ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಅಮಾಸೆಬೈಲು: ಪಿರ್ಯಾದಿದಾರರಾದ ಧನುಷ್ (26), ತಂದೆ:ರಮೇಶ್ ಪೂಜಾರಿ, ವಾಸ: ಜಂಗ್ರ ಬಾಳು ಕಮಲಶಿಲೆ ಗ್ರಾಮ ಕುಂದಾಪುರ ತಾಲೂಕು ಬಾವ ರಾಮ ಎಂಬುವವರು ದಿನಾಂಕ 20/08/2022 ರಂದು  09:30 ಗಂಟೆಗೆ ಕಮಲಶಿಲೆಯಿಂದ ಹೆಬ್ರಿಗೆ ಕೆಲಸಕ್ಕೆ ಹೋಗುತ್ತಿರುವಾಗ ಪಿರ್ಯಾದಿದಾರರನ್ನು KA-20-EZ-3742 ಮೋಟಾರು ಸೈಕಲ್ ನ ಹಿಂಬದಿಯಲ್ಲಿ  ಕುಳ್ಳಿರಿಸಿಕೊಂಡು ಮಡಾಮಕ್ಕಿ ಗ್ರಾಮದ ಮಾಂಡಿ ಮೂರುಕೈಯ ಚಾವಣಿ ಹಾಡಿ ಬಳಿ ಹೋಗುತ್ತಿರುವಾಗ ಒಮ್ಮಲೇ ನಾಯಿ ಅಡ್ಡ ಬಂದ ಪರಿಣಾಮ ಬೈಕ್ ಸವಾರನು ಒಮ್ಮೆಲೇ ಬ್ರೇಕ್ ಹಾಕಿದ  ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದು ಎಡಭುಜಕ್ಕೆ ಒಳ ಜಖಂ, ಬಲ ಕೈಗೆ ತಲೆಯ ಎಡಭಾಗ, ಎರಡು ಕಾಲಿನ ಪಾದದ ಬಳಿ ತರಚಿದ ಗಾಯವಾಗಿರುತ್ತದೆ. ಕೂಡಲೇ ಹೆಬ್ರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತೋರಿಸಿದ್ದು,ಪರೀಕ್ಷಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಆದರ್ಶ ಆಸ್ಪತ್ರೆಗೆ ಉಡುಪಿ ಗೆ ದಾಖಲಿಸಿದ್ದು ಒಳರೋಗಿಯಾಗಿ ದಾಖಲಾಗಿರುತ್ತಾರೆ.  ಈ ಬಗ್ಗೆ ಅಮಾಸೆಬೈಲು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 17/2022  ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕಾಪು: ಪಿಯಾ೯ದಿದಾರರಾದ ಹನುಮಪ್ಪ ಮಾದರ್‌ (40), ತಾಯಿ: ನಾಗವ್ವ, ವಾಸ:ಭುಜಂಗಶೆಟ್ಟಿಯವರ ಬಾಡಿಗೆ ಮನೆ,ಕೊಪ್ಪಲಗಂಡಿಕಾಪು ತಾಲೂಕು, ಉಡುಪಿ ಜಿಲ್ಲೆ ಹಾಗೂ ಅವರ  ಅಣ್ಣನ ಮಗಳ ಗಂಡ ರವಿ (25 ) ರವರು  ದಿನಾಂಕ 20/08/2022 ರಂದು  ಸಂಜೆ 6:45 ಗಂಟೆಗೆ ಪಡು ಗ್ರಾಮದ ಕೊಪ್ಪಲಂಗಡಿ ಬಳಿ ನೂರುಲ್ಲಾ ಹುದಾ ಮದ್ರಸದ ಸಮೀಪ ರಾಷ್ಟ್ರೀಯ ಹೆದ್ದಾರಿ 66 ರ ಉಡುಪಿ- ಮಂಗಳೂರು ರಸ್ತೆಯನ್ನು ದಾಟಿ   ಮಂಗಳೂರು-ಉಡುಪಿ ರಸ್ತೆಯನ್ನು ದಾಟಿವುದಕ್ಕಾಗಿ ಮಧ್ಯದ ಡಿವೈಡರನಲ್ಲಿ ನಿಂತಿದ್ದು, ರವಿ ಯವರು ಮಂಗಳೂರು-ಉಡುಪಿ ರಸ್ತೆಯನ್ನು ದಾಟಿ  ರಸ್ತೆಯ ಪಶ್ಚಿಮ ಅಂಚಿನಲ್ಲಿರುವಾಗ KA-20-EY-4808 ನಂಬ್ರದ ಮೋಟಾರ್‌  ಸೈಕಲ್‌ ಸವಾರನು ಅತೀವೇಗ ಹಾಗೂ ಅಜಾಗರೂಕತೆಯಿಂದ ತನ್ನ ಮೋಟಾರ್‌ ಸೈಕಲನ್ನು ಚಲಾಯಿಸಿಕೊಂಡು ಬಂದು ರವಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ರವಿ ಯವರು ರಸ್ತೆಗೆ ಬಿದ್ದಿದ್ದು, ಅದೇ ಸಮಯ  ಮಂಗಳೂರು ಕಡೆಯಿಂದ ಉಡುಪಿ ಕಡೆಗೆ ಓವ೯ ಕಾರು ಚಾಲಕನು ತನ್ನ ಕಾರನ್ನು ಅತೀವೇಗ ಹಾಗೂ ನಿಲ೯ಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು  ರಸ್ತೆಗೆ ಬಿದ್ದಿದ್ದ ರವಿಯವರ ಕಾಲಿನ ಮೇಲೆ ಕಾರಿನ ಎಡಭಾಗದ  ಎರಡು ಚಕ್ರವನ್ನು ಹತ್ತಿಸಿಕೊಂಡು ಕಾರನ್ನು ನಿಲ್ಲಿಸದೇ ಅಲ್ಲಿಂದ ಪರಾರಿಯಾಗಿರುತ್ತಾನೆ. ಈ ಅಪಘಾತದಿಂದ ರವಿಯವರ ಎರಡು ಕಾಲುಗಳ ಮೂಳೆ ಸಂಪೂಣ೯ವಾಗಿ ಜಖಂಗೊಂಡಿರುತ್ತದೆ.  ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 87/2022 ಕಲಂ: 279, 337, 338 ಐಪಿಸಿ ಮತ್ತು ಕಲಂ:134(ಎ)&(ಬಿ) ಐ.ಎಂ.ವಿ ಕಾಯ್ದೆ ಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ದಿನಾಂಕ 21/08/2022 ರಂದು ಮಧ್ಯಾಹ್ನ 3:30 ಗಂಟೆಗೆ,  ಕುಂದಾಪುರ  ತಾಲೂಕಿನ, ಹಂಗಳೂರು  ಗ್ರಾಮದ  ವಿನಾಯಕ ಟಾಕೀಸ್‌ಹತ್ತಿರ ಪೂರ್ವ ಬದಿಯ ಎನ್‌. ಹೆಚ್‌ 66 ರಸ್ತೆಯಲ್ಲಿ, ಆಪಾದಿತ ಕರೆಪ್ಪ ಆಡಿನವರ್‌ ರವರು  KA-22-D-9977 ನೇ ಲಾರಿಯನ್ನು ಕುಂದಾಪುರ ಕಡೆಯಿಂದ ಉಡುಪಿ ಕಡೆಗೆ  ಅತೀವೇಗ  ಹಾಗೂ ನಿರ್ಲಕ್ಷ್ಯತನದಿಂದ ಚಾಲನೆ ಮಾಡಿಕೊಂಡು ಬಂದು, ಅದೇ ದಿಕ್ಕಿನಲ್ಲಿ ಪಿರ್ಯಾದಿದಾರರಾದ H.