ಅಭಿಪ್ರಾಯ / ಸಲಹೆಗಳು

ಅಪಘಾತ ಪ್ರಕರಣಗಳು

  • ಹಿರಿಯಡ್ಕ: ದಿನಾಂಕ 22/07/2021 ರಂದು ಪಿರ್ಯಾದಿದಾರರಾಧ ವಾದಿರಾಜ ಡಿ  ಸುವರ್ಣ  (49) ತಂದೆ: ದಿ|| ಡಿ.ಪಿ. ಸುವರ್ಣ ವಾಸ: ಡಿ.ಪಿ. ಕಂಪೌಂಡ್, ಗುಂಡಿಬೈಲ್, ದೊಡ್ಡಣಗುಡ್ಡೆ, ಕುಂಜಿಬೆಟ್ಟು ಅಂಚೆ, ಶಿವಳ್ಳಿ ಗ್ರಾಮ ಉಡುಪಿ ಇವರು ತನ್ನ ಬಸ್ ನಂಬ್ರ KA-35-A-8219 ನೇದನ್ನು ಚಲಾಯಿಸಿಕೊಂಡು ಉಡುಪಿಯಿಂದ ಅತ್ರಾಡಿ ಕಡೆಗೆ ಬರುತ್ತಿರುವಾಗ ಸಮಯ ಸುಮಾರು 8:15 ಗಂಟೆಗೆ ಅತ್ರಾಡಿ ಕಟ್ಟೆ ಬಳಿ ತಲುಪುವಾಗ ಹಿರಿಯಡ್ಕ ಕಡೆಯಿಂದ ಮಣಿಪಾಲ ಕಡೆಗೆ ಮೋಟಾರು ಸೈಕಲ್ ನಂಬ್ರ KA-20-EE-9827 ನೇದನ್ನು ಅದರ ಸವಾರ ಮಧುಕರ ಎಂಬವರು ಗೋಪಾಲ ಎಂಬವರನ್ನು ಸಹಸವಾರನಾಗಿ ಕುಳ್ಳಿರಿಸಿಕೊಂಡು ರಾಷ್ಟ್ರೀಯ ಹೆದ್ದಾರಿ 169 ಎ ರಲ್ಲಿ ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿ ರಸ್ತೆಯ ತೀರಾ ಬಲಬದಿಗೆ ಚಲಿಸಿ ಬಸ್ಸಿನ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಡಿಕ್ಕಿಯ ರಭಸಕ್ಕೆ ರಸ್ತೆಯ ಎಡಬದಿಗೆ ಅಪ್ಪಳಿಸಿ ರಸ್ತೆಯಲ್ಲಿ ಹೋಗುತ್ತಿದ್ದು ದ್ವಿಚಕ್ರ ವಾಹನ ನಂಬ್ರ KA-20-EG-0371 ನೇದಕ್ಕೆ ಅಪ್ಪಳಿಸಿದ ಪರಿಣಾಮ ಅದರ ಸವಾರರಾದ ಪ್ರದೀಪ್ ಅಚಾರ್ಯ ರವರಿಗೆ ಕೈಗೆ ಗಾಯವಾಗಿದ್ದಲ್ಲದೆ ಸಹಸವಾರರಾದ ಗೋಪಾಲ ಎಂಬವರಿಗೆ ತೀವೃತರಹದ ರಕ್ತಗಾಯವಾಗಿರುತ್ತದೆ. ಈ ಅಪಘಾತಕ್ಕೆ KA-20-EE-9827 ನೇ ಸವಾರ ಮಧುಕರವರ ಅತಿವೇಗ ಹಾಗೂ ನಿರ್ಲಕ್ಷ್ಯತನದ ಚಾಲನೆಯೇ ಕಾರಣವಾಗಿರುವುದಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 41/2021 ಕಲಂ: 279, 337, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.
