ಪಿರ್ಯಾದಿದಾರರನ್ನು ಉಡುಪಿಯಿಂದ ವರ್ಗಾವಣೆ ಮಾಡಿಸಿರುವುದಾಗಿ ಹೇಳಿ ಮುಂದಿನ 10 ದಿನಗಳಲ್ಲಿ ವರ್ಗಾವಣೆ ಆದೇಶವು ಜಾರಿಯಾಗುತ್ತದೆ ಎಂದು ಬೆದರಿಸಿ ಕಛೇರಿ ಕರ್ತವ್ಯಕ್ಕೆ ಅಡ್ಡಿ ಉಂಟು ಪಡಿಸಿರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 137/2021 ಕಲಂ : 353, 506 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹಿರಿಯಡ್ಕ : ಪಿರ್ಯಾದಿದಾರರಾದ ಗಣೇಶ್ ಕುಲಾಲ್ (29), ತಂದೆ: ಶಂಕರ ಕುಲಾಲ್, ವಾಸ: ದೀಪಾಶ್ರೀ ನಿಲಯ ಬಣಸಾಲೆ ಬಳಿ ಆವರ್ಸೆ , ಹಿಯಾಣ ಗ್ರಾಮ ಬ್ರಹ್ಮಾವರ ತಾಲೂಕು ಉಡುಪಿ ಇವರು ಮಂದರ್ತಿ ಲಕ್ಷ್ಮಿ ಪಾರ್ಮ್ಸ್ ನಲ್ಲಿ ಸೇಲ್ಸ್ ಮೆನ್ ಆಗಿ ಕೆಲಸ ಮಾಡಿಕೊಂಡಿದ್ದು ದಿನಾಂಕ 21/09/2021 ರಂದು ಟೆಂಪೋ ನಂ ಕೆಎ 20 ಡಿ 1099 ನೇದರಲ್ಲಿ ಚಾಲಕರಾಗಿ ಸತೀಶ್ ನಾಯ್ಕ್ ಲೈನ್ ಸೇಲ್ ಮತ್ತು ಚಂದ್ರ ಮರಕಲ ಮತ್ತು ಪಿರ್ಯಾದಿದಾರರು ಇದ್ದು ಬೆಳಿಗ್ಗೆ ಮಂದರ್ತಿ ಫಾರ್ಮ್ಸ್ ನಿಂದ ಹೊರಟು ಮಣಿಪಾಲ ಮಾರ್ಗವಾಗಿ ಅಂಗಡಿಗಳಿಗೆ ಮೊಟ್ಟೆಯನ್ನು ವಿತರಿಸಿ ಸಮಯ ಮದ್ಯಾಹ್ನ 2:30 ಗಂಟೆಗೆ ಹಿರಿಯಡ್ಕದ ಹೆಗ್ಡೆ ಬಿಲ್ಡಿಂಗ್ ಬಳಿ ಇರುವ ಅಂಗಡಿಗೆ ಮೊಟ್ಟೆ ಯನ್ನು ವಿತರಿಸಲು ಹೊರಟಾಗ ಟೆಂಪೋವನ್ನು ವ್ಯಕ್ತಿಯೊಬ್ಬನು ತಡೆದು ನಿಲ್ಲಿಸಿ ಅವರನ್ನು ಉದ್ದೇಶಿ ಕೊಳೆತ ಮೊಟ್ಟೆಯನ್ನು ನೀಡುತ್ತೀರಿ ಎಂದು ಹೇಳಿ ಕೈಯಲ್ಲಿ ಮೊಟ್ಟೆಯನ್ನು ಹಿಡಿದು ಪಿರ್ಯಾದಿದಾ ರರ ಮೂಗಿನ ಬಳಿ ಹಿಡಿದರು. ಅವರು ಕೈಯನ್ನು ಪಕ್ಕಕ್ಕೆ ಸರಿಸಿದಾಗ ಹೊಡೆಯುತ್ತೀರಾ ಎಂದು ಏರು ಧ್ವನಿಯಲ್ಲಿ ಮಾತನಾಡಿ ಬೆದರಿಸಿದರು. ಚಾಲಕ ಗಾಡಿಯಿಂದ ಇಳಿದಾಗ ವ್ಯಕ್ತಿಯು ಕೈ ಸನ್ನೆಯಿಂದ ಮತ್ತೊಬ್ಬನನ್ನು