ಮನೋಹರ್ ಶೆಟ್ಟಿರವರು KA-20-Z-5012ನೇ ಮಾರುತಿ  ಎಸ್ಟಿಲೋ  ಕಾರಿನಲ್ಲಿ ಅವರ  ಪತ್ನಿ ಸುನಂದ ಶೆಟ್ಟಿ, ಮಗಳಾದ ಅಬಿನಯ ಶೆಟ್ಟಿ  ಹಾಗೂ ಮೊಮ್ಮಗ  ಅದ್ವಯ್‌ ಶೆಟ್ಟಿ ಯವರನ್ನು ಕುಳ್ಳಿರಿಸಿಕೊಂಡು  ಚಾಲನೆ ಮಾಡಿಕೊಂಡು ಹೋಗುತ್ತಿದ್ದ ಕಾರನ್ನು  ಎಡಭಾಗದಿಂದ  ಓವರ್‌‌ಟೇಕ್‌ ಮಾಡಿ ಕಾರಿನ ಎಡಬದಿಗೆ ಡಿಕ್ಕಿ ಹೊಡೆದ ಪರಿಣಾಮ, ಕಾರು ನಿಯಂತ್ರಣ ತಪ್ಪಿ ರಸ್ತೆಯ ಮಧ್ಯೆದ ಡಿವೈಡರ್‌ಹತ್ತಿ  ಪಶ್ಚಿಮ ಬದಿಯ  ಎನ್‌. ಹೆಚ್‌66 ರಸ್ತೆಯಲ್ಲಿ  ತಿರುಗಿ ನಿಂತಿದ್ದು, ಈ ಅಪಘಾತದಿಂದ  ಸುನಂದ ಶೆಟ್ಟಿ, ಅಬಿನಯ ಶೆಟ್ಟಿ  ಹಾಗೂ ಅದ್ವಯ್‌ ಶೆಟ್ಟಿ ಗಾಯಗೊಂಡು ಕುಂದಾಪುರ ಚಿನ್ಮಯಿ ಆಸ್ಪತ್ರೆಯಲ್ಲಿ  ಚಿಕಿತ್ಸೆ ಪಡೆದಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 92/2022  ಕಲಂ: 279, 337 ಐಪಿಸಿಯಂತೆ ಪರಕರಣ ದಾಖಲಾಗಿರುತ್ತದೆ.  

ಇತರ ಪ್ರಕರಣ

 • ಬೈಂದೂರು: ದಿನಾಂಕ  20/08/2022 ರಂದು ಬೈಂದೂರು ವೃತ್ತ ನಿರೀಕ್ಷಕರಾದ ಸಂತೋಷ ಎ ಕಾಯ್ಕಿಣಿ ರವರು ಶಿರೂರು ಟೋಲ್ ಗೇಟ್ ಬಳಿ ರೌಂಡ್ಸ್ ಕರ್ತವ್ಯದಲ್ಲಿರುವಾಗ ಸಾರ್ವಜನಿಕ ಸ್ಥಳದಲ್ಲಿ ಅಮಲಿನಲ್ಲಿ ತೂರಾಡಿಕೊಂಡಿದ್ದ ಸೈಬಾಜ್ ಖಾನ್ (21), ತಂದೆ : ನಾಸೀರ್ ಖಾನ್, ವಾಸ : ಮನೆ ನಂ: 12-87, ಕರಿಕಟ್ಟೆ, ಆರ್ಮಿ, ಶಿರೂರು ಗ್ರಾಮ, ಬೈಂದೂರು ತಾಲೂಕು ಉಡುಪಿ ಜಿಲ್ಲೆ ಎಂಬಾತನನ್ನು ವಶಕ್ಕೆ ಪಡೆದುಕೊಂಡು ಬಂದಿದ್ದು  ಮಾದಕ ವಸ್ತು ಸೇವಿಸಿರುವ ಸಂಶಯವಿದ್ದು ಆತನನ್ನು ವಶಕ್ಕೆ ಪಡೆದುಕೊಂಡು ವೈದ್ಯಕೀಯ ತಪಾಸಣೆಯ ಬಗ್ಗೆ ವೈದ್ಯಾಧಿಕಾರಿಯವರು ಶ್ರೀ ಮಾತಾ ಆಸ್ಪತ್ರೆ ಕುಂದಾಪುರ ರವರ ಮುಂದೆ ಹಾಜರು ಪಡಿಸಿದ್ದು ದಿನಾಂಕ 20/08/2022 ರಂದು ಈತನನ್ನು ಪರೀಕ್ಷಿಸಿದ ವೈದ್ಯಾಧಿಕಾರಿಯವರು ಸೈಬಾಜ್ ಖಾನ್ ಗಾಂಜಾ ಸೇವಿಸಿರುವುದು ದೃಢಪಟ್ಟಿರುವುದಾಗಿ ವರದಿಯನ್ನು ನೀಡಿರುವುದಾಗಿದೆ. ಈ ಬಗ್ಗೆ ಬೈಂದೂರು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 165/2022  ಕಲಂ : 27(B) NDPS ACT-1985 ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-08-2022 10:01 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080