  • ಉಡುಪಿ: ದಿನಾಂಕ 22/07/2021 ರಂದು ಬೆಳಿಗ್ಗೆ ಸಮಯ ಸುಮಾರು 10:45 ಗಂಟೆಗೆ ಪಿರ್ಯಾದಿದಾರರಾದ ಪ್ರದೀಪ್ ಎಸ್ ಕುಂದರ್ (33) ತಂದೆ: ಸುರೇಶ್ ಪೂಜಾರಿ ವಾಸ: ಮೃತ್ಯುಂಜಯ ನಿಲಯ, ಮನೆ ನಂಬ್ರ 155ಸಿ, ಕೆಳಾರ್ಕಳಬೆಟ್ಟು ಗ್ರಾಮ, ಜ್ಯೋತಿನಗರ, ಸಂತೆಕಟ್ಟೆ ಅಂಚೆ, ಉಡುಪಿ ಇವರು ಚಿಕ್ಕಮನ ಮಗನಾದ ಲೋಹಿತ್ ಎಂಬಾತನನ್ನು ಆತನ ಸ್ನೇಹಿತ ವಿನೀಶ್ ಎಂಬಾತನು ತನ್ನ ಸ್ಕೂಟರ್ ನಂಬ್ರ KA-20-EW-4081 ನೇದರಲ್ಲಿ ಹಿಂಬದಿ ಕುಳ್ಳಿರಿಸಿಕೊಂಡು ಜೋಡುಕಟ್ಟೆ ಕಡೆಯಿಂದ ಲಯನ್ ಸರ್ಕಲ್ ಕಡೆಗೆ ಸವಾರಿ ಮಾಡಿಕೊಂಡು ಬರುತ್ತಿರುವಾಗ ಪ್ರದೀಪ್ ಎಸ್ ಕುಂದರ್ ರವರ ಅಂಗಡಿಯ ಎದುರುಗಡೆ ಇರುವ 76 ಬಡಗುಬೆಟ್ಟು ಗ್ರಾಮದ ಕೃಷ್ಣ ಪ್ರಸಾದ್ ಹೋಟೇಲ್ ಎದುರುಗಡೆ ಓರ್ವ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವುದರಿಂದ, ಸ್ಕೂಟರ್ ಸವಾರ ಸ್ವಲ್ಪ ರಸ್ತೆ ಬಲ ಬದಿಗೆ ತಿರುಗಿಸಿರುವುದರಿಂದ ಹಿಂದಿನಿಂದ KA-31-F-1349 ನೇ ಕೆಎಸ್ಆರ್‌ಟಿಸಿ ಬಸ್ ಚಾಲಕ ವೀರಣ್ಣ ಎಸ್ ಅಕ್ಕಿ ಎಂಬಾತನು ತನ್ನ ಬಸ್ಸನ್ನು ಜೋಡುಕಟ್ಟೆ ಕಡೆಯಿಂದ ಲಯನ್ ಸರ್ಕಲ್ ಕಡೆಗೆ ದುಡುಕುತನ ಹಾಗೂ ನಿರ್ಲಕ್ಷತನದಿಂದ ಚಲಾಯಿಸಿಕೊಂಡು ಬಂದು  ಸ್ಕೂಟರಿನ ಬಲಬದಿಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಸವಾರ ಮತ್ತು ಸಹಸವಾರ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು  ಸವಾರನಾದ ವಿನೀಶ್ ನಿಗೆ ಬಲಕೈಗೆ ಎಡಕಾಲಿಗೆ ತರಚಿದ ಗಾಯವಾಗಿದ್ದು, ಸಹಸವಾರನಾದ ಲೋಹಿತ್ ನ ಬಲಕಾಲಿನ ಪಾದಕ್ಕೆ ಗಂಭೀರ ಗಾಯವಾಗಿರುವುದಾಗಿದೆ. ಈ ಬಗ್ಗೆ ಉಡುಪಿ ಸಂಚಾರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 41/2021 ಕಲಂ: 279, 338 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಇತರ ಪ್ರಕರಣ

