ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ  ಶ್ರೀಮತಿ ಅಂಬಿಕಾ (36) , ಗಂಡ:ಅರ್ಜುನ್, ವಾಸ: ಮಾವಿನಕಟ್ಟೆ ನಂದಳಿಕೆ ಗ್ರಾಮ ಕಾರ್ಕಳ ತಾಲೂಕು ಉಡುಪಿ ಜಿಲ್ಲೆ ಇವರು ತನ್ನ ಗಂಡ ಅರ್ಜುನ್ ಹಾಗೂ ಮಕ್ಕಳೊಂದಿಗೆ ಬೆಳ್ಮಣ್ ನಿಂದ  ಕೆದಿಂಜೆ ಕಡೆಗೆ  ರಾಜೇಶ್ ಎಂಬುವವರ KA-20-AB-2617 ನೇ ಆಟೋ ರಿಕ್ಷಾದಲ್ಲಿ ಪ್ರಯಾಣಿಕರಾಗಿ ಪ್ರಯಾಣಿಸುತ್ತಿರುವಾಗ ಕಾರ್ಕಳ ತಾಲೂಕು ಕೆದಿಂಜೆ ಗ್ರಾಮದ ಪಕಾಲಪಾದೆ ಎಂಬಲ್ಲಿ ರಾಜ್ಯ ಹೆದ್ದಾರಿಯಲ್ಲಿ ನಾಯಿಯೊಂದಕ್ಕೆ ಡಿಕ್ಕಿ ಹೊಡೆಯಲು ತಪ್ಪಿಸಲು ನಿರ್ಲಕ್ಷತನದಿಂದ ಏಕಾಏಕಿ ಬ್ರೇಕ್ ಹಾಕಿದ ಪರಿಣಾಮ   ಆಟೋರಿಕ್ಷಾ ಚಾಲಕನ ಹತೋಟಿ ತಪ್ಪಿ ಆಟೋರಿಕ್ಷಾವು ಡಾಮಾರು ರಸ್ತೆಯಲ್ಲಿ ಮಗುಚಿ ಬಿದ್ದ ಪರಿಣಾಮ ಪಿರ್ಯಾದಿದಾರರ ಬಲ ಕೈಗೆ ಮೂಳೆ ಮುರಿತವಾಗಿದ್ದು, ಮಗ ಆದಿತ್ಯನ ಮುಖದ ಎಡಭಾಗ ಹಾಗೂ ಎಡಕಾಲಿಗೆ ತರಚಿದ ಗಾಯವಾಗಿದ್ದು, ಗಂಡನಿಗೆ ಕುತ್ತಿಗಗೆ ಬಳಿ ಗುದ್ದಿದ್ದ ನೋವಾಗಿರುತ್ತದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 99/2022 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಜುಗಾರಿ ಪ್ರಕರಣ

 • ಕುಂದಾಪುರ: ದಿನಾಂಕ  21/07/2022 ರಂದು ನಿರಂಜನ್‌ಗೌಡ ಬಿ.ಎಸ್‌, ಪೊಲೀಸ್‌ ಉಪನಿರೀಕ್ಷಕರು, ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಇವರಿಗೆ ಕುಂದಾಪುರ ತಾಲೂಕು ಕರ್ಕುಂಜೆ ಗ್ರಾಮದ ಜಾಡ್‌ಕಟ್ಟು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ವ್ಯಕ್ತಿಗಳು ಹಣವನ್ನು ಪಣವಾಗಿಟ್ಟು ತಮ್ಮ ಸ್ವಂತ ಲಾಭಕ್ಕಾಗಿ ಇಸ್ಪೀಟು ಎಲೆಗಳಿಂದ ಅಂದರ್ ಬಾಹರ್ ಎಂಬ ಇಸ್ಪೀಟು ಆಟವಾಡುತ್ತಿದ್ದಾರೆಂದು ಬಂದ  ಮಾಹಿತಿ ಮೇರೆಗೆ ದಾಳಿ ನಡೆಸಿ 1) ರಾಮ, 2) ಶಂಕರ ಮೊಗವೀರ, 3) ಬಾಸ್ಕರ ಪೂಜಾರಿ, 4) ಶಿವರಾಮ ಇವರನ್ನು ಸಿಬ್ಬಂದಿಯವರ ಸಹಾಯದಿಂದ ವಶಕ್ಕೆ ಪಡೆದುಕೊಂಡಿದ್ದು ಒಬ್ಬಾತನು ಓಡಿ ತಪ್ಪಿಸಿಕೊಂಡಿರುತ್ತಾನೆ. ಇಸ್ಪೀಟ್‌ಜುಗಾರಿ ಆಟಕ್ಕೆ ಬಳಸಿದ್ದ ನಗದು ರೂಪಾಯಿ 2100/, ಬಿಳಿ ಬಣ್ಣದ ಪ್ಲಾಸ್ಟಿಕ್‌ ಚೀಲ-1, ಇಸ್ಪೀಟು ಎಲೆಗಳು-52 ಸ್ವಾಧೀನ ಪಡಿಸಿ ಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 34/2022 ಕಲಂ: 87 ಕೆ.ಪಿ ಆ್ಯಕ್ಟ್ ರಂತೆ ಪ್ರಕರಣ ದಾಖಲಾಗಿರುತ್ತದೆ.   

ಕೊಲೆ ಪ್ರಕರಣ

 • ಉಡುಪಿ: ಪಿರ್ಯಾದಿದಾರರಾದ ಅರುಣ್‌ ಶೆಟ್ಟಿ (35), ತಂದೆ: ವಾಸು ಶೆಟ್ಟಿ, ವಾಸ: ‘ಪಂಚವಟಿ ಹೌಸ್‌’, ಖಜಾನೆ, ಶಿವಪುರ ಅಂಚೆ, ಹೆಬ್ರಿ ತಾಲೂಕು, ಉಡುಪಿ ಜಿಲ್ಲೆ ಇವರು ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೆ ಸ್ಟೇಶನ್‌ ಎದುರು ದುರ್ಗಾಪರಮೇಶ್ವರಿ ಎಂಬ ಕ್ಯಾಂಟೀನ್‌ ನಡೆಸಿಕೊಂಡಿದ್ದು,  ಕ್ಯಾಂಟೀನ್‌ ನಲ್ಲಿ ಕುಮಾರ (32) ಎಂಬುವವರು ಕ್ಲೀನಿಂಗ್‌ ಕೆಲಸ ಮಾಡಿಕೊಂಡಿದ್ದು, ದಿನಾಂಕ 21/07/2022 ರಂದು 16:45 ಗಂಟೆಗೆ ಇಬ್ಬರು ಆರೋಪಿತರು  ಉಡುಪಿ ತಾಲೂಕು ಶಿವಳ್ಳಿ ಗ್ರಾಮದ ಇಂದ್ರಾಳಿ ರೈಲ್ವೆ ಸ್ಟೇಶನ್‌ ರಸ್ತೆಯ ನಾಗಬನದ ಬಳಿ ರಸ್ತೆಯ ಬದಿಯಲ್ಲಿ ಯಾವುದೋ ಕಾರಣದಿಂದ ಮರದ ದೊಣ್ಣೆಯಿಂದ ಕುಮಾರನ ತಲೆಗೆ ತೀವ್ರವಾಗಿ ಹಲ್ಲೆ ಮಾಡಿ ಕೊಲೆ ಮಾಡಿರುವುದಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 114/2022 ಕಲಂ: 302 ಜೊತೆಗೆ 34 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಮನುಷ್ಯ ಕಾಣೆ ಪ್ರಕರಣ

