ಅಭಿಪ್ರಾಯ / ಸಲಹೆಗಳು

ಅಸ್ವಾಭಾವಿಕ ಮರಣ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಸುಖಾನಂದ ಶೆಣೈ (44), ತಂದೆ: ದಿ ರವೀಂದ್ರ ಶೆಣೈ , ವಾಸ: ಶ್ರೀ ದೇವಕಿ  ಕೃಷ್ಣ, ಮದ್ದುಗುಡ್ಡೆ  ಕುಂದಾಫುರ ಕಸಬಾ  ಗ್ರಾಮ, ಕುಂದಾಪುರ ತಾಲೂಕು  ಉಡುಪಿ  ಜಿಲ್ಲೆ  ಇವರ  ತಾಯಿ  ಸುಮತಿ ಆರ್  ಶೆಣೈ (73) ಇವರು 5-6 ವರ್ಷಗಳಿಂದ ಹೃದಯ ಸಂಬಂಧಿ ಹಾಗೂ ಸಕ್ಕರೆ ಖಾಯಿಲೆಯಿಂದ ಬಳಲುತ್ತಿದ್ದು ಮಾನಸಿಕವಾಗಿ ಖಿನ್ನತೆಗೆ ಒಳಗಾಗಿ  ಜೀವನದಲ್ಲಿ ಜಿಗುಪ್ಸೆಗೊಂಡು  ದಿನಾಂಕ 21/08/2021 ರಂದು ಸಂಜೆ 04:00 ಗಂಟೆಯಿಂದ ಸಂಜೆ 04:30 ಗಂಟೆಯ ಮಧ್ಯಾವಧಿಯಲ್ಲಿ ಮನೆಯ ಅಂಗಳದಲ್ಲಿರುವ ಆವರಣ ಇರುವ ನೀರು ತುಂಬಿದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 32/2021 ಕಲಂ: 174 CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

  • ಕುಂದಾಪುರ: ಪಿರ್ಯಾದಿದಾರರಾದ ಶ್ರೀಮತಿ ಲೀನಾ ಡಿಸೋಜ(63), ಗಂಡ: ವಿಕ್ಟರ್ ಆರ್. ಡಿಸೋಜ, ವಾಸ: ಹಲವರ ಕೆರೆ ಹತ್ತಿರ ಬಸ್ರೂರು ಗ್ರಾಮ, ಕುಂದಾಪುರ ತಾಲೂಕು ಇವರ ಗಂಡ ವಿಕ್ಟರ್ ಆರ್ ಡಿಸೋಜ (63) ಇವರು ದಿನಾಂಕ 20/08/2021 ರಂದು ರಾತ್ರಿ 11:00 ಗಂಟೆ ಸಮಯಕ್ಕೆ ಮನೆಯಿಂದ ಮೋಟಾರ್ ಬೈಕನ್ನು ತೆಗೆದುಕೊಂಡು ಹೊರಗೆ ಹೋಗಿದ್ದು, ರಾತ್ರಿಯಾದರೂ ಮನೆಗೆ ಬಾರದೆ ಇದ್ದು ಅಕ್ಕ ಪಕ್ಕದವರಲ್ಲಿ ವಿಚಾರಿಸಿದಾಗ ಅವರ ಬೈಕ್ ಬಸ್ರೂರು ರೈಲ್ವೆ ಸೇತುವೆ ಕೆಳಗಡೆ ನಿಂತಿದ್ದು, ರೈಲ್ವೆ ಸೇತುವ ಮೇಲೆ ಚಪ್ಪಲಿ ಇರುತ್ತದೆ. ಮನೆಗೆ ಬಾರದ ಕಾರಣ ಹುಡುಕಾಡಿದರೂ ಅವರು ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 57/2021 ಕಲಂ: ಮನುಷ್ಯ ಕಾಣೆಯಂತೆ ಪ್ರಕರಣ ದಾಖಲಾಗಿರುತ್ತದೆ.

ಮಟ್ಕಾ ಜುಗಾರಿ ಪ್ರಕರಣ

  • ಗಂಗೊಳ್ಳಿ: ದಿನಾಂಕ 21/08/2021 ರಂದು ನಂಜಾನಾಯ್ಕ್‌ ಎನ್‌,  ಪೊಲೀಸ್ ಉಪನಿರೀಕ್ಷಕರು, ಗಂಗೊಳ್ಳಿ ಪೊಲೀಸ್‌ ಠಾಣೆ ಇವರಿಗೆ ದೊರೆತ ಮಾಹಿತಿಯಂತೆ ಆಲೂರು ಗ್ರಾಮದ ಆಲೂರು ಪೇಟೆ ಪ್ರೇಮಾ ನಾಯ್ಕ್‌ ಪೂಟ್‌ವೇರ್‌ ಅಂಗಡಿ ಬಳಿ ಸಾರ್ವಜನಿಕ ಸ್ಥಳಕ್ಕೆ ಹೋಗಿ ದಾಳಿ ಮಾಡಿ, ಮಟ್ಕಾ ಜುಗಾರಿ ನಡೆಸುತ್ತಿದ್ದ ಸೂಲ್ಯ ನಾಯ್ಕ್‌ (50), ತಂದೆ: ಬಚ್ಚ ನಾಯ್ಕ್‌, ವಾಸ: ನಾಯಿ ಮಣ್ಣಿನ ಮನೆ ಆಲೂರು ಗ್ರಾಮ, ಕುಂದಾಪುರ ತಾಲೂಕು ಎಂಬಾತನನ್ನು ವಶಕ್ಕೆ ಪಡೆದು , ಮಟ್ಕಾ ಜುಗಾರಿಗೆ ಬಳಸಿದ ಮಟ್ಕ ಚೀಟಿ-1, ಬಾಲ್ ಪೆನ್ನು-1 ಹಾಗೂ 640/-ರೂಪಾಯಿ ನಗದನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 77/2021 ಕಲಂ: 78(I), 78(III) ಕೆ.ಪಿ ಕಾಯ್ದೆಯಂತೆ ಪ್ರಕರಣ ದಾಖಲಾಗಿರುತ್ತದೆ.   

ಇತ್ತೀಚಿನ ನವೀಕರಣ​ : 22-08-2021 09:29 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