ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಬ್ರಹ್ಮಾವರ: ದಿನಾಂಕ 20/07/2021 ರಂದು ಪಿರ್ಯಾದಿದಾರರಾದ ರಾಘವೇಂದ್ರ (34), ತಂದೆ: ದಿ. ನರಸಿಂಹ, ವಾಸ:1-54 ಸಿ, ಗುಡ್ಡಮ್ಮಡಿ, ಸೇನಾಪುರ, ಕುಂದಾಫುರ ತಾಲೂಕು ಇವರು  ತನ್ನ  KA-20-AA-4056 ನೇ ಆಪೆ ಆಟೋ ರಿಕ್ಷಾದಲ್ಲಿ ಚಾಲಕನಾಗಿ ಸಂಬಂಧಿಕರಾದ ಅಣ್ಣ ಜರ್ನಾಧನ ಶೇಟ್, ಅಶ್ವಿನಿ, ಐಶ್ವರ್ಯ  ಹಾಗೂ ಪಿರ್ಯಾದಿದಾರರ ಮಕ್ಕಳಾದ ರಮ್ಯ ಮತ್ತು ರಶ್ಮೀ  ರವರನ್ನು ಕುಳ್ಳಿರಿಸಿಕೊಂಡು ಉಡುಪಿ ಸಂತೆಕಟ್ಟಿಯಿಂದ  ಮನೆಯಾದ ಗುಡ್ಡಮ್ಮಡಿಗೆ  ಹೋಗಲು ಉಡುಪಿ- ಕುಂದಾಪುರ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಹೊರಟು ಉಪ್ಪೂರು ಗ್ರಾಮದ ಹೇರೂರು ಸೇತುವೆ ಯಿಂದ ದಕ್ಷಿಣ ದಿಕ್ಕಿಗೆ ರಸ್ತೆಯಲ್ಲಿ ಬರುತ್ತಾ ರಾತ್ರಿ 9:45 ಗಂಟೆಗೆ ಅವರ ಹಿಂದಿನಿಂದ   ಉಡುಪಿ ಕಡೆಯಿಂದ ಆರೋಪಿತೆ ಶಿಬಾನಿ ರವರು ಅವರ KA-20-MD-4529  ನೇ ಹುಂಡೈ ಕ್ರೇಟಾ ಕಾರನ್ನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ  ರಿಕ್ಷಾಕ್ಕೆ ಹಿಂದಿನಿಂದ ಡಿಕ್ಕಿ ಹೊಡೆದಿದ್ದು, ಪರಿಣಾಮ ರಿಕ್ಷಾ ರಾಷ್ಟ್ರೀಯ ಹೆದ್ದಾರಿ 66 ರ ಪಶ್ಚಿಮ ಭಾಗದಲ್ಲಿ ನಿಂತಿದ್ದ KA-19-MA-0361 ನೇ ನಂಬ್ರದ ವ್ಯಾಗನರ್ ಕಾರಿಗೆ ಡಿಕ್ಕಿ ಹೊಡೆದು ಸ್ವಲ್ಪ ಮುಂದಕ್ಕೆ ಹೋಗಿ ಕಬ್ಬಿಣದ ತಡೆಗೋಡೆಗೆ ಡಿಕ್ಕಿ ಹೊಡೆದು ನಿಂತಿರುತ್ತದೆ.  ಅಲ್ಲದೇ ಡಿಕ್ಕಿ ಹೊಡೆದ ಆರೋಪಿತೆಯ ಕಾರು ರಿಕ್ಷಾ ನಿಂತ ಸ್ಥಳದಿಂದ ಮುಂದೆ ಹೇರೂರು ಸೇತುವೆ ಮೇಲೆ ಹೋಗಿ ನಿಂತಿರುತ್ತದೆ. ಈ ಅಪಘಾತದ ಪರಿಣಾಮ ರಿಕ್ಷಾದಲ್ಲಿದ್ದ ಪಿರ್ಯಾದಿದಾರರ ಬಲಕಾಲಿನ ಗಂಟಿನ ಬಳಿ ತರಚಿದ ಗಾಯವಾಗಿ, ಬಲ ಭುಜದ ಹಿಂಭಾಗ ಕೂಡ ರಕ್ತಗಾಯವಾಗಿ, ತಲೆಗೆ ಮತ್ತು ಬೆನ್ನಿಗೆ ಒಳಜಖಂ ಉಂಟಾಗಿರುತ್ತದೆ. ರಿಕ್ಷಾದಲ್ಲಿದ್ದ ರಮ್ಯಳ ಬಲಕಿವಿಯ ಬಳಿ, ಮುಖಕ್ಕೆ ರಕ್ತಗಾಯ, ರಶ್ಮಿಗೆ ಮುಖಕ್ಕೆ, ಸೊಂಟಕ್ಕೆ, ಕಾಲಿಗೆ , ಎಡ ಕೈಗೆ  ರಕ್ತಗಾಯ, ಜರ್ನಾಧನರವರಿಗೆ ತಲೆಗೆ, ಹೊಟ್ಟೆಗೆ ಒಳ ಜಖಂ ಉಂಟಾಗಿರುತ್ತದೆ ಹಾಗೂ ಅಶ್ವಿನಿಯ  ಸೊಂಟದ ಭಾಗ ಪೂರ್ತಿ  ಮೂಳೆ ಮುರಿತ  ಉಂಟಾಗಿರುತ್ತದೆ. ಐಶ್ವರ್ಯಳಿಗೂ ಕೂಡ ಗಾಯವಾಗಿರುತ್ತದೆ. ಅಲ್ಲದೇ ಈ ಅಪಘಾತದಿಂದ KA19-MA-0361 ನೇ ನಂಬ್ರದ ವ್ಯಾಗನರ್ ಕಾರಿನ ಮುಂದಿನ ಬಲಭಾಗದ ಡೋರ್ ಬಳಿ ಜಖಂ ಆಗಿರುತ್ತದೆ ಹಾಗೂ ಆರೋಪಿತೆಯ ಕಾರಿನ ಮುಂಬಾಗ  ಎಡಭಾಗ ಜಖಂಗೊಂಡಿರುತ್ತದೆ.  ಗಾಯಾಳುಗಳನ್ನು  ಚಿಕಿತ್ಸೆಯ ಬಗ್ಗೆ ಬ್ರಹ್ಮಾವರ ಮಹೇಶ ಆಸ್ಪತ್ರಗೆ  ಕರೆದುಕೊಂಡು ಹೋಗಿದ್ದು ಅಲ್ಲಿ ಪ್ರಥಮ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಯ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 138/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಹೆಬ್ರಿ: ದಿನಾಂಕ 21/07/2021 ರಂದು ಪಿರ್ಯಾದಿದಾರರಾದ ಅಕಸಾಲಿ ಮೋಹನ್ (25), ತಂದೆ: ಅಕಸಾಲಿ ಅಶೋಕ, ವಾಸ : ಮ.ನಂ: 6-15 ಮಹಾಬಲ ಶೆಟ್ಟಿ ಕಂಪೌಂಡ್ ನಿಟ್ಟೂರು ಪತ್ತೂರು ಗ್ರಾಮ ಉಡುಪಿ ತಾಲೂಕು ಇವರು ದಿಲೀಪ್ ಶೆಟ್ಟಿ ರವರು ಚಲಾಯಿಸುತ್ತಿದ್ದ KA-19-AA-8577 ನೇ ಕಾರಿನಲ್ಲಿ ಸಹ ಪ್ರಯಾಣಿಕರಾಗಿ ಆಗುಂಬೆ ಕಡೆಯಿಂದ ಉಡುಪಿ ಕಡೆಗೆ ಹೋಗುತ್ತಿರುವಾಗ ಸಂಜೆ 05:00 ಗಂಟೆಗೆ ಹೆಬ್ರಿ ಗ್ರಾಮದ ಜಡ್ಕಟ್ ತಿರುವಿನ ಬಳಿ ತಲುಪಿದಾಗ ಅವರ ಎದುರುಗಡೆಯಿಂದ ಅಂದರೆ ಉಡುಪಿ ಕಡೆಯಿಂದ ಆಗುಂಬೆ ಕಡೆಗೆ KA-20-MD-1031 ನೇ ಕಾರನ್ನು ಅದರ ಚಾಲಕ ವಿಘ್ನೇಶ ರವರು ಅತೀ ವೇಗ ಹಾಗೂ ಅಜಾಗರೂಕತೆಯಿಂದ  ಆತನ ಮುಂದುಗಡೆಯಿಂದ ಹೋಗುತ್ತಿದ್ದ ಕಾರನ್ನು ಓವರ್ ಟೇಕ್ ಮಾಡಿ ರಸ್ತೆಯ ತೀರಾ ಬಲಬದಿಗೆ ಬಂದು ಪಿರ್ಯಾದಿದಾರರ ಕಾರಿಗೆ ಢಿಕ್ಕಿ ಹೊಡೆದು ಕಾರು ತಿರುಗಿ ಓವರ್ ಟೇಕ್ ಮಾಡಿ ಬಂದ KL-05-AK-5624 ನೇ ಕಾರಿನ ಬಲಬದಿಗೆ ಢಿಕ್ಕಿ ಹೊಡೆದಿರುವುದಾಗಿದೆ.