 • ಕುಂದಾಪುರ: ಪಿರ್ಯಾದಿದಾರರಾದ ಸಂತೋಷ (32), ತಂದೆ: ಸಂಜೀವ ಮೊಗವೀರ, ವಾಸ: ಶ್ರೀ ದುರ್ಗ ಪರಮೇಶ್ವರಿ ನಿಲಯ ಪಡುಗೋಪಾಡಿ,ಗೋಪಾಡಿ  ಗ್ರಾಮ ,ಕುಂದಾಪುರ ತಾಲೂಕು ಇವರ ತಮ್ಮ ಯೋಗೀಶ (27)ರವರು ದಿನಾಂಕ 19/07/2022ರಂದು ಪೈಂಟಿಂಗ್‌ ಕೆಲಸ ಮುಗಿಸಿ ಮನೆಗೆ ಬಂದು ಸಂಜೆ 5:00 ಗಟೆಗೆ ಮನೆಯಿಂದ ಹೋದವರು ಬಳಿಕ ವಾಪಾಸು ಬಂದಿರುವುದಿಲ್ಲ. ಈ ಬಗ್ಗೆ ಸಂಬಂಧಿಕರ ಮನೆಗಳಲ್ಲಿ ಹಾಗೂ ನೆರೆಕರೆಯವರಲ್ಲಿ ವಿಚಾರಿಸಲಾಗಿ ಪತ್ತೆಯಾಗಿರುವುದಿಲ್ಲ. ಈ ಬಗ್ಗೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 76/2022 ಕಲಂ: Man Missing ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

 • ಕಾರ್ಕಳ: ಪಿರ್ಯಾದಿದಾರರಾದ ಶ್ರೀಮತಿ ಸೌಮ್ಯ (33), ಗಂಡ: ಸುನಿಲ್ ವಾಸ: ಕೆಳಮನೆ, ಮಾರಿಗುಡಿ ಬಳಿ, ಕೌಡೂರು ಗ್ರಾಮ ಬೈಲೂರು, ಕಾರ್ಕಳ ತಾಲೂಕು,ಉಡುಪಿ ಜಿಲ್ಲೆ ಇವರು ಕಾರ್ಕಳ ತಾಲೂಕು ಕೌಡೂರು ಗ್ರಾಮದಲ್ಲಿರುವ ತನ್ನ ತಾಯಿಯ ಮನೆಯಲ್ಲಿ ವಾಸವಾಗಿದ್ದು ನಾಲ್ಕೂವರೆ ವರ್ಷಗಳ ಹಿಂದೆ ಫೇಸ್‌ಬುಕ್‌ನಲ್ಲಿ ಕೇರಳ ರಾಜ್ಯ, ಕಾಸರಗೋಡು ಜಿಲ್ಲೆ ಉಪ್ಪಳ ಬೇಕೂರು ನಿವಾಸಿ ಸುನಿಲ್ ಟಿ ಎಂಬುವವರು ಪರಿಚಯವಾಗಿದ್ದು ಇಬ್ಬರೂ ಪರಸ್ಪರ  ಪ್ರೀತಿಸುತ್ತಿದ್ದು,  ದಿನಾಂಕ 12/05/2019 ರಂದು ಕಾರ್ಕಳ ಪೆರ್ವಾಜೆಯ ಈಶ್ವರ ದೇವಸ್ಥಾನದಲ್ಲಿ  ಮದುವೆಯಾಗಿದ್ದು, ದಿನಾಂಕ 01/06/2019 ರಂದು ವಿವಾಹ ನೋಂದಣಿ ಮಾಡಿಕೊಂಡಿರುತ್ತಾರೆ. 