ಕರೆದು ಹುರಿದುಂಬಿಸಿ ಇಬ್ಬರು ಸೇರಿ ಪಿರ್ಯಾದಿದಾರರಿಗೆ ಎಡ ಕೆನ್ನೆಗೆ ಮುತ್ತು ಮುಷ್ಟಿಯಿಂದ ಬೆನ್ನಿಗೆ ಗುದ್ದಿದರು. ಸಹಾಯಕ್ಕೆ ಬಂದ ಚಂದ್ರ ಮರಕಲ ರವರಿಗೆ ಎಡ ಭುಜಕ್ಕೆಮುಷ್ಟಿಯಿಂದ ಬಿಗಿದು ಕಾಲಿನಿಂದ ತುಳಿದಿರುತ್ತಾರೆ. ನಂತರ ಅಲ್ಲಿ ಸೇರಿದ ಸಾರ್ವಜನಿಕರು ಅವರನ್ನು ಬಿಡಿಸಿರುತ್ತಾರೆ. ಹೆಸರು ವಿಳಾಸ ತಿಳಿಯಲಾಗಿ 1) ಸಂತೋಷ್ ರಾಮ್ (38), ತಂದೆ: ದಿ. ಶ್ಯಾಮ ಶೇರಿಗಾರ್, ವಾಸ: ಮುಕಾಂಬಿಕಾ ನಿಲಯ, ಪುತ್ತಿಗೆ, ಮದಗ, ಬೊಮ್ಮರಬೆಟ್ಟು ಗ್ರಾಮ, ಉಡುಪಿ ತಾಲೂಕು , 2) ಸುರೇಶ್ ದೇವಾಡಿಗ (49), ತಂದೆ: ದಿ. ಗೋಪಾಲ ಶೇರಿಗಾರ, ವಾಸ: ಸುಪ್ರಭಾತ, ಸರ್ಕಾರಿ ಜ್ಯುನಿಯರ್ ಕಾಲೇಜು ಬಳಿ, ಬೊಮ್ಮರಬೆಟ್ಟು ಗ್ರಾಮ ಎಂಬುದಾಗಿರುತ್ತದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 55/2021 ಕಲಂ: 341,504,323 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ: ಪಿರ್ಯಾದದಿದಾರರಾದ ಮುಸ್ತಾಫ್ (34), ತಂದೆ: ಮಹಮ್ಮದ್ ಬಿ ಎಮ್‌, ವಾಸ: ಅರೆಹೊಳೆ ಕ್ರಾಸ್ ಕಿರಿಮಂಜೇಶ್ವರ ಪೋಸ್ಟ್, ಬೈಂದೂರು ತಾಲೂಕು ಉಡುಪಿ ಜಿಲ್ಲೆ ಇವರು ಕುಂದಾಪುರದ ಚಿಕನ್ ಸಾಲ್ ರಸ್ತೆಯಲ್ಲಿ ಮೊಬೈಲ್ ಏಕ್ಸ್ ಎಂಬ ಮೊಬೈಲ್ ಅಂಗಡಿಯನ್ನು ಇಟ್ಟುಕೊಂಡು ವ್ಯವಹಾರ ಮಾಡಿಕೊಂಡಿದ್ದು ಕುಂದಾಫುರದ ದತ್ತಾತ್ರೇಯ ಪ್ಲ್ಯಾಟ್‌ ನಲ್ಲಿ ವಾಸ್ತವ್ಯ ಮಾಡಿಕೊಂಡಿರುತ್ತಾರೆ. ದಿನಾಂಕ 17/09/2021 ರಂದು ರಾತ್ರಿ 21:30 ಗಂಟೆಗೆ ಅಂಗಡಿ ವ್ಯವಹಾರ ಮುಗಿಸಿ ವ್ಯವಹಾರದ ಹಣ 50.000/- ನಗದು, ಆಧಾರ್ ಕಾರ್ಡ್ , ಪಾನ್ ಕಾರ್ಡ್ 3-4 ಬ್ಯಾಂಕ್‌ಗಳ ಚೆಕ್ ಪುಸ್ತಕಗಳು ಹಾಗೂ ಇನ್ನಿತರ ಅಮೂಲ್ಯ ದಾಖಲಾತಿಯೊಂದಿಗೆ ಹಾಗೂ ಐಫೋನ್ -1, ಸ್ಯಾಮಸಂಗ್ ಮೊಬೈಲ್ ಫೋನ್ 1, ಆಪಲ್ ಸ್ಮಾರ್ಟ್ ವಾಚ್ -1 ಹಾಗೂ ಏರ್ ಪೋಡ್-1 ಇವುಗಳನ್ನು ಬ್ಯಾಗಿನಲ್ಲಿ ಹಾಕಿಕೊಂಡು ದ್ವಿಚಕ್ರ ವಾಹನದಲ್ಲಿ ಸವಾರಿ ಮಾಡಿಕೊಂಡು ದತ್ತಾತ್ರೇಯ ಪ್ಲ್ಯಾಟ್ ಸಮೀಪ ಹೋದಾಗ ಒಂದು ಸ್ವಿಪ್ಟ್ ಕಾರು ಅನುಮಾನಾಸ್ಪದವಾಗಿ ಬಂದು ಅದರ ಚಾಲಕನಾಗಿ ಆರೋಪಿ ಮುಕ್ತಾರ್ ಎಂಬುವವರಿದ್ದು ಆಗ ಆರೋಪಿ 1.ಮುಕ್ತಾರ್ ಪ್ರಾಯ 40 ವರ್ಷ ತಂದೆ ಇಸ್ಮಾಯಿಲ್ ಬ್ಯಾರಿ ವಾಸ: ನೇರಂಬಳ್ಳಿ ಕುಂದಾಪುರ ತಾಲೂಕು ಉಡುಪಿ ಜಿಲ್ಲೆ. 2. ಕಾರಿನಲ್ಲಿದ್ದ ಒಬ್ಬ ಪುರುಷ ಪ್ರಾಯ 30 ವರ್ಷ ಇವರು ಕಾರಿನಿಂದ ಕೆಳಗೆ ಇಳಿದು ಪಿರ್ಯಾದಿದಾರರಿಗೆ ದೈಹಿಕ ಹಲ್ಲೆ ಮಾಡಿ ಕಾರಿನ ಒಳಗೆ ಎಳೆದುಕೊಂಡು ಆಗ 3 ನೇ ಆರೋಪಿ ಕಾರಿನಲ್ಲಿ ದ್ದ ಇನ್ನೊರ್ವ ಪುರುಷ ಪ್ರಾಯ 40 ವರ್ಷ ಆತನ ಕೈಯಲ್ಲಿದ್ದ ರಿಲಾಲ್ವರ್‌ ನ್ನು ತೋರಿಸಿ ಬೆದರಿಸಿ, 2 ನೇ ಆರೋಪಿಯು ಎಡಕಣ್ಣಿನ ಕೆಳಗೆ ಮುಷ್ಠಿಯಿಂದ ಬಲವಾಗಿ ಗುದ್ದಿ 2 ಮತ್ತು 3 ನೇ ಆರೋಪಿತರು ಪಿರ್ಯಾಧಿದಾರರ ಕೈಯನ್ನು ಹಾಗೂ ಬಾಯಿಯನ್ನು ಕಟ್ಟಿ ಕೂಗದಂತೆ ಮಾಡಿ ಬೆಂಗಳೂರಿಗೆ ಕರೆದುಕೊಂಡು ಹೋಗಿ ದಿನಾಂಕ 18/09/2021 ರಂದು ಬೆಳಿಗ್ಗೆ 1 ರಿಂದ 4 ನೇ ಆರೋಪಿ ಕಾರನ್ನು ಪ್ರವೇಶಿಸಿದ ಓರ್ವ ಮಹಿಳೆ ಪ್ರಾಯ 25 ವರ್ಷ ಇವರು ಬೆಂಗಳೂರಿನ ಸರ್ಜಾಪುರದ ವಸತಿಗೃಹವೊಂದಕ್ಕೆ ಕರೆದುಕೊಂಡು ಹೋಗಿ ನಂತರ 4 ನೇ ಆರೋಪಿತೆಯು ಒಂದು ಮೊಬೈಲ್‌ಗೆ ಪಿರ್ಯಾದಿದಾರರ ಸಿಮ್ ಕಾರ್ಡ್ ಹಾಕಿ ಪಿರ್ಯಾದಿದಾರರಿಗೆ ಕಾಲ್ ಮಾಡಿ ರೂಪಾಯಿ 50.00.000 /- ಹಣವನ್ನು ಹಾಕಬೇಕೆಂದು ಬೆದರಿಕೆ ಹಾಕಿರುತ್ತಾರೆ. ನಂತರ ಆರೋಪಿತರು ಮೊದಲೇ ತೆಗೆದುಕೊಂಡಿಟ್ಟಿದ್ದ ಪಿರ್ಯಾದಿದಾರರ ಮೊಬೈಲ್‌ನ್ನು ತಂದು ಪಿರ್ಯಾದಿದಾರರ ಬ್ಯಾಂಕ್ ಖಾತೆಯನ್ನು ಓಪನ್ ಮಾಡಿ ಅವರ ಖಾತೆಗೆ ರೂಪಾಯಿ 50.000/- ಜಮಾ ಮಾಡಿಕೊಂಡಿದ್ದು ಅಲ್ಲದೇ ಕುಂದಾಫುರದಿಂದ ಬೆಂಗಳೂರಿಗೆ ಕರೆದುಕೊಂಡು ಹೋಗುವಾಗ ದಾರಿಮಧ್ಯೆಯಲ್ಲಿ ಬೆಂಗಳೂರಿನ ಎಟಿಎಮ್‌ ಹಾಗೂ ಸ್ವೈಪಿಂಗ್ ಮೆಷಿನ್‌ ನಿಂದ ರೂಪಾಯಿ 3,14,175 /- ರೂಪಾಯಿಯನ್ನು ಡ್ರಾ ಮಾಡಿರುತ್ತಾರೆ. ನಂತರ ಆರೋಪಿತರು ಎಕ್ಸಿಸ್ ಬ್ಯಾಂಕ್‌ನ ಚೆಕ್ ಪುಸ್ತಕವನ್ನು ತೆಗೆದುಕೊಂಡು ಸಹಿ ಮಾಡಲು ಹೇಳಿ ನೀನು ಊರುಗೆ ಹೋದ ಮೇಲೆ ಖಾತೆಗೆ ಹಣ ಜಮಾ ಮಾಡಬೇಕು ಜಮಾ ಮಾಡಿದರೇ ಮಾತ್ರ ಪಿರ್ಯಾದಿದಾರರ ದಾಖಲಾತಿಯನ್ನು ಮೊಬೈಲ್ ಹಾಗೂ ಇನ್ನಿತರ ವಸ್ತುಗಳ ಹಿಂತಿರುಗಿಸುವುದಾಗಿ ಹೇಳಿರುತ್ತಾರೆ. ನಂತರ ದಿನಾಂಕ 18/09/2021 ರಂದು ರಾತ್ರಿ 9:30 ಗಂಟೆಗೆ ಆರೋಪಿತರು ಪಿರ್ಯಾದಿದಾರರನ್ನು ಬಿಟ್ಟಿದ್ದು ದಿನಾಂಕ 19/09/2021 ರಂದು ಪಿರ್ಯಾದಿದಾರರು ಊರಿಗೆ ಬಂದಿದ್ದು ಆರೋಪಿತರೆಲ್ಲರೂ ಸೇರಿಕೊಂಡು ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಅಪರಾಧಿಕ ಒಳಸಂಚು ಮಾಡಿ ಪಿರ್ಯಾದಿದಾರರಿಂದ ಒಟ್ಟು 4,64,175 ರೂಪಾಯಿ ಹಣವನ್ನು ಹಾಗೂ ರೂಪಾಯಿ 1,00,000/- ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಸುಲಿಗೆ ಮಾಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 108/2021 ಕಲಂ:341,323, 364(A), 392,504, 506, 120(B) R/W 34 IPC & 3,25 ARMS ACT ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-09-2021 10:35 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080