  • ಕುಂದಾಪುರ: ದಿನಾಂಕ 22/07/2021 ರಂದು ಬೆಳಿಗ್ಗೆ 10:30 ಗಂಟೆಗೆ ನಿರಂಜನ್ ಗೌಡ ಬಿ.ಎಸ್ ಪಿಎಸ್‌ಐ, ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಇವರು ಖಚಿತ ವರ್ತಮಾನದ ಮೇರೆಗೆ ಕಾವ್ರಾಡಿ ಗ್ರಾಮದ  ಕಂಡ್ಲೂರು ಜೆ.ಎಮ್‌ರಸ್ತೆಯಲ್ಲಿ ರಿಯಾನ್‌ರವರ ಮನೆಯ ಬಳಿ ಅಕ್ರಮವಾಗಿ ದನಗಳನ್ನು ವಧೆ ಮಾಡಿ ಮಾಂಸ ಮಾಡುತ್ತಿದ್ದ ಸ್ಥಳಕ್ಕೆ ಸಿಬ್ಬಂದಿಯವರೊಂದಿಗೆ 11:45 ಗಂಟೆಗೆ ದಾಳಿ ನಡೆಸಿ ಸ್ಥಳದಿಂದ 2 ಜಾನುವಾರು (ದನದ) ತಲೆಗಳು, 8 ಗೊರಸು ಸಹಿತ ಕಾಲಿನ ಭಾಗ-08, 2 ಬಾಲ ಸಹಿತ ದನದ ಚರ್ಮ ಮತ್ತು ತ್ಯಾಜ್ಯ ಹಾಗೂ 12 ಕೆಜಿ ದನದ ಮಾಂಸ ಅಂದಾಜು ಮೌಲ್ಯ-2400/- ಹಾಗೂ ಮಾಂಸ ಮಾಡಲು ಬಳಸಿದ ಕಬ್ಬಿಣದ ಕತ್ತಿ-01 ಮೌಲ್ಯ-100, ಚೂರಿ-02 ಮೌಲ್ಯ-200 ಹಾಗೂ ಸಲಕರಣೆಗಳನ್ನು ಮತ್ತು ಆರೋಪಿಗಳಾದ 1) ಅಪ್ತಾಬ್ ಯಾನೆ ಗೊದ್ದ (24) ತಂದೆ:ಅಬ್ದುಲ್ ಬಾದಶಾ: ವಾಸ: ಜನತಾ ಕಾಲೋನಿ ಕಂಡ್ಲೂರು ಕಾವ್ರಾಡಿ ಗ್ರಾಮ. 2)ಕರಾಣಿ ಬಿಲಾಲ್, 3) ಕರಾಣಿ ನದೀಮ್, 4) ರಿಯಾನ್ 6) ಸಲ್ಮಾನ, 7) ತನ್ವೀಜ್, 8) ಅರ್ಪಾದ್ ಇವರನ್ನು ಸ್ವಾಧೀನಪಡಿಸಿಕೊಂಡಿರುವುದಾಗಿದೆ. ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 53/2021 ಕಲಂ: 379 ಐಪಿಸಿ ಮತ್ತು ಕಲಂ:4,7,12, ಕರ್ನಾಟಕ ಜಾನುವಾರುಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ-2020 ಕಲಂ:11(1)(ಡಿ) ಪ್ರಾಣಿ ಹಿಂಸೆ ನಿಷೇಧ ಕಾಯ್ದೆ-1960ರಂತೆ ಪ್ರಕರಣ ದಾಖಲಾಗಿರುತ್ತದೆ.

ಇತ್ತೀಚಿನ ನವೀಕರಣ​ : 22-07-2021 06:01 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಉಡುಪಿ ಜಿಲ್ಲಾ ಪೊಲೀಸ್‌
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080