1 ವರ್ಷದವರೆಗೆ ಒಳ್ಳೆಯ ರೀತಿಯಿಂದ ಇದ್ದು ನಂತರದ ದಿನಗಳಲ್ಲಿ ಅಪಾದಿತ ಸುನಿಲ್ ಪಿರ್ಯಾದಿದಾರರನ್ನು ಹಣಕ್ಕಾಗಿ ಪೀಡಿಸಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದು 5 ಲಕ್ಷ ರೂ ವರದಕ್ಷಿಣೆ ಹಣ ಕೊಡಬೇಕೆಂದು ಒತ್ತಾಯಿಸಿದ್ದು ಪಿರ್ಯಾದಿದಾರರು ಬಂಗಾರವನ್ನು ಅಡವಿಟ್ಟು 80,000/ ರೂಪಾಯಿ ಹಣವನ್ನು ನೀಡಿದ್ದು , ದಿನಾಂಕ 30/06/2019 ರಂದು 3 ಲಕ್ಷ ರೂ ಖರ್ಚು ಮಾಡಿ ಮದುವೆ ಆರತಕ್ಷತೆಯನ್ನು ಕಾರ್ಕಳ ಸ್ವಾಗತ್ ಹೊಟೇಲ್ ಸಭಾ ಭವನದಲ್ಲಿ ಮಾಡಿರುತ್ತಾರೆ. ಮದುವೆಯಾದ ಬಳಿಕ ಪಿರ್ಯಾದಿದಾರರು ತನ್ನ ತಾಯಿ ಮನೆಯಲ್ಲಿಯೇ ಇದ್ದು ಅಪಾದಿತನ ಮನೆಗೆ ಕರೆದುಕೊಂಡು ಹೋಗಿರುವುದಿಲ್ಲ.  ದಿನಾಂಕ 17/11/2021 ರಂದು ಅಪಾದಿತ ಸುನಿಲ್  ಊರಿಗೆ ಹೋಗಿದ್ದು ನಂತರ ಫೋನ್ ಮಾಡಿರಲಿಲ್ಲ ಪಿರ್ಯಾದಿದಾರರು ಫೋನ್ ಮಾಡಿದಾಗ ಫೋನ್ ಮಾಡಬೇಡವೆಂದು ಬೈಯುತ್ತಿದ್ದವರು ಪಿರ್ಯಾದಿದಾರರು ಮನಸ್ಸಿಗೆ  ಬೇಸರಗೊಂಡು ದಿನಾಂಕ 07/03/2022 ರಂದು ಸಾಯಬೇಕೆಂದು ಬಿ.ಪಿ ಮಾತ್ರೆ ತಿಂದಿದ್ದು ಕೆಎಂಸಿ ಆಸ್ಪತ್ರೆಗೆ ದಾಖಲಿಸಿದ್ದು ಪಿರ್ಯಾದಿದಾರರ ಅಣ್ಣ ಸುನಿಲ್‌ಗೆ  ಕರೆಮಾಡಿ ತಿಳಿಸಿದಾಗ ಅವಳು ಸಾಯಲಿ ಬರುವುದಿಲ್ಲ ಎಂದು ತಿಳಿಸಿರುತ್ತಾನೆ. ಪಿರ್ಯಾದಿದಾರರು ದಿನಾಂಕ 20/06/2022 ರಂದು ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದು ದೂರು ಅರ್ಜಿಯ ವಿಚಾರಣೆ ವಿಚಾರಣೆ ಸಮಯ 15 ದಿನಗಳ ಕಾಲಾವಕಾಶ ಕೊಡಿ ಒಳ್ಳೆಯ ರೀತಿಯಿಂದ ನೋಡಿಕೊಳ್ಳುತ್ತೇನೆಂದು ಹೇಳಿದ್ದು ನಂತರ ಅಪಾದಿತನಿಗೆ ಫೋನ್ ಮಾಡಿದಾಗ ಇನ್ನೂ 5 ಲಕ್ಷ ರೂ ವರದಕ್ಷಿಣೆ ಕೊಡು ಎಂದು ಜೀವ ಬೆದರಿಕೆ ಹಾಕಿ ವರದಕ್ಷಿಣೆ ಕೊಡುವಂತೆ ಮಾನಸಿಕ ಹಿಂಸೆ ನೀಡಿರುವುದಾಗಿ ನೀಡಿದ ದೂರಿನಂತೆ ಕಾರ್ಕಳ ನಗರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 101/2022 ಕಲಂ: 498(A), 506 ಐಪಿಸಿ ಮತ್ತು  3, 4 DOWRY PROHIBITION ACT ರಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ಪಿರ್ಯಾದಿದಾರರಾದ ದಾಕ್ಷಾಯಿಣಿ (47), ಗಂಡ: ನಾಗರಾಜ ಹತ್ವಾರ್,  ವಾಸ: ಕೋಟಿ ಶ್ರೀನಿವಾಸ ನಿಲಯ, ಪಡು ಗೋಪಾಡಿ, ಕಾಂತೇಶ್ವರ ರೋಡ್, ಕೋಟೆಶ್ವರ, ಕುಂದಾಪುರ ತಾಲೂಕು ಇವರು ಕೋಟೆಶ್ವರ ಗ್ರಾಮದ ಸ.ನಂ 16/1 ರಲ್ಲಿ 0.09 ಎಕ್ರೆ, ಸ.ನಂ 16/7 ರಲ್ಲಿ 0.11 ಎಕ್ರೆ, ಮತ್ತು ಸ.ನಂ 15/9 ರಲ್ಲಿ 0.04 ಎಕ್ರೆ ಸ್ಥಿರಾಸ್ಥಿ ಹೊಂದಿದ್ದು ಸ್ಥಿರಾಸ್ಥಿಗೆ ಸಂಬಂದಿಸಿದಂತೆ ನೆರೆಮನೆಯ ನಿವಾಸಿಗಳಾದ ಆಪಾದಿತ  1)ಸೀತಾರಾಮ ಐತಾಳ (60) , ತಂದೆ: ಕೃಷ್ಣಯ್ಯ ಐತಾಳ್‌, ವಾಸ: ಪಡು ಗೋಪಾಡಿ, ಕಾಂತೇಶ್ವರ ರೋಡ್, ಕೋಟೆಶ್ವರ, ಕುಂದಾಪುರ ತಾಲೂಕು, 2)  ನಾಗರತ್ನ ಐತಾಳ್ (55) , ಗಂಡ: ಸೀತಾರಾಮ ಐತಾಳ್, ವಾಸ: ಪಡು ಗೋಪಾಡಿ, ಕಾಂತೇಶ್ವರ ರೋಡ್, ಕೋಟೆಶ್ವರ, ಕುಂದಾಪುರ ತಾಲೂಕು , 3) ಶ್ರುತಿ (25) , ತಾಯಿ: ಸೀತಾಲಕ್ಷ್ಮೀ , ವಾಸ: ಪಡು ಗೋಪಾಡಿ, ಕಾಂತೇಶ್ವರ ರೋಡ್, ಕೋಟೆಶ್ವರ, ಕುಂದಾಪುರ ತಾಲೂಕು ಇವರೊಂದಿಗೆ ಜಾಗದ ತಕರಾರು ಇದ್ದು ಇದೇ ವಿಚಾರದಲ್ಲಿ ದಿನಾಂಕ 22/03/2022 ರಂದು ಪಿರ್ಯಾದಿದಾರರು ಮನೆಯಲ್ಲಿದ್ದ ಸಮಯ ಆಪಾದಿತೆ 3 ನೇಯವರಾದ ಶ್ರುತಿ ರವರು  ತನ್ನ  ಸ್ಕೂಟಿಯಲ್ಲಿ ಪಿರ್ಯಾದಿದಾರರ ಜಾಗದ ಮೂಲಕ ತನ್ನ ಮನೆಗೆ ಚಲಾಯಿಸಿಕೊಂಡು ಹೋಗಿದ್ದು, ಈ ವಿಚಾರವನ್ನು ಪಿರ್ಯಾದಿದಾರರು ಆಪಾದಿತೆ 3 ನೇಯವರಲ್ಲಿ ಪ್ರಶ್ನಿಸಿದಾಗ ಆಪಾದಿತ 1 ಮತ್ತು 2 ನೇಯವರು ಪಿರ್ಯಾದಿದಾರರ ಜಾಗಕ್ಕೆ ಅಕ್ರಮವಾಗಿ ಪ್ರವೇಶಿಸಿ, ಪಿರ್ಯಾದಿದಾರರನ್ನು ಅಡ್ಡಗಟ್ಟಿ ಅವಾಚ್ಯ ಶಬ್ದದಿಂದ ಬೈಯ್ದು, ಕೈ ರಟ್ಟೆಯನ್ನು ಹಿಡಿದು ಎಳೆದಾಡಿ ದೂಡಿ ನೆಲಕ್ಕೆ ಬೀಳಿಸಿರುತ್ತಾರೆ.  ಬಿಡಿಸಲು ಬಂದ ಪಿರ್ಯಾದಿದಾರರ ಗಂಡ ಹಾಗೂ ಮಕ್ಕಳ ಮೇಲೆ ಹಲ್ಲೆ ನಡೆಸಿ ಜೀವ ಬೆದರಿಕೆ ಹಾಕಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 74/2022 ಕಲಂ: 323, 341, 447, 354, 504, 506  ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
 • ಕುಂದಾಪುರ: ಪಿರ್ಯಾದಿದಾರರಾದ ಸಾವಿತ್ರಿ, ತಂದೆ:ಶ್ರೀನಿವಾಸ @ ಶೀನದಾಸ, ವಾಸ: ನೀರಾಡಿ ಜಡ್ಡು, ಸಾಸ್ತಾನ ಅಂಚೆ, ಪಾಂಡೇಶ್ವರ ಗ್ರಾಮ, ಉಡುಪಿ ಜಿಲ್ಲೆ ಇವರ ತಂದೆ ಶ್ರೀನಿವಾಸ್ ದಾಸ್ ರವರು ಕುಂದಾಪುರ ತಾಲೂಕು ಒಡೆಯರ ಹೋಬಳಿ ಗ್ರಾಮದ ಸರ್ವೆ ನಂಬ್ರ 86/59ಎಪಿ2 ರಲ್ಲಿ 30 ಸೆಂಟ್ಸ್ ಸ್ಥಿರಾಸ್ಥಿಗೆ ಸಂಬಂಧಿಸಿದಂತೆ ಅಧಿಭೋಗದ ಹಕ್ಕಿಗೆ ಕೋರಿ ಕುಂದಾಪುರ ಭೂನ್ಯಾಯ ಮಂಡಳಿಯ ಮುಂದೆ ಕುಟುಂಬದ ಪರವಾಗಿ ಅರ್ಜಿ ಸಲ್ಲಿಸಿದ್ದು, ಅದರಂತೆ ಭೂ ನ್ಯಾಯ ಮಂಡಳಿಯು ಟಿ.ಆರ್.ಐ 11112/79 ರಂತೆ  ಅಧಿಭೋಗದ ಹಕ್ಕನ್ನು ಪಿರ್ಯಾದಿದಾರರ ತಂದೆಗೆ ನೀಡಿ ನಮೂನೆ 10 ನ್ನು ಸಹಾ ನೀಡಿರುತ್ತದೆ. ಪಿರ್ಯಾದಿದಾರರು ಮತ್ತು ಆಪಾದಿತರಾದ 1) ಸೀತಾರಾಮ್ ದಾಸ್ (59) , ತಂದೆ: ಶ್ರೀನಿವಾಸ @ ಶೀನ, ವಾಸ: ಶ್ರೀನಿವಾಸ ನಿಲಯ, ಟಿ.