ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕುಂದಾಪುರ: ದಿನಾಂಕ  20/09/2021 ರಂದು  ಸಂಜೆ  5:00  ಗಂಟೆಗೆ  ಉಡುಪಿ ಜಿಲ್ಲೆಯ ತಾಲೂಕಿನ  ಕೊಟೇಶ್ವರ ಗ್ರಾಮದ  ಕೋಸ್ಟಲ್‌‌‌‌‌ ಕ್ರೌನ್‌‌  ಬಳಿ  ಎನ್‌‌. ಹೆಚ್ 66 ರಸ್ತೆಯಲ್ಲಿ, ಆಪಾದಿತ ಸೀತಾರಾಮ ಎಂಬುವವರು   KA-20-AA-8161 ನೇ ದುರ್ಗಾಂಭಾ ಬಸ್ ನ್ನು ಉಡುಪಿ ಕಡೆಯಿಂದ ಕುಂದಾಪುರ  ಕಡೆಗೆ  ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ  ಮಾಡಿಕೊಂಡು  ಬಂದು, ಅದೇ ದಿಕ್ಕಿನಲ್ಲಿ ಪಿರ್ಯಾದಿದಾರರಾದ ನಿರಂಜನ್‌‌‌ ರಾವ್‌ ಕೆ  (34),  ತಂದೆ :  ದಿ. ರಾಧಕೃಷ್ಣ,  ವಾಸ: ಬಿ.ಹೆಚ್‌‌.ಎಂ ರಸ್ತೆ, ನಂದಿಬೆಟ್ಟು, ವಡೇರಹೋಬಳೀ ಗ್ರಾಮ, ಕುಂದಾಪುರ ಇವರು  ಸವಾರಿ ಮಾಡಿಕೊಂಡು  ಬರುತ್ತಿದ್ದ  KA-15-EE-4472ನೇ ಅಪಾಚಿ ಬೈಕಿಗೆ  ಹಿಂದಿನಿಂದ  ಡಿಕ್ಕಿ ಹೊಡೆದ ಪರಿಣಾಮ,  ಪಿರ್ಯಾದಿದಾರರ ಕೈ ಕಾಲುಗಳಿಗೆ  ತರಚಿದ ಗಾಯವಾಗಿ ಕೊಟೇಶ್ವರ  ಎನ್. ಆರ್‌  ಆಚಾರ್ಯ  ಆಶ್ಪತ್ರೆಯಲ್ಲಿ  ಹೊರ ರೋಗಿಯಾಗಿ ಚಿಕಿತ್ಸೆ ಪಡೆದಿರುತ್ತಾರೆ.   ಬಸ್ಸಿನ ಚಾಲಕ  ಪಿರ್ಯಾದಿದಾರರ ಆಸ್ಪತ್ರೆಯ ಖರ್ಚು ವೆಚ್ಚ  ಹಾಗೂ ಬೈಕಿನ  ಖರ್ಚು ವೆಚ್ಚವನ್ನು  ಕೊಡುವುದಾಗಿ ಭರವಸೆ ನೀಡಿ  ಬಳಿಕ ನೀಡಲು ನಿರಾಕರಿಸಿರುವುದರಿಂದ  ದೂರು ನೀಡುವಾಗ ತಡವಾಗಿರುತ್ತದೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 72/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

 • ಅಮಾಸೆಬೈಲು: ಪಿರ್ಯಾದಿದಾರರಾದ ಶ್ರೀಮತಿ ಪ್ರೇಮಾ (55), ಗಂಡ: ಶಂಕರ ಶೆಟ್ಟಿ, ವಾಸ ; ಸೂರ್ಲು ಮನೆ ಮಡಾಮಕ್ಕಿ ಗ್ರಾಮ ಹೆಬ್ರಿ ತಾಲೂಕು ಇವರ  ಮಗ ಅಖಿಲ್ ಕುಮಾರ್ ಶೆಟ್ಟಿ (32) ರವರು 2 ವರ್ಷಗಳಿಂದ ಹೆಬ್ರಿ ರೈಸ್ ಮಿಲ್ಲಿಗೆ ಕೆಲಸಕ್ಕೆ ಹೋಗುವುದಾಗಿ ಬೆಳಿಗ್ಗೆ 08:15 ಗಂಟೆಗೆ ತನ್ನ ಮನೆಯಾದ ಮಡಾಮಕ್ಕಿ ಸೂರ್ಲು ಮನೆ ಎಂಬಲ್ಲಿಂದ ಹೋಗಿ ಸಂಜೆ 04:45 ಗಂಟೆಗೆ ಮನೆಗೆ ವಾಪಾಸು ಬರುತ್ತಿದ್ದು ದಿನಾಂಕ 20/09/2021 ರಂದು ಕೆಲಸಕ್ಕೆ ಹೋಗುವುದಾಗಿ ಹೇಳಿ ಮನೆಯಿಂದ ಹೋದವರು ವಾಪಾಸು ಮನೆಗೆ ಬಾರದೆ ಕಾಣೆಯಾಗಿದ್ದು,  ಬಿಕಾಂ ವ್ಯಾಸಂಗ ಮಾಡಿ CA  ಪರೀಕ್ಷೆಗೆ ಕಟ್ಟಿದ್ದು  CA  ಪರೀಕ್ಷೆಯಲ್ಲಿ ಎರಡು ವಿಷಯದಲ್ಲಿ ಅನುತ್ತೀರ್ಣನಾಗಿದ್ದು ಅದೇ ವಿಷಯದಲ್ಲಿ ಮನೆ ಬಿಟ್ಟು ಹೋಗಿರುವ ಸಾಧ್ಯತೆ ಇರುವುದಾಗಿದೆ. ಈ ಬಗ್ಗೆ ಅಮಾಸೆಬೈಲು ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 34/2021 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ಗಣೇಶ್ ಪೂಜಾರಿ (34), ತಂದೆ: ಸುಂದರ ಪೂಜಾರಿ, ವಾಸ: ಪವಿತ್ರ ನಿವಾಸ, ಕೈರೋಳಿ, ಹೆರ್ಮುಂಡೆ  ಅಂಚೆ ಮತ್ತು ಗ್ರಾಮ, ಕಾರ್ಕಳ ತಾಲೂಕು ಇವರ ಅಜ್ಜ ಸಾಧು ಪೂಜಾರಿ (80) ಎಂಬುವವರು 40 ವರ್ಷಗಳಿಂದ  ಮನೆಗೆ ಬಾರದೇ  ಹಿರ್ಗಾನ ಮೂಜೂರು ಕಡೆ ಕೂಲಿ ಕೆಲಸ ಮಾಡಿಕೊಂಡು ಅಂಗಡಿ ಬದಿಯಲ್ಲಿ ರಾತ್ರಿ ಮಲಗುತ್ತಿದ್ದರು. ದಿನಾಂಕ 22/09/2021 ರಂದು ಬೆಳಿಗ್ಗೆ 08:00 ಗಂಟೆಗೆ ಹಿರ್ಗಾನ ಗ್ರಾಮದ ಸಂತೋಷ ಶೆಟ್ಟಿ ಎಂಬುವವರು ಪಿರ್ಯಾದಿದಾರರಿಗೆ ಕರೆ ಮಾಡಿ ಸಾಧು ಪೂಜಾರಿರವರಿಗೆ  ಬೀದಿನಾಯಿ ಕಚ್ಚಿ  ಮೃತಪಟ್ಟಿದ್ದು ಮೃತದೇಹವನ್ನು ಕಾರ್ಕಳ ಸರಕಾರಿ ಆಸ್ಪತ್ರೆಯ  ಶವಾಗಾರದಲ್ಲಿ ಇಟ್ಟಿದ್ದಾಗಿ ತಿಳಿಸಿದ್ದು, ಪಿರ್ಯಾದಿದಾರರು ಬಂದು ಮೃತದೇಹವನ್ನು ನೋಡಿ ಘಟನೆ ಕುರಿತು ವಿಚಾರಿಸಲಾಗಿ ಸಾಧು ಪೂಜಾರಿರವರು ಮದ್ಯಪಾನ ಮಾಡಿ ಹಿರ್ಗಾನ ಸ್ವಾಗತ್ ಕಾಂಪ್ಲೆಕ್ಸ್  ಕಟ್ಟಡದ ಎದುರು ಮಲಗಿದ್ದವರಿಗೆ ರಾತ್ರಿ ಸಮಯ ಬೀದಿ ನಾಯಿ ಕಚ್ಚಿದ್ದರಿಂದ ವಿಪರೀತ ರಕ್ತಸ್ರಾವವಾಗಿ ಮರಣ ಹೊಂದಿರುವುದಾಗಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 30/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.   
 • ಉಡುಪಿ: ಉಡುಪಿ  ತಾಲೂಕು  ಕುತ್ಪಾಡಿ  ಗ್ರಾಮದ  ಮನೆ ನಂಬ್ರ 12-91  ನೇದರಲ್ಲಿ ವಾಸವಾಗಿದ್ದ ಶ್ರೀಮತಿ ರೂಪಾ (34) ಇವರು ಸುಮಾರು 5  ವರ್ಷಗಳಿಂದ ಯಾವುದೋ ಖಾಯಿಲೆಯಿಂದ ಬಳಲುತ್ತಿದ್ದು ಪದೇ ಪದೇ ಹುಷಾರು ತಪ್ಪುತ್ತಿದ್ದು , ಈ ಬಗ್ಗೆ ಚಿಕಿತ್ಸೆಯನ್ನು ಕೊಡಿಸಿದರು ಕೂಡ ಗುಣಮುಖವಾಗದೇ ಇದ್ದು ಅದೇ ಚಿಂತೆಯಿಂದ ಜೀವನದಲ್ಲಿ ಜಿಗುಪ್ಸೆಗೊಂಡು ದಿನಾಂಕ 22/09/2021 ರಂದು ಬೆಳಿಗ್ಗೆ 08:30  ಗಂಟೆಯಿಂದ  12:30   ಗಂಟೆಯ  ಮಧ್ಯಾವಧಿಯಲ್ಲಿ ಮನೆಯ  ಬೆಡ್ ರೂಮಿನ ಫ್ಯಾನಿಗೆ ಲುಂಗಿ ಕಟ್ಟಿ ಕುತ್ತಿಗೆಗೆ ನೇಣು ಬಿಗಿದುಕೊಂಡು  ಆತ್ಮಹತ್ಯೆ ಮಾಡಿಕೊಂಡಿರುತ್ತಾರೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಅರ್ ಕ್ರಮಾಂಕ 39/2021 ಕಲಂ: 174 ಸಿ.ಆರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.     
   

ಇತ್ತೀಚಿನ ನವೀಕರಣ​ : 22-09-2021 05:48 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