ಈ ಘಟನೆಯಿಂದ ಆಪಾದಿತ ಚಾಲಕ ವಿಘ್ನೇಶ ರವರಿಗೆ ತಲೆಯ ಬಳಿ ಗಾಯವಾಗಿರುತ್ತದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 50/2021 ಕಲಂ: 279, 337 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಅಸ್ವಾಭಾವಿಕ ಮರಣ ಪ್ರಕರಣ

  • ಅಜೆಕಾರು: ಪಿರ್ಯಾದಿದಾರರಾದ ರಾಜೇಶ್ ಶೆಟ್ಟಿ (38), ತಂದೆ: ಭಾಸ್ಕರ ಶೆಟ್ಟಿ,  ವಾಸ: ಹೊನ್ನಮಾರು ಹೌಸ್, ಹಿರ್ಗಾನ ಗ್ರಾಮ ಮತ್ತು ಅಂಚೆ, ಕಾರ್ಕಳ ತಾಲೂಕು ಇವರ ತಂದೆ ಭಾಸ್ಕರ ಕಡಂಬ (75) ಎಂಬುವವರು ಕಾರ್ಕಳ ತಾಲೂಕು ಹಿರ್ಗಾನ ಗ್ರಾಮದ ಹೊನ್ನೆಮಾರು ಎಂಬಲ್ಲಿ ವಾಸ ಮಾಡಿಕೊಂಡಿರುತ್ತಾರೆ. ಭಾಸ್ಕರ ಕಡಂಬ ರವರು ಮೊದಲಿನಿಂದಲೂ ಉಬ್ಬಸದ ಖಾಯಿಲೆಯಿಂದ ಬಳಲುತ್ತಿದ್ದು, ಈ ಬಗ್ಗೆ ಮಣಿಪಾಲದ ಕೆ.ಎಂ.ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಕೊಡಿಸುತ್ತಿರುವುದಾಗಿದೆ. ದಿನಾಂಕ 21/07/2021 ರಂದು ಸಂಜೆ 5:00 ಗಂಟೆ ಸಮಯಕ್ಕೆ ಮರ್ಣೆ ಗ್ರಾಮದ ಅಜೆಕಾರಿನಲ್ಲಿರುವ ತನ್ನ ಹೆಂಡತಿಯ ಮನೆಗೆ ಬಂದಿರುತ್ತಾರೆ. ನಂತರ ರಾತ್ರಿ 10:45 ಗಂಟೆಗೆ ತೀವ್ರವಾಗಿ ಉಸಿರಾಟದ ತೊಂದರೆ ಕಾಣಿಸಿಕೊಂಡ ಕಾರಣ ಅವರನ್ನು ಕೂಡಲೇ ಒಂದು ವಾಹನದಲ್ಲಿ ಟಿ.ಎಂ.ಎ ಪೈ ರೋಟರಿ ಆಸ್ಪತ್ರೆ ಕಾರ್ಕಳಕ್ಕೆ ಕರೆದುಕೊಂಡು ಹೋಗಿ ಒಳ ರೋಗಿಯಾಗಿ ದಾಖಲು ಮಾಡಿ ಚಿಕಿತ್ಸೆ ಕೊಡಿಸುತ್ತಿದ್ದು, ಚಿಕಿತ್ಸೆ ಫಲಕಾರಿಯಾಗದೇ ದಿನಾಂಕ 22/07/2021 ರಂದು  00:05 ಗಂಟೆಗೆ ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆ ಯುಡಿಆರ್ ಕ್ರಮಾಂಕ 09/2021 ಕಲಂ: 174 ಸಿ.ಅರ್.ಪಿ.ಸಿಯಂತೆ ಪ್ರಕರಣ ದಾಖಲಾಗಿರುತ್ತದೆ.  

ಇತ್ತೀಚಿನ ನವೀಕರಣ​ : 22-07-2021 09:32 AM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080