ಟಿ ರಸ್ತೆ, ವಡೆಯರಹೋಬಳಿ, ಕುಂದಾಪುರ ತಾಲೂಕು, 2) ಗಿರಿಜ ,ಗಂಡ: ಆನಂದ ದಾಸ್, ವಾಸ: ನೀರಾಡಿ ಜಡ್ಡು, ಸಾಸ್ತಾನ ಅಂಚೆ, ಪಾಂಡೇಶ್ವರ ಗ್ರಾಮ, ಉಡುಪಿ ಜಿಲ್ಲೆ., 3) ಆನಂದ ದಾಸ್ , ತಂದೆ: ಶೀನ ದಾಸ್, ವಾಸ: ನೀರಾಡಿ ಜಡ್ಡು, ಸಾಸ್ತಾನ ಅಂಚೆ, ಪಾಂಡೇಶ್ವರ ಗ್ರಾಮ, ಉಡುಪಿ ಜಿಲ್ಲೆ  4) ಪದ್ಮ ವೆಂಕಟೇಶ್ ದಾಸ್, ತಂದೆ: ಶ್ರೀನಿವಾಸ್, ವಾಸ: ನೀರಾಡಿ ಜಡ್ಡು, ಸಾಸ್ತಾನ ಅಂಚೆ, ಪಾಂಡೇಶ್ವರ ಗ್ರಾಮ, ಉಡುಪಿ ಜಿಲ್ಲೆ , 5) ಲಕ್ಷ್ಮೀ , ಗಂಡ: ಬಿ ಸಂಜೀವ ದಾಸ್, ವಾಸ: ನೀರಾಡಿ ಜಡ್ಡು, ಸಾಸ್ತಾನ ಅಂಚೆ, ಪಾಂಡೇಶ್ವರ ಗ್ರಾಮ, ಉಡುಪಿ ಜಿಲ್ಲೆ., 6) ಶಾರದಾ ಆರ್, ಗಂಡ: ರಾಮಚಂದ್ರ ಹೆಚ್.ಎಮ್ , ವಾಸ: ನೀರಾಡಿ ಜಡ್ಡು, ಸಾಸ್ತಾನ ಅಂಚೆ, ಪಾಂಡೇಶ್ವರ ಗ್ರಾಮ, ಉಡುಪಿ ಜಿಲ್ಲೆ, 7) ಇಂದಿರಾ, ಗಂಡ: ಗೋವಿಂದ ದಾಸ್, ವಾಸ: ನೀರಾಡಿ ಜಡ್ಡು, ಸಾಸ್ತಾನ ಅಂಚೆ, ಪಾಂಡೇಶ್ವರ ಗ್ರಾಮ, ಉಡುಪಿ ಜಿಲ್ಲೆ., 8) ವಿನಯಾಕ್ಷಿ, ಗಂಡ: ಶ್ರೀನಿವಾಸ, ವಾಸ: ನೀರಾಡಿ ಜಡ್ಡು, ಸಾಸ್ತಾನ ಅಂಚೆ, ಪಾಂಡೇಶ್ವರ ಗ್ರಾಮ, ಉಡುಪಿ ಜಿಲ್ಲೆ ಇವರು   ಶ್ರೀನಿವಾಸ್ ದಾಸ್ ರವರ ಮಕ್ಕಳಾಗಿದ್ದು, ಪಿರ್ಯಾದಿದಾರರ ತಂದೆ 1996 ರಲ್ಲಿ  ಮೃತಪಟ್ಟಿರುವುದಾಗಿದೆ. ಜುಲೈ 2021 ರಲ್ಲಿ ಪಿರ್ಯಾದಿದಾರರು ಜಾಗಕ್ಕೆ ಸಂಬಂದಿಸಿದ ಆರ್.ಟಿ.