ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ 

  • ಕಾಪು:ಪಿರ್ಯಾದಿದಾರರಾದ ಸಿದ್ದು ಯಾನೆ ಸಿದ್ದನಗೌಡ (24), ತಂದೆ : ಮಲ್ಲಣ್ಣಗೌಡ ,ವಾಸ : ರಬ್ನಳ್ಳಿ ಗ್ರಾಮ ಶಹಪೂರ ತಾಲೂಕು, ಯಾದಗಿರಿ ಜಿಲ್ಲೆ ಇವರು ದಿನಾಂಕ 21/08/2021 ರಂದು ಬೆಳಗ್ಗೆ 10.45 ಗಂಟೆ ಸುಮಾರಿಗೆ ತನ್ನ KA-20-EA-2403 ನೇ ಮೋಟಾರು ಸೈಕಲನಲ್ಲಿ ಶಿರ್ವ ಕಟಪಾಡಿ ರಸ್ತೆಯಲ್ಲಿ ಕಟಪಾಡಿ ಕಡೆಗೆ ಬರುತ್ತಿರುವಾಗ ಮೂಡಬೆಟ್ಟು ಗ್ರಾಮದ ಹೋಟೆಲ್ ಅಮ್ಮನ ಅಟೀಲ್ ಸಮೀಪ, ಪಿರ್ಯಾದಿದಾರರ ಎದುರಿನಿಂದ KA-19-A-5192 ಟಿಪ್ಪರ್ ಲಾರಿಯ ಚಾಲಕ ವಿನೋದನ ತನ್ನ ಟಿಪ್ಪರ್ ಲಾರಿಯನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಒಮ್ಮೇಲೆ ಎಡಕ್ಕೆ ತಿರುಗಿಸಿದ ಪರಿಣಾಮ ಟಿಪ್ಪರ್ ಲಾರಿಯ ಹಿಂದಿನ ಎಡಬದಿ ಪಿರ್ಯಾದಿದಾರರ ಮೋಟಾರು ಸೈಕಲ್‌ಗೆ ಢಿಕ್ಕಿ ಹೊಡೆದಿದ್ದು, ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್‌ ಸಮೇತ ರಸ್ತೆಗೆ ಬಿದ್ದು, ಬಲಬದಿ ತಲೆಗೆ, ಬಲಬದಿ ಕಣ್ಣಿನ ಹತ್ತಿರ ಗಾಯವಾಗಿದ್ದು ಅಲ್ಲಿ ಸೇರಿದ ಸಾರ್ವಜನಿಕರು ಉಪಚರಿಸಿ ನೋಡಿ ಚಿಕಿತ್ಸೆಯ ಬಗ್ಗೆ ಉಡುಪಿ ಹೈಟೆಕ್ ಆಸ್ಪತ್ರೆಗೆ ಕರೆದುಕೊಂಡು ಹೋದಲ್ಲಿ ಪರೀಕ್ಷಿಸಿದ ಅಲ್ಲಿನ ವೈದ್ಯರು ಒಳರೋಗಿಯನ್ನಾಗಿ ದಾಖಲಿಸಿಕೊಂಡಿರುತ್ತಾರೆ. ಈ ಬಗ್ಗೆ ಕಾಪು ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 138/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಕುಂದಾಪುರ : ದಿನಾಂಕ 22/08/2021 ರಂದು ಬೆಳಿಗ್ಗೆ 10:40 ಗಂಟೆಗೆ, ಕುಂದಾಪುರ ತಾಲೂಕಿನ, ಕೊಟೇಶ್ವರ ಗ್ರಾಮದ ಕೊಟೇಶ್ವರ ಕಿನಾರಾ ಕ್ರಾಸ್‌‌‌‌ ಬಳಿ, ಕಾಮತ್‌ ಪೆಟ್ರೋಲ್‌‌ ಬಂಕ್‌ ಹತ್ತಿರ, ಆಪಾದಿತ ಗೋಪಾಲ ಎಂಬುವವರು KA-20-N-9089ನೇ ಕಾರನ್ನು ಕೊಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ಪಶ್ಚಿಮ ಬದಿಯ NH66 ರಸ್ತೆಯಲ್ಲಿ ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಾಲನೆ ಮಾಡಿಕೊಂಡು ಬಂದು, NH66 ರಸ್ತೆಯ ಪಶ್ಚಿಮ ಬದಿಯ ಕಾಮತ್‌ ಪೆಟ್ರೋಲ್‌‌ ಬಂಕ್‌ ಕಡೆಗೆ ತಿರುಗಿಸಿ, ಕೊಟೇಶ್ವರ ಕಡೆಯಿಂದ ಕುಂದಾಪುರ ಕಡೆಗೆ ಪಶ್ಚಿಮ ಬದಿಯ NH66 ಸರ್ವಿಸ್‌ ರಸ್ತೆಯಲ್ಲಿ, ಪಿರ್ಯಾದಿದಾರರಾದ ಅಶೋಕ (44), ತಂದೆ ಕರಿಯಣ್ಣ, ವಾಸ: ಹನುಮಾನ್‌‌ ಗ್ಯಾರೇಜ್‌‌ ಬಳಿ, ಬಿಸಿ ರಸ್ತೆ, ವಡೇರಹೋಬಳಿ ಗ್ರಾಮ ಕುಂದಾಪುರ ತಾಲೂಕು ಇವರು ಸವಾರಿ ಮಾಡಿಕೊಂಡು ಹೋಗುತ್ತಿದ್ದ KA-20-EW-1338ನೇ ಸ್ಕೂಟರ್‌ ಗೆ ಡಿಕ್ಕಿ ಹೊಡೆದ ಪರಿಣಾಮ ಪಿರ್ಯಾದಿದಾರರ ಬಲ ಪಕ್ಕೆಲುಬಿಗೆ ಒಳಜಖಂ ಹಾಗೂ ಬಲಭುಜ ಹಾಗೂ ಮೈ ಕೈಗೆ ಒಳನೋವಾದ ಗಾಯವಾಗಿ ಕೊಟೇಶ್ವರ ಎನ್‌. ಆರ್‌ ಆಚಾರ್ಯ ಆಸ್ಪತ್ರೆಯಲ್ಲಿ ದಾಖಲಾಗಿರುತ್ತಾರೆ. ಈ ಬಗ್ಗೆ ಕುಂದಾಪುರ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 

ಅಸ್ವಾಭಾವಿಕ ಮರಣ 

  • ಉಡುಪಿ: ಪಿರ್ಯಾದಿದಾರರಾದ ದೀಪಕ್‌ (33) ,ತಂದೆ: ಮುತ್ತ ಅಮೀನ್‌, ವಾಸ: ಪ್ರೇಮ ಕ್ಲಿನಿಕ್‌ ಎದುರು, ಕೆ.ಜಿ ರಸ್ತೆ, ಉಪ್ಪೂರು, ತೆಂಕಬೆಟ್ಟು ಅಂಚೆ, ಉಡುಪಿ ತಾಲೂಕು ಇವರ ತಮ್ಮ ನವೀನ್‌ ಪ್ರಾಯ 32 ವರ್ಷ ಇವರು ಅವಿವಾಹಿತನಾಗಿದ್ದು, ಉಡುಪಿಯಲ್ಲಿ ಗ್ರಾಫಿಕ್‌ ಡಿಸೈನರ್‌ ಆಗಿ ಕೆಲಸ ಮಾಡಿಕೊಂಡಿರುತ್ತಾರೆ. ಇವರು ಕಳೆದ ಎರಡು ವರ್ಷಗಳಿಂದ ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ದೈನಂದಿನ ಮಾತ್ರೆಗಳನ್ನು ತೆಗೆದುಕೊಳ್ಳುತ್ತಿದ್ದವರು ದಿನಾಂಕ 21/08/2021 ರಂದು ಸಂಜೆ ಕೆಲಸ ಮುಗಿಸಿ 18:30 ಗಂಟೆಗೆ ಪುತ್ತೂರು ವೀರಾಂಜನೇಯ ದೇವಸ್ಥಾನಕ್ಕೆ ಹೋದವನು ತೀವ್ರ ಅಸ್ವಸ್ಥನಾದವರನ್ನು ಕೂಡಲೇ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆತಂದಲ್ಲಿ 19:50 ಗಂಟೆಗೆ ಪರೀಕ್ಷಿಸಿದ ವೈದ್ಯರು ನವೀನ್‌ ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 32/2021 ಕಲಂ: 174 CrPC ಯಂತೆ ಪ್ರಕರಣ ದಾಖಲಾಗಿರುತ್ತದೆ.

 

ಇತ್ತೀಚಿನ ನವೀಕರಣ​ : 22-08-2021 07:03 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