ಸಿಯನ್ನು ನೋಡಲಾಗಿ ಸ್ಥಿರಾಸ್ಥಿಯು ಆಪಾದಿತ 1 ನೇಯವರಾದ ಸೀತಾರಾಮ್ ದಾಸ್ ರವರ ಹೆಸರಿನಲ್ಲಿ ನೋಂದಣಿಯಾಗಿರುತ್ತದೆ. ಈ ಬಗ್ಗೆ ಕುಂದಾಪುರ ಸಬ್ ರಿಜಿಸ್ಟಾರ್ ಆಫೀಸಿನಲ್ಲಿ ದಾಖಲೆ ತೆಗೆದು ನೋಡಿದಾಗ ಆಪಾದಿತರಾದ 2 ರಿಂದ 8 ನೇಯವರು ಒಟ್ಟಾಗಿ ಸ್ಥಿರಾಸ್ಥಿಯನ್ನು  1 ನೇ ಆರೋಪಿ ಸೀತಾರಾಮ್ ದಾಸ್ ರವರಿಗೆ ಬಿಟ್ಟು ಕೊಟ್ಟಿರುವ ಬಗ್ಗೆ  ದಿನಾಂಕ 14/05/2013 ರಂದು ದಸ್ತಾವೇಜು ನಂಬ್ರ 588/2013-14 ರಂತೆ ಆಪಾದಿತ ಸೀತಾರಾಮ್ ದಾಸ್ ರವರ ಹೆಸರಿಗೆ ರಿಲೀಸ್ ಡೀಡ್ ನಂತೆ ನೋಂದಾಯಿಸಿರುವುದು ಕಂಡು ಬಂದಿದ್ದು, ಆಪಾದಿತ 1 ನೇಯವರಾದ ಸೀತಾರಾಮ್ ದಾಸ್ ರವರು ಸ್ಥಿರಾಸ್ಥಿಯನ್ನು ನೋಂದಾಯಿಸುವ ಸಮಯ ಪಿರ್ಯಾದಿದಾರರನ್ನು ಪಕ್ಷಗಾರನನ್ನಾಗಿ ಮಾಡದೇ, ದಾಖಲೆಗಳಲ್ಲಿ ಪಿರ್ಯಾದಿದಾರರ ಹೆಸರನ್ನು ನೋಂದಾಯಿಸದೇ ಪಿರ್ಯಾದಿದಾರರಿಗೆ ನಷ್ಟವನ್ನುಂಟು ಮಾಡಿ  ವಂಚನೆ ಮಾಡಿರುವುದಲ್ಲದೇ ಆರೋಪಿಗಳು ಸುಳ್ಳು ಪ್ರಮಾಣ ಪತ್ರ ಮತ್ತು ಘೋಷಣಾ ಪತ್ರವನ್ನು ಸಬ್ ರಿಜಿಸ್ಟಾರ್ ಮುಂದೆ ಹಾಜರುಪಡಿಸಿ ನಿಜವೆಂದು ನಂಬಿಸಿ  ಮೋಸ ಮಾಡಿರುವುದಾಗಿದೆ. ಈ ಬಗ್ಗೆ ಆಪಾದಿತ 1 ನೇಯವರಾದ ಸೀತಾರಾಮ್ ದಾಸ್ ರವರಲ್ಲಿ ಪಿರ್ಯಾದಿದಾರರು ವಿಚಾರಿಸಿದಾಗ ಸ್ಥಿರಾಸ್ಥಿಯು ತನ್ನದೆಂದು, ಯಾರಿಗೆ ಬೇಕಾದರೂ ಮಾರಾಟ ಮಾಡುತ್ತೇನೆ ಎಂದು ಅವಾಚ್ಯ ಶಬ್ದದಿಂದ ಬೈಯ್ದು ಕೊಲೆ ಬೆದರಿಕೆ ಹಾಕಿರುವುದಾಗಿ ನೀಡಿದ ಮಾನ್ಯ ನ್ಯಾಯಾಲಯದ ಖಾಸಗಿ ದೂರಿನಂತೆ ಕುಂದಾಪುರ ಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ 75/2022 ಕಲಂ: 420, 465, 468,471, 474, 504, 506  ಜೊತೆಗೆ 149 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 22-07-2022 